ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ
ಕಾಸರಗೋಡು ಶ್ರೀ ಸುಬ್ರಾಯ ಹೊಳ್ಳರು ಪ್ರಸ್ತುತ ಶ್ರೀ ಹನುಮಗಿರಿ ಮೇಳದಲ್ಲಿ ತಿರುಗಾಟ ನಡೆಸುತ್ತಿರುವ ಕಲಾವಿದರು. ಸತತ ಸಾಧನೆಯಿಂದ, ಅರ್ಹತೆಯನ್ನು ಹೊಂದಿಯೇ ಇವರು ಹಂತ ಹಂತವಾಗಿ ಬೆಳೆದು ಬಂದರು. ಇವರ ಜತೆಗಿನ ಹತ್ತು ವರುಷಗಳ ತಿರುಗಾಟ ಮರೆಯಲಾಗದ ನೆನಪುಗಳು. ಮೇಳದ ತಿರುಗಾಟದ ಸಂದರ್ಭ ನಾವು ಹೆಚ್ಚಾಗಿ ಬಿಡಾರದಲ್ಲೇ ಇರುತ್ತಿದ್ದೆವು. ನಿದ್ರಾಂಗನೆಯ ಬಳಿ ತೆರಳುವುದಕ್ಕೆ ಮೊದಲೇ ನಿನ್ನೆಯ ಪ್ರದರ್ಶನದ ಬಗ್ಗೆ, ಇಂದು ನಡೆಯಲಿರುವ ಪ್ರಸಂಗದ ವಿಚಾರವಾಗಿ ನಾವು ಮಾತನಾಡುತ್ತಿದ್ದೆವು. ಹೊಸ ಪ್ರಸಂಗಗಳು, ಹೊಸ ಪಾತ್ರಗಳು ಬಂದಾಗ ಅವರು ನಡೆಸುವ ಸಿದ್ಧತೆ, ಅಧ್ಯಯನ ಯಾರಾದರೂ ಮೆಚ್ಚಲೇ ಬೇಕು. ಅವರು ಮಾಡುವ ಹೋಂವರ್ಕ್ ಅದ್ಭುತವಾದುದು. ಸಾಕಷ್ಟು ಸಿದ್ಧರಾಗಿಯೇ ಪಾತ್ರಗಳನ್ನು ನಿರ್ವಹಿಸುತ್ತಾರೆ. ಇವರ ಸಂಗ್ರಹದಲ್ಲಿ ಇಲ್ಲದ ಪ್ರಸಂಗಗಳಿಲ್ಲ. ತನ್ನ ಸಂಗ್ರಹದಲ್ಲಿಲ್ಲದ ಪ್ರಸಂಗ ಪುಸ್ತಕವನ್ನು ಭಾಗವತರಿಂದ ಕೇಳಿ ಪಡೆದು ಬಿಡಾರದಲ್ಲಿ ಹಗಲು ಕುಳಿತು ಬರೆದೇ ಸಿದ್ಧಗೊಳಿಸುತ್ತಿದ್ದರು! ಕೈಬರಹದ ಪ್ರಸಂಗ ಪುಸ್ತಕಗಳೇ ಸುಬ್ರಾಯ ಹೊಳ್ಳರ ಬಳಿ ಹೆಚ್ಚಾಗಿ ಇರಬಹುದೆಂದು ನಾನು ಊಹಿಸಬಲ್ಲೆ. ಹೀಗೆ ಬರೆದುದರ ಪರಿಣಾಮವೇನು? ಅದರಿಂದ ಅವರಿಗೇನು ಸಿದ್ಧಿಸಿತೆಂಬುದನ್ನೂ ಊಹಿಸಬಲ್ಲೆ. ನಾನೂ ನಿರಂತರ ಬರೆದರೆ ಅದರಿಂದ ಆಗುವ ಪ್ರಯೋಜನಗಳನ್ನು ಅನುಭವಿಸಿದ್ದೇನೆ. ಅದು ಸಣ್ಣ ಸಂಪತ್ತಲ್ಲ. ಅದೊಂದು ದೊಡ್ಡ ಗಂಟು. ವೆಚ್ಚ ಮಾಡಿದರೆ ಮುಗಿಯುವಂತದಲ್ಲ. ಮತ್ತೂ ತುಂಬಿಕೊಳ್ಳುವಂತದ್ದು. ಅದನ್ನು ಯಾರಿಗೂ ಕದಿಯಲು ಅಸಾಧ್ಯ. ಅದುವೇ ವಿದ್ಯೆ ಎಂಬ ಸಂಪತ್ತು. ಒಂದು ಬಾರಿ ಓದುತ್ತಾ, ತಿಳಿಯುತ್ತಾ ಸಹನೆಯಿಂದ ಬರೆದರೆ ಹತ್ತು ಬಾರಿ ಓದಿದಂತೆ! ಹೀಗೆ ಮಾಡಿದುದರಿಂದ ಸುಬ್ರಾಯ ಹೊಳ್ಳರಿಗೆ ಪ್ರಸಂಗದ ಪದ್ಯಗಳೆಲ್ಲಾ ಕಂಠಪಾಠ. ಪ್ರಸಂಗಜ್ಞಾನ, ರಂಗನಡೆಗಳನ್ನೆಲ್ಲಾ ತಿಳಿದುಕೊಂಡರು. ಪ್ರಸಂಗದ ಹಾಡುಗಳು ಬಾಯಿಪಾಠವಾದರೆ ಅರ್ಥಜ್ಞಾನ ಇರುವ ಕಲಾವಿದನಿಗೆ ವೇಷ ಮಾಡಲು ಎಷ್ಟು ಸುಲಭ ಎಂದು ಬೇರೆ ಹೇಳಬೇಕಾಗಿಲ್ಲ. ಹಿರಿಯರು ನಿರ್ವಹಿಸುವ ವೇಷಗಳನ್ನು ನೋಡಿಯೂ ಅಭ್ಯಸಿಸಿದರು. ಓದುವ, ಬರೆಯುವ, ನೋಡುವ, ಕೇಳುವ ಗುಣಗಳು. ಬೇರೇನು ಬೇಕು ಶ್ರೇಷ್ಠ ಕಲಾವಿದನಾಗಲು?
ಸುಬ್ರಾಯ ಹೊಳ್ಳರು ಈ ಎಲ್ಲಾ ಗುಣಗಳನ್ನು ಬೆಳೆಸಿಕೊಂಡೇ ಕಲಾವಿದರಾದರು. ಅಭ್ಯಾಸಿಗಳಿಗೆ, ರಂಗವೇರುವ ಕಿರಿಯರಿಗೆ ಸುಬ್ರಾಯ ಹೊಳ್ಳರಂತಹ ಕಲಾವಿದರು ಆದರ್ಶರು. ಈಗೆಲ್ಲಿದೆ ಅದಕ್ಕೆ ಸಮಯ? ಯಾಕೆಂದರೆ ಕೈಯಲ್ಲಿ ಮೊಬೈಲ್ ಇದೆಯಲ್ಲ! ಸಂಪರ್ಕಕ್ಕೆ ಇರುವ ನೂತನ ಅತ್ಯುತ್ತಮ ವ್ಯವಸ್ಥೆ ದುರುಪಯೋಗವಾದಾಗ ನೋವಾಗುತ್ತದೆ. ಆದರೆ ಹೊಳ್ಳರು ಈಗಲೂ ಬರೆಯುತ್ತಾರೆ! ಓದುತ್ತಾರೆ! ಈಗ ಅವರಿಗೆ ಅಧ್ಯಯನದ ತೀರಾ ಅಗತ್ಯವಿಲ್ಲವಾದರೂ ಯಾಕೆ ಮಾಡುತ್ತಾರೆ? ಅದು ದಾಖಲೆಯಾಗಿ ಉಳಿಯುತ್ತದೆ, ಮರವೆಯಾಗದಿರಲಿ, ಸಂಗ್ರಹ ಮಾಡುವ ಹವ್ಯಾಸವೋ? ಕೇಳಿದವರಿಗೆ ಹೇಳಿ ವಿದ್ಯಾದಾನ ಮಾಡೋಣ ಎಂಬ ಇಚ್ಛೆಯೋ? ಅಂತೂ ಅಧ್ಯಯನ ಮಾಡುತ್ತಾರೆ.
ನೀರಾಳ ನಾರಾಯಣ ಹೊಳ್ಳ ಮತ್ತು ಪದ್ಮಾವತಿ ಅಮ್ಮ ದಂಪತಿಗಳ ಮಗನಾಗಿ ಸುಬ್ರಾಯ ಹೊಳ್ಳರು 13-12-1965ರಂದು ಕಾಸರಗೋಡಿನಲ್ಲಿ ಜನಿಸಿದರು. ಸಿರಿಬಾಗಿಲು ಸಮೀಪದ ನೀರಾಳ ಇವರ ಮೂಲಮನೆ (ತರವಾಡು). ನಾರಾಯಣ ಹೊಳ್ಳ ದಂಪತಿಗಳ ಹತ್ತು ಮಂದಿ ಮಕ್ಕಳಲ್ಲಿ ಇವರು ಮೂರನೆಯವರು. ಸುಬ್ರಾಯ ಹೊಳ್ಳರ ತೀರ್ಥರೂಪರು ಕಾಸರಗೋಡು ಪೇಟೆಯ ವೆಂಕಟರಮಣ ದೇವಸ್ಥಾನ ರಸ್ತೆಯ ಬಳಿ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದರು. ವೆಂಕಟ್ರಮಣ ಭವನ ಹೋಟೆಲು ಆರಂಭವಾದ್ದು 1962 ಜುಲೈ 3ರಂದು. ಜೀವನ ಸಾಗಿಸಲು ನಾರಾಯಣ ಹೊಳ್ಳರಿಗೆ ಅದುವೇ ಆಧಾರವಾಗಿತ್ತು. ತಂದೆಯವರು ಆರಂಭಿಸಿದ ಈ ಉದ್ಯಮವನ್ನು ಅವರ ಮಕ್ಕಳು (ಸುಬ್ರಾಯ ಹೊಳ್ಳರ ಸಹೋದರರು) ಈಗಲೂ ಮುನ್ನಡೆಸುತ್ತಿದ್ದಾರೆ. ಸುಬ್ರಾಯ ಹೊಳ್ಳರು ಕಾಸರಗೋಡು ಸರಕಾರೀ ಯು. ಪಿ. ಶಾಲೆಯಲ್ಲಿ 4ನೇ ತರಗತಿ ವರೇಗೆ, ಬಿ.ಇ.ಎಂ. ಹೈಸ್ಕೂಲಿನಲ್ಲಿ 9ನೇ ತರಗತಿವರೇಗೆ ಓದಿ ಅನಿವಾರ್ಯವಾಗಿ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಬೇಕಾಯಿತು. ಹೋಟೆಲ್ ಉದ್ಯಮ ನಡೆಸುತ್ತಿದ್ದ ತಂದೆಯವರಿಗೆ ಸಹಾಯಕರಾಗಿ ದುಡಿಯತೊಡಗಿದರು. ಶಾಲಾ ವಿದ್ಯಾರ್ಥಿ ಯಾಗಿದ್ದಾಗ ಎಡನೀರು ಮಠದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ತಪ್ಪದೆ ನೋಡುತ್ತಿದ್ದರು. ಹೀಗಾಗಿ ಯಕ್ಷಗಾನದತ್ತ ಆಕರ್ಷಿತರಾದರು. ಎಡನೀರು ಮಠದ ಯಕ್ಷಗಾನ ಪ್ರದರ್ಶನಗಳಲ್ಲಿ ದಾಮೋದರ ಮಂಡೆಚ್ಚರು, ಕೊಕ್ಕಡ ಸುಬ್ರಾಯ ಆಚಾರ್ಯ, ನೆಡ್ಲೆ ನರಸಿಂಹ ಭಟ್, ದಿವಾಣ, ಚಿಪ್ಪಾರು, ಪದ್ಯಾಣ, ದೊಡ್ಡ ಸಾಮಗರು, ದೇರಾಜೆ, ಶೇಣಿ, ಕೋಳ್ಯೂರು, ಅಳಿಕೆ, ವಿಟ್ಲ ಜೋಷಿ, ಕುಂಬಳೆ ಸುಂದರ ರಾವ್, ಗುಡ್ಡಪ್ಪ ಗೌಡ, ಹೊಸಹಿತ್ತಿಲು ಮಹಾಲಿಂಗ ಭಟ್, ಬಣ್ಣದ ಮಹಾಲಿಂಗ ಮೊದಲಾದ ಕಲಾವಿದರು ಭಾಗವಹಿಸುತ್ತಿದ್ದ ಕಾಲವದು. ಎಡನೀರು ಶ್ರೀಗಳು ಯಕ್ಷಗಾನವನ್ನೂ, ಕಲಾವಿದರನ್ನೂ ಅದೆಷ್ಟು ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಎಂಬುದು ನಮಗೆಲ್ಲಾ ಗೊತ್ತು. ಕಲಾವಿದರಿಗೆ ಎಡನೀರು ಮಠ ತಮ್ಮ ಮನೆಯಿದ್ದಂತೆ. ಪಾಕಶಾಲೆಯ ಬಳಿಗೆ ತೆರಳಿ ಬೇಕಾದುದನ್ನು ಕೇಳಿ ಹೊಟ್ಟೆ ತುಂಬಿಸಿಕೊಳ್ಳಬಹುದು. ಕಲಾವಿದರಿಗೆ ಅಲ್ಲಿ ಕೊರತೆಯಾಗದು. ಶ್ರೀ ಮಠದ ಭಕ್ತರೂ, ಬೆಳ್ಳಿ ತೆರೆಯ ತಾರೆಗಳೂ ಆದ ಗುಬ್ಬಿವೀರಣ್ಣ, ಇವರ ಪತ್ನಿ ಜಯಮ್ಮ, ನಟಕೇಸರಿ ಉದಯ ಕುಮಾರ್, ಹಾಸ್ಯರತ್ನ ನರಸಿಂಹ ರಾಜು, ಹುಣಸೂರು ಕೃಷ್ಣಮೂರ್ತಿ, ಶಿವರಾಂ ಮೊದಲಾದವರು ಪ್ರೇಕ್ಷಕರಾಗಿ ಯಕ್ಷಗಾನವನ್ನು ಸವಿಯುತ್ತಿದ್ದರಂತೆ. ಯಕ್ಷಗಾನವನ್ನೂ, ಬೆಳ್ಳಿ ತೆರೆಯ ತಾರೆಗಳನ್ನೂ ನೋಡಲು ಎಡನೀರು ಮಠಕ್ಕೆ ಎಲ್ಲೆಡೆಗಳಿಂದ ಕಲಾಭಿಮಾನಿಗಳು ಬರುತ್ತಿದ್ದರು. ಯಾರೂ ಹಸಿದ ಹೊಟ್ಟೆಯಿಂದ ಹೋದವರಲ್ಲ. ಊಟ, ತಿಂಡಿ ತಿಂದು ತೃಪ್ತಿಯಿಂದ ತೇಗಿ ತೆರಳುತ್ತಿದ್ದರು. ಶ್ರೀ ಮಠದ ವ್ಯವಸ್ಥೆಯೆಂದರೆ ಹಾಗೆ. ಪ್ರದರ್ಶನಗಳನ್ನು ನೋಡಿ ಸುಬ್ರಾಯ ಹೊಳ್ಳರಿಗೂ ಕಲಾವಿದನಾಗಬೇಕೆಂಬ ಆಸೆ ಚಿಗುರೊಡೆಯಿತು. ನಾಟ್ಯ ಕಲಿಯಲು ನಿರ್ಧರಿಸಿದರು.
ಕಾಸರಗೋಡು ನುಳ್ಳಿಪ್ಪಾಡಿಯ ಶ್ರೀ ಧರ್ಮಶಾಸ್ತಾ ಭಜನಾ ಸಂಘದ ಆಶ್ರಯದಲ್ಲಿ ನಡೆಯುತ್ತಿದ್ದ ತರಬೇತಿ ಕೇಂದ್ರದಲ್ಲಿ ಹೊಳ್ಳರು ಕೂಡ್ಲು ಆನಂದನವರಿಂದ ನಾಟ್ಯ ಕಲಿಯಲು ಆರಂಭಿಸಿದರೂ ತರಬೇತಿ ಅನಿವಾರ್ಯ ಕಾರಣಗಳಿಂದ ನಿಂತುಹೋಯಿತು. ಆದರೂ ಕೂಡ್ಲು ಆನಂದರು ಮನೆಗೆ ಬಂದು ಕಲಿಸುತ್ತಿದ್ದರು. ಕೂಡ್ಲು ನಾರಾಯಣ ಬಲ್ಯಾಯರಿಂದಲೂ ನಾಟ್ಯ ಕಲಿತಿದ್ದರು ಸುಬ್ರಾಯ ಹೊಳ್ಳರು. ಕೂಡ್ಲು ಆನಂದರೂ, ನಾರಾಯಣ ಬಲ್ಯಾಯರೂ ಕಾವು ಕಣ್ಣನವರ ಶಿಷ್ಯಂದಿರು. ನಂತರ ಹವ್ಯಾಸೀ ಕಲಾವಿದರಾಗಿ ಹೊಳ್ಳರು ಕಾಣಿಸಿಕೊಂಡರು. ಉಳಿಯ ಧನ್ವಂತರೀ ಯಕ್ಷಗಾನ ಕಲಾಸಂಘ, ಕಾರ್ತಿಕೇಯ ಕಲಾ ಸಂಘ ಕೋಟೂರು, ಮುಳಿಯಾರು ಸುಬ್ರಹ್ಮಣ್ಯ ಕಲಾಸಂಘ, ಅಲ್ಲದೆ ಉಪ್ಪಳ ಭಗವತೀ ಮೇಳದ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಮೊದಲ ವೇಷ ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ. ಮುಳಿಯಾರು ಸಂಘದ ಮಲ್ಲ ಕ್ಷೇತ್ರದ ಜಾತ್ರಾ ಮಹೋತ್ಸವದ ಪ್ರದರ್ಶನದಲ್ಲಿ. ಭಾಗವತ ಪುತ್ತಿಗೆ ಚಂದ್ರಶೇಖರ ಹೊಳ್ಳರಿಂದ (ಪುತ್ತಿಗೆ ರಘುರಾಮ ಹೊಳ್ಳರ ಅಣ್ಣ) ಗೆಜ್ಜೆ ಪಡೆದು ಸುಬ್ರಾಯ ಹೊಳ್ಳರು ರಂಗಪ್ರವೇಶ ಮಾಡಿದರು. ಕಟೀಲು ಮೇಳದಲ್ಲಿ ತಿರುಗಾಟ ಮಾಡಬೇಕೆಂಬ ಆಸೆಯಾಗಿ ಕಾರ್ಯಪ್ರವೃತ್ತರಾದರು. ಆ ಸಮಯದಲ್ಲಿ ಕಟೀಲು ಮೇಳಕ್ಕಿಂತ ಮೊದಲೇ ಕರ್ನಾಟಕ ಮೇಳವು ತಿರುಗಾಟಕ್ಕೆ ಹೊರಡುತ್ತಿತ್ತು. 1984ರಲ್ಲಿ ಇರಾ ದೇವಸ್ಥಾನದಲ್ಲಿ ಕರ್ನಾಟಕ ಮೇಳದ ಸೇವೆಯಾಟ. ಸುಬ್ರಾಯ ಹೊಳ್ಳರ ವೇಷವನ್ನು ನೋಡಿ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ರು ಮತ್ತು ಭಾಗವತರಾದ ದಾಮೋದರ ಮಂಡೆಚ್ಚರು ವೇಷ ಆದೀತು ಎಂದು ತೀರ್ಮಾನಿಸಿದರು. ಕಟೀಲು ಸೇವೆಗೆ ಬರಲು ಸೂಚನೆಯೂ ಸಿಕ್ಕಿತು. ಆಗ ಕಟೀಲು 3 ಮೇಳಗಳು. 1ನೇ ಮೇಳದಲ್ಲಿ ಇರಾ ಗೋಪಾಲಕೃಷ್ಣ ಭಾಗವತರೂ, 2ನೇ ಮೇಳದಲ್ಲಿ ಬಲಿಪರೂ, 3ನೇ ಮೇಳದಲ್ಲಿ ಕುರಿಯ ಗಣಪತಿ ಶಾಸ್ತ್ರಿಗಳೂ ಭಾಗವತರಾಗಿದ್ದರು. ಸೇವೆಯ ದಿನ ವೇಷ ಮಾಡಿದ ಹೊಳ್ಳರು 3ನೇ ಮೇಳಕ್ಕೆ ಆಯ್ಕೆಯಾಗಿದ್ದರು. ಕಟೀಲು ಮೇಳದಲ್ಲಿ 1 ವರ್ಷ, ಪುತ್ತೂರು ಮೇಳದಲ್ಲಿ 1 ವರ್ಷ, ಕದ್ರಿ ಮೇಳದಲ್ಲಿ 2 ವರ್ಷ, ಕರ್ನಾಟಕ ಮೇಳದಲ್ಲಿ 1 ವರ್ಷ, ಮಧೂರು ಮೇಳದಲ್ಲಿ 2 ವರ್ಷ, ಬಪ್ಪನಾಡು ಮೇಳದಲ್ಲಿ 3 ವರ್ಷ ತಿರುಗಾಟ ನಡೆಸಿ ಕಲ್ಲಾಡಿ ವಿಠಲ ಶೆಟ್ರ ಅಪೇಕ್ಷೆಯಂತೆ ಕಟೀಲು ಮೇಳಕ್ಕೆ ಪೀಠಿಕೆ ವೇಷಧಾರಿಯಾಗಿ ಸೇರ್ಪಡೆಗೊಂಡರು. 12 ವರ್ಷಗಳ ತಿರುಗಾಟ ನಡೆಸಿ ಹೊಸನಗರ ಮೇಳ ಆರಂಭವಾದ ವರ್ಷ ಸದ್ರಿ ಮೇಳದಲ್ಲಿ ಕಲಾಸೇವೆಯನ್ನು ಮಾಡಿದರು. ಮತ್ತೆ ಕಟೀಲು 4ನೇ ಮೇಳದಲ್ಲಿ 6 ವರ್ಷ, ಹೊಸನಗರ, ಎಡನೀರು ಮೇಳಗಳಲ್ಲಿ 4 ವರ್ಷ ತಿರುಗಾಟ ನಡೆಸಿ ಕಳೆದ ವರ್ಷದಿಂದ ಹನುಮಗಿರಿ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಕಟೀಲು 2ನೇ ಮೇಳದಲ್ಲಿ ಬಲಿಪ ಭಾಗವತರಿಂದ, ಮದ್ಲೆಗಾರ ಪೆರುವಾಯಿ ನಾರಾಯಣ ಭಟ್ಟರಿಂದ ನಿರ್ದೇಶನ ಸಿಕ್ಕಿತ್ತು. ನಂತರ ಹೊಸಹಿತ್ಲು ಮಹಾಲಿಂಗ ಭಟ್, ಕೋಳ್ಯೂರು ರಾಮಚಂದ್ರ ರಾವ್, ತೆಂಕಬೈಲು ಶಾಸ್ತ್ರಿಗಳು, ಬೊಟ್ಟಿಕೆರೆ ಪುರುಷೋತ್ತಮ ಪೂಂಜರು, ಸುಣ್ಣಂಬಳ ವಿಶ್ವೇಶ್ವರ ಭಟ್ ಮೊದಲಾದ ಕಲಾವಿದರ ಸಹಕಾರ, ಪ್ರೇರಣೆಯೂ ಸಿಕ್ಕಿತು. ಕಟೀಲು ಮೇಳದ ತಿರುಗಾಟ ಒಂದು ವಿಶೇಷ ಅನುಭವ. ಎಲ್ಲರ ಸಹಕಾರ ಮತ್ತು ಅವಕಾಶಗಳೂ ಸಿಕ್ಕಿದ ಕಾರಣ ನಾನು ಕಲಾವಿದನಾಗಿ ಗುರುತಿಸಿಕೊಂಡೆ ಎಂದು ಸುಬ್ರಾಯ ಹೊಳ್ಳರು ಹೇಳುತ್ತಾರೆ.
1991ರಲ್ಲಿ ಶ್ರೀ ಸುಬ್ರಾಯ ಹೊಳ್ಳರು ಸಹೋದರರಾದ ಪರಮೇಶ್ವರ ಹೊಳ್ಳ, ವೆಂಕಟರಮಣ ಹೊಳ್ಳ, ಗೋಪಾಲಕೃಷ್ಣ ಹೊಳ್ಳ (ಪುಟ್ಟಣ್ಣ) ರಾಮಕೃಷ್ಣ ಹೊಳ್ಳ, ಬಾಲಕೃಷ್ಣ ಹೊಳ್ಳ, ರಾಧಾಕೃಷ್ಣ ಹೊಳ್ಳ ಇವರ ಸಹಕಾರದಿಂದ ಶ್ರೀ ವೆಂಕಟರಮಣ ಸ್ವಾಮೀ ಕೃಪಾಶ್ರಿತ ಯಕ್ಷಗಾನ ಕಲಾಸಂಘ ಕಾಸರಗೋಡು ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಪ್ರದರ್ಶನಕ್ಕೆ ಬೇಕಾದ ಪರಿಕರಗಳನ್ನು ಸಿದ್ಧಪಡಿಸಿಕೊಂಡರು. ಯಕ್ಷಗಾನದ ಡ್ರೆಸ್, ಕಿರೀಟ, ಆಭರಣಗಳನ್ನು ತಯಾರಿಸುವ, ಮೇಕಪ್ ಮಾಡುವ ಕಲೆ ಇವರೆಲ್ಲರಿಗೂ ಕರಗತವಾಗಿತ್ತು. ಹೊಳ್ಳ ಸಹೋದರರು ಸದ್ರಿ ಸಂಸ್ಥೆಯನ್ನು ಈಗಲೂ ನಡೆಸುತ್ತಿದ್ದಾರೆ. ಬಾಲಕಲಾವಿದರ ತಂಡವೂ ಇದ್ದು ತರಬೇತಿ ಮತ್ತು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಖ್ಯಾತ ಕಲಾವಿದರಾದ ಶ್ರೀ ರಾಧಾಕೃಷ್ಣ ನಾವಡರು ಸುಬ್ರಾಯ ಹೊಳ್ಳರ ಭಾವ (ಅಕ್ಕನ ಗಂಡ) ಸುಬ್ರಾಯ ಹೊಳ್ಳರ ಅಕ್ಕ ಕಾಸರಗೋಡಿನಲ್ಲಿ Deputy Collector ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಿರೀಟ ವೇಷಗಳೆಂದರೆ ಹೊಳ್ಳರಿಗೆ ಅಚ್ಚುಮೆಚ್ಚು. ನಾಟಕೀಯ ವೇಷಗಳನ್ನೂ ಉತ್ತಮವಾಗಿ ನಿರ್ವಹಿಸುತ್ತಾರೆ. ರಂಗಕ್ಕೆ ತಾನು ಮಾಡುವ ವೇಷಕ್ಕೆ ನ್ಯಾಯವನ್ನು ಸಲ್ಲಿಸುವ ಕಲಾವಿದ. ಪಾತ್ರದ ಸ್ವಭಾವ, ಸಂದರ್ಭಗಳನ್ನರಿತು ಎಲ್ಲಿ ಚೆನ್ನಾಗಿ ಕೆಲಸ ಮಾಡಬೇಕು? ಯಾವ ಪದ್ಯಕ್ಕೆ ಕೆಲಸ ಮಾಡಬೇಕು? ಎಂಬ ರಂಗತಂತ್ರಗಳನ್ನರಿತವರು. ಇದನ್ನು ತಿಳಿಯದವರು ಪ್ರಾರಂಭದಲ್ಲೇ ಕೆಲಸ ಮಾಡಿ (ವೇಷ ರೈಸಬೇಕೆಂಬ ಕಾರಣದಿಂದ) ಮತ್ತೆ ಏದುಸಿರು ಬಿಡುತ್ತಾರೆ. ಹಾಗಾದಾಗ ವೇಷವು ಸಾಯಬೇಕಾದ ಹೊತ್ತಿಗಿಂತ ಮೊದಲೇ ಸಾಯುತ್ತದೆ. ಪ್ರೇಕ್ಷಕರಿಗೆ ರಸಭಂಗವಾಗುತ್ತದೆ. ಪ್ರಸಂಗವೂ ಸೋಲುತ್ತದೆ. ರಂಗಕ್ಕೆ ಕೊರತೆಯಾದರೆ, ಸಹಕಲಾವಿದರು ಪಾತ್ರನಿರ್ವಹಣೆಯಲ್ಲಿ ಸೋತರೆ ಅವರು ಸಹಿಸಲಾರರು. ನೋವನ್ನು ಪ್ರಕಟಿಸುತ್ತಾರೆ. ತಂಡದ ಪ್ರದರ್ಶನವು ಗೆಲ್ಲಬೇಕೆಂಬ ಅವರ ಕಾಳಜಿ ಪ್ರಶಂಸನೀಯವಾದುದು. ಶ್ರೀ ಸುಬ್ರಾಯ ಹೊಳ್ಳರು ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನಲ್ಲಿ 3 ವರ್ಷಗಳ ಕಾಲ ನಾಟ್ಯ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಿ ಅವರು ಗುಜರಾತ್‍ನ ಸೂರತ್, ಬರೋಡ, ಅಹಮ್ಮದಾಬಾದ್ ನಗರಗಳಲ್ಲಿ ಪ್ರದರ್ಶನಗಳನ್ನು ನೀಡಲು ಕಾರಣರಾಗಿದ್ದರು. ನೆಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಳೆಗಾಲದ ತಿರುಗಾಟದಲ್ಲಿ 15 ವರ್ಷ ಭಾಗವಹಿಸಿರುತ್ತಾರೆ. ದಕ್ಷ, ಅರ್ಜುನ, ಹಿರಣ್ಯಾಕ್ಷ, ಇಂದ್ರಜಿತು, ಶಿಶುಪಾಲ, ದೇವೇಂದ್ರ, ರಕ್ತಬೀಜ, ಋತುಪರ್ಣ, ಕಂಸ, ಹಿರಣ್ಯಕಶ್ಯಪು, ಸೀತಾ ಕಲ್ಯಾಣ ಪ್ರಸಂಗದ ರಾವಣ ಮೊದಲಾದ ವೇಷಗಳಲ್ಲಿ ರಂಜಿಸಿದರು. ಕಿರಾತಾರ್ಜುನ ಪ್ರಸಂಗದ ಅರ್ಜುನ, ಪಾಂಡವಾಶ್ವಮೇಧ ಪ್ರಸಂಗದ ತಾಮ್ರಧ್ವಜ ಮೊದಲಾದ ಪಾತ್ರಗಳನ್ನು ನಿರ್ವಹಿಸುವುದು ಸುಲಭವಲ್ಲ. ರಂಗನಡೆಗಳನ್ನು ಬಲ್ಲ ಹೊಳ್ಳರು ಸುಲಭವಾಗಿ ಅಂತಹ ಪಾತ್ರಗಳನ್ನು ಮಾಡುತ್ತಾರೆ. ಇವರು ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬಲ್ಲರು. ಕಳೆದ ಮಳೆಗಾಲದಲ್ಲಿ ಸುರತ್ಕಲ್ಲಿನಲ್ಲಿ ದೇವೀ ಮಹಾತ್ಮ್ಯೆ ಪ್ರಸಂಗದ ಶುಂಭಾಸುರನಾಗಿ ಕೇಶಾವರೀ ಕಿರೀಟದಲ್ಲಿ ಕಾಣಿಸಿಕೊಂಡಿದ್ದರು. ಆಗಸ್ಟ್ 18, 2018ರಂದು ಮುಂಬೈಯಲ್ಲಿ ಮಹಿಷಾಸುರನಾಗಿಯೂ ಅಭಿನಯಿಸಿದ್ದರು. ಇವರು ಭಾಗವತಿಕೆಯನ್ನೂ ಮಾಡಬಲ್ಲರು. ಶ್ರೀ ರಾಮಕೃಷ್ಣ ಮಯ್ಯರೂ, ಸುಬ್ರಾಯ ಹೊಳ್ಳರೂ ಜತೆಯಾಗಿ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಂದ ಭಾಗವತಿಕೆ ಅಭ್ಯಾಸ ಮಾಡಿದ್ದರು. ಯಕ್ಷಗಾನ ಕಲಾವಿದನಾದುದರಿಂದ ಅನೇಕ ಜನರ ಪರಿಚಯವಾಯಿತು. ಅಭಿಮಾನಿಗಳು ಪ್ರೀತಿಸಿದರು, ಪ್ರೋತ್ಸಾಹಿಸಿದರು. ಯಕ್ಷಗಾನವು ಅನೇಕ ಭಾಷೆಗಳಲ್ಲಿ ಪ್ರದರ್ಶನಗೊಳ್ಳುವುದು ಸಂತಸದ ವಿಷಯವೇ ಹೌದು. ವ್ಯಾಪ್ತಿ ವಿಸ್ತರಣೆ ಆದಷ್ಟು ಒಳ್ಳೆಯದು. ಆದರೂ ಕನ್ನಡ ಭಾಷೆಯೇ ಸೂಕ್ತ ಎನ್ನುವ ಶ್ರೀ ಹೊಳ್ಳರು ಮೊದಲೆಲ್ಲಾ ಮೇಳದ ತಿರುಗಾಟದಲ್ಲಿ ಬಿಡಾರ ಮತ್ತು ಚೌಕಿಯಲ್ಲಿ ಕಲಾವಿದರು ಸತತ ಅಭ್ಯಾಸ ಮಾಡುತ್ತಿದ್ದರು. ಹಿರಿಯ ಕಲಾವಿದರಿಂದ ಕೇಳಿ ತಿಳಿಯುತ್ತಿದ್ದರು. ಒಂದೇ ಮನೆಯವರಂತೆ ಇರುತ್ತಿದ್ದರು. ಆದರೆ ಈಗ ಸಾಂಘಿಕ ಪ್ರಯತ್ನ ಇಲ್ಲದೆ ಕಲಾವಿದರು ಸಿದ್ಧವಾಗುತ್ತಿಲ್ಲ ಎಂಬ ನೋವನ್ನೂ ವ್ಯಕ್ತಪಡಿಸುತ್ತಾರೆ.
ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಏಲಬೆ ಎಂಬಲ್ಲಿ ‘ತೇಜೋಧಾಮ’ ಮನೆಯಲ್ಲಿ ವಾಸಿಸುತ್ತಿರುವ ಹೊಳ್ಳರು ಕಲಾಪೋಷಕ, ‘ಸಂಪಾಜೆ ಯಕ್ಷೋತ್ಸವ’ದ ರೂವಾರಿ ಶ್ರೀ ಟಿ. ಶ್ಯಾಮ ಭಟ್ಟರನ್ನು ‘ಕಲಾವಿದರ ಕಾಮಧೇನು’ ಅವರಿಂದ ಅನೇಕ ಕಲಾವಿದರು ಉಪಕೃತರಾಗಿದ್ದಾರೆ ಎಂಬುದು ಸತ್ಯದ ವಿಚಾರ, ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಹೇಳಿ ಗೌರವಿಸುತ್ತಾರೆ.
1997ರಲ್ಲಿ ಶಾರದಾ (ನಾವೂರು ಶ್ರೀನಿವಾಸ ಕಾರಂತರ ಪುತ್ರಿ) ಅವರನ್ನು ವಿವಾಹವಾದ ಸುಬ್ರಾಯ ಹೊಳ್ಳರಿಗೆ ಇಬ್ಬರು ಮಕ್ಕಳು. ಪುತ್ರ ಹರಿನಾರಾಯಣ ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿ. ಪುತ್ರಿ ಪದ್ಮಶ್ರೀ ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿನಿ. ಶ್ರೀ ಹೊಳ್ಳರು ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ರಾಜ್ಯದ ನಗರಗಳಲ್ಲಿ ಅಲ್ಲದೆ ವಿದೇಶಗಳಲ್ಲಿ (ಸಿಂಗಾಪುರ್, ಬಹ್ರೈನ್) ನಡೆದ ಪ್ರದರ್ಶನಗಳಲ್ಲೂ ಭಾಗವಹಿಸಿದ್ದಾರೆ. ಅವರೊಂದಿಗೆ ಹೆಚ್ಚಿನ ಎಲ್ಲಾ ವೇಷಗಳಿಗೂ ಸಹಕಲಾವಿದನಾಗಿ ಕಾಣಿಸಿಕೊಂಡ ಅನುಭವಗಳು ಮರೆಯಲಾಗದು. ಅವರ್ಣನೀಯವಾದುದು. ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು ಇವರಿಗೆ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು. ು
-- ರವಿಶಂಕರ್ ವಳಕ್ಕುಂಜ

ಹೊಳ್ಳರು 👏👏..ಅವರ ಬಗ್ಗೆ ಹೆಚ್ಚಿನ ಮಾಹಿತಿಗಳ್ನು ತಿಳಿಯಲು ಬಯಸಿದ್ದೆ.. ಈ ಬರಹ ತುಂಬ ಉಪಕಾರವಾಯಿತು..ಧನ್ಯವಾದಗಳು..
ReplyDeleteಉತ್ತಮ ಕಲಾವಿದರ ಉತ್ತಮ ಲೇಖನ 👌🙏
ReplyDeleteYAKSHAKIRITI,SUBRAYA HOLLARA,RAKTHABIJA....MASTER PIECE.KALLU HRUDAYADA VKTHIYADARU,EE SANDARBHA KANNIRU HAKUTTANE.ABHINANDANEGALU.
ReplyDeleteಉತ್ತಮವಾದ ಬರಹ.
ReplyDelete