ಆಕರ್ಷಕ ಕಿರೀಟ ವೇಷಧಾರಿ ಶಂಭಯ್ಯ ಕಂಜರ್ಪಣೆ
ಶ್ರೀ ಶಂಭಯ್ಯ ಕಂಜರ್ಪಣೆ... ತೆಂಕುತಿಟ್ಟಿನ ಅತ್ಯುತ್ತಮ ಕಿರೀಟವೇಷಧಾರಿಗಳಲ್ಲಿ ಒಬ್ಬರು. ಪೂರ್ವರಂಗದಲ್ಲಿ ಬರುವ ಎಲ್ಲಾ ಪಾತ್ರಗಳ ಬಗ್ಗೆ, ಪ್ರಸಂಗದಲ್ಲಿ ಬರುವ ವೇಷಗಳ ಒಡ್ಡೋಲಗದ (ಪರಂಪರೆ) ಕ್ರಮದ ಬಗ್ಗೆ ಹೇಳಬಲ್ಲ ಮತ್ತು ಮಾಡಬಲ್ಲ ಸಾಮರ್ಥ್ಯ, ಜ್ಞಾನ ಇವರಿಗಿದೆ. ಸದಾ ಅಧ್ಯಯನಶೀಲ ಕಲಾವಿದ. ವಿದ್ಯಾರ್ಥಿಗಳಿಗೆ ನಾಟ್ಯವನ್ನು ಚೆನ್ನಾಗಿ ಹೇಳಿಕೊಡಬಲ್ಲರು. ಪ್ರಸ್ತುತ ಎಡನೀರು ಮೇಳದ ಕಲಾವಿದ.
ಶ್ರೀ ಶಂಭಯ್ಯ ಕಂಜರ್ಪಣೆ
ಸುಳ್ಯ ತಾಲೂಕು ಅಮರಮುಡ್ನೂರು ಕಂಜರ್ಪಣೆ ಅವರ ಹುಟ್ಟೂರು. ಕೆ. ಗೋಪಾಲ ಕೃಷ್ಣಯ್ಯ, ಕೆ. ಚಂದ್ರಮತಿ ದಂಪತಿಗಳ ನಾಲ್ಕು ಮಂದಿ ಮಕ್ಕಳಲ್ಲಿ ಮೂರನೆಯವರು. ಪ್ರಾಥಮಿಕ ವಿದ್ಯಾಭ್ಯಾಸ ಮುಂಡೂರು ಹಾಸನಡ್ಕ ಶಾಲೆಯಲ್ಲಿ. ಹೈಸ್ಕೂಲ್ ವಿದ್ಯಾರ್ಜನೆ ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ. ಬಾಲ್ಯದಲ್ಲಿ ಕಷ್ಟದ ಜೀವನ ಎದುರಾಗಿತ್ತು. ಆರ್ಥಿಕ ಸಮಸ್ಯೆಯಿಂದಾಗಿ ಪುತ್ತೂರು ಶ್ರೀ ರಾಮಕೃಷ್ಣ ಸೇವಾ ಸಮಾಜದ ಆಶ್ರಮದಲ್ಲಿದ್ದು ವಿದ್ಯಾರ್ಜನೆ ಮಾಡಿದ್ದರು. ಗಿರಿಜಾ ಕ್ಲಿನಿಕ್‍ನ ಡಾ. ಗೌರಿ ಪೈಗಳು ಯಕ್ಷಗಾನವನ್ನು ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು. ಅವರ ಆಸಕ್ತಿ, ಮುತುವರ್ಜಿಯಲ್ಲಿ ವಿದ್ಯಾಲಯದಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಶಾಲಾ ವಿದ್ಯಾರ್ಥಿಯಾಗಿದ್ದಾಗ ‘ವಾಲಿಮೋಕ್ಷ’ ಪ್ರಸಂಗದ ಸುಗ್ರೀವನಾಗಿ ರಂಗಪ್ರವೇಶ ಮಾಡಿದವರು ಶಂಭಯ್ಯ ಭಟ್. ಯಕ್ಷಗಾನದ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ಇವರು ಬಹುಮಾನ ಗಳಿಸುತ್ತಿದ್ದರು. ಹೈಸ್ಕೂಲ್ ವಿದ್ಯಾಭ್ಯಾಸದ ನಂತರ ಎರಡು ವರ್ಷ ಕ್ಲಿನಿಕ್‍ನಲ್ಲಿ ವೈದ್ಯರಿಗೆ ಸಹಕಾರಿಯಾಗಿ ಕೆಲಸ ಮಾಡಿದ್ದರು. ಕಲಾವಿದನಾಗಬೇಕೆಂಬ ಹಂಬಲ ದಿನೇ ದಿನೇ ಹೆಚ್ಚಾಗತೊಡಗಿ 1989ನೇ ಇಸವಿಯಲ್ಲಿ ಶ್ರೀ ಧರ್ಮಸ್ಥಳ ಲಲಿತ ಕಲಾ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತರು. ಆಗ ತರಬೇತಿ ಕೇಂದ್ರದಲ್ಲಿ ಶ್ರೀ ಗೋಪಾಲಕೃಷ್ಣ ಕುರುಪ್ ಅವರು ಹಿಮ್ಮೇಳ ಗುರುಗಳಾಗಿದ್ದರು. ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯ ಕಲಿತ ಕಾರಣವೇ ಪೂರ್ವರಂಗದಲ್ಲಿ ಬರುವ ಪಾತ್ರಗಳನ್ನು ನಿರ್ವಹಿಸಲು ಸಾಧ್ಯವಾಯಿತು ಎಂದು ಶಂಭಯ್ಯ ಕಂಜರ್ಪಣೆಯವರು ಹೇಳುತ್ತಾರೆ.
ಶ್ರೀ ಶಂಭಯ್ಯ ಭಟ್ಟರು ಮೊದಲು ತಿರುಗಾಟ ನಡೆಸಿದ್ದು ಬಪ್ಪನಾಡು ಮೇಳದಲ್ಲಿ. ಕೋಡಂಗಿ, ಬಾಲಗೋಪಾಲ, ಪೀಠಿಕಾ ಸ್ತ್ರೀವೇಷಗಳನ್ನು ನಿರ್ವಹಿಸಿ ಹಂತ ಹಂತವಾಗಿ ಬೆಳೆದವರು. ತದನಂತರ ಕಟೀಲು ಮೇಳಕ್ಕೆ ಸೇರಿದರು. ಇರಾ ಗೋಪಾಲಕೃಷ್ಣರು ಭಾಗವತರಾಗಿದ್ದ ಮೇಳದಲ್ಲಿ ಒಂದು ವರುಷ ತಿರುಗಾಟ ನಡೆಸಿದಾಗ, ಅಡೂರು ಸುಂದರ ರಾಯರು, ಸಂಪಾಜೆ ಶೀನಪ್ಪ ರೈ, ಮುಂಗಿಲ ಕೃಷ್ಣ ಭಟ್, ಸುಣ್ಣಂಬಳ, ಕುಂಞಯ ಶೆಟ್ಟಿ ಮೊದಲಾದವರ ಒಡನಾಟ ಸಿಕ್ಕಿತ್ತು. ನಂತರ ಒಂದು ವರುಷ ಕುಬಣೂರು ಶ್ರೀಧರ ರಾಯರು ಭಾಗವತರಾಗಿದ್ದ ಮೇಳದಲ್ಲಿ ಕಲಾಸೇವೆಯನ್ನು ಮಾಡಿದರು. ನಂತರದ ತಿರುಗಾಟಗಳು ಶ್ರೀ ಬಲಿಪರು ಭಾಗವತರಾಗಿದ್ದ ಮೇಳದಲ್ಲಿ. ಅಲ್ಲಿಯೂ ಮದ್ದಳೆಗಾರ ಪೆರುವಾಯಿ ನಾರಾಯಣ ಭಟ್ ಕಲಾವಿದರಾದ ಪೆರುವಾಯಿ ನಾರಾಯಣ ಶೆಟ್ಟಿ, ಕೋಳ್ಯೂರು ನಾರಾಯಣ ಭಟ್, ರೆಂಜಾಳರಂತಹ ಶ್ರೇಷ್ಠ ಕಲಾವಿದರ ಒಡನಾಟ ಕಲಿಕೆಗೆ ಅನುಕೂಲವಾಯಿತು. ಆಗ ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್ಟರು ಹಾಸ್ಯಗಾರರಾಗಿದ್ದರು. ತದನಂತರ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಭಾಗವತರಾಗಿದ್ದ ಒಂದನೇ ಮೇಳದಲ್ಲಿ ತಿರುಗಾಟ. ಅಲ್ಲಿಯೂ ಕೋಳ್ಯೂರು ರಾಮಚಂದ್ರ ರಾವ್, ಸುಣ್ಣಂಬಳ, ಸುಬ್ರಾಯ ಹೊಳ್ಳ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟ. ಹೀಗೆ 24 ವರ್ಷಗಳ ಕಲಾಸೇವೆಯನ್ನು ಮಾಡಿ ಶ್ರೀ ಶಂಭಯ್ಯ ಕಂಜರ್ಪಣೆಯವರು ಪ್ರಸ್ತುತ ಐದು ವರುಷಗಳಿಂದ ಎಡನೀರು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಮಳೆಗಾಲದ ಕಾರ್ಯಕ್ರಮಗಳಲ್ಲಿ ಎಲ್ಲಾ ಹಿರಿಯ ಕಲಾವಿದರ ಒಡನಾಟ, ಅವರೊಂದಿಗೆ ಭಾಗವಹಿಸುತ್ತಿದ್ದ ಕಾರಣ ಪ್ರತಿಯೊಬ್ಬರ ಬಣ್ಣಗಾರಿಕೆ, ಹೆಜ್ಜೆಗಾರಿಕೆಯನ್ನು ನೋಡಿ ಕಲಿಯುವ ಅವಕಾಶವೂ ಸಿಕ್ಕಿತು. ಮಂದಾರ್ತಿ ಯಕ್ಷಗಾನ ಕೇಂದ್ರದಲ್ಲಿ ಕಂಜರ್ಪಣೆಯವರು ಬಡಗುತಿಟ್ಟಿನ ನಾಟ್ಯವನ್ನೂ ಅಭ್ಯಸಿಸಿದರು. ಬನ್ನಂಜೆ ಶ್ರೀ ಸಂಜೀವ ಸುವರ್ಣರಿಂದ ನಿರ್ದೇಶನ-ಸಲಹೆಗಳನ್ನೂ ಇವರು ಪಡೆದು ಕೊಂಡಿರುವರು. ನವಿಮುಂಬಯಿ, ಹರಿಹರ ಪಳ್ಳತ್ತಡ್ಕ, ಗುತ್ತಿಗಾರು, ಕೊಲ್ಲಮೊಗ್ರು, ಪಂಜ ಇನ್ನಿತರ ಕಡೆಗಳಲ್ಲಿ ಯಕ್ಷಗಾನ ತರಬೇತಿಯನ್ನು ಇವರು ನಡೆಸುತ್ತಿದ್ದಾರೆ. ಪೃಥ್ವಿರಾಜ್ ಕವತ್ತಾರು ಅವರು ನಡೆಸುತ್ತಿದ್ದ ‘ಯಕ್ಷ ಥಿಯೇಟರ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನುಭವ ಇವರಿಗಿದೆ. ಹೀಗೆ ದೆಹಲಿ, ಮುಂಬೈ, ಬೆಂಗಳೂರು ಮೊದಲಾದೆಡೆ ಪ್ರದರ್ಶನಗಳಲ್ಲಿ ಭಾಗವಹಿಸಿದರು. ನಿಡ್ಲೆ ಗೋವಿಂದ ಭಟ್ಟರ ನೇತೃತ್ವದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ ಇದರ ಸದಸ್ಯರಾಗಿ ಮಳೆಗಾಲದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಸೋದರ ಮಾವ ಶ್ರೀ ಬಿ. ಶಿವರಾಮ ಭಟ್ ಅವರು ಕಂಜರ್ಪಣೆಯವರನ್ನು ನಿರಂತರ ಪ್ರೋತ್ಸಾಹಿಸುತ್ತಿದ್ದರು. ತಂದೆ ತಾಯಿಯವರ ಆಶೀರ್ವಾದ, ಸಹೋದರರ ಬೆಂಬಲ ಸದಾ ಇದ್ದ ಕಾರಣ ಕಲಾವಿದನಾಗಿ ತಿರುಗಾಟ ನಡೆಸಲು ಸಾಧ್ಯವಾಯಿತು ಎನ್ನುತ್ತಾರೆ ಶಂಭಯ್ಯ ಭಟ್ಟರು. ಇವರ ದೊಡ್ಡಪ್ಪ ಕಂಜರ್ಪಣೆ ಗಣಪಯ್ಯ ಒಳ್ಳೆಯ ಅರ್ಥಧಾರಿಯಾಗಿದ್ದರು. ಪತ್ನಿ ಸುಕನ್ಯಾ ಮತ್ತು ಇಬ್ಬರು ಮಕ್ಕಳೊಂದಿಗೆ (ಆದಿತ್ಯ, ಆರತಿ) ಸುಖೀ ಜೀವನವನ್ನು ನಡೆಸುತ್ತಿರುವ ಶ್ರೀ ಶಂಭಯ್ಯ ಕಂಜರ್ಪಣೆಯವರಿಗೆ ಕಲಾಭಿಮಾನಿಗಳೆಲ್ಲರ ಪರವಾಗಿ ಶುಭಾಶಯಗಳು. ಅಭಿನಂದನೆಗಳು.ು
- ರವಿಶಂಕರ್ ವಳಕ್ಕುಂಜ

Comments
Post a Comment