ಅನುಭವೀ ಹಿರಿಯ ನೇಪಥ್ಯ ಕಲಾವಿದ ಶ್ರೀ ಜಯಂತ ಜೋಗಿ
ಯಕ್ಷಗಾನ ಪ್ರದರ್ಶನ ಆರಂಭವಾಗುವುದಕ್ಕೆ ಎರಡು ಗಂಟೆಗಳ ಮುಂಚಿತವಾಗಿಯೇ ಡ್ರೆಸ್ ಮತ್ತು ನೇಪಥ್ಯ ಕಲಾವಿದರು ಬರಲೇಬೇಕು. ಪ್ರದರ್ಶನ ಮುಗಿದು ಅವರು ಹೊರಡಲು ಮತ್ತೆ ಒಂದು ಗಂಟೆ ಬೇಕಾಗುತ್ತದೆ. ಮುಂಚಿತವಾಗಿ ಬಂದು ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ ಚೌಕಿಯನ್ನು ನಿರ್ಮಿಸಿ ಡ್ರೆಸ್‍ಗಳನ್ನು ಒಪ್ಪ ಓರಣವಾಗಿ ಇಟ್ಟಿರುತ್ತಾರೆ. ಬಣ್ಣಗಳನ್ನು ಕಲಸಿ ಇಟ್ಟಿರುತ್ತಾರೆ. ಬಣ್ಣದ ಕರಡಿಗೆಗಳನ್ನು ತೆರೆದು ಬೇಕಾದಲ್ಲಿ ಜೋಡಿಸಿ ಇಡುತ್ತಾರೆ. ದೇವಸ್ಥಾನದಂತೆ ಚೌಕಿಯನ್ನು ಸಿದ್ಧಗೊಳಿಸುವ ಹೊಣೆ ಅವರಿಗೆ. ಕಲಾವಿದರು ಬಣ್ಣಗಾರಿಕೆ ಮುಗಿಸಿ ಬಂದಾಗ ಅವರಿಗೆ ಡ್ರೆಸ್ ಕೊಟ್ಟು, ಕಟ್ಟಿ ವೇಷ ಸಿದ್ಧಗೊಳಿಸಲು ಸಹಾಯಿಗಳಾಗುತ್ತಾರೆ. ಎಲ್ಲಾ ಕಲಾವಿದರೊಂದಿಗೂ ಮಾತನಾಡಬೇಕು. ವ್ಯವಹರಿಸಬೇಕು. ಹವ್ಯಾಸೀ ಕಲಾವಿದರೊಂದಿಗೂ ವ್ಯವಹರಿಸಬೇಕು. ಅನನುಭವೀ ಕಲಾವಿದರಾದರೆ ಯಾವ ವೇಷ ಎಂದು ತಿಳಿದು ಮೇಕಪ್ ಮಾಡಿ ಡ್ರೆಸ್ ಕಟ್ಟಬೇಕು. ಈ ಎಲ್ಲಾ ಕೆಲಸಗಳನ್ನು ಮಾಡಬೇಕಾದರೆ ನೇಪಥ್ಯ ಕಲಾವಿದರಿಗೆ ಮುಖ್ಯವಾಗಿ ಬೇಕಾದುದು ಸಹನೆ. ಸಿಡಿಯುವ ಸ್ವಭಾವ ಇದ್ದವರಿಗೆ ಈ ಕೆಲಸ ಆಗದು. ಸಂಘಟಕರ, ಕಲಾವಿದರ ಪ್ರೀತಿಗೆ ಪಾತ್ರರಾದ ಅನೇಕ ನೇಪಥ್ಯ ಕಲಾವಿದರನ್ನು ನಮಗಿಂದು ಕಾಣಬಹುದು. ಅವರಲ್ಲೊಬ್ಬರು ಶ್ರೀ ಜಯಂತ ಜೋಗಿ.
ಜಯಂತ ಜೋಗಿಯವರು ಕಾಸರಗೋಡು ಜಿಲ್ಲೆ, ಮಂಜೇಶ್ವರ ತಾಲೂಕು ಮೀಂಜ ಗ್ರಾಮದ ಜೋಡುಕಲ್ಲು ಎಂಬಲ್ಲಿ 1967ನೇ ಇಸವಿ ದಶಂಬರ 11ರಂದು ವಾಸು ಜೋಗಿ ಮತ್ತು ಅಕ್ಕಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಅಟ್ಟೆಗೋಳಿ ಎ.ಯು.ಪಿ. ಶಾಲೆಯಲ್ಲಿ 7ನೇ ತರಗತಿ ವರೇಗೆ ಓದಿದರು. ಎಳವೆಯಲ್ಲೇ ಇವರಿಗೆ ಯಕ್ಷಗಾನದಲ್ಲಿ ಆಸಕ್ತಿ. ತನ್ನ 15ನೇ ವಯಸ್ಸಿನಲ್ಲಿ ಉಪ್ಪಳ ಭಗವತೀ ಮೇಳಕ್ಕೆ ಸೇರಿ ಅಲ್ಲಿ 2 ವರ್ಷಗಳ ಕಾಲ ಚೌಕಿ ಕೆಲಸಗಾರನಾಗಿ ದುಡಿದರು. ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುವ ಇವರನ್ನು ಗಮನಿಸಿದವರು ಖ್ಯಾತ ಪ್ರಸಾಧನತಜ್ಞ ಶ್ರೀ ದೇವಕಾನ ಕೃಷ್ಣ ಭಟ್ಟರು. ಶ್ರೀಯುತರು ಜಯಂತ ಜೋಗಿಯವರಿಗೆ ತಮ್ಮ ಸಂಸ್ಥೆಯಲ್ಲಿ ದುಡಿಯುವ ಅವಕಾಶ ಮಾಡಿಕೊಟ್ಟರು. ಅಂದಿನಿಂದ ಇಂದಿನ ವರೇಗೂ ನಿರಂತರವಾಗಿ 33 ವರ್ಷಗಳ ಕಾಲ ಶ್ರೀ ಗಣೇಶ ಕಲಾವೃಂದ ಪೈವಳಿಕೆ (ಶ್ರೀ ದೇವಕಾನ ಕೃಷ್ಣ ಭಟ್ಟರ ಪ್ರಸಾಧನ ಸಂಸ್ಥೆ) ಈ ಸಂಸ್ಥೆಯಲ್ಲಿ ನೇಪಥ್ಯ ಕಲಾವಿದರಾಗಿ ದುಡಿಯುತ್ತಿದ್ದಾರೆ.
ಮಾತು ಕಡಿಮೆ ದುಡಿಮೆ ಹೆಚ್ಚು ಎಂಬಂತೆ ತನ್ನ ಕರ್ತವ್ಯಗಳನ್ನೆಲ್ಲಾ ಮುಗಿಸಿ ಎಲೆ ಅಡಿಕೆ ತಿನ್ನುತ್ತಾರೆ. ಹಾಗೆಂದು ಮೈಮರೆಯುವವರಲ್ಲ. ಚೌಕಿಗೆ ಇವರಿದ್ದರೆ CCTV ಬೇಕೆಂದಿಲ್ಲ. ಎಲ್ಲವನ್ನೂ ಗಮನಿಸುತ್ತಾ ಚೌಕಿಯ ಶಿಸ್ತಿಗೆ ಭಂಗವಾಗದಂತೆ ನೋಡಿಕೊಂಡು ಎಲ್ಲರ ಪ್ರೀತಿಯನ್ನೂ ಗಳಿಸಿಕೊಂಡಿದ್ದಾರೆ. ಕಲಾವಿದರಿಗೆ ಅತ್ಯಂತ ವೇಗವಾಗಿ ಡ್ರೆಸ್ ಕಟ್ಟಿ ವೇಷಗಳನ್ನು ಸಿದ್ಧಗೊಳಿಸುವ ಕಲೆ ಇವರಿಗೆ ಕರತಲಾಮಲಕ. ದೀರ್ಘಕಾಲದ ಅನುಭವದಿಂದ, ಅರ್ಪಣಾ ಭಾವದ ದುಡಿಮೆಯಿಂದ, ಇಡೀ ಚೌಕಿಯನ್ನು ಗಮನಿಸಿ ಯಾವ ಕೊರತೆಯೂ ಬಾರದಂತೆ ನಿರ್ವಹಿಸುವ ರೀತಿಯನ್ನು ಜಯಂತ ಜೋಗಿಯವರು ತಿಳಿದುಕೊಂಡರು. ನೇಪಥ್ಯ ಕಲಾವಿದನಾಗಿ ಹೆಸರು ಗಳಿಸಿದ್ದಲ್ಲದೆ, ಸುಮಾರು ವರುಷಗಳಿಂದ ಶ್ರೀ ಗಣೇಶ ಕಲಾವೃಂದ ಈ ಸಂಸ್ಥೆಯಲ್ಲಿ ಯಕ್ಷಗಾನ ಸಂಬಂಧೀ ಕಿರೀಟ, ಆಭರಣಗಳು ಮತ್ತು ಇತರ ಪರಿಕರಗಳನ್ನು ತಯಾರಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. (ಮೊದಲು ದೇವಕಾನ ಕೃಷ್ಣ ಭಟ್ಟರ ಈ ಸಂಸ್ಥೆಯಲ್ಲಿ ಧರ್ಮಸ್ಥಳ ಮೇಳದ ಖ್ಯಾತ ಕಲಾವಿದ ಶ್ರೀ ಕಡಬ ಸಾಂತಪ್ಪ ಅವರು ಡ್ರೆಸ್ ತಯಾರಿಕೆಯ ಕೆಲಸ ಮಾಡುತ್ತಿದ್ದರು). ದೇವಕಾನ ಕೃಷ್ಣ ಭಟ್ಟರೂ ಮತ್ತು ಅವರ ಪುತ್ರ. ನನ್ನನ್ನು ಗುರುತಿಸಿ ಪ್ರೀತಿಸಿದ್ದಾರೆ. ಕಲಾವಿದರೂ ಪ್ರೀತಿಸಿದ್ದಾರೆ. ನಾನು ಧನ್ಯ ಎನ್ನುವ ಶ್ರೀ ಜಯಂತ ಜೋಗಿಯವರು ಸಾಂಸಾರಿಕವಾಗಿಯೂ ತೃಪ್ತರು. 1992ರಲ್ಲಿ ಆನಂದ ಜೋಗಿಯವರ ಪುತ್ರಿ ಲತಾರನ್ನು ವಿವಾಹವಾಗಿ ನಾಲ್ಕು ಮಕ್ಕಳನ್ನು ಪಡೆದಿದ್ದಾರೆ.(ಮೂರು ಹೆಣ್ಣು, ಒಂದು ಗಂಡು). ಹಿರಿಯ ಪುತ್ರಿ ಪಲ್ಲವಿ M.A, B.Ed. ಪದವೀಧರೆ. ಪುತ್ರ ಪ್ರಶಾಂತ್ ಕುಮಾರ್ ನೆಟ್‍ವರ್ಕ್ ಮಾರ್ಕೆಟಿಂಗ್‍ನಲ್ಲಿ ಉದ್ಯೋಗಿ. ದ್ವಿತೀಯ ಪುತ್ರಿ ಪ್ರಸನ್ನ ಕುಮಾರಿ DMLT (Para Medical Science) ಓದುತ್ತಿದ್ದಾಳೆ. ತೃತೀಯ ಪುತ್ರಿ ಪಂಚಮಿ ಕುಮಾರಿ ವಿದ್ಯಾರ್ಥಿನಿ.
ಜಯಂತ ಜೋಗಿಯವರ ಪ್ರಾಮಾಣಿಕ ದುಡಿಮೆಗೆ ಸಂದ ಪುರಸ್ಕಾರ ಸನ್ಮಾನಗಳು :
1. ಪುಟ್ಟಪರ್ತಿಯಲ್ಲಿ ಶ್ರೀ ಸಾಯಿಬಾಬಾರವರು ನೀಡಿದ ಸನ್ಮಾನ.
2. ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾಸಂಘ ಆರ್ಲಪದವು, ಪಾಣಾಜೆ ಇವರಿಂದ ಉತ್ತಮ ಪ್ರಸಾಧನ ಕಲಾವಿದನೆಂಬ ಪ್ರಶಸ್ತಿ.
3. ಕಾರ್ಕಳ ಭುವನೇಂದ್ರ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಗೌರವ ಸ್ವೀಕಾರ.
4. ಅಂಧರ ಆಂಗ್ಲ ಮಾಧ್ಯಮ ಶಾಲೆ ಕೋಡಿಕಲ್ ಇವರಿಂದ ಸನ್ಮಾನ.
5. ಯಕ್ಷಾರಾಧನಾ ಕಲಾಕೇಂದ್ರ ಉರ್ವ, ಮಂಗಳೂರು ಪಂಚಮ ವರ್ಷಾಚರಣೆಯ ಸಮಾರೋಪ ಸಮಾರಂಭದ ಸಂದರ್ಭದಲ್ಲಿ.
6. ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಯಕ್ಷಗಾನದ ಮಹಾಪೋಷಕ ಕೀರ್ತಿಶೇಷ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸ್ಮಾರಕ ‘ಸರ್ಪಂಗಳ ಪುರಸ್ಕಾರ’. ಉಡುಪಿಯಲ್ಲಿ.
ಅನುಭವೀ ನೇಪಥ್ಯ ಕಲಾವಿದರಾದ ಶ್ರೀ ಜಯಂತ ಜೋಗಿಯವರಿಗೆ ಇನ್ನಷ್ಟು ಪುರಸ್ಕಾರಗಳು ಲಭಿಸಲಿ. ಅವರಿಗೆ ಆಯುಷ್ಯ, ಆರೋಗ್ಯ, ಸುಖ ಸಂಪತ್ತನ್ನು ಕಲಾಮಾತೆಯು ಅನುಗ್ರಹಿಸಲಿ ಎಂಬ ಹಾರೈಕೆಗಳೊಂದಿಗೆ-
- ರವಿಶಂಕರ ವಳಕ್ಕುಂಜ
ವಿಳಾಸ :
ಶ್ರೀ ಜಯಂತ ಜೋಗಿ
ಸಜಂಕಿಲ, ಗೋಳಿಕಟ್ಟೆ ಮನೆ, ಅಂಚೆ : ಬಾಯಾರು
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ
ಮೊ. : 9809713550

Comments
Post a Comment