ಅನುಭವೀ ನೇಪಥ್ಯ ಕಲಾವಿದರು ‘ಭವನಕ್ಕೆ ಅಡಿಪಾಯವಿದ್ದಂತೆ’
ಯಾವುದೇ ಒಂದು ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ, ಉದ್ದೇಶಿತ ಗುರಿಯನ್ನು ತಲುಪಬೇಕಾದರೆ ಅಲ್ಲಿ ಎಲ್ಲವೂ ಸರಿಯಾಗಿರಬೇಕು. ಎಲ್ಲರೂ ಸರಿಯಾಗಿರಬೇಕು. ಒಂದು ವಿಭಾಗದಲ್ಲಿ ಕೊರತೆ ಉಂಟಾದರೆ ಬೆಳವಣಿಗೆಗೆ ತಡೆ ಉಂಟಾಗಿ ಕಾರ್ಯಸಾಧನೆಯಾಗಲಾರದು. ಉದಾಹರಣೆಗೆ ಹಳ್ಳಿಯ ಮನೆಗಳನ್ನು ತೆಗೆದುಕೊಳ್ಳೋಣ. ಹಲವಾರು ವರ್ಷಗಳಿಂದ ದುಡಿಯುವ ಕೆಲಸಗಾರನಿಗೆ ಹೇಳಬೇಕೆಂದಿಲ್ಲ. ಆ ಮನೆಯಲ್ಲಿ ಯಾವ ಸಮಯದಲ್ಲಿ ಯಾವ ಕೆಲಸವಾಗಬೇಕೆಂದು ಅವನಿಗೆ ತಿಳಿದಿರುತ್ತದೆ. ಯಜಮಾನನು ಅಪ್ಪಣೆ ಕೊಡಿಸಬೇಕೆಂದಿಲ್ಲ. ತಾವೇ ಅರಿತು ಮಾಡುತ್ತಾರೆ. ಯಾಕೆ? ಅನುಭವದ ಪರಿಣಾಮ, ಸ್ವಾಮಿನಿಷ್ಠೆ, ಯಜಮಾನ ಉಳಿದರೆ ಮಾತ್ರ ನಾನೂ ಉಳಿಯುತ್ತೇನೆ ಎಂಬ ಅರಿವು, ಈ ಕೆಲಸವು ತನ್ನ ಹಸಿವಿಗೆ ಅನ್ನ ನೀಡುವ ಪಾತ್ರೆ ಎಂಬ ಗೌರವದಿಂದಲೇ ಮಾಡುತ್ತಾರೆ. ಇದು ಪ್ರಾಮಾಣಿಕತನ. ಹೀಗೆ ವ್ಯವಹರಿಸಿದ ಕೆಲಸಗಾರ ಯಜಮಾನನ ಪ್ರೀತಿಯನ್ನೂ ಗಳಿಸುತ್ತಾನೆ. ಒಟ್ಟಿನಲ್ಲಿ ಯಶಸ್ಸು ಗಳಿಸಬೇಕಾದರೆ ಪ್ರತಿಯೊಬ್ಬನೂ ಅರ್ಪಣಾಭಾವದಿಂದ ತೊಡಗಿಸಿಕೊಳ್ಳಲೇಬೇಕು. ತಾನು ಮಾಡುವ ಕೆಲಸವನ್ನು ದೇವರ ಪೂಜೆಯೆಂದೇ ಭಾವಿಸಬೇಕು. ಯಕ್ಷಗಾನ ಮತ್ತು ಇತರ ಕಲಾಪ್ರಕಾರಗಳಿಗೂ ಈ ವಿಚಾರಗಳಿಂದ ಹೊರತಾಗಿರಲು ಸಾಧ್ಯವಿಲ್ಲ. ರಂಗಸ್ಥಳದಲ್ಲಿ ಕಲಾವಿದರು ಅಭಿನಯಿಸುತ್ತಾರೆ. ತಂಡವಾಗಿಯೇ ಅಭಿನಯಿಸಿದಾಗ ಪ್ರದರ್ಶನವು ಗೆದ್ದೇ ಗೆಲ್ಲುತ್ತದೆ. ಆದರೆ ಈ ಯಶಸ್ಸಿನ ಹಿಂದೆ ಕಲಾವಿದರಿಗೆ ಸಹಕಾರಿಗಳಾಗಿ ಪ್ರದರ್ಶನದ ಗೆಲುವಿಗೆ ಕಾರಣರಾದವರೂ ಇದ್ದಾರೆ. ಅವರೇ ನೇಪಥ್ಯ ಕಲಾವಿದರು. ಪ್ರಸಂಗಜ್ಞಾನ, ರಂಗನಡೆಗಳನ್ನು ತಿಳಿದಿರಬೇಕಾಗುತ್ತದೆ. ತೆರೆ ಹಿಡಿಯುವ ಕ್ರಮ, ದೊಂದಿ ಹಿಡಿಯುವ ರೀತಿ, ತಾನು ಎಲ್ಲಿ ನಿಲ್ಲಬೇಕಾದುದು, ದೊಂದಿಯೊಂದಿಗೆ ಕಲಾವಿದರನ್ನು ಅನುಸರಿಸಿ ಸಾಗುವ ಕ್ರಮಗಳನ್ನೆಲ್ಲಾ ತಿಳಿದಿರಬೇಕು. ಪ್ರತಿಯೊಂದು ವೇಷಕ್ಕೂ ತೆರೆಹಿಡಿಯುವ ರೀತಿಗಳು ಭಿನ್ನವಾಗಿರುತ್ತದೆ. ಇದನ್ನು ಮನನ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ನೋಡಿಯೇ ಅಭ್ಯಾಸ ಮಾಡಬೇಕು. ಕೇಳಿ ತಿಳಿಯಬೇಕು. ಅನನುಭವಿಯಾದರೆ ಭಾಗವತರು ಮತ್ತು ಕಲಾವಿದರನ್ನು ನೋಡುತ್ತಾ ಸೂಚನೆಗಾಗಿ ನಿರೀಕ್ಷಿಸುವ ಗುಣವನ್ನಾದರೂ ಹೊಂದಿರಬೇಕು. ಅನುಭವೀ ನೇಪಥ್ಯ ಕಲಾವಿದರು ``ಸುಂದರವಾದ ಭವನಕ್ಕೆ ಭದ್ರವಾದ ಅಡಿಪಾಯವಿದ್ದಂತೆ.’’ ಯಶಸ್ವೀ ಪ್ರದರ್ಶನಕ್ಕೆ ಕಾರಣರಾಗುತ್ತಾರೆ. ಒಡ್ಡೋಲಗಗಳ ಸಂದರ್ಭದಲ್ಲಿ ತೆರೆಹಿಡಿಯುವ ಕ್ರಮ (ಧರ್ಮರಾಯನ ಒಡ್ಡೋಲಗ, ಶ್ರೀಕೃಷ್ಣನ ಒಡ್ಡೋಲಗ, ಬಣ್ಣದ ವೇಷಗಳ ಒಡ್ಡೋಲಗಗಳು ಇತ್ಯಾದಿ), ಕಿರಾತಾರ್ಜುನ, ಪುರುಷಾಮೃಗ, ದುಶ್ಶಾಸನ ವಧೆ ಮೊದಲಾದ ಪ್ರಸಂಗಗಳಲ್ಲಿ ಅವರು ಉತ್ತಮ ರೀತಿಯಲ್ಲಿ ವ್ಯವಹರಿಸಿದಾಗಲೇ ಪ್ರದರ್ಶನಗಳು ಪರಿಪೂರ್ಣವಾಗಿ ರಂಜಿಸುತ್ತದೆ. ತಪಸ್ಸನ್ನಾಚರಿಸುವ ಸಂದರ್ಭಗಳಲ್ಲಿ ಪ್ರತ್ಯಕ್ಷರಾದ ಬ್ರಹ್ಮನೋ, ಈಶ್ವರನೋ ಏನನ್ನು ಅನುಗ್ರಹಿಸುತ್ತಾನೆ? ಖಡ್ಗವೋ? ಶರವನ್ನೋ? ಗದೆಯನ್ನೋ? ಎಂದು ತಿಳಿದು ಒದಗಿಸಿಕೊಡುತ್ತಾರೆ. ನೋಡಿ, ಕೇಳಿ ತಿಳಿಯುವ ಗುಣವು ಇವರಿಗಿರಲೇಬೇಕು. ಯಕ್ಷಗಾನ ಪ್ರದರ್ಶನಗಳು ಸೋಲದೆ ರಂಜಿಸಬೇಕು. ಸೋತರೂ, ರಂಜಿಸಿದರೂ ಅದಕ್ಕೆ ನಾವೂ ಕಾರಣರಾಗುತ್ತೇವೆ ಎಂಬ ಪ್ರಜ್ಞೆ ನೇಪಥ್ಯ ಕಲಾವಿದರಿಗಿರಬೇಕು. ಶ್ರದ್ಧಾಭಕ್ತಿಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ದುಡಿಯುವ ನೇಪಥ್ಯ ಕಲಾವಿದರನೇಕರಿದ್ದಾರೆ. ಅಂತಹ ಮಹನೀಯರನ್ನು ಗುರುತಿಸುವುದು ನಮಗೆ ಕರ್ತವ್ಯವಲ್ಲವೇ? ಅಂತವರಲ್ಲಿ ಶ್ರೀ ರಘು ಶೆಟ್ಟಿ ನಾಳ, ಶ್ರೀ ಶಿವಣ್ಣ ಶೆಟ್ಟಿ, ಶ್ರೀ ಬಾಬು ಪುರುಷ, ಶ್ರೀ ತನಿಯಪ್ಪ ಜೋಗಿ, ಶ್ರೀ ರಂಗಪುರುಷ ಪ್ರಮುಖರು. ಅನುಭವಿಗಳು. ಪ್ರಸ್ತುತ ಕಟೀಲು 1ನೇ ಮೇಳದಲ್ಲಿ ರಂಗಕರ್ಮಿ ಯಾಗಿ ದುಡಿಯುತ್ತಿರುವ ಶ್ರೀ ವಿಠಲ ಶೆಟ್ಟರನ್ನು ಪ್ರಸಿದ್ಧ ಕಲಾವಿದರಾದ ವಾಟೆಪಡ್ಪು ವಿಷ್ಣುಶರ್ಮರು ಈಗಾಗಲೇ ಪರಿಚಯಿಸಿರುತ್ತಾರೆ.
ಶ್ರೀ ರಘುಶೆಟ್ಟಿ ನಾಳ (ರಂಗಕರ್ಮಿ)
ರಘು ಶೆಟ್ಟಿ ಇವರು ಪ್ರಸ್ತುತ 4ನೇ ಮೇಳದಲ್ಲಿ (ಕಟೀಲು) ರಂಗಕರ್ಮಿಯಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. 1965ರಲ್ಲಿ ಬೆಳ್ತಂಗಡಿ ತಾಲೂಕು, ನ್ಯಾಯತರ್ಪು ಗ್ರಾಮದ ನಾಳ ಎಂಬಲ್ಲಿ ಓಬಯ್ಯ ಶೆಟ್ಟಿ ಮತ್ತು ದೇವಕಿ ದಂಪತಿಗಳಿಗೆ ಮಗನಾಗಿ ಜನಿಸಿದರು. ರಘು ಶೆಟ್ರು ಓದಿದ್ದು 5ನೇ ತರಗತಿಯ ವರೇಗೆ. ಕೊರಂಜ ಶಾಲೆಯಲ್ಲಿ. ಓಬಯ್ಯ ಶೆಟ್ಟಿ ದೇವಕಿ ದಂಪತಿಗಳಿಗೆ ಆರು ಮಂದಿ ಮಕ್ಕಳು (5 ಗಂಡು, 1 ಹೆಣ್ಣು). ಬಡತನದ ಕಾರಣದಿಂದ ಓದಿಗೆ ವಿದಾಯ ಹೇಳಬೇಕಾಯಿತೆಂಬ ರಘು ಶೆಟ್ಟರ ಮಾತಿನ ಧ್ವನಿಯಲ್ಲಿ ನೋವನ್ನು ನಮಗೆ ಗಮನಿಸಬಹುದು. ಶಾಲೆಗೆ ವಿದಾಯ ಹೇಳಿದ ಬಳಿಕ ಕೂಲಿ ಕೆಲಸ ಮಾಡುತ್ತಿದ್ದರು. 1 ವರ್ಷ ಬಂಟ್ವಾಳ ಸಮೀಪ ಶ್ರೀ ಬಿ. ಕೆ. ಸೋಮಯಾಜಿಯವರ ಮನೆಯಲ್ಲಿದ್ದು ಸಂಸ್ಕೃತ ಭಾಷೆಯನ್ನೂ ಕಲಿಯಲು ಪ್ರಯತ್ನಿಸಿದ್ದರು. ಆದರೆ ಮತ್ತೆ ಮನೆಗೆ ಬರಲೇಬೇಕಾದ ಅನಿವಾರ್ಯತೆ ಉಂಟಾಯಿತು. ಕೂಲಿ ಕೆಲಸಕ್ಕೆ ಹೋಗಿ ಸಂಪಾದನೆ ಆರಂಭಿಸಿದರು. ಕೆಲಸ ಯಾವುದಾದರೇನು? ಯಾವ ಕೆಲಸ ಮಾಡಿದ? ಎನ್ನುವುದಕ್ಕಿಂತ ಕೊಟ್ಟ ಕೆಲಸವನ್ನು ಎಷ್ಟು ನಿಷ್ಠೆಯಿಂದ ಮಾಡಿದ ಎಂಬುದು ಮುಖ್ಯವಲ್ಲವೇ?
1981ನೇ ಇಸವಿ ಕರ್ನಾಟಕ ಮೇಳಕ್ಕೆ ನೇಪಥ್ಯ ಕಲಾವಿದನಾಗಿ ಸೇರ್ಪಡೆ. 3ನೇ ಮೇಳ ಪ್ರಾರಂಭವಾದಾಗ ಕಟೀಲು ಮೇಳಕ್ಕೆ ಸೇರ್ಪಡೆ. ಆಗ ಸರಪಾಡಿ ಶಂಕರನಾರಾಯಣ ಕಾರಂತರು ಭಾಗವತರಾಗಿದ್ದರು. ನಂತರ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳ ಜತೆ ತಿರುಗಾಟ. ಮಳೆಗಾಲದಲ್ಲಿ ರಘು ಶೆಟ್ರು ಕುರಿಯ ಭಾಗವತರ ಮನೆಯಲ್ಲಿದ್ದು ಕೃಷಿ ವ್ಯವಹಾರಗಳಿಗೆ ಸಹಾಯಕರಾಗಿಯೂ ದುಡಿದಿದ್ದರು. ಬಲಿಪ ಶ್ರೀ ನಾರಾಯಣ ಭಾಗವತರ ಮನೆಯಲ್ಲಿದ್ದು ಸಹಾಯಕರಾಗಿ ದುಡಿದಿದ್ದರು. 2010ನೇ ಇಸವಿಯಲ್ಲಿ 5ನೇ ಮೇಳ ಆರಂಭವಾದಾಗ ಸದ್ರಿ ಮೇಳಕ್ಕೆ ಸೇರ್ಪಡೆ. ಯಕ್ಷಧ್ರುವ ಪಟ್ಲ ಶ್ರೀ ಸತೀಶ ಶೆಟ್ಟರ ಭಾಗವತಿಕೆಯಲ್ಲಿ 7 ವರ್ಷಗಳ ತಿರುಗಾಟ. ಪ್ರಸ್ತುತ 2 ವರ್ಷಗಳಿಂದ ಕಟೀಲು 4ನೇ ಮೇಳದಲ್ಲಿ ರಂಗಕರ್ಮಿಯಾಗಿ ದುಡಿಯುತ್ತಿದ್ದಾರೆ. 2017ರಲ್ಲಿ ಪಟ್ಲ ಸತೀಶ ಶೆಟ್ರ ಭಾಗವತಿಕೆ ಮತ್ತು ಪ್ರಸ್ತುತ ಬಳ್ಳಮಂಜ ಶ್ರೀನಿವಾಸ ಗೌಡರ ಭಾಗವತಿಕೆಯಲ್ಲಿ 4ನೇ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಹೀಗೆ ಒಟ್ಟು 38 ವರ್ಷಗಳ ಕಲಾಸೇವೆ ನಾಳ ರಘು ಶೆಟ್ಟರದ್ದು. ಕಲ್ಲಾಡಿ ಶ್ರೀ ವಿಠಲ ಶೆಟ್ಟರ ಯಾಜಮಾನ್ಯದಲ್ಲಿ ಮೊದಲು ತಿರುಗಾಟ ನಡೆಸಿ ಪ್ರಸ್ತುತ ಕಲ್ಲಾಡಿ ಶ್ರೀ ದೇವೀಪ್ರಸಾದ ಶೆಟ್ರ ಸಮರ್ಥ ಸಂಚಾಲಕತ್ವ ದಡಿ ಕಲಾಮಾತೆಯ ಸೇವೆಯನ್ನು ಮಾಡುತ್ತಿದ್ದಾರೆ. ಕಟೀಲು ಮೇಳಕ್ಕೆ ಸೇರಿದ ಮೇಲೆ ನೆಮ್ಮದಿಯ ಜೀವನವು ನನ್ನದಾಯಿತೆಂದು ರಘು ಶೆಟ್ಟರು ಹೇಳುತ್ತಾರೆ. 1990ರಲ್ಲಿ ಶ್ರೀಮತಿ ಜತೆ ವಿವಾಹ. ರಘು ಶೆಟ್ಟಿ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ನಿತಿನ್ MBA ಕಲಿತು ಉದ್ಯೋಗಿಯಾಗಿದ್ದಾನೆ. ಪುತ್ರಿ ನಿಕ್ಷಿತ M.Com ಕಲಿತಿರುವಳು. ಮಕ್ಕಳಿಬ್ಬರಿಗೂ ವಿದ್ಯೆಯೆಂಬ ಅಮೃತವನ್ನು ರಘು ಶೆಟ್ರು ಕೊಡಿಸಿದ್ದಾರೆ. ಬಲಿಪ, ಕುರಿಯ, ನೆಡ್ಲೆ ನರಸಿಂಹ ಭಟ್, ಸರಪಾಡಿ ಕಾರಂತರು, ಪೂಂಜರು, ಪಟ್ಲ, ಕಾಟುಕುಕ್ಕೆ ಕುಂಞರಾಮ ಮಣಿಯಾಣಿ, ಪದ್ಯಾಣ ಶಂಕರನಾರಾಯಣ ಭಟ್, ಪಡ್ರೆ ಚಂದು, ಗೇರುಕಟ್ಟೆ, ಪೆರುವಾಯಿ, ಗುಡ್ಡಪ್ಪ ಗೌಡರು, ಕುಷ್ಠ,, ರೆಂಜಾಳ ಪೆರುವಾಯಿ ನಾರಾಯಣ ಭಟ್, ಪೆರುವಾಯಿ ನಾರಾಯಣ ಶೆಟ್ಟಿ, ಪುಂಡರೀಕಾಕ್ಷ ಉಪಾಧ್ಯಾಯರು, ಮುಂಡ್ಕೂರು ಜಯರಾಮ ಶೆಟ್ರು (ಹಾಸ್ಯಗಾರರು) ಕಡಂದೇಲು ಪುರುಷೋತ್ತಮ ಭಟ್, ದಿವಾಣ, ಭೀಮ ಭಟ್, ಸಂಜೀವ ಚೌಟ, ಕುಡಾಣ, ಮುದುಕುಂಜ ವಾಸುದೇವ ಪ್ರಭುಗಳು ಮೊದಲಾದ ಹಿರಿಯ ಶ್ರೇಷ್ಠ ಕಲಾವಿದರೊಂದಿಗೆ ದುಡಿಮೆ ಮಾಡಿದ ಅನುಭವ ನಾಳ ರಘು ಶೆಟ್ಟರಿಗಿದೆ. ಪ್ರಸ್ತುತ ಹೊಸ ಮನೆಯನ್ನು ಕಟ್ಟಿಸುತ್ತಿದ್ದಾರೆ. ಕಲಾಮಾತೆಯ ಅನುಗ್ರಹ ಇರಲಿ. ಶೀಘ್ರದಲ್ಲಿ ನೂತನ ಗೃಹಪ್ರವೇಶ ಕಾರ್ಯಕ್ರಮವು ಸಾಂಗವಾಗಿ ನಡೆಯಲಿ. ರಘು ಶೆಟ್ಟಿ ದಂಪತಿಗಳಿಗೆ, ಅವರ ಮಕ್ಕಳಿಗೆ ನೆಮ್ಮದಿಯ, ಉತ್ತಮ ಬದುಕನ್ನು ದೇವರು ಅನುಗ್ರಹಿಸಲಿ ಎಂಬ ಹಾರೈಕೆಗಳು.
ಶ್ರೀ ಬಾಬು ಪುರುಷ
ಬಾಬು ಪುರುಷ ಇವರು ಪ್ರಸ್ತುತ ಕಟೀಲು 4ನೇ ಮೇಳದಲ್ಲಿ ನೇಪಥ್ಯ ಕಲಾವಿದ. ಇವರು 1948ನೇ ಇಸವಿಯಲ್ಲಿ ಗುರುವಪ್ಪ ಪುರುಷ ಮತ್ತು ಮುತ್ತು ಪುರುಷ ದಂಪತಿಗಳಿಗೆ ಮಗನಾಗಿ ಜನಿಸಿದರು. ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡು ನೋವನ್ನು ಅನುಭವಿಸಿದವರು. ಶಾಲೆಗೆ ಹೋಗಿ ಕಲಿಯುವ ಸೌಭಾಗ್ಯದಿಂದ ವಂಚಿತರಾಗಬೇಕಾಯಿತು. ಆದರೂ ಬಾಬು ಪುರುಷ ಅವರು ಕನ್ನಡದಲ್ಲಿ ಸಹಿಯನ್ನು ಹಾಕಬಲ್ಲರು. ಹೊಟ್ಟೆ ಹೊರೆಯುವುದಕ್ಕೆ ಕೂಲಿ ಕೆಲಸ ಮಾಡುವ ಅನಿವಾರ್ಯತೆ. ಕಟೀಲು 2 ಮೇಳಗಳು ತಿರುಗಾಟ ನಡೆಸುತ್ತಿದ್ದ ಕಾಲ, ಬಾಬು ಪುರುಷ ಅವರು ಇರಾ ಶ್ರೀ ಗೋಪಾಲಕೃಷ್ಣ ಅವರು ಭಾಗವತರಾಗಿದ್ದ 1ನೇ ಮೇಳಕ್ಕೆ ನೇಪಥ್ಯ ಕಲಾವಿದರಾಗಿ ಸೇರಿ ಕಲಾಸೇವೆಯನ್ನು ಆರಂಭಿಸಿದರು. ನಂತರ ಬಲಿಪ ನಾರಾಯಣ ಭಾಗವತರೊಂದಿಗೆ 2ನೇ ಮೇಳದಲ್ಲಿ ತಿರುಗಾಟ. ಪ್ರಸ್ತುತ 4ನೇ ಮೇಳದಲ್ಲಿ 17 ವರ್ಷಗಳಿಂದ ದುಡಿಯುತ್ತಿದ್ದಾರೆ. ಮಳೆಗಾಲದಲ್ಲಿ ದೇವಕಾನ ಶ್ರೀಕೃಷ್ಣ ಭಟ್ಟರ ‘ಶ್ರೀ ಗಣೇಶ ಕಲಾವೃಂದ ಪೈವಳಿಕೆ’ ಮತ್ತು ಬಜಪೆ ರಾಘವದಾಸರ ಶ್ರೀ ಭಾರತೀ ಕಲಾ ಆರ್ಟ್ಸ್ ಮುಡಿಪು’ ಈ ಎರಡೂ ಸಂಸ್ಥೆಗಳಲ್ಲೂ ದುಡಿದ ಅನುಭವ ಬಾಬು ಪುರುಷರಿಗಿದೆ.
ಖ್ಯಾತ ಹಾಸ್ಯಗಾರರಾಗಿದ್ದ ದಿ| ನಯನ ಕುಮಾರರು ಮಳೆಗಾಲದಲ್ಲಿ ಸಂಘಟಿಸುತ್ತಿದ್ದ ಪ್ರದರ್ಶನಗಳಲ್ಲೂ ಭಾಗವಹಿಸುತ್ತಿದ್ದರು. ಆ ಸಂದರ್ಭ ಶಿವಮೊಗ್ಗದಲ್ಲಿ ಬಾಬು ಪುರುಷರನ್ನು ಸನ್ಮಾನಿಸಿ ಗೌರವಿಸಲಾಗಿತ್ತು. ನಯನ ಕುಮಾರ ಜತೆಗಿನ ತಿರುಗಾಟ ಒಡನಾಟವನ್ನು ಬಾಬು ಪುರುಷರು ಈಗಲೂ ನೆನಪಿಸುತ್ತಾರೆ. ಪಟ್ಲ ಸತೀಶ ಶೆಟ್ಟರ ಸಾರಥ್ಯದಲ್ಲಿ ಇವರಿಗೆ ಮುಂಬಯಿಯಲ್ಲಿ ಸನ್ಮಾನ ಕಾರ್ಯಕ್ರಮವು ನಡೆದಿತ್ತು. ಪ್ರಸ್ತುತ ಬಾಬು ಪುರುಷ ಅವರಿಗೆ 70 ವರ್ಷ ಪ್ರಾಯ. ಯಾವ್ಯಾವ ಮೇಳದಲ್ಲಿ ಎಷ್ಟು ವರ್ಷಗಳ ತಿರುಗಾಟ? ಎಂದು ಕೇಳಿದರೆ ಯೋಚಿಸುತ್ತಾರೆ. ನಿಖರವಾಗಿ ಹೇಳಲಾರರು. ಯೋಚಿಸಿ ಹೇಳುತ್ತಾರೆ. ಸರಿಯಾಗಿ ಹೇಳಲು ನೆನಪಾಗುವುದಿಲ್ಲ ಎನ್ನುತ್ತಾರೆ. ಇವರೋರ್ವ ಹಿರಿಯ, ಅನುಭವೀ, ಉತ್ತಮ ನೇಪಥ್ಯ ಕಲಾವಿದರು. ಹಿರಿಯ ಕಲಾವಿದರೊಂದಿಗಿನ ತಿರುಗಾಟ, ರಸನಿಮಿಷಗಳನ್ನು ಚೆನ್ನಾಗಿ ನೆನಪಿಸಿ ಹಂಚಿಕೊಳ್ಳುತ್ತಾರೆ. ಆದರೂ ಮರೆವು ನನ್ನನ್ನು ಕಾಡುತ್ತಿದೆ ಎನ್ನುತ್ತಾರೆ. ಬಾಬು ಪುರುಷರ ಪತ್ನಿ ಲಲಿತಾ, ಮೂವರು ಮಕ್ಕಳನ್ನು ಹೆತ್ತು ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡಿದ್ದಾರೆ.
ಬಾಬು ಪುರುಷರ ಇಬ್ಬರು ಹೆಣ್ಣು ಮಕ್ಕಳು ವಿವಾಹಿತೆಯರು. ಪುತ್ರ ಉದ್ಯೋಗಿ. ಪ್ರಸ್ತುತ ಬಾಬು ಪುರುಷ ಅವರು ಮಗ, ಸೊಸೆ ಮತ್ತು ಮೊಮ್ಮಗನೊಂದಿಗೆ ಬೆಳ್ಮಣ್ಣು ಸಮೀಪ ಮನೋಹರ ನಗರದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಕಲಾಮಾತೆಯು ಆರೋಗ್ಯ, ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಇನ್ನಷ್ಟು ಕಲಾಸೇವೆಯನ್ನು ಮಾಡುವಂತಾಗಲಿ ಎಂಬ ಹಾರಯಿಕೆಗಳು.
ಶ್ರೀ ಶಿವಣ್ಣ ಶೆಟ್ಟಿ
ಶಿವಣ್ಣ ಶೆಟ್ರು ಕಟೀಲು 4ನೇ ಮೇಳದಲ್ಲಿ ನೇಪಥ್ಯ ಕಲಾವಿದ. ಬಂಟ್ವಾಳ ತಾಲೂಕು ಮೀಯಾರ್‍ಪಲ್ಕೆಯಲ್ಲಿ ವಾಸ. ಕುಂಞಣ್ಣ ಶೆಟ್ಟಿ ಮತ್ತು ಕಲ್ಯಾಣಿ ದಂಪತಿಗಳಿಗೆ ಮಗನಾಗಿ 1946ನೇ ಇಸವಿಯಂದು ಶಿವಣ್ಣ ಶೆಟ್ರು ಜನಿಸಿದರು. ಮೊಡಂಕಾಪು ಶಾಲೆಯಲ್ಲಿ ಕೇವಲ 2ನೇ ತರಗತಿಯ ವರೇಗೆ ಮಾತ್ರ ಓದಿದ್ದರು. ಆದರೂ ಶಿವಣ್ಣ ಶೆಟ್ಟರು ಚೆನ್ನಾಗಿ ದಿನಪತ್ರಿಕೆಗಳನ್ನು ಓದಬಲ್ಲರು. ಶಾಲೆ ಬಿಟ್ಟ ನಂತರ ಬೀಡಿ ಕಟ್ಟುವ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಪ್ರಸ್ತುತ ಕಟೀಲು ಮೇಳದ ಸಂಚಾಲಕರಾದ ಕಲ್ಲಾಡಿ ಶ್ರೀ ದೇವೀಪ್ರಸಾದ ಶೆಟ್ರ ಯಾಜಮಾನ್ಯದಲ್ಲಿ ಕರ್ನಾಟಕ ಮೇಳದಲ್ಲಿ ಮೊದಲು 3 ತಿರುಗಾಟ ನಡೆಸಿದ್ದರು. ನಂತರ 30 ವರ್ಷಗಳ ಕಾಲ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದಡಿ ಕಟೀಲು ಮೇಳಗಳಲ್ಲಿ. ಪ್ರಸ್ತುತ 3 ವರ್ಷಗಳಿಂದ ಕಲ್ಲಾಡಿ ಶ್ರೀ ದೇವೀಪ್ರಸಾದ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ದುಡಿಯುತ್ತಿದ್ದಾರೆ. ಇವರು ಚಕ್ರತಾಳವನ್ನೂ ಬಾರಿಸುತ್ತಾರೆ, ಅಲ್ಲದೆ ವೇಷ ಮಾಡುವ ಹವ್ಯಾಸವನ್ನೂ ಹೊಂದಿರುತ್ತಾರೆ.
ಕಟೀಲು ಕ್ಷೇತ್ರ ಮಹಾತ್ಮೆಯ ಬರಗಾಲ ಪೀಡಿತರು, ಅಲ್ಲದೆ ವಿವಿಧ ಪ್ರಸಂಗಗಳಲ್ಲಿ ವನಪಾಲಕರು ಮೊದಲಾದ ವೇಷಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಶಿವಣ್ಣ ಶೆಟ್ಟರ ಪತ್ನಿ ರೇವತಿ ಗೃಹಿಣಿ. ಶಿವಣ್ಣ ಶೆಟ್ಟಿ ದಂಪತಿಗಳಿಗೆ 5 ಮಕ್ಕಳು. (3 ಹೆಣ್ಣು ಮತ್ತು 2 ಗಂಡು). ಪುತ್ರಿಯರು ವಿವಾಹಿತೆಯರು. ಒಟ್ಟು 46 ವರ್ಷಗಳ ಕಾಲ ನೇಪಥ್ಯ ಕಲಾವಿದರಾಗಿ ದುಡಿದಿದ್ದಾರೆ. ಹೊಸ ಮನೆ ಕಟ್ಟಿಸಬೇಕೆಂಬ ಆಸೆ ಶಿವಣ್ಣ ಶೆಟ್ಟರಿಗಿದೆ. ಅವರ ಆಸೆ ಕೈಗೂಡಲಿ. ಆರ್ಥಿಕ ಅಡಚಣೆಗಳು ನಿವಾರಣೆಯಾಗಿ ಸಹಾಯಗಳು ಒದಗಿ ಬರಲಿ. ಶಿವಣ್ಣ ಶೆಟ್ಟರಿಗೆ ಸಕಲ ಭಾಗ್ಯಗಳನ್ನೂ ಕಲಾಮಾತೆಯು ಅನುಗ್ರಹಿಸಲಿ ಎಂಬ ಹಾರಯಿಕೆಗಳು.
ಶ್ರೀ ತನಿಯಪ್ಪ ಜೋಗಿ
ತನಿಯಪ್ಪ ಜೋಗಿ ಇವರು ಪ್ರಸ್ತುತ ಕಟೀಲು 4ನೇ ಮೇಳದ ನೇಪಥ್ಯ ಕಲಾವಿದ. ಸರಳ ಸಜ್ಜನ ಹಾಗೂ ವಿನಯವಂತ. ಚೌಕಿಯಲ್ಲಿ ಇವರು ಎಲ್ಲರಿಗೂ ಪ್ರಿಯರು. ತನಗೆ ಒಪ್ಪಿಸಿದ ಕೆಲಸವನ್ನು ಚಾಚೂ ತಪ್ಪದೆ ಒಪ್ಪವಾಗಿ ಮಾಡಿ ಪೂರೈಸುತ್ತಾರೆ. ಇವರು 1954ನೇ ಇಸವಿ ಅಣ್ಣಪ್ಪ ಜೋಗಿ ಮತ್ತು ಸುಶೀಲ ದಂಪತಿಗಳಿಗೆ ಮಗನಾಗಿ ಜನಿಸಿದರು. ಹುಟ್ಟೂರು ಕಾಸರಗೋಡು ಜಿಲ್ಲೆಯ ಜೋಡುಕಲ್ಲು.
1970ನೇ ಇಸವಿ ನೇಪಥ್ಯ ಕಲಾವಿದನಾಗಿ ಕಲಾಸೇವೆ ಆರಂಭಿಸಿದರು. ಮೊದಲು ಶ್ರೀ ನಾಗರಾಜ ಶೆಟ್ರ ಕುಂಡಾವು ಮೇಳದಲ್ಲಿ 2 ವರ್ಷ, ನಂತರ ಕರ್ನಾಟಕ ಮೇಳದಲ್ಲಿ 12 ವರ್ಷಗಳ ಕಲಾಸೇವೆ. ಕರ್ನಾಟಕ ಮೇಳಕ್ಕೆ ಸೇರಿದ ವರ್ಷ ನಡೆದ ಘಟನೆಯೊಂದನ್ನು ಈಗಲೂ ತನಿಯಪ್ಪ ಜೋಗಿಯವರು ನೆನಪಿಸುತ್ತಾರೆ. ಆಗ ಟೆಂಟಿನ ಮೇಳ. ಆಟ ಆರಂಭವಾಗಲು ತುಂಬಾ ಸಮಯ ಇತ್ತು. ರಾತ್ರೆ 7-30ರ ಹೊತ್ತು. ತನಿಯಪ್ಪ ಅವರು ಪ್ರವೇಶದ್ವಾರದಲ್ಲಿ ನಿಂತಿದ್ದರು. ಟಿಕೇಟ್ ತೋರಿಸದೆ ಯಾರೂ ಒಳಹೋಗುವಂತಿಲ್ಲ. ಆ ಹೊತ್ತಿಗೆ ಸಂಚಾಲಕರಾದ ಕಲ್ಲಾಡಿ ವಿಠಲ ಶೆಟ್ಟರು ಬಂದಿದ್ದರು. ತನಿಯಪ್ಪ ಅವರಿಗೆ ಯಜಮಾನರ ಪರಿಚಯವಿರಲಿಲ್ಲ. ಅವರನ್ನು ತಡೆದು, ಟಿಕೇಟ್ ತೋರಿಸು. ಸುಮ್ಮನೆ ಒಳಹೋಗಲು ಬಿಡಲಾರೆ. ನೋಡಲು ದೊಡ್ಡ ವ್ಯಕ್ತಿಯಂತೆ ಕಾಣುತ್ತಿರುವೆ. ಟಿಕೇಟ್ ತೆಗೆದು ಒಳಹೋಗು ಎಂದರಂತೆ! ಕಲ್ಲಾಡಿ ವಿಠಲ ಶೆಟ್ಟರು ನಗುತ್ತಾ ಕೌಂಟರ್‍ನತ್ತ ಮರಳಿದರಂತೆ. ಕೆಲಸದವರೆಲ್ಲಾ ಬಂದು ಅವರು ಯಜಮಾನರು. ಅವರಲ್ಲಿ ಹಾಗೇಕೆ ಮಾತನಾಡಿದೆ ಎಂದು ಕೇಳಿದಾಗ ತನಿಯಪ್ಪ ಅವರು ಭಯಗೊಂಡರಂತೆ. ಆದರೆ ಯಜಮಾನರು ಗದರಲಿಲ್ಲ. ತನಿಯಪ್ಪರ ನಿಷ್ಠೆ, ಕಾರ್ಯದಕ್ಷತೆಯನ್ನು ಮೆಚ್ಚಿ ಪ್ರಶಂಸಿಸಿದ್ದರು. ಯಜಮಾನನ ಮೆಚ್ಚುಗೆಗೆ ಪಾತ್ರರಾಗಿದ್ದ ನೇಪಥ್ಯ ಕಲಾವಿದರು ತನಿಯಪ್ಪ ಜೋಗಿ ನಂತರ ಕಣಿಪುರ ಮೇಳದಲ್ಲಿ 1 ತಿರುಗಾಟ. ಪ್ರಸ್ತುತ ಕಟೀಲು ಮೇಳದಲ್ಲಿ 2 ವರ್ಷಗಳಿಂದ ತಿರುಗಾಟ ನಡೆಸುತ್ತಿದ್ದಾರೆ. ಮಳೆಗಾಲ ಚಿಕ್ಕಮೇಳಗಳಲ್ಲೂ ತಿರುಗಾಟ ನಡೆಸುತ್ತಿದ್ದಾರೆ. ಮಳೆಗಾಲದ ಪ್ರದರ್ಶನಗಳಲ್ಲೂ ಬಣ್ಣದ ಮನೆಯ ಸಹಾಯಕನಾಗಿ ದುಡಿಯುತ್ತಿದ್ದಾರೆ. ತನಿಯಪ್ಪ ಜೋಗಿ ಅವರ ಪತ್ನಿ ಶ್ರೀಮತಿ ರೇವತಿ. ತನಿಯಪ್ಪ ಜೋಗಿ ದಂಪತಿಗಳಿಗೆ ಮೂವರು ಮಕ್ಕಳು (2 ಹೆಣ್ಣು ಮತ್ತು ಒಂದು ಗಂಡು). ಎಲ್ಲರೂ ವಿವಾಹಿತರು. ತನಿಯಪ್ಪ ಜೋಗಿ ಅವರಿಗೆ ದೇವರು ಸಕಲ ಭಾಗ್ಯಗಳನ್ನೂ ನೀಡಿ ರಕ್ಷಿಸಲಿ. ಶ್ರೀಯುತರಿಂದ ಕಲಾಮಾತೆಯ ಸೇವೆಯು ನಿರಂತರವಾಗಿ ನಡೆಯಲಿ ಎಂಬ ಹಾರಯಿಕೆಗಳು.
ಶ್ರೀ ರಂಗನಾಥ
ರಂಗನಾಥ ಇವರು ಪ್ರಸ್ತುತ ಕಟೀಲು ಮೇಳದ ನೇಪಥ್ಯ ಕಲಾವಿದ. 4ನೇ ಮೇಳದಲ್ಲಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಇವರು ಮಿತಭಾಷಿ. ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ವ್ಯವಹರಿಸುವರು. ರಂಗನಾಥ ಅವರು 1964ರಲ್ಲಿ ಬಂಟ್ವಾಳ ತಾಲೂಕು ಮುಡಿಪು ಎಂಬಲ್ಲಿ ಕೃಷ್ಣ ಮತ್ತು ಲಕ್ಷ್ಮಿ ದಂಪತಿಗಳಿಗೆ ಮಗನಾಗಿ ಜನಿಸಿದರು. ಓದಿದ್ದು 6ನೇ ತರಗತಿಯ ವರೇಗೆ. ಮುಡಿಪು ಶಾಲೆಯಲ್ಲಿ. ಕಟೀಲು 1 ಮತ್ತು 3ನೇ ಮೇಳದಲ್ಲಿ ತಿರುಗಾಟ ನಡೆಸಿದ್ದಾರೆ. ಪ್ರಸ್ತುತ 4ನೇ ಮೇಳದಲ್ಲಿ ದುಡಿಯುತ್ತಿದ್ದಾರೆ. ಬಣ್ಣದ ಮನೆಗೆ ಕಲಾವಿದರು ಬರುವ ಮೊದಲೇ ಇವರು ಒಪ್ಪ ಓರಣವಾಗಿ ಬಣ್ಣ ತುಂಬಿದ ಪಾತ್ರೆಗಳನ್ನು ಇಟ್ಟಿರುತ್ತಾರೆ. ಹಸಿಬಣ್ಣವನ್ನು ಕಲಸಿ ಬೇಕಾದಲ್ಲಿ ಇರಿಸುತ್ತಾರೆ. ಬಣ್ಣ ಕಲಸಲು ಮತ್ತು ವೇಷ ಮುಗಿದ ಮೇಲೆ ತೆಗೆಯಲು ತೆಂಗಿನೆಣ್ಣೆ ಮತ್ತು ನೀರನ್ನು ಬೇಕಾದಂತೆ ಇರಿಸುತ್ತಾರೆ. ಮಾತು ಕಡಿಮೆ ದುಡಿಮೆ ಹೆಚ್ಚು ಎಂಬಂತೆ ಇವರ ವ್ಯವಹಾರ. ಕಳೆದ 30 ವರ್ಷಗಳಿಂದ ರಂಗನಾಥರು ಕಲಾಸೇವೆಯನ್ನು ನೇಪಥ್ಯ ಕಲಾವಿದನಾಗಿ ಮಾಡುತ್ತಿದ್ದಾರೆ.
ಪ್ರಸ್ತುತ ಬಾಯಾರಿನಲ್ಲಿ ಪತ್ನಿ, ಪುತ್ರನೊಂದಿಗೆ ವಾಸಿಸು ತ್ತಿದ್ದಾರೆ. ರಂಗನಾಥ ಅವರ ಪತ್ನಿ ಗುಲಾಬಿ ಅವರು ಗೃಹಿಣಿ. ಅಲ್ಲದೆ ಬೀಡಿ ಕಟ್ಟುವ ಕಾಯಕ ವನ್ನೂ ಮಾಡುತ್ತಾರೆ. ಪುತ್ರ 7ನೇ ತರಗತಿಯಲ್ಲಿ ಓದುತ್ತಿದ್ದಾನೆ. ರಂಗನಾಥರಿಂದ ಇನ್ನಷ್ಟು ಕಲಾಸೇವೆಯು ನಡೆಯುವಂತಾಗಲಿ. ಪುತ್ರನಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ ಎಂಬ ಹಾರಯಿಕೆಗಳು.
ಲೇಖನ : ರವಿಶಂಕರ್ ವಳಕ್ಕುಂಜ

ಶ್ರೀ ರಘುಶೆಟ್ಟಿ ನಾಳ

Comments
Post a Comment