ಸಂಪಾಜೆ ಯಕ್ಷೋತ್ಸವದ ರೂವಾರಿ - ಡಾ. ಟಿ. ಶ್ಯಾಮ್ ಭಟ್
ಕಲಾಭಿಮಾನಿಗಳೆಲ್ಲರೂ ಮಳೆಗಾಲದಲ್ಲಿ ಕೇಳುವ ಪ್ರಶ್ನೆ- ‘ಸಂಪಾಜೆ ಯಕ್ಷೋತ್ಸವ’ ಯಾವಾಗ? ಅದಕ್ಕಾಗಿ ಅವರು ಕಾಯುತ್ತಿರುತ್ತಾರೆ. ಪ್ರದರ್ಶನವನ್ನು ಸವಿಯುವ ತುಡಿತ ಪ್ರೇಕ್ಷಕರಿಗಿರುತ್ತದೆ. ಮುಂಗಾರಿನ ಮಳೆಗಾಗಿ ಕಾತರಿಸುವ ಚಾತಕಪಕ್ಷಿಯಂತೆ ಕಾಯುತ್ತಿರುತ್ತಾರೆ.
ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ.) ಸಂಪಾಜೆ ಈ ಮೇರು ಸಂಸ್ಥೆಯ ವತಿಯಿಂದ ನಡೆಸಲ್ಪಡುತ್ತಿರುವ ಈ ಯಕ್ಷಗಾನ ಮಹೋತ್ಸವವು ಚಲನಶೀಲತೆಯಿಂದ ಕಾರ್ಯಾಚರಿಸಲು ಡಾ. ಟಿ. ಶ್ಯಾಮ್ ಭಟ್ಟರು ಕಾರಣರು. ಜೈತ್ರಯಾತ್ರೆಯ ಹಿಂದಿನ ಪ್ರೇರಕ ಶಕ್ತಿ ಅವರು. ವ್ಯಕ್ತಿಯಾಗಿರದೆ ಶಕ್ತಿಯಾಗಿದ್ದುಕೊಂಡು ಪ್ರತಿಷ್ಠಾನದ ಏಳಿಗೆಗೆ, ಪ್ರತಿಷ್ಠಾನದ ಎಲ್ಲಾ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ಸಹಕರಿಸಿ ಯಶಸ್ವಿಯಾಗಲು ಕಾರಣರಾದವರು. ಆದುದರಿಂದಲೇ ಶ್ರೀಯುತರು ‘ಸಂಪಾಜೆ ಯಕ್ಷೋತ್ಸವದ ರೂವಾರಿ’ ಎಂದು ಪ್ರಸಿದ್ಧರಾಗಿದ್ದಾರೆ.
ಪ್ರತಿಷ್ಠಾನದ ಉದ್ದೇಶಗಳು ಮಹತ್ತರವಾದುದು. ಅವುಗಳಿಗೆ ಕೊರತೆಯಾಗದಂತೆ ಕಾರ್ಯಗತಗೊಳಿಸುವುದು ನಮ್ಮ ಕರ್ತವ್ಯ. ಕಲಾಭಿಮಾನಿಗಳು, ಕಲಾವಿದರು, ಕಾರ್ಯಕರ್ತರು ಸಂಪಾಜೆ ಕಲ್ಲುಗುಂಡಿ ಪರಿಸರದ ಜನರು ಪ್ರೀತಿಯಿಂದ ಸಹಕರಿಸುತ್ತಿದ್ದಾರೆ. ಅವರ ಸಹಕಾರದಿಂದಲೇ ಎಲ್ಲವೂ ಸಾಂಗವಾಗಿ ನಡೆಯುತ್ತಿದೆ ಎಂದು ಹೇಳುವ ಶ್ರೀ ಶ್ಯಾಮ್ ಭಟ್ಟರು ನಿಜಕ್ಕೂ ಗುಣಾಢ್ಯರು.
ಡಾ. ಟಿ. ಶ್ಯಾಮ್ ಭಟ್
ಫೋಟೋ : ಉದಯ ಕಂಬಾರ್
ಶ್ರೀಯುತರು ಎಳವೆಯಲ್ಲೇ ಯಕ್ಷಗಾನಾಸಕ್ತರು. ಹುಟ್ಟಿ ಬೆಳೆದ ಮಣ್ಣಿನ ಕೊಡುಗೆ ಅದು. ಶಾಲಾ, ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಯಕ್ಷಗಾನ ಕಲೆಯ ಎರಡು ಪ್ರಕಾರಗಳಾದ ಆಟ ಮತ್ತು ತಾಳಮದ್ದಳೆ ಕಾರ್ಯಕ್ರಮಗಳನ್ನು ನೋಡಿ ಆಸ್ವಾದಿಸುತ್ತಾ ಬೆಳೆದವರು. ಉನ್ನತ ವ್ಯಾಸಂಗವನ್ನು ಕೈಗೊಂಡು ಕರ್ನಾಟಕ ಘನ ಸರಕಾರದ ಇಲಾಖೆಗಳಲ್ಲಿ ವಿವಿಧ ಹುದ್ದೆಗಳನ್ನು ವಹಿಸಿ, ಯಶಸ್ವಿಯಾಗಿ ನಿರ್ವಹಿಸಿ ಆಡಳಿತ ವರ್ಗದವರಿಂದ ಮೆಚ್ಚುಗೆಯನ್ನು ಪಡೆದವರು. ತನ್ನ ಕರ್ತವ್ಯವನ್ನು ಅರ್ಪಣಾಭಾವದಿಂದ ಮಾಡಿ ಜನಾನುರಾಗಿ ಯಾದರು.
ರಜಾದಿನದಂದು ಯಕ್ಷಗಾನ ಪ್ರದರ್ಶನವಿದ್ದರೆ, ಹಿಂದಿನ ದಿನ ದೂರದೂರಿನಿಂದ ಬಂದು ಪ್ರದರ್ಶನವನ್ನು ನೋಡಿ ಅಲ್ಪ ವಿಶ್ರಾಂತಿಯನ್ನು ಅನುಭವಿಸಿ ಮತ್ತೆ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ತಾನು ಮಾಡುತ್ತಿರುವುದು ಸರಕಾರದ ಕೆಲಸ, ಜನಸೇವೆ ಎಂಬ ಪ್ರಜ್ಞೆ ಅವರಲ್ಲಿ ಸದಾ ಜಾಗೃತವಾಗಿರುತ್ತಿತ್ತು. ತನ್ನ ಕರ್ತವ್ಯಕ್ಕೆ ತೊಡಕಾಗದಂತೆ ಡಾ. ಟಿ. ಶ್ಯಾಮ್ ಭಟ್ಟರು ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದ ರೀತಿ ನಿಜಕ್ಕೂ ಪ್ರಶಂಸನೀಯವಾದುದು. ಯಕ್ಷಗಾನವನ್ನು ಆರಾಧಿಸುವ, ಕಲಾವಿದರನ್ನು ಪ್ರೀತಿಸುವ ಡಾ. ಟಿ. ಶ್ಯಾಮ್ ಭಟ್ಟರು ಸರಕಾರದ ಅತ್ಯುನ್ನತ ಅಧಿಕಾರಿಯಾಗಿ ಸೇವೆಯನ್ನು ಮಾಡಿ ಪ್ರಸ್ತುತ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವುದು ಕಲಾಭಿಮಾನಿಗಳಾದ ನಮಗೆಲ್ಲರಿಗೂ ಸಂತೋಷದ, ಹೆಮ್ಮೆಯ ವಿಚಾರವೇ ಹೌದು. ಅವರಿಂದ ಇನ್ನಷ್ಟು ಜನಪರವಾದ ಸೇವೆಯನ್ನು ನಿರೀಕ್ಷಿಸೋಣ. ಆ ನಿಟ್ಟಿನಲ್ಲಿ ಶ್ರೀದೇವರ ಅನುಗ್ರಹ ಸದಾ ಅವರಿಗಿರಲಿ ಎಂದು ಹಾರೈಸೋಣ.
ಶ್ರೀ ಶ್ಯಾಮ್ ಭಟ್ ಅವರು ವಿನಯವಂತರು. ನಗುಮೊಗದಿಂದಲೇ ಎಲ್ಲರನ್ನೂ ಮಾತನಾಡಿಸುತ್ತಾರೆ. ಕಲಾವಿದರ ಕಷ್ಟಕ್ಕೆ ಸ್ಪಂದಿಸುತ್ತಾರೆ. ವಯಸ್ಸಿನಲ್ಲಿ ಕಿರಿಯ ಕಲಾವಿದನಾದರೂ ನೀವು ಎಂದು ಗೌರವಿಸಿ ಮಾತನಾಡುತ್ತಾರೆ. ಶ್ಯಾಮ್ ಭಟ್ಟರು ಯಕ್ಷಗಾನ ಕಲಾರಾಧಕರಾದ ಕಾರಣದಿಂದಲೇ ಕಲಾವಿದರಿಗೆ ಈ ಭಾಗ್ಯವು ಸಿದ್ಧಿಸಿತು. ಗಂಡುಕಲೆಯ ಉತ್ಕರ್ಷೆಗೆ, ಕಲಾವಿದರ ಬದುಕು ಹಸನಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸಿದವರಲ್ಲಿ ಶ್ರೀಯುತರೂ ಒಬ್ಬರು. ಆದರೆ ತಾನು ಪ್ರಯತ್ನಿಸಿದ ಕಾರ್ಯವನ್ನು ಅವರು ಎಲ್ಲೂ ಹೇಳಿಕೊಂಡವರಲ್ಲ. ಗೊತ್ತಿರುವವರಿಗೆ ಗೊತ್ತಿದೆ. ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸುವ ಅವರ ಒಳ್ಳೆಯತನವನ್ನು ಗೌರವಿಸುವ ಹೊಣೆ ಖಂಡಿತಾ ಕಲಾವಿದರಿಗಿದೆ. ಕಲಾವಿದರ ಕಾಮಧೇನು, ಕಲಾವಿದರ ಕಣ್ಮಣಿ, ನಮ್ಮ ಪಾಲಿನ ಕಣ್ಣಿಗೆ ಕಾಣುವ ದೇವರು, ಧನಿಗಳು ಹೀಗೆ ಕಲಾವಿದರು ಅವರನ್ನು ಪ್ರಶಂಸಿಸುವುದನ್ನು ನಾವು ಕಾಣಬಹುದು.
ಡಾ. ಟಿ. ಶ್ಯಾಮ್ ಭಟ್ಟರು ಎಳವೆಯಿಂದ ಇಲ್ಲಿಯ ತನಕ ನೋಡಿದ ಪ್ರದರ್ಶನಗಳ ಸಂಖ್ಯೆ ಅಪಾರ. ನಿರಂತರವಾಗಿ ಹೀಗೆ ನೋಡಿದ ಪರಿಣಾಮ ಪ್ರಸಂಗ ಜ್ಞಾನ, ರಂಗನಡೆ, ಎಲ್ಲವೂ ಇವರಿಗೆ ಬಾಯಿಪಾಠ. ಪದ್ಯಗಳನ್ನೂ ಕಂಠಪಾಠ ಹೇಳಬಲ್ಲರು. ಪ್ರದರ್ಶನಕ್ಕೆ ಪ್ರಸಂಗಗಳನ್ನು ಆಯ್ಕೆ ಮಾಡಬಲ್ಲರು. ಅಪಾರ ಬೌದ್ಧಿಕ ಜ್ಞಾನವನ್ನು ಹೊಂದಿದ ಇವರು ಪ್ರಸಂಗದಲ್ಲಿ ಯಾವ ವೇಷಗಳೆಲ್ಲಾ ಬರುತ್ತದೆ ಎಂದು ಹೇಳಬಲ್ಲರು. ಯಾವ ಕಲಾವಿದ ಯಾವ ವೇಷ ಮಾಡಬೇಕೆಂಬುದನ್ನೂ ನಿರ್ಣಯಿಸಬಲ್ಲರು. ಅಗತ್ಯವಿಲ್ಲದ ಭಾಗಗಳನ್ನು ಕತ್ತರಿಸಿ ಹೊಸತನ್ನು ಸೇರಿಸಿ ಪ್ರದರ್ಶನವು ರಂಜಿಸುವಂತೆ ಸೂಚನೆಗಳನ್ನು ನೀಡಬಲ್ಲರು.
ಕಲಾವಿದರು ಪಾತ್ರೋಚಿತವಾಗಿ ಕುಣಿದು, ಉತ್ತಮ ಸಂಭಾಷಣೆಗಳನ್ನು ಮಾಡಿದರೆ ಪ್ರೇಕ್ಷಕರಾಗಿ ಅವರು ಸ್ಪಂದಿಸುವುದನ್ನು ನಾವೆಲ್ಲರೂ ಕಂಡಿದ್ದೇವೆ. ಸಂಪಾಜೆ ಯಕ್ಷೋತ್ಸವದ ದಿನ ಸಭಾಕಾರ್ಯಕ್ರಮದಿಂದ ತೊಡಗಿ, ಪ್ರದರ್ಶನ ಮುಗಿಯುವ ತನಕವೂ ಪ್ರೇಕ್ಷಕನಾಗಿ ಕುಳಿತು ನೋಡುತ್ತಾರೆ! ನಿರ್ಣಯಿಸುತ್ತಾರೆ! ಇಂತಹ ಪ್ರದರ್ಶನಗಳನ್ನು ನಡೆಸುವುದು, ಜತೆಯಲ್ಲೇ ನೋಡುವುದು ಅಷ್ಟು ಸುಲಭವಲ್ಲ. ಕಲೆಯ ಮೇಲಿನ ಪ್ರೀತಿ, ಅಭಿಮಾನ ಆಳವಾಗಿರಬೇಕು. ಅರ್ಪಣಾಭಾವವಿರಬೇಕು. ದೃಢಮನಸ್ಸು ಇರಬೇಕು. ಮಾನಸಿಕವಾಗಿಯೂ ಬಲಿಷ್ಠನಾಗಿರಬೇಕು. ಸಾಹಸ ಬೇರೆ. ಸಾಮರ್ಥ್ಯ ಬೇರೆ. ಸಾಹಸವು ಸಾಮರ್ಥ್ಯವನ್ನು ಹೊರಗೆಡವುದಕ್ಕೆ ಮಾಧ್ಯಮ. ಡಾ. ಟಿ. ಶ್ಯಾಮ ಭಟ್ಟರು ಸಾಹಸಿಗರು. ಅವರು ಸಾಹಸಪಟ್ಟಷ್ಟೂ ಸಾಮರ್ಥ್ಯವನ್ನು ಹೊರಗೆಡಹ ಬಲ್ಲರು.
ಯಕ್ಷಗಾನ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಿರುವುದು ಹಾಗೂ ಸರಕಾರೀ ಅಧಿಕಾರಿಯಾಗಿ 34 ವರ್ಷಗಳ ಕಾಲ ಉತ್ತಮ ಆಡಳಿತ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಬೆಂಗಳೂರಿನ ಅಲಯನ್ಸ್ ವಿ.ವಿ.ಯು ಶ್ರೀ ಶ್ಯಾಮ್ ಭಟ್ಟರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತ್ತು. ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಭಾರತೀಯ ಸೇನಾ ಮುಖ್ಯಸ್ಥರು ಹಾಗೂ ಗೌರವಾನ್ವಿತ ರಾಜ್ಯಪಾಲ ವಜುಬಾಯಿ ವಾಲಾ ಅವರುಗಳು ಇವರಿಗೆ ಗೌರವ ಡಾಕ್ಟರೇಟ್ ಪದವಿಪ್ರದಾನ ಮಾಡಿದ್ದರು. ಅಲ್ಲದೆ ಸೆಪ್ಟಂಬರ್ 22ರಂದು (2018) ಎಡನೀರು ಮಠಾಧೀಶರ ಚಾತುರ್ಮಾಸ್ಯದ ಸಂದರ್ಭ, ಗಣ್ಯರ ಉಪಸ್ಥಿತಿಯಲ್ಲಿ ಎಡನೀರು ಶ್ರೀಮಠದಲ್ಲಿ ಶ್ಯಾಮ್ ಭಟ್ಟರನ್ನು ಸನ್ಮಾನಿಸಿ ಗೌರವಿಸಲಾಗಿತ್ತು. ಇದು ಕಲಾಭಿಮಾನಿಗಳಿಗೆಲ್ಲಾ ಸಂತಸದ ವಿಚಾರವೇ ಹೌದು.
ಶ್ಯಾಮ್ ಭಟ್ಟರಿಗೆ ಎಡಮೀರು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಗೌರವಾರ್ಪಣೆ
ಫೋಟೋ : ಉದಯ ಕಂಬಾರ್
ಲೌಕಿಕವಾಗಿ ಒಬ್ಬನೇ ಆಗಿ ಕಂಡರೂ ಅವರ ಮನದೊಳಗೆ ಅನೇಕ ಯೋಚನೆ, ಯೋಜನೆಗಳಿವೆ. ಕಲೆಯ, ಕಲಾವಿದರ ಏಳಿಗೆಯ ಬಗ್ಗೆ ಚಿಂತನೆಗಳಿವೆ. ಅವುಗಳೆಲ್ಲವೂ ಸಾಕಾರಗೊಳ್ಳಲಿ. ಕಲಾಭಿಮಾನಿಗಳಾದ ನಾವೆಲ್ಲರೂ ಅವರನ್ನು ಅಭಿನಂದಿಸೋಣ. ಡಾ. ಟಿ. ಶ್ಯಾಮ್ ಭಟ್ಟರಿಗೆ ಶ್ರೀ ದೇವರ ಅನುಗ್ರಹ ಸದಾ ಇರಲಿ. ‘ಸಂಪಾಜೆ ಯಕ್ಷೋತ್ಸವ’ಕ್ಕೆ ಶುಭಾಶಯಗಳನ್ನು ಸಲ್ಲಿಸೋಣ.
- ರವಿಶಂಕರ್ ವಳಕ್ಕುಂಜ

ಶ್ರೀಯುತ ಡಾ. ಶ್ಯಾಮ ಭಟ್ಟರಿಗೆ ವಂದನೆಗಳು ಮತ್ತು ಸಂಪಾಜೆ ಯಕ್ಷೋತ್ಸವಕ್ಕೆ ಶುಭಾಶಯಗಳು!
ReplyDelete