Posts

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

Image
ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರು ಬಡಗು ತಿಟ್ಟಿನ ಅನುಭವೀ ಹಿರಿಯ  ಕಲಾವಿದರು. ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದನಾಗಿ ಇವರು ಸುಮಾರು ನಲುವತ್ತೈದು ವರ್ಷಗಳ ಅನುಭವವನ್ನು ಹೊಂದಿರುತ್ತಾರೆ. ಗುಂಡಬಾಳಾ, ಪೆರ್ಡೂರು, ಸಾಲಿಗ್ರಾಮ, ಶಿರಸಿ, ಬಚ್ಚಗಾರು, ಮಂದಾರ್ತಿ ಮೇಳಗಳಲ್ಲಿ ವ್ಯವಸಾಯವನ್ನು ಮಾಡಿದ ಇವರು ಶ್ರೇಷ್ಠ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದಾರೆ. 1998ನೇ ಇಸವಿಯಲ್ಲಿ ವೀರಾಂಜನೇಯ ಯಕ್ಷಗಾನ ಮಿತ್ರ ಮಂಡಳಿ ಬಂಗಾರಮಕ್ಕಿ ಎಂಬ ಕಲಾ ಸಂಘಟನೆಯನ್ನು ಸ್ಥಾಪಿಸಿರುತ್ತಾರೆ. ಈ ಸಂಘಟನೆಯಡಿ ದಕ್ಷಿಣೋತ್ತರ ಜಿಲ್ಲೆಗಳಲ್ಲಿ, ಮುಂಬಯಿ, ಬೆಂಗಳೂರು, ಹೈದರಾಬಾದ್ ಮೊದಲಾದ ನಗರಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸುತ್ತಾ ಬಂದಿರುತ್ತಾರೆ. ಈ ಸಂಸ್ಥೆಯ ನಾಯಕನಾಗಿ ವಿದೇಶ ಯಾತ್ರೆಯನ್ನು ಕೈಗೊಂಡು ಬಹರೇನ್ ನಲ್ಲಿ  ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ಶ್ರೀಯುತರು ಬಡಗುತಿಟ್ಟಿನ ಖ್ಯಾತ ಕಲಾವಿದರಾಗಿ ಮೆರೆದ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಸುಪುತ್ರರು.  ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ಹುಟ್ಟೂರು ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಚಿಟ್ಟಾಣಿ ಕೇರಿ. ಪ್ರಸ್ತುತ ಇವರು ನಗರ ಬಸ್ತಿಕೇರಿ ಗ್ರಾಮದ ಮೊಗೆಹಳ್ಳ ಎಂಬಲ್ಲಿ ವಾಸವಾಗಿದ್ದಾರೆ. 1962ನೇ ಇಸವಿ ಮಾರ್ಚ್ 25ರಂದು ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆ ಮತ್ತು ಶ್ರೀಮತಿ ಸುಶೀಲಾ ಅಮ್ಮ ದಂಪತಿಗಳ ಪುತ್ರನಾಗಿ ಜನನ. ಚಿಟ್ಟಾಣಿ ಅವರ ಮೂವರು ಪುತ್ರರಲ್ಲಿ...

ನಾಟಕ ಕಲಾವಿದ ಯಕ್ಷಗಾನ ಕಲಾವಿದನಾದ ಬಗೆ - ಶ್ರೀ ಚಿದಂಬರ ಬಾಬು ಕೋಣಂದೂರು

Image
 ಶ್ರೀ ಚಿದಂಬರ ಬಾಬು ಕೋಣಂದೂರು ಅವರು ತೆಂಕುತಿಟ್ಟಿನ ಹಿರಿಯ ಅನುಭವೀ ಕಲಾವಿದರು. ಯಕ್ಷಗಾನ ಕಲಾಕ್ಷೇತ್ರದಲ್ಲಿ ಇವರು ನಾಲ್ಕು ದಶಕಗಳ ಅನುಭವಿ. ಕಳೆದ 42 ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ. ಮೂವತ್ತೈದು ವರ್ಷಗಳ ಕಾಲ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಯಕ್ಷಗಾನ ಮಂಡಳಿಯಲ್ಲಿ ತಿರುಗಾಟ ನಡೆಸಿದವರು. ಕಳೆದ ಆರು ವರ್ಷಗಳಿಂದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಬಾಲ್ಯದಲ್ಲಿ ಇವರು ನಾಟಕ ಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದರು. ನಾಟಕಗಳಲ್ಲಿ ಅಭಿನಯಿಸುತ್ತಾ ತಬಲಾ ವಾದನವನ್ನು ಕಲಿತು ತೊಡಗಿಸಿಕೊಂಡಿದ್ದರು. ಪುರಾಣ ಪ್ರಸಂಗಗಳ ಜತೆಗೆ ತುಳು ಪ್ರಸಂಗಗಳಲ್ಲೂ ವೇಷಗಳನ್ನು ನಿರ್ವಹಿಸಿದ ಅನುಭವಿ ಇವರು. ಕಿರೀಟ ಮತ್ತು ನಾಟಕೀಯ ವೇಷಗಳಲ್ಲಿ ಪ್ರಸ್ತುತ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದ 'ಅಣ್ಣಪ್ಪ' ಪಾತ್ರವನ್ನು ಕಳೆದ ಆರು ವರ್ಷಗಳಿಂದ ಇವರೇ ನಿರ್ವಹಿಸುತ್ತಿದ್ದಾರೆ.  ಶ್ರೀ ಧರ್ಮಸ್ಥಳ ಮೇಳದ ಕಲಾವಿದ  ಶ್ರೀ ಚಿದಂಬರ ಬಾಬು ಕೋಣಂದೂರು ಅವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅತಲಾಪುರ ಗ್ರಾಮದ ಕೋಣಂದೂರು ಸಮೀಪದ ಹಿತ್ತಲಸರ. 1961ನೇ ಇಸವಿ ಏಪ್ರಿಲ್ 23ರಂದು ಶ್ರೀ ನಾಗೇಶ್ ಮತ್ತು ಶ್ರೀಮತಿ ರತ್ನಮ್ಮ ದಂಪತಿಗಳ ಪುತ್ರನಾಗಿ ಜನನ. ಇವರದ್ದು ಕೃಷಿ ಕುಟುಂಬ. ಮನೆಯವರೆಲ್ಲ ...

ಅನುಭವೀ ಮದ್ದಳೆಗಾರರು, ಯಕ್ಷಗಾನ ವಾದ್ಯೋಪಕರಣಗಳ ತಯಾರಕರು - ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್

Image
 ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರು ತೆಂಕುತಿಟ್ಟು ಯಕ್ಷಗಾನದ ಹಿರಿಯ ಮದ್ದಳೆಗಾರರು. ಕಲಾಕ್ಷೇತ್ರದಲ್ಲಿ ಶ್ರೀಯುತರು ಸುಮಾರು ನಾಲ್ಕೂವರೆ ದಶಕಗಳ ಅನುಭವಿ. ವೇಷಧಾರಿಯಾಗಿ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದ ಇವರು ಬಳಿಕ ಮದ್ದಳೆಗಾರನಾಗಿ ಕಾಣಿಸಿಕೊಂಡು ಪ್ರಸಿದ್ಧರಾದರು. ಉಪ್ಪಳ, ಕಟೀಲು, ಸುಂಕದಕಟ್ಟೆ, ಸುರತ್ಕಲ್, ಮಧೂರು, ಮಲ್ಲ ಮತ್ತು ಧರ್ಮಸ್ಥಳ ಮೇಳಗಳಲ್ಲಿ ವ್ಯವಸಾಯವನ್ನು ಮಾಡಿ ಅನುಭವವನ್ನು ಗಳಿಸಿಕೊಂಡವರು. ತೆಂಕುತಿಟ್ಟಿನ ಹೆಚ್ಚಿನ ಹಿರಿಯ ಭಾಗವತರುಗಳ ಹಾಡುಗಾರಿಕೆಗೆ ಚೆಂಡೆ ಮದ್ದಲೆಗಳನ್ನು ನುಡಿಸುವ ಅವಕಾಶವು ಇವರಿಗೆ ದೊರೆತಿತ್ತು. ಯಕ್ಷಗಾನ ಕಲೆಯ ವಾದ್ಯೋಪಕರಣಗಳಾದ ಚೆಂಡೆ ಮತ್ತು ಮದ್ದಳೆಗಳ ನುಡಿಸುವಿಕೆಯಲ್ಲಿ ಇವರು ಪರಿಣತರು. ಈ ವಾದ್ಯೋಪಕರಣಗಳನ್ನು ತಯಾರಿಸುವ ಕಲೆಯೂ ಇವರಿಗೆ ಕರಗತ. ಹೊಸ ಚೆಂಡೆ ಮತ್ತು ಮದ್ದಲೆಗಳನ್ನು ತಯಾರಿಸಿ ಪ್ರದರ್ಶನಕ್ಕಾಗಿ ಒದಗಿಸಿ ಕೊಡುತ್ತಾರೆ. ಹಳತನ್ನು ದುರಸ್ಥಿಗೊಳಿಸಿ ಕೊಡುತ್ತಾರೆ. ಚೆಂಡೆಯ ಕೋಲುಗಳನ್ನು ಬೇಕಾದಂತೆ ಸಿದ್ಧಗೊಳಿಸಿ ಕೊಡುತ್ತಾರೆ. ಇವರು ಸಿದ್ಧಗೊಳಿಸಿದ ಚೆಂಡೆ, ಮದ್ದಳೆ, ಚೆಂಡೆಯ ಕೋಲುಗಳು ಪ್ರದರ್ಶನಗಳಲ್ಲಿ ಬಳಕೆಯಾಗುವುದನ್ನು ನಾವು ಗಮನಿಸಬಹುದು. ಈ ವಿಭಾಗದಲ್ಲಿ  ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರ ಬಿಡುವಿಲ್ಲದ ದುಡಿಮೆಯು ಪ್ರಶಂಸನೀಯವಾದುದು. 1996ರಲ್ಲಿ ಮೇಳದ ವ್ಯವಸಾಯಕ್ಕೆ ವಿದಾಯ ಹೇಳಿದ ಬಳಿಕ ಯಕ್ಷಗಾನ ಹಿಮ್ಮೇಳ ಪರಿಕರಗಳ ತಯಾರಿಕೆಯಲ್...

ಉಂಡೆಮನೆ ಶ್ರೀಕೃಷ್ಣ ಭಟ್  - ಬಹುಮುಖ ಪ್ರತಿಭೆಯ ಯಕ್ಷತಾರೆ

Image
 ಶ್ರೀ ಉಂಡೆಮನೆ ಶ್ರೀಕೃಷ್ಣ ಭಟ್ಟರು ಬಹುಮುಖ ಪ್ರತಿಭೆಯ ಯಕ್ಷಗಾನ ಕಲಾವಿದರು. ಇವರು ಯಕ್ಷಗಾನದ ಎಲ್ಲಾ ಅಂಗಗಳನ್ನೂ ಬಲ್ಲವರು. ಭಾಗವತರಾಗಿ, ವೇಷಧಾರಿಯಾಗಿ ಗುರುತಿಸಿಕೊಂಡರೂ ಅಗತ್ಯ ಬಿದ್ದರೆ ಚೆಂಡೆ ಮದ್ದಳೆಗಳನ್ನೂ ನುಡಿಸಬಲ್ಲರು. ಅರ್ಥಧಾರಿಯಾಗಿ ತಾಳಮದ್ದಳೆ ಕ್ಷೇತ್ರದಲ್ಲೂ ತೊಡಗಿಸಿಕೊಂಡ ಅನುಭವಿ ಇವರು. ಯಕ್ಷಗಾನ ಗುರುವಾಗಿ ತಾನು ಕಲಿತ ವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಟ್ಟಿದ್ದಾರೆ. ಇವರಿಂದ ಕಲಿತ ಅನೇಕರು ಇಂದು ಮೇಳಗಳಲ್ಲಿ ವ್ಯವಸಾಯ ಮಾಡುತ್ತಿರುವುದನ್ನು ನಾವು ಕಾಣಬಹುದು. ಕರ್ನಾಟಕ ಸಂಗೀತದ ಜ್ಞಾನವನ್ನು ಹೊಂದಿದ ಇವರು ಭಾಗವತರಾಗಿಯೂ ಕಾಣಿಸಿಕೊಂಡಿದ್ದಾರೆ. ಒಳ್ಳೆಯ ಸ್ವರಭಾರವನ್ನು ಹೊಂದಿದ ಇವರು ಇಳಿ ಶೃತಿಯಲ್ಲೂ, ಏರು ಶೃತಿಯಲ್ಲೂ ಸಮಾನವಾಗಿ ಹಾಡಬಲ್ಲರು. ಮೀನಾಕ್ಷಿ ಕಲ್ಯಾಣ ಎಂಬ ಪ್ರಸಂಗದಲ್ಲಿ ಇವರು ಹಾಡಿದ "ಗೆಲುವನೆಂಬುತ್ಸಾಹದಿ ಬರಲು ದೂರದಿ ..." ಎಂಬ ಹಾಡು ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರಚಾರವನ್ನು ಪಡೆದಿತ್ತು. ಅವರು ಹಾಡಿದ ಈ ಹಾಡನ್ನು ಕೆಲವರು ತಮ್ಮ ಮೊಬೈಲ್ ನ ರಿಂಗ್ ಟೋನ್ ಆಗಿಯೂ ಬಳಸಿಕೊಂಡಿದ್ದರು. ದಂಡಯಾತ್ರೆಯನ್ನು ಕೈಗೊಂಡ ಮೀನಾಕ್ಷಿಯು ಕೈಲಾಸಪರ್ವತವನ್ನು ಕಂಡು ಹೊಗಳುತ್ತಿರುವ ಹಾಡು ಇದು.  ಉಂಡೆಮನೆ ಶ್ರೀಕೃಷ್ಣ ಭಟ್ಟರು ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು ನಲುವತ್ತು ವರ್ಷಗಳ ಅನುಭವಿ.  ಉಂಡೆಮನೆ ಎಂಬುದು ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದ ಒಂದು ಹಳ್ಳಿ. ಕುಂಬಳೆ...

ಶ್ರೀ ನಾಗೇಂದ್ರ ಮೂರೂರು - ಯುವ ಅನುಭವೀ ಕಲಾವಿದ, ಹಾಸ್ಯಗಾರ

Image
ಶ್ರೀ ನಾಗೇಂದ್ರ ಮೂರೂರು ಅವರು ಬಡಗುತಿಟ್ಟಿನ ಯುವ, ಅನುಭವೀ ಕಲಾವಿದರು. ಪ್ರಸ್ತುತ ಹಾಸ್ಯಗಾರರಾಗಿ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಹಾಸ್ಯಗಾರನಾದರೂ ಇವರು ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬಲ್ಲ ಸಾಮರ್ಥ್ಯ ಉಳ್ಳವರು. ಆದುದರಿಂದ ತಂಡಕ್ಕೆ ಅನಿವಾರ್ಯ ಸಂದರ್ಭಗಳಲ್ಲಿ ಇವರು ಆಪದ್ಬಾಂಧವರಾಗಿ ಒದಗಬಲ್ಲವರು. ಇವರಲ್ಲಿರುವ ಹಾಸ್ಯಪ್ರಜ್ಞೆಯನ್ನು ಗುರುತಿಸಿ ಹಾಸ್ಯ ಪಾತ್ರಗಳನ್ನು ನಿರ್ವಹಿಸಲು ಪ್ರೇರಣೆ ನೀಡಿ ಅವಕಾಶ ನೀಡಿದವರು ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು. 'ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ' ತಂಡದ ಸದಸ್ಯನಾಗಿ ವೇಷಗಳನ್ನು ಮಾಡುತ್ತಿದ್ದಾಗ ಪ್ರೇಕ್ಷಕರು ಇವರಲ್ಲಿರುವ ಪ್ರತಿಭೆಯನ್ನು ಗುರುತಿಸಿದ್ದರು. ಗುಂಡಬಾಳಾ ಮೇಳ,  ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರ 'ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ' ಕುಂಭಾಶಿ, ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿಯವರ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಶ್ರೀ ಬಳ್ಕೂರು ಕೃಷ್ಣಯಾಜಿ ಅವರ  ಯಾಜಿ ಯಕ್ಷಮಿತ್ರ ಮಂಡಳಿ, ಇಟಗಿ ಶ್ರೀ ಮಹಾಬಲೇಶ್ವರ ಭಟ್ ಅವರ ಕಲಾಭಾಸ್ಕರ ಮೊದಲಾದ ತಂಡಗಳಲ್ಲಿ ವ್ಯವಸಾಯ ಮಾಡಿದ ಅನುಭವಿ ಇವರು. ಅನಿವಾರ್ಯ ಸಂದರ್ಭಗಳಲ್ಲಿ ಸಾಲಿಗ್ರಾಮ ಮೇಳದಲ್ಲಿ ವೇಷ ಮಾಡಿದ್ದೂ ಇದೆ. ಯಕ್ಷಗಾನ ಕ್ಷೇತ್ರದಲ್ಲಿ ಇವರು  ಸುಮಾರು ಮೂವತ್ತು ವರ್ಷಗಳ ಅನುಭವಿ.  ಬಡಗುತಿಟ್ಟಿನ ಅನುಭವೀ ಹಾಸ್ಯಗಾರರಾದ  ಶ್ರೀ ನಾಗೇಂದ್ರ ಅವರ ಹುಟ್ಟೂರು ಉತ್...

ಶ್ರೀ ಪ್ರಭಾಕರ ಭಂಡಾರಿ, ಶ್ರೀ ಮಂಜುನಾಥ ಭಂಡಾರಿ, ಶ್ರೀ ಪರಮೇಶ್ವರ ಭಂಡಾರಿ ಕರ್ಕಿ - ಬಡಗುತಿಟ್ಟಿನ ಮದ್ದಳೆವಾದನದಲ್ಲಿ ಕರ್ಕಿ ಮನೆತನ

Image
ಉತ್ತರ ಕನ್ನಡ ಜಿಲ್ಲೆಯ ಕರ್ಕಿ ಎಂಬ ಊರು ಯಕ್ಷಗಾನ ಕಳೆಯ ಆಡೊಂಬಲ ಎಂದರೂ ತಪ್ಪಾಗಲಾರದು. . ಬಡಗುತಿಟ್ಟಿನ ಹಿಮ್ಮೇಳ, ಮುಮ್ಮೇಳದ ಅನೇಕ ಕಲಾವಿದರನ್ನು ಯಕ್ಷಗಾನ ಕಲಾ ಮಾತೆಯ ಮಡಿಲಿಗಿಕ್ಕಿದ ಮಣ್ಣು ಇದು. ಇಲ್ಲಿ ಹುಟ್ಟಿ ಬೆಳೆದ ಕಲಾವಿದರೆಲ್ಲಾ ತಾವು ತೊಡಗಿಸಿಕೊಂಡ ವಿಭಾಗದಲ್ಲಿ ಖ್ಯಾತರಾಗಿ ಕಲಾಭಿಮಾನಿಗಳನ್ನು ರಂಜಿಸಿದ್ದಾರೆ. ಕರ್ಕಿ ಹಾಸ್ಯಗಾರ ಮನೆತನದಲ್ಲಿ ಜನಿಸಿದ ಅನೇಕರು ಬಡಗುತಿಟ್ಟಿನ ಮುಮ್ಮೇಳದ ಕಲಾವಿದರಾಗಿ ಖ್ಯಾತರಾದುದು ನಮಗೆಲ್ಲಾ ತಿಳಿದ ವಿಚಾರ. ಬಡಗುತಿಟ್ಟಿನ ಯಕ್ಷಗಾನ ಹಿಮ್ಮೇಳಕ್ಕೂ ಕರ್ಕಿ ಮಣ್ಣಿನ ಕೊಡುಗೆಯು ಅಪಾರ. ಕರ್ಕಿ ಭಂಡಾರಿ ಮನೆತನದಲ್ಲಿ ಜನಿಸಿದ ಅನೇಕರು ಅತ್ಯುತ್ತಮ ಮದ್ದಳೆವಾದಕರಾಗಿ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಾ ಖ್ಯಾತರಾಗಿದ್ದಾರೆ. ಇವರಲ್ಲಿ ಶ್ರೀ ಪ್ರಭಾಕರ ಭಂಡಾರಿ ಕರ್ಕಿ, ಶ್ರೀ ಮಂಜುನಾಥ ಭಂಡಾರಿ ಕರ್ಕಿ ಮತ್ತು ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಪ್ರಮುಖರು. ಬಡಗುತಿಟ್ಟಿನ  ಹಿರಿಯ,ಅನುಭವೀ, ಖ್ಯಾತ ಮದ್ದಳೆಗಾರ ಶ್ರೀ ಪ್ರಭಾಕರ ಭಂಡಾರಿ ಕರ್ಕಿ ಅವರಿಗೀಗ 82 ವರ್ಷ ವಯಸ್ಸು. ಕಳೆದ 20 ವರ್ಷಗಳಿಂದ ಯಕ್ಷಗಾನ ಕಲಾ ವ್ಯವಸಾಯಕ್ಕೆ ವಿದಾಯ ಹೇಳಿ ಮಕ್ಕಳಾದ ಶ್ರೀ ಮಂಜುನಾಥ ಭಂಡಾರಿ ಕರ್ಕಿ ಮತ್ತು ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಇವರೊಂದಿಗೆ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ.  ಶ್ರೀ ಪ್ರಭಾಕರ ಭಂಡಾರಿ ಕರ್ಕಿ ಬಡಗುತಿಟ್ಟಿನ ಹಿರಿಯ ಅನುಭವೀ ಮದ್ದಳೆಗಾರರಾದ ಶ್ರೀ ಪ್ರಭಾಕರ ಭಂ...

ಅಸುರ ಪಾತ್ರಗಳಲ್ಲಿ ಅಬ್ಬರಿಸಿದ ಅಪ್ರತಿಮ ಕಲಾಕಾರ ಶ್ರೀ ಸಂಜೀವ ಚೌಟ, ಉದ್ಯಾವರ ಮಾಡ

Image
ಅನುಭವಗಳನ್ನು ಗಳಿಸಿ ಹಂತ ಹಂತವಾಗಿ ಬೆಳೆದು ಮುಂಭಡ್ತಿಗೊಂಡು ಸ್ಥಾನಗಳನ್ನು ಪಡೆಯುವುದು ಎಲ್ಲಾ ಕ್ಷೇತ್ರಗಳಲ್ಲಿ ನಡೆಯುವ ಸಹಜವಾದ ಕ್ರಿಯೆಯು. ಕೆಳಸ್ಥರಗಳಲ್ಲಿ ಪಡೆದ ಅನುಭವಗಳೇ ಮುಂದೆ ಎದುರಾಗುವ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಎಂಬುದರಿಂದ ಈ ವ್ಯವಸ್ಥೆಯು ಸರಿಯಾದುದೇ ಆಗಿದೆ. ಯಕ್ಷಗಾನದಲ್ಲೂ ಇದೇ ರೀತಿಯ ನಿಯಮಗಳಿತ್ತು ಎಂಬುದನ್ನು ನಾವು ಕೇಳಿರುತ್ತೇವೆ. ಪೂರ್ವರಂಗ, ಸ್ತ್ರೀವೇಷ, ಪುಂಡುವೇಷ, ಪೀಠಿಕೆವೇಷ ಎದುರು ವೇಷ ಎಂಬ ಹಂತಗಳನ್ನು ದಾಟಿ ಬಂದವರು ಬಣ್ಣದ ವೇಷಧಾರಿಯಾಗುತ್ತಾರೆ. ಬಣ್ಣದ ವೇಷಗಳನ್ನು ನಿರ್ವಹಿಸಿ ಯಶಸ್ವಿಯಾದ ಮೇಲೆ ಅವರಿಗೆ ಹಾಸ್ಯಗಾರ ಸ್ಥಾನವು ದೊರಕುತ್ತಿತ್ತು. ಇದು ಪರಿವರ್ತನಾಶೀಲವಾದ ಪ್ರಪಂಚ. ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆಯನ್ನು ಕಾಣಬಹುದು. ದೇಶ, ಕಾಲಕ್ಕೆ ತಕ್ಕಂತಹ ಬದಲಾವಣೆಯನ್ನು ನಾವು ಆಕ್ಷೇಪಿಸದೆ ಸ್ವಾಗತಿಸಲೇಬೇಕಾಗುತ್ತದೆ. ಇಂದು ಯಕ್ಷಗಾನದಲ್ಲಿ ಕಲಾವಿದರಿಗೆ ಅವರವರ ಆಸಕ್ತಿಯನ್ನು ಹೊಂದಿ ಆಯ್ಕೆಗೆ ಅವಕಾಶಗಳಿವೆ. ಏನೇ ಇರಲಿ, ಕಲಾವಿದನು ಸ್ಥಾನವನ್ನು ಹೇಗೆ ಗಿಟ್ಟಿಸಿಕೊಂಡ ಎಂಬುದು ಮುಖ್ಯವಲ್ಲ. ನಾವು ಧರಿಸಿದ ಪಾತ್ರಕ್ಕೆ, ಕಲೆಗೆ ಅಪಚಾರವಾಗದಂತೆ ಅಭಿನಯಿಸುವ ಕಲೆಯನ್ನು ಹೊಂದಿರುವುದು ಮುಖ್ಯ. ಯಕ್ಷಗಾನ ಎಂಬ ಮೇರು ಕಲೆಗೆ ಯಾವತ್ತೂ ಕೊರತೆಯಾಗಬಾರದು ಎಂಬ ಎಚ್ಚರದಿಂದ ಪಾತ್ರಗಳನ್ನು ನಿರ್ವಹಿಸಿದರೆ ಆತ ಕಲಾವಿದನಾಗಿ ಯಶಸ್ವಿಯಾಗುತ್ತಾನೆ. ಹಿಂದಿನ ಕಾಲದಲ್ಲಿ ಅನೇಕರು ಹಂತಹಂತವಾಗಿ ಬೆಳೆದೇ...

ಅನುಭವಿ ಸಹೃದಯಿ ಭಾಗವತ ಶ್ರೀನಿವಾಸ ಬಳ್ಳಮಂಜ

Image
  ಫೋಟೋ ಕೃಪೆ: ಶ್ರೀ ಮಧುಸೂದನ ಅಲೆವೂರಾಯ  ಶ್ರೀ ಶ್ರೀನಿವಾಸ ಬಳ್ಳಮಂಜ ಅವರು ಕಟೀಲು ಮೇಳದ ಭಾಗವತರು. ಪ್ರಸ್ತುತ ಕಟೀಲು ನಾಲ್ಕನೇ ಮೇಳದಲ್ಲಿ ಪ್ರಧಾನ ಭಾಗವತರಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಯಕ್ಷಗಾನದಲ್ಲಿ ಭಾಗವತ ಸ್ಥಾನದ ಹೊಣೆಗಾರಿಕೆಯು ವಿಶಾಲವಾದುದು. ನಾಲ್ಕಾರು ಪದ್ಯಗಳನ್ನು ಹೇಳಿದವರು ಭಾಗವತರಾಗಲಾರರು. ಯಶಸ್ವಿ ಪ್ರದರ್ಶನಕ್ಕೆ ಬೇಕಾದ ಅಂಶಗಳನ್ನೆಲ್ಲಾ ಅವನು ತಿಳಿದಿರಬೇಕು. ತೆಂಕು ತಿಟ್ಟಿನ ಹಿರಿಯ ಭಾಗವತರಾದ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳು ಪ್ರದರ್ಶನ ಮುಗಿದ ಮೇಲೆ ಆಟ ಹೇಗಾಗಿದೆ? ಎಂದು ಕೇಳುತ್ತಿದ್ದರು. ಪ್ರದರ್ಶನವು ಚೆನ್ನಾಗಿರಬೇಕೆಂಬ ತುಡಿತವು ಅವರಿಗಿತ್ತು. ಕಲಾವಿದರು ನಿಮ್ಮ ಪದ್ಯ ಚೆನ್ನಾಗಿತ್ತು ಎಂದು ಹೇಳಿದರೆ, 'ನೀವು ಚೆನ್ನಾಗಿ ದುಡಿದಿರಿ,ಆದ ಕಾರಣ ನನ್ನ ಪದ್ಯ ಒಳ್ಳೆಯದಾಯಿತು" ಎಂದು ಹೇಳುತ್ತಿದ್ದರು. ಯಕ್ಷಗಾನವು ಸ್ವಪ್ರತಿಷ್ಠೆಗಾಗಿ ಇರುವ ವೇದಿಕೆಯಲ್ಲ, ಕಲಾವಿದರು ತಂಡವಾಗಿ ಮುನ್ನಡೆದು ಪ್ರದರ್ಶನದ ಗೆಲುವಿಗೆ ಕಾರಣರಾಗಬೇಕು ಎಂಬ ಸಂದೇಶವು ಇದರಲ್ಲಿದೆ. "ಭಾಗವತನು ಯಶಸ್ವೀ ಪ್ರದರ್ಶನದ ಶ್ರೇಯಸ್ಸನ್ನು ಪಡೆಯುವುದರ ಜತೆಗೆ ಸೋಲಿನ ಹೊಣೆಯನ್ನೂ ಹೊರಬೇಕು. ಸೋಲಿಗಾಗಿ ಮತ್ತೊಬ್ಬರ ಕಡೆಗೆ ಬೆರಳು ತೋರಿಸಬಾರದು'' ಇದು ಉಭಯ ತಿಟ್ಟುಗಳ ಖ್ಯಾತ ಭಾಗವತ ಕೀರ್ತಿಶೇಷ ಕಡತೋಕಾ ಮಂಜುನಾಥ ಭಾಗವತರ ಮಾತುಗಳು. ಇದರಿಂದ ಯಕ್ಷಗಾನದಲ್ಲಿ ಭಾಗವತನ ಸ್ಥಾನ, ಹೊಣೆಗಳೇನು ಎಂಬುದನ್ನು ಅರ್ಥ ಮಾಡ...

ಅನುಭವಿ ಕಲಾವಿದ ಶ್ರೀ ಮೋಹನ ಶೆಟ್ಟಿ ಬಾಯಾರು

Image
ಯಕ್ಷಗಾನವು ಶ್ರೇಷ್ಠ ಕಲೆ ಎಂಬ ಅರ್ಥದಲ್ಲಿ 'ಗಂಡುಕಲೆ' ಎಂದೇ ಪ್ರಸಿದ್ಧವಾಗಿದೆ. ಕಾಸರಗೋಡು, ,ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡ ಪ್ರದೇಶದಲ್ಲಿ ವಾಸಿಸುವ ಜನರಿಗೆ ಯಕ್ಷಗಾನದಿಂದ ದೂರವಾಗಿ ಬದುಕಲು ಸಾಧ್ಯವಿಲ್ಲ. ಈ  ಅನುಪಮವಾದ ಕಲೆಯ ಹೊರತಾದ ಬದುಕನ್ನು ಈ ಪ್ರದೇಶದ ಜನರಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಜೀವನವು ಯಕ್ಷಗಾನ ಕಲೆಯೊಂದಿಗೆ ಜತೆಯಾಗಿ ಮುನ್ನಡೆಯುತ್ತದೆ. ಎಲ್ಲಾ ಮನೆಗಳಲ್ಲೂ ಕಲಾವಿದರೋ, ಕಲಾಭಿಮಾನಿಗಳೋ ಇದ್ದೇ ಇರುತ್ತಾರೆ. ಇದು ನಮ್ಮ ಊರಿನ ಕಲೆ. ನಾವು ಈ ಶ್ರೇಷ್ಠ ಕಲೆಯ ಒಂದು ಅಂಗವಾಗಿ ಇದ್ದೇವೆ ಎಂದು ಹೆಮ್ಮೆಯಿಂದ, ಸಂತಸದಿಂದ ಹೇಳಿಕೊಳ್ಳುತ್ತಾರೆ. ಯಕ್ಷಗಾನ ಕಲಾವಿದನಾಗಬೇಕೆಂದು ಆಸೆ ಇರುವವರಿಗೆ ಅವರವರ ಅಭಿರುಚಿಗೆ ತಕ್ಕಂತೆ ಆಯ್ಕೆಗೆ ಅವಕಾಶಗಳಿವೆ. ಜೇನು, ಮೊಸರು, ಬೆಲ್ಲ, ಸಕ್ಕರೆ, ದ್ರಾಕ್ಷಿ ಮೊದಲಾದ ವಸ್ತುಗಳೆಲ್ಲಾ ಸವಿಯಾಗಿಯೇ ಇರುತ್ತದೆ. ಎಲ್ಲರೂ ಎಲ್ಲವನ್ನೂ ಇಷ್ಟ ಪಡಲಾರರು. ಯಾರ ಮನಸ್ಸಿಗೆ ಯಾವುದು ಮೆಚ್ಚುಗೆಯೋ ಅದೇ ಅವನಿಗೆ ಸವಿಯಾಗಿರುತ್ತದೆ. ರಂಗವೇರುವ ಅಭ್ಯಾಸಿಗಳಿಗೆ ಭಾಗವತನಾಗಬೇಕು, ಮದ್ದಳೆಗಾರನಾಗಬೇಕು, ಪುಂಡುವೇಷಧಾರಿಯಾಗಬೇಕು, ಸ್ತ್ರೀ ಪಾತ್ರಧಾರಿಯಾಗಬೇಕು ಹೀಗೆಂಬ ಗುರಿಯಿರುತ್ತದೆ. ಬೇಕಾದಂತೆ ಆಯ್ಕೆ ಮಾಡಿಕೊಂಡು ಮುಂದುವರಿಯುತ್ತಾರೆ. ಹೀಗೆ ತೊಡಗಿಸಿಕೊಂಡು ಅನುಭವಗಳಿಂದ ಪಕ್ವರಾದ ಹಿರಿಯ ಕಲಾವಿದರಲ್ಲಿ ಒಬ್ಬರು ಶ್ರೀ ಮೋಹನ ಶೆಟ್ಟಿ ಬಾಯಾರು. ಇವರು ಪ್ರಸ್ತುತ ಕಟೀಲು ಶ್ರೀ ದು...

ಅನುಭವಿ ಬಣ್ಣದ ವೇಷಧಾರಿ - ಶ್ರೀ ಶಶಿಧರ ಶೆಟ್ಟಿ ಪಂಜ ಕೊಯಿಕುಡೆ

Image
  ತೆಂಕುತಿಟ್ಟು ಯಕ್ಷಗಾನದಲ್ಲಿ ಬಣ್ಣದ ವೇಷಗಳಿಗೆ ವಿಶೇಷ ಸ್ಥಾನ, ಗೌರವಗಳ ಜತೆ ಪ್ರದರ್ಶಿಸುವಲ್ಲಿ ತನ್ನದೇ ಆದ ರೀತಿ, ನಿಯಮಗಳೂ ಇವೆ. ಇದು ವೇಗದ ಯುಗ. ಪ್ರಸ್ತುತ ಬದಲಾದ ಸನ್ನಿವೇಶದಲ್ಲಿ ಬಣ್ಣದ ವೇಷಗಳಿಗೆ ಅವಕಾಶ, ಪ್ರೋತ್ಸಾಹಗಳು ಸರಿಯಾಗಿ ದೊರಕುತ್ತಿಲ್ಲ ಎಂಬ ಮಾತು ಕೇಳಿ ಬಂದರೆ ಅದು ತಪ್ಪಾಗದು. ಹಾಗಾಬಾರದು. ಯಕ್ಷಗಾನದಲ್ಲಿ ಬಣ್ಣ ಎಂಬ ವಿಭಾಗವು ಬಲಿಷ್ಠವಾಗಿಯೇ ಇರಬೇಕು. ಅದು ಸೊರಗಲೇ ಬಾರದು. ಸೊರಗಿದರೆ ಯಕ್ಷಗಾನದ ಸೌಂದರ್ಯವೂ ನಷ್ಟವಾಗುವುದೆಂದು ನಮಗೆಲ್ಲರಿಗೂ ತಿಳಿದಿದೆ. ಖಂಡಿತವಾಗಿಯೂ ಬಣ್ಣದ ವೇಷಗಳಿಗೆ ಬೇಕಾದಷ್ಟು ಸಮಯ ಅವಕಾಶಗಳು ಮುಂದಿನ ದಿನಗಳಲ್ಲಿ ಸಿಗಲಿ. ಯಕ್ಷಗಾನದಲ್ಲಿ ಆ ವಿಭಾಗವು ವಿಜೃಂಭಿಸಲಿ ಎಂದು ಹಾರೈಸೋಣ. ಇಂದು ತೆಂಕುತಿಟ್ಟು ಯಕ್ಷಗಾನದಲ್ಲಿ ಅನೇಕ ಕಲಾವಿದರು ಬಣ್ಣದ ವೇಷಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಜ ಬದುಕಿನಲ್ಲಿ ಸಾತ್ವಿಕರಾದರೂ ರಂಗದಲ್ಲಿ ಅಸುರರಾಗಿ ಅಬ್ಬರಿಸುತ್ತಿದ್ದಾರೆ. ಇದುವೇ ಪರಕಾಯ ಪ್ರವೇಶ. ಪಾತ್ರಗಳನ್ನು ಕಟ್ಟಿಕೊಡುವ ರೀತಿ. ಪಾತ್ರಗಳ ಸ್ವಭಾವಗಳನ್ನು ಅರಿತು ಅಭಿನಯಿಸುವ ಕಲೆಯು. ಹಿರಿಯ ಕಲಾವಿದರ ಜತೆಗೆ ಉದಯೋನ್ಮುಖ ಬಣ್ಣದ ವೇಷಧಾರಿಗಳೂ ಬೆಳೆದು ಅನುಭವಗಳನ್ನು ಗಳಿಸಿಕೊಳ್ಳುತ್ತಿದ್ದಾರೆ. ಶ್ರೀ ಶಶಿಧರ ಶೆಟ್ಟಿ ಪಂಜ, ಕೊಯಿಕುಡೆ ಅವರು ಕಟೀಲು ಮೇಳದ ಅನುಭವಿ ಬಣ್ಣದ ವೇಷಧಾರಿ. ಕಳೆದ ಮೂವತ್ತು ವರ್ಷಗಳಿಂದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಶ್ರೀ ಶಶಿಧರ ಶೆಟ್...

ಅನುಭವಿ ಹಿರಿಯ ಕಲಾವಿದ ಬಾಯಾರು ಶ್ರೀ ರಘುನಾಥ ಶೆಟ್ಟಿ

Image
  ಯಾವುದೇ ಕ್ಷೇತ್ರದಲ್ಲಿ ಹಿರಿಯ ಅನುಭವಿಗಳು ಜತೆಗಿದ್ದರೆ ಕಿರಿಯರಿಗೆ, ಅಭ್ಯಾಸಿಗಳಿಗೆ ಅದರಿಂದ ಅನುಕೂಲವಾಗುತ್ತದೆ. ಹಿರಿಯರ ಅನುಭವ,ವಿದ್ಯೆಗಳನ್ನು ಪಡೆದು ಕಲಿಕಾಸಕ್ತರು ಮುನ್ನಡೆಯಲು ಅವಕಾಶವಾಗುತ್ತದೆ. ಅಧ್ಯಯನಕ್ಕೆ, ಮಾಹಿತಿ ಸಂಗ್ರಹಕ್ಕೆ, ಮುನ್ನಡೆಸುವುದಕ್ಕೆ ಹಿರಿಯ ಅನುಭವಿಗಳ ಉಪಸ್ಥಿತಿಯು ಇರಲೇಬೇಕು. ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಇಂದು ಅನೇಕ ಹಿರಿಯ ಅನುಭವಿ ಕಲಾವಿದರು ವ್ಯವಸಾಯ ಮಾಡುತ್ತಿದ್ದಾರೆ. ಶ್ರೀ ರಘುನಾಥ ಶೆಟ್ಟಿ ಬಾಯಾರು ಅವರು ತೆಂಕುತಿಟ್ಟಿನ ಹಿರಿಯ ಅನುಭವಿ ಕಲಾವಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು. 1964ರಿಂದ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.  ಅನುಭವೀ ಕಲಾವಿದ ಶ್ರೀ ರಘುನಾಥ ಶೆಟ್ಟರ ಹುಟ್ಟೂರು ಕಾಸರಗೋಡು ಜಿಲ್ಲೆಯ ಬಾಯಾರು ಸಮೀಪದ ಕುಳ್ಯಾರು. 1950 ಜೂನ್ 6ರಂದು ಪೈವಳಿಕೆ ಶ್ರೀ ಐತಪ್ಪ ಶೆಟ್ಟಿ ಮತ್ತು ಶ್ರೀಮತಿ ಕಲ್ಯಾಣಿ ಶೆಟ್ಟಿ ದಂಪತಿಗಳ ಹಿರಿಯ ಮಗನಾಗಿ ಜನನ. ಪೈವಳಿಕೆ ಶ್ರೀ ಐತಪ್ಪ ಶೆಟ್ಟರನ್ನು ಕಲಾಭಿಮಾನಿಗಳೆಲ್ಲರೂ ತಿಳಿದಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಖ್ಯಾತ ಸ್ತ್ರೀ ವೇಷಧಾರಿಯಾಗಿ ಮೆರೆದವರು. ಜಾಹೀರಾತು  ರಘುನಾಥ ಶೆಟ್ಟಿ ಬಾಯಾರು ಅವರು ಓದಿದ್ದು 6ನೇ ತರಗತಿ ವರೆಗೆ. ಬಾಯಾರು ಹೆದ್ದಾರಿ ಶಾಲೆಯಲ್ಲಿ. ಎಳವೆಯಲ್ಲಿ ಯಕ್ಷಗಾನಾಸಕ್ತಿ ಇತ್ತು. ತೀರ್ಥರೂಪರ ಜತೆ ತೆರಳಿ ಯಕ್ಷಗಾನ ಪ್ರದರ್ಶನಗಳನ್ನು ...

ಹಿರಿಯ ಕಲಾವಿದ ಶ್ರೀ ಪಡ್ರೆ ಕುಮಾರ

Image
ಶ್ರೀ ಪಡ್ರೆ ಕುಮಾರ ಇವರು ಪ್ರಸ್ತುತ ಕಟೀಲು ಮೇಳದ ಕಲಾವಿದರಾಗಿ ವ್ಯವಸಾಯ ಮಾಡುತ್ತಿದ್ದಾರೆ. ತೆಂಕುತಿಟ್ಟಿನ, ಕಟೀಲು ಮೇಳದ ಹಿರಿಯ ವೇಷಧಾರಿ. ಇವರೊಬ್ಬ ಸವ್ಯಸಾಚಿ ಕಲಾವಿದ. ಯಾವ ವೇಷವನ್ನೂ ಮಾಡಬಲ್ಲರು. ಇವರು ಶ್ರೀ ಪಡ್ರೆ ಚಂದು ಅವರ ಪುತ್ರ. ಶ್ರೀ ಪಡ್ರೆ ಚಂದು ಅವರನ್ನು ಕಲಾಭಿಮಾನಿಗಳೆಲ್ಲರೂ ಬಲ್ಲರು.  ಶ್ರೀ ಪಡ್ರೆ ಚಂದು ಅವರ ಪುತ್ರ ಶ್ರೀ ಪಡ್ರೆ ಕುಮಾರ ಅವರು ಕಳೆದ 57 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಸರಳ, ಸಜ್ಜನ, ವಿನಯವಂತ ಹಿರಿಯ ಕಲಾವಿದ. ಪಡ್ರೆ ಕುಮಾರ ಅವರು ಬಂಟ್ವಾಳ ತಾಲೂಕು ವಿಟ್ಲಪಡ್ನೂರು ಗ್ರಾಮದ ಕೊಡುಂಗಾಯಿ ಸಮೀಪದ ನಡ್ಯಾಳ ಎಂಬಲ್ಲಿ ಶ್ರೀ ಪಡ್ರೆ ಚಂದು ಮತ್ತು ಭಾಗೀರಥಿ ದಂಪತಿಗಳ ಹಿರಿಯ ಮಗನಾಗಿ 1947ನೇ ಇಸವಿಯಂದು ಜನಿಸಿದರು. ಪಡ್ರೆ ಕುಮಾರ ಅವರು ಓದಿದ್ದು 5ನೇ ತರಗತಿ ವರೆಗೆ. ಕೊಡುಂಗಾಯಿ ಶಾಲೆಯಲ್ಲಿ. ತೀರ್ಥರೂಪರು  ಕಲಾವಿದರಾಗಿದ್ದ ಕಾರಣ ಸಹಜವಾಗಿ ಯಕ್ಷಗಾನಾಸಕ್ತಿ ಇತ್ತು. ಆಟಗಳನ್ನು ನೋಡುತ್ತಿದ್ದರು. ಹಗಲು ಗೆಳೆಯರ ಜತೆ ಅಣಕು ಪ್ರದರ್ಶನಗಳೂ ನಡೆಯುತ್ತಿತ್ತು. ಅಡಿಕೆ ಮರದ ಹಾಳೆಗಳನ್ನು ಕತ್ತರಿಸಿ ಕತ್ತಿ ಮತ್ತು ಕಿರೀಟಗಳನ್ನು ಸಿದ್ಧಪಡಿಸಿ ಕುಣಿಯುತ್ತಿದ್ದರು. ಗುಡ್ಡ, ಗದ್ದೆ, ಮನೆಯಂಗಳಗಳೇ ವೇದಿಕೆಯಾಗುತ್ತಿತ್ತು. ಪಡ್ರೆ ಚಂದು ಅವರು ಆಗ ಕುಂಡಾವು ಮೇಳದಲ್ಲಿದ್ದರು. ಮನೆಯಲ್ಲಿಯೇ ಇತರ ಕಲಾವಿದರಿಗೆ ಚಂದು ಅವರು ನಾಟ್ಯ ಕಲಿಸುತ್ತಿದ್ದಾಗ ಕುಮಾರ ಅವರು ನೋಡುತ...