ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು
‘ಯಕ್ಷಗಾನ’ ಎಂಬ ಶ್ರೇಷ್ಠ ಕಲೆಯು ಯಾವಾಗ ಪ್ರಾರಂಭವಾಯಿತು? ಆಗ ಕಲೆಯ ಸ್ವರೂಪ ಹೇಗಿತ್ತು? ಯಾವ ರೀತಿಯಲ್ಲಿ ಇಂದಿನವರೇಗೂ ಸಾಗಿ ಬಂತು? ಈ ಪ್ರಶ್ನೆಗಳಿಗೆ ಉತ್ತರಿಸಲು ನಾವು ಶಕ್ಯರಲ್ಲ. ತಿಳಿದವರಲ್ಲ. ಹಿರಿಯರು, ವಿದ್ವಾಂಸರು ಉತ್ತರಿಸಬೇಕು. ಆದರೂ ಓದಿ ಸಂಗ್ರಹಿಸಿದ ಕೆಲವೊಂದು ವಿಚಾರಗಳ ಆಧಾರದಲ್ಲಿ ಕೆಲವು ಶತಮಾನಗಳ ಹಿಂದೆಯೇ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದ್ದವು ಎಂಬುದನ್ನು ತಿಳಿಯಬಹುದು. ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಶ್ರೇಷ್ಠ ಕವಿಗಳಾದ ದೇವಿದಾಸ, ಧ್ವಜಪುರ ರಾಮಯ್ಯ, ಮಯ್ಯವತಿ ವೆಂಕಟ, ಹೆರ್ಗ ವೆಂಕರಮಣ ಪ್ರಭು, ಅಮ್ಮನಳ್ಳಿ ಆತ್ಮಾರಾಮ, ನಂದಳಿಕೆ ಲಕ್ಷ್ಮೀನಾರಾಯಣ ಮೊದಲಾದವರು 16ನೆಯ ಶತಮಾನದ ಕೊನೆಯವರೆಂದೂ, ನಗಿರೆ ಸುಬ್ಬ, ವಿಷ್ಣು ವಾರಂಬಳ್ಳಿ ಮೊದಲಾದವರು ಕ್ರಿ. ಶ. 1600ರ ಮೊದಲಿನವರೆಂದೂ ಪುಸ್ತಕಗಳಲ್ಲಿ ಓದಿದ ನೆನಪು. ಇರಲಿ. ಶ್ರೇಷ್ಠ ಸಂದೇಶಗಳನ್ನೂ, ಪುರಾಣಜ್ಞಾನವನ್ನೂ, ಮನೋರಂಜನೆಯನ್ನೂ ಜತೆಯಾಗಿ ನೀಡಬಲ್ಲ ಅತ್ಯುತ್ತಮ, ಅನುಪಮವಾದ ಕಲಾಪ್ರಕಾರವನ್ನು ನೋಡಿ ಆನಂದಿಸುವ ಅವಕಾಶವನ್ನು ಪಾರ್ತಿಸುಬ್ಬನಿಂದ ಹಿಡಿದು ಅನೇಕ ಹಿರಿಯ ಕವಿಶ್ರೇಷ್ಠರು ನಮಗೆ ನೀಡಿದರು. ಅವರುಗಳೆಲ್ಲಾ ನಿಜಕ್ಕೂ ಪ್ರಾತಃಸ್ಮರಣೀಯರು. ಯಕ್ಷಗಾನದಲ್ಲಿ ಗಾನ ಮಾತ್ರ ಇರುವುದಲ್ಲ. ಗಾಯನ, ವಾದನ, ನರ್ತನ, ವಾಚಿಕಗಳಿಂದ ಬಣ್ಣ ವೇಷಗಳಿಂದ ಪರಿಪೂರ್ಣವಾಗಿ, ಸಮೃದ್ಧವಾಗಿರುವ ಸಮಷ್ಠಿ ಕಲೆಯಿದು. ಗಾನ, ಮಾತುಗಳು ಕಿವಿಗಳಿಗೆ, ಮುಖವರ್ಣಿಕೆ, ವೇಷಭೂಷಣಗಳು ಕಣ್ಣುಗಳಿಗೆ, ಧರ್ಮಭೋದನೆಗಳೆಂಬ ಸಂದೇಶಗಳು ಮನಸ್ಸಿಗೆ ಆನಂದವನ್ನು ನೀಡುತ್ತವೆ. ಅಂತಹ ಮೇರುಕಲೆಯು ಆರಂಭವಾದಂದಿನಿಂದ ಇಂದಿನ ವರೇಗೂ ಉಳಿಸಿ ನಮಗೆ ನೀಡಿದ ಹಿರಿಯ ಕಲಾವಿದರು, ಕಲಾಭಿಮಾನಿಗಳು, ಸಂಘಟಕರುಗಳೆಲ್ಲಾ ಅಭಿನಂದನೀಯರು. ಅವರುಗಳನ್ನೆಲ್ಲಾ ಕಷ್ಟಪಟ್ಟು ಈ ಕಲೆಯನ್ನು ಉಳಿಸಿ, ಬೆಳೆಸಿ ನಮಗೆ ನೀಡಿದರೆಂಬುದನ್ನು ಮರೆಯದೆ ನೆನಪಿಸುತ್ತಾ ವ್ಯವಹರಿಸಬೇಕಾದುದು ನಮಗೆ ಕರ್ತವ್ಯವೂ ಹೌದು.
ಹೌದು, ಮೇಳಗಳು ತಿರುಗಾಟಕ್ಕೆ ಸರ್ವ ಸನ್ನದ್ಧವಾಗಿ ನಿಂತಿವೆ. ಕಲಾವಿದರುಗಳು ಆ ಶುಭ ಸಮಯಕ್ಕಾಗಿ ಕಾಯುತ್ತಿದ್ದಾರೆ. ಹತ್ತನಾವಧಿ ದಿನದಂದು (ಪತ್ತನಾಜೆ - ಬೇಸಿಗೆ ತಿಂಗಳ ಹತ್ತನೆಯ ದಿನ) ಗೆಜ್ಜೆಬಿಚ್ಚಿ ತಿರುಗಾಟವನ್ನು ನಿಲ್ಲಿಸಿ ಮಳೆಗಾಲದ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ಮಳೆಗಾಲದ ಕಾರ್ಯಕ್ರಮಗಳೆಲ್ಲವೂ ಮುಗಿಯುತ್ತಾ ಬಂತು. ದೀಪಾವಳೀ ಹಬ್ಬ ಕಳೆದ ತಕ್ಷಣ ಮೇಳಗಳ ತಿರುಗಾಟ ಆರಂಭ. ತಿರುಗಾಟಕ್ಕೆ ಸಕಲ ಸಿದ್ಧತೆಗಳನ್ನೂ ಮೇಳಗಳ ಆಡಳಿತವು ನಡೆಸುತ್ತಿದೆ. ಮೇಳಗಳ ಸಂಖ್ಯೆಯೂ ವೃದ್ಧಿಸುತ್ತಿದೆ. ಪ್ರದರ್ಶನಗಳ ಸಂಖ್ಯೆಯೂ ಹೆಚ್ಚುತ್ತಿವೆ. ಇದು ಸಂತೋಷದ ವಿಚಾರವಲ್ಲವೇ. ತೆಂಕಿನಲ್ಲಿ ಶ್ರೀ ಧರ್ಮಸ್ಥಳ, ಕಟೀಲು, ಹನುಮಗಿರಿ, ಎಡನೀರು, ಸುಂಕದಕಟ್ಟೆ, ಸಸಿಹಿತ್ತಿಲು, ಬಪ್ಪನಾಡು, ದೇಂತಡ್ಕ, ಮಲ್ಲ, ಕೊಲ್ಲಂಗಾನ ಮೊದಲಾದ ಮೇಳಗಳು, ಬಡಗಿನಲ್ಲಿ ಸಾಲಿಗ್ರಾಮ, ಪೆರ್ಡೂರು, ಮಂದಾರ್ತಿ, ಕಮಲಶಿಲೆ, ಸೌಕೂರು, ಸಿಗಂದೂರು, ಗೋಳಿಗರಡಿ ಮೊದಲಾದ ಮೇಳಗಳು ದಿಗ್ವಿಜಯಕ್ಕೆ ಸಜ್ಜಾಗಿ ನಿಂತಿವೆ. ಮೊದಲ ದಿನ ಪಾಂಡವಾಶ್ವಮೇಧ ಪ್ರಸಂಗವನ್ನು ಪ್ರದರ್ಶಿಸಿ ತಿರುಗಾಟವನ್ನು ಆರಂಭಿಸಲಿವೆ.
ಕಟೀಲು ಮೇಳ ಡಿಸೆಂಬರ್ 2ಕ್ಕೆ ಆರಂಭ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳು ತನ್ನ ತಿರುಗಾಟವನ್ನು ಡಿಸೆಂಬರ್ 2ನೇ ತಾರೀಕಿನಂದು ಶ್ರೀ ಕ್ಷೇತ್ರದಲ್ಲಿ ಸೇವೆಯಾಟ ಆಡಿ ಆರಂಭಿಸಲಿವೆ. 1867ರ ಸುಮಾರಿಗೆ ಕಟೀಲು ಮೇಳವು ಆರಂಭವಾಯಿತೆಂಬ ಹೇಳಿಕೆಯಿದೆ. 150 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ಕಟೀಲು ಮೇಳ ಬಯಲಾಟಗಳನ್ನು ಮಾತ್ರ ಪ್ರದರ್ಶಿಸುತ್ತವೆ. ಸ್ಪರ್ಧೆ ಮತ್ತು ವ್ಯಾಪಾರೀ ದೃಷ್ತಿಯಿಲ್ಲದೆ ಪೌರಾಣಿಕ ಪ್ರಸಂಗಗಳನ್ನು ಮಾತ್ರ ಆಡುವ ಮೇಳಗಳಲ್ಲಿ ಕಟೀಲು ಮೇಳಗಳೂ ಸೇರಿವೆ. ಕಾರ್ತಿಕ ಬಹುಳ ಪಂಚಮಿಯಂದು ಕಟೀಲು ದೀಪೋತ್ಸವ ನಡೆದು ಶ್ರೀ ದೇವರಿಗೆ ತಾರಾನುಕೂಲವಾಗುವ ದಿನ ಮೇಳಗಳು ಹೊರಡುವುದು ಕ್ರಮ. ಮೇಳಗಳಲ್ಲಿ ಪ್ರತೀ ಅಮಾವಾಸ್ಯೆ ಮತ್ತು ಮೇಷ ಸಂಕ್ರಮಣದಂದು ವಿಶೇಷ ಪೂಜಾ ಕಾರ್ಯಕ್ರಮವೂ ಇರುತ್ತದೆ. 1975ರಂದು 2ನೇ ಮೇಳ ಆರಂಭ. 1983ರಲ್ಲಿ ಮೂರನೇ ಮೇಳ. 1993ರಲ್ಲಿ 4ನೇ ಮೇಳ. 2010ರಲ್ಲಿ 5ನೇ ಮೇಳ. 2013ರಲ್ಲಿ 6ನೇ ಮೇಳ ಆರಂಭವಾಯಿತು. ಪ್ರಸ್ತುತ ಆರು ಮೇಳಗಳು ಸೇವಾ ಬಯಲಾಟಗಳನ್ನು ಪ್ರದರ್ಶಿಸುವುದರ ಮೂಲಕ ಸೇವಾಕರ್ತರ ಸಂಕಲ್ಪವನ್ನು ಈಡೇರಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.
ತೆಂಕು ಮತ್ತು ಬಡಗಿನ ಎಲ್ಲಾ ಮೇಳಗಳೂ, ಕಲಾವಿದರುಗಳು ದಿಗ್ವಿಜಯಕ್ಕೆ ಸಜ್ಜಾಗಿ ನಿಂತಿರುವ ಈ ಶುಭ ಸಂದರ್ಭ- ಕಲಾಭಿಮಾನಿಗಳೆಲ್ಲರ ಪರವಾಗಿ ಶುಭಾಷಯಗಳು. ಕಲಾವಿದರಿಗೆ ಕಲಾಮಾತೆಯು ಆರೋಗ್ಯ ಮತ್ತು ಸಕಲ ಭಾಗ್ಯಗಳನ್ನೂ ನೀಡಿ ಅನುಗ್ರಹಿಸಲಿ. ಸಂಘಟಕರಿಗೂ ಯಾವ ಕೊರತೆಯೂ ಬಾರದಿರಲಿ. ಕಲಾವಿದರು ಉತ್ತಮ ಪ್ರದರ್ಶನ ನೀಡುವಂತಾಗಲಿ. ಪ್ರತಿಭೆಯು ಪ್ರಕಟವಾಗಿ ಪ್ರಶಂಸಿಸಲ್ಪಡಲಿ. ಹೊಸ ಹೊಸ ಪ್ರತಿಭೆಗಳು ಹುಟ್ಟಿಬರಲಿ. ಅವರಿಂದ ಉತ್ತಮ ಸಂದೇಶಗಳು ಕೊಡಲ್ಪಡಲಿ. ಪ್ರೇಕ್ಷಕರು ಉತ್ತಮ, ಮೌಲ್ಯಯುತವಾದ ಪ್ರದರ್ಶನಗಳನ್ನು ಕಂಡು ಸಂತೋಷಪಡುವಂತಾಗಲಿ. 2018-2019ರ ತಿರುಗಾಟ ಯಶಸ್ವಿ ಯಾಗಿ ನಡೆದು ಎಲ್ಲರಿಗೂ ಸಂತಸವನ್ನು ನೀಡಲಿ. ಯಕ್ಷಗಾನವು ವಿಜೃಂಭಿಸಲಿ ಎಂಬ ಶುಭ ಹಾರಯಿಕೆಗಳೊಂದಿಗೆ-

- ರವಿಶಂಕರ್ ವಳಕ್ಕುಂಜ

Comments
Post a Comment