ಯಕ್ಷಗಾನದಲ್ಲಿ ಬಾಲಕಲಾವಿದರು - ಮಾ| ಸ್ವಸ್ತಿಕ್ ಶರ್ಮಾ ಪಳ್ಳತ್ತಡ್ಕ
ಯಕ್ಷಗಾನವೆಂಬ ಗಂಡುಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಅವಕಾಶ ಸಿಕ್ಕಿದ್ದರೆ ಅದು ಭಾಗ್ಯವೇ ಹೌದು. ತಾನು ಈ ಮೇರು ಕಲೆಯ ಒಂದು ಅಂಗವಾಗಿದ್ದೇನೆ ಎಂಬ ಸಂತೋಷ ಖಂಡಿತ ಕಲಾವಿದನಿಗೆ ಆಗಿಯೇ ಆಗುತ್ತದೆ. ಎಲ್ಲರಿಗೂ ಈ ಅವಕಾಶ ಸಿದ್ಧಿಸದು. ಅವಕಾಶ ಸಿದ್ಧಿಸಿದವರೆಲ್ಲರೂ ಕಾಣಿಸಿಕೊಳ್ಳಲಾರರು. ಕಲಾಮಾತೆಯ ಅನುಗ್ರಹವೂ ಬೇಕು. ಕಲಾವಿದನು ಆಲಸಿ ಆಗಿರದೆ ಸತತಾಭ್ಯಾಸಿ ಆಗಿರಬೇಕು. ಜೊತೆಗೆ ಯೋಗ ಭಾಗ್ಯಗಳು ಬೇಕು. ಈ ಎಲ್ಲ ವಿಚಾರಗಳು ಸೇರಿಕೊಂಡಾಗಲೇ ರಂಗದಲ್ಲಿ ಅವನು ಕಾಣಿಸಿಕೊಳ್ಳುತ್ತಾನೆ. ಯಕ್ಷಗಾನವನ್ನು ವೃತ್ತಿಯನ್ನಾಗಿ ಆರಿಸಿಕೊಂಡವರು ಅನೇಕರು. ಕೃಷಿ, ಸರಕಾರಿ ಉದ್ಯೋಗ, ವ್ಯಾಪಾರ ಹೀಗೆ ಹಲವು ವ್ಯವಹಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಅನೇಕರು. ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿ ಕಲಾಮಾತೆಯ ಸೇವೆಯನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ವಿದ್ಯಾ ಸಂಸ್ಥೆಗಳಲ್ಲೂ ಯಕ್ಷಗಾನ ಕಲಿಕೆಯು ಆರಂಭವಾಗಿರುವುದು ಅತ್ಯಂತ ಸಂತಸ ತರುವ ವಿಚಾರ. ಮಕ್ಕಳಲ್ಲಿ ಸಂಸ್ಕಾರಗಳನ್ನು ತುಂಬುವ ವಿಚಾರವಿದು. ಬಾಲಕಲಾವಿದರು ಸಿದ್ಧರಾಗುತ್ತಿರುವುದನ್ನು ಕಂಡಾಗ ಆನಂದವಾಗುತ್ತದೆ. ಇತ್ತೀಚೆಗೆ ಗಂಡುಕಲೆಯಲ್ಲಿ ಹೆಣ್ಮಕ್ಕಳೂ ತೊಡಗಿಸಿಕೊಳ್ಳುತ್ತಿದ್ದಾರೆ. ಹಿಮ್ಮೇಳ ಮುಮ್ಮೇಳಗಳೆಂಬ ಎರಡು ವಿಭಾಗಗಳಲ್ಲೂ ಭಾಗಿಯಾಗುತ್ತಿದ್ದಾರೆ. ಹವ್ಯಾಸಿ ಕಲಾವಿದರನ್ನು ಬಾಲಕಲಾವಿದರನ್ನು ವೃತ್ತಿಕಲಾವಿದ ರೊಂದಿಗೆ ಹೋಲಿಸುವುದು ಸರಿಯಲ್ಲ. ಹೋಲಿಸಲೂಬಾರದು. ವೃತ್ತಿ ಕಲಾವಿದರಾದರೆ ರಾತ್ರಿಯಿಡೀ ನಿದ್ದೆ ಬಿಟ್ಟು ತಿರುಗಾಟ, ದುಡಿಮೆ, ಮನೆಯಿಂದ ದೂರವಾಗಿ ಇರಬೇಕಾದ ಅನಿವಾರ್ಯತೆ, ಎಲ್ಲಾ ಪ್ರಸಂಗಗಳ ಜ್ಞಾನಾರ್ಜನೆಯ ಅನಿವಾರ್ಯತೆ- ಹೀಗೆ ವೃತ್ತಿ ಕಲಾವಿದರ ಸಾಧನೆ, ತ್ಯಾಗ ಬಹಳ ದೊಡ್ಡದು.
ಆದರೂ ಹಲವಾರು ಹವ್ಯಾಸೀ ಮತ್ತು ಬಾಲಕಲಾವಿದರು ವೃತ್ತಿಕಲಾವಿದರಿಗೆ ತಾವು ಕಡಿಮೆಯೇನಲ್ಲ ಎನ್ನುವಷ್ಟು ಅಂದವಾಗಿ ನಿರ್ವಹಣೆಯನ್ನು ತೋರುವುದು ಇದೆ. ಅದನ್ನು ಕಂಡಾಗ ಇವರು ಮೇಳದ ತಿರುಗಾಟ ಮಾಡಬೇಕಿತ್ತು ಎಂದು ಕಲಾಭಿಮಾನಿಗಳಿಗೆ ಅನಿಸಿದರೆ ಅದು ತಪ್ಪಲ್ಲ. ಎಳೆಯ ಕಲಿಕಾ ವಿದ್ಯಾರ್ಥಿಗಳಿಗಾಗಿ ಯಕ್ಷದೀಪ ಪತ್ರಿಕೆಯಲ್ಲಿ ಬಾಲಕಲಾವಿದರು ಎಂಬ ಅಂಕಣವೊಂದನ್ನು ಆರಂಭಿಸಬೇಕೆಂದು ಯೋಚಿಸಿದ್ದೆವು. (ಹವ್ಯಾಸಿಗಳಿಗೂ ಕೂಡ) ಅಂದಿನ ಪ್ರಸಂಗದಲ್ಲಿ ನಿರ್ವಹಿಸಬೇಕಾದ ಪಾತ್ರಕ್ಕೆ ಮಾತ್ರ ಸಿದ್ಧರಾಗಿ ಬರುವ ಕಲಾವಿದರ ಬಗ್ಗೆ ಯಾಕೆ ಬರೆಯಬೇಕು ಎಂಬ ಆಕ್ಷೇಪ ಬಂದರೂ ಬರಬಹುದು. ಆದರೆ ಅವರಲ್ಲೂ ಪ್ರತಿಭೆಯಿದೆ. ಅದನ್ನು ಹೊರಗೆಡಹಲು ನಾವು ಪ್ರಯತ್ನಿಸೋಣ. ಬರೆಯೋದು ಬಾಲಕಲಾವಿದರನ್ನು ಹೊಗಳುವ ಉದ್ದೇಶದಿಂದಲ್ಲ. ಇದು ಅವರಿಗೊಂದು ಪ್ರೋತ್ಸಾಹ ಅಷ್ಟೆ. ಇಂದಿನ ಬಾಲಕಲಾವಿದರೇ ಮುಂದಕ್ಕೆ ಯಕ್ಷಗಾನವನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಮಾಡಲಿ. ಹೊಗಳಿಕೆಯಿಂದ ಬೀಗದೆ ಯಕ್ಷಗಾನಾಸಕ್ತಿಯನ್ನು ಹೆಚ್ಚಿಸಿಕೊಂಡು ಬೆಳೆಯುವಲ್ಲಿ ಬಾಲಕಲಾವಿದರು ಎಂಬ ಅಂಕಣ ಟಾನಿಕ್ ಆಗಿ ಪರಿಣಮಿಸಲಿ ಎಂಬ ಹಾರೈಕೆ ಗಳೊಂದಿಗೆ ಬರೆಯೋಣ.
ಮಾಸ್ಟರ್ ಸ್ವಸ್ತಿಕ್ ಶರ್ಮಾ ಎಂಬ ಬಾಲಕಲಾವಿದ ಈಗ ಏಳನೇ ತರಗತಿಯ ವಿದ್ಯಾರ್ಥಿ. ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕ ಈ ವಿದ್ಯಾಸಂಸ್ಥೆಯಲ್ಲಿ ಓದುತ್ತಿದ್ದಾನೆ. ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದ ಪಳ್ಳತ್ತಡ್ಕ ಶ್ರೀ ಕೇಶವ ಶರ್ಮ ಮತ್ತು ದಿವ್ಯಾ ದಂಪತಿಗಳ ಮಗನಾಗಿ 2007ನೇ ಇಸವಿ ಮಾರ್ಚ್ 14ರಂದು ಜನಿಸಿದನು. ಇವನ ಮನೆ ಯವರೆಲ್ಲರೂ ಯಕ್ಷಗಾನಾಸಕ್ತರು. ಸ್ವಸ್ತಿಕ್ ಶರ್ಮನ ಅಜ್ಜ, ದೊಡ್ಡಪ್ಪಂದಿರೆಲ್ಲಾ ಯಕ್ಷಗಾನವನ್ನು ಅತಿಯಾಗಿ ಪ್ರೀತಿಸುವವರು. ಆಟ ಕೂಟಗಳೆರಡನ್ನು ನೋಡಿ ಆಸ್ವಾದಿಸುವ ಕಲಾಪ್ರೇಮಿಗಳು. ಈತನ ತಂದೆ ಕೇಶವ ಶರ್ಮರು ಹವ್ಯಾಸಿ ಯಕ್ಷಗಾನ ಕಲಾವಿದ. ಸಬ್ಬಣಕೋಡಿ ರಾಮ ಭಟ್ಟರ ಶಿಷ್ಯ. ಹಾಗಾಗಿ ಸ್ವಸ್ತಿಕ್ ಶರ್ಮನಿಗೆ ಕಲೆಯೂ ರಕ್ತಗತವಾಗಿಯೇ ಬಂದಿತ್ತು. ಮನೆಯಲ್ಲಿ ಎಲ್ಲರೂ ಯಕ್ಷಗಾನದ ಬಗೆಗೆ ಮಾತಾಡುವವರು. ಆಟಕ್ಕೂ ತಾಳಮದ್ದಳೆಗೂ ಹೋಗಿ ಬಂದ ನಂತರ ಪ್ರದರ್ಶನದ ಬಗೆಗೆ ವಿಮರ್ಶೆ ನಡೆಯು ತ್ತಿತ್ತು. ಈತನ ಸಣ್ಣಜ್ಜ ಶ್ರೀ ರಾಮಕೃಷ್ಣ ಭಟ್ಟರು, ಅವರ ಮಕ್ಕಳೂ ಯಕ್ಷಗಾನ ಆಸಕ್ತರು. ಎಲ್ಲರೂ ಜೊತೆಯಾಗಿ ಆಟಕ್ಕೆ ಹೋಗುತ್ತಿದ್ದರು. ಸ್ವಸ್ತಿಕ್ ಶರ್ಮನು ಇವರ ಜತೆಗೆ ಹೋಗಿ ಯಕ್ಷಗಾನದತ್ತ ಆಕರ್ಷಿತನಾಗಿದ್ದ. ತಾನೂ ವೇಷ ಮಾಡಬೇಕೆಂದು ಹೇಳಲಾರಂಭಿಸಿದ. ಈತನ ಆಸೆಗೆ ಮನೆಯವರು ಅಡ್ಡಿಪಡಿಸಲಿಲ್ಲ. ಸಂತೋಷದಿಂದಲೇ ಪ್ರೋತ್ಸಾಹಿಸಿದ್ದರು. ತನ್ನ ಆರನೆಯ ವಯಸ್ಸಿನಲ್ಲೇ 2014ರ ಜುಲಾಯಿ 7ರಂದು “ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ”ಕ್ಕೆ ಸೇರಿ ಗುರು ಶ್ರೀ ಸಬ್ಬಣಕೋಡಿ ರಾಮಭಟ್ಟರಿಂದ ನಾಟ್ಯ ಕಲಿಯಲು ಆರಂಭ. ಸ್ವಸ್ತಿಕ್ ಶರ್ಮನ ಪ್ರತಿಭೆಯನ್ನು ಗಮನಿಸಿದ ಸಬ್ಬಣಕೋಡಿ ರಾಮ ಭಟ್ಟರು ಪ್ರೋತ್ಸಾಹಿಸಿ ಅವಕಾಶಗಳನ್ನಿತ್ತರು. ಅಲ್ಲಿಂದ ಇಂದಿನವರೆಗೂ ಮುನ್ನೂರಕ್ಕೂ ಹೆಚ್ಚು ವೇದಿಕೆಗಳಲ್ಲಿ ಪ್ರದರ್ಶನವನ್ನು ನೀಡಿರುತ್ತಾನೆ. ಬಾಲಪ್ರತಿಭೆಯಾಗಿ ಪುಂಡು ವೇಷಗಳಲ್ಲಿ ಮಿಂಚುತ್ತಿದ್ದಾನೆ. ದೇವೇಂದ್ರ ಬಲದಿಂದ ತೊಡಗಿ ತಾರಕಾಸುರ ವಧೆಯ ಷಣ್ಮುಖ, ಮುಂಡಾಸುರ, ಮೀನಾಕ್ಷಿ, ಬಬ್ರುವಾಹನ, ಅಭಿಮನ್ಯು ಮೊದಲಾದ ಪಾತ್ರಗಳನ್ನು ಮಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ವೀರ ಬಬ್ರುವಾಹನ ಏಕವ್ಯಕ್ತಿ ಪ್ರದರ್ಶನ ಅಲ್ಲದೆ ಧರ್ಮಸ್ಥಳ, ಕಟೀಲು, ಎಡನೀರು, ಕೊಲ್ಲಂಗಾನ, ದೇಂತಡ್ಕ, ಮಲ್ಲ ಮತ್ತಿತರ ಮೇಳಗಳಲ್ಲಿ ವೃತ್ತಿಕಲಾವಿದರ ಜತೆಯೂ ಅಭಿನಯಿಸಿದ್ದಾನೆ.
ಶಾಲೆಗೆ ರಜೆ ಸಿಕ್ಕಿದ ಮೇಲೆ ಎಡನೀರು ಮೇಳದಲ್ಲಿ ಖಾಯಂ ಕಲಾವಿದನಾಗಿ ಭಾಗವಹಿಸುವ ಅವಕಾಶವನ್ನು ಎಡನೀರು ಮಠಾಧೀಶರು ನೀಡಿದ್ದರು. ಕಳೆದ ನವೆಂಬರ್ ತಿಂಗಳಿನಲ್ಲಿ ಅಡ್ಯಾರ್ ಗಾರ್ಡನ್‍ನ ಡಾ. ಕೀಲಾರು ಗೋಪಾಲಕೃಷ್ಣಯ್ಯ ಸಂಸ್ಮರಣ ಕಾರ್ಯಕ್ರಮದ ಪ್ರದರ್ಶನಗಳಲ್ಲಿ (ಸಂಪಾಜೆ ಯಕ್ಷೋತ್ಸವ) ವೇಷ ಮಾಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಪ್ರವೇಶ ಮತ್ತು ಧೀಂಗಿಣಗಳೆಂದರೆ ಈತನಿಗೆ ಇಷ್ಟ. ನಾಟ್ಯದ ಜತೆ ಹಿತಮಿತವಾದ ಮಾತುಗಾರಿಕೆಯನ್ನು ಹೊಂದಿದ ಸ್ವಸ್ತಿಕ್ ಶರ್ಮ ಹಲವು ಬಾರಿ ನೂರಕ್ಕೂ ಹೆಚ್ಚು ಹಾರಿ ಪ್ರೇಕ್ಷಕರನ್ನು ರಂಜಿಸಿದ್ದಾನೆ. ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಪ್ರದರ್ಶನದಲ್ಲೂ ಭಾಗವಹಿಸಿದ್ದಾನೆ. ಬಲ್ಲಿರೇನಯ್ಯ ಯಕ್ಷಗಾನ ಮಾಸಪತ್ರಿಕೆಯ ಐದನೇ ವಾರ್ಷಿಕೋತ್ಸವದ ಸಂದರ್ಭ ಎಡನೀರು ಮಠದಲ್ಲಿ ನಡೆದ ಪುಂಡುವೇಷ ಕುಣಿತದ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಪಡೆದಿರುತ್ತಾನೆ. ಈ ಸ್ಪರ್ಧೆಯಲ್ಲಿ 40 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಕನ್ನಡ ಜಾನಪದ ಪರಿಷತ್ ಬೆಂಗಳೂರು, ಗಡಿನಾಡ ಸಾಂಸ್ಕೃತಿಕ ಪಯಣ - 4, ಇವರಿಂದ ಗೌರವ, ಕನ್ನಡ ಕೈರಳಿ ಪತ್ರಿಕೆಯ ದಶಮಾನೋತ್ಸವ ಪುರಸ್ಕಾರ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇವರು ಆಯೋಜಿಸಿದ ಕನ್ನಡ ಬ್ಯಾರಿ ತುಳು ಜಾನಪದ ಸಮ್ಮೇಳನ ಕಾರ್ಯಕ್ರಮದಲ್ಲಿ ಪುರಸ್ಕಾರ, ಕೋಟೆಕಾರುನಲ್ಲಿ ಸ್ಥಳ ದೇಗುಲ ದಲ್ಲಿ ರಾಮಾಯಣ ಮಾಸಾಚರಣೆಯ ಸಂದರ್ಭ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರಿಂದ ಪ್ರತಿಭಾ ಪುರಸ್ಕಾರ, ಬಾಲಕಲಾವಿದ ಸ್ವಸ್ತಿಕ್ ಶರ್ಮನ ಪ್ರತಿಭೆಗೆ ಸಂದ ಪುರಸ್ಕಾರಗಳಿವು. ಯಕ್ಷಗಾನವು ನಮ್ಮ ನಾಡಿನ ಹೆಮ್ಮೆಯ ಕಲೆ. ನಾನು ಇನ್ನೂ ಕಲಿಯುವುದಕ್ಕಿದೆ. ಈಗ ನಾನು ಒಬ್ಬ ಸಣ್ಣ ಕಲಾವಿದ. ಇನ್ನೂ ಹೆಚ್ಚಿನ ಕಲಾಸೇವೆಯನ್ನು ಮಾಡಬೇಕೆಂಬ ಆಸೆಯಿದೆ. ಮನೆಯವರು, ಶಾಲಾಧ್ಯಾಪಕರು, ಗುರುಗಳಾದ ಸಬ್ಬಣಕೋಡಿ ರಾಮ ಭಟ್ಟರು ಆಶೀರ್ವದಿಸಿದ್ದಾರೆ. ಸಂಘಟಕರು ಪ್ರೀತಿಯಿಂದ ಕರೆದು ಅವಕಾಶಗಳನ್ನಿತ್ತಿದ್ದಾರೆ.
ಕಲಾಭಿಮಾನಿಗಳು ಪ್ರೀತಿಯಿಂದ ಮಾತಾಡಿಸಿ ಬೆನ್ನು ತಟ್ಟಿದಾಗ ಸಂತೋಷವಾಗುತ್ತದೆ ಎಂದು ಹೇಳುವ ಬಾಲಪ್ರತಿಭೆ ಮಾಸ್ಟರ್ ಸ್ವಸ್ತಿಕ್ ಶರ್ಮನಿಗೆ ಉಜ್ವಲ ಭವಿಷ್ಯವು ಸಿದ್ಧಿಸಲಿ ಎಂದು ನಾವೆಲ್ಲರೂ ಹಾರೈಸೋಣ. ು
- ರವಿಶಂಕರ್ ವಳಕ್ಕುಂಜ

ಮಾ| ಸ್ವಸ್ತಿಕ್ ಶರ್ಮಾ ಪಳ್ಳತ್ತಡ್ಕ

Danyavadagalu Ravityanna nimma asheervada protsaha sada irali
ReplyDelete👍
Delete