ಸರ್ಪಂಗಳ ಯಕ್ಷೋತ್ಸವ
ಯಕ್ಷಗಾನವು ನಮ್ಮ ನಾಡಿನ ಹೆಮ್ಮೆಯ ಸಂಕೇತವಾದ ಕಲೆ. ಪಂಡಿತರಿಂದ ತೊಡಗಿ ಪಾಮರರ ವರೇಗೆ ಪ್ರತಿಯೊಬ್ಬರನ್ನೂ ಆಕರ್ಷಿಸಿ, ಅವರೆಲ್ಲರ ಮನಸೂರೆಗೊಂಡು ರಂಜನೆಯನ್ನು ನೀಡಿದ ಕಲಾಪ್ರಕಾರವು ಯಕ್ಷಗಾನದಂತೆ ಬೇರೊಂದಿಲ್ಲ. ಕಾಸರಗೋಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಪ್ರತಿ ಮನೆಗಳಲ್ಲೂ ಕಲಾವಿದರೋ, ಪ್ರದರ್ಶನಗಳನ್ನು ನೋಡಿ ಆಸ್ವಾದಿಸುವ ಕಲಾಭಿಮಾನಿಗಳೋ, ಕಲಾಪೋಷಕರೋ ಇದ್ದೇ ಇರುತ್ತಾರೆ. ಜನಮಾನಸದಲ್ಲಿ ಯಕ್ಷಗಾನ ಎಂಬ ಅನುಪಮವಾದ ಕಲೆಯು ಈ ತೆರನಾಗಿ, ಭದ್ರವಾಗಿ ನೆಲೆಯೂರಿ ವಿಜೃಂಭಿಸುತ್ತಿದೆ ಎಂಬುದು ನಮಗೆಲ್ಲರಿಗೂ ಸಂತೋಷದ ವಿಚಾರ. ಹಿಂದಿನ ತಲೆಮಾರಿನ ಅನೇಕರು ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಬಹಳಷ್ಟು ಶ್ರಮಿಸಿದರು. ದೇಶ ವಿದೇಶಗಳಲ್ಲಿ ಇಂದು ಕಲಾಪ್ರದರ್ಶನಗಳು ನಡೆಯುತ್ತಿವೆ. ಇದಕ್ಕೆ ಕಾರಣ ಸ್ಥಾನದಲ್ಲಿ ಅನೇಕರಿದ್ದಾರೆ. ಹಿರಿಯ ಕಲಾವಿದರು, ಪ್ರೇಕ್ಷಕರು, ಕಲಾಪೋಷಕರ ಪರಿಶ್ರಮ, ತ್ಯಾಗಗಳಿಂದ ಕಲೆಯು ಈಗ ವಿಶ್ವವ್ಯಾಪಿಯಾಗಿದೆ. ಅದರ ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಯಶಸ್ವೀ ಯಕ್ಷಗಾನ ಪ್ರದರ್ಶನವೊಂದು ನಡೆಯಿತು ಎಂದಾದರೆ ಅದಕ್ಕೆ ಕಲಾವಿದರು ಮಾತ್ರ ಕಾರಣರಲ್ಲ. ಕಲಾವಿದರು ಅರ್ಪಣಾಭಾವದಿಂದ ಅಭಿನಯಿಸುತ್ತಾರೆ. ತಮ್ಮ ಕರ್ತವ್ಯವೆಂದು ತಿಳಿದು ಮಾಡುತ್ತಾರೆ. ಸಹೃದಯೀ ಪ್ರೇಕ್ಷಕರೂ ಬೇಕು. ಅವರು ಕಲಾವಿದರ ಅಭಿನಯವನ್ನು ಆಸ್ವಾದಿಸುತ್ತಾರೆ. ಜತೆಗೆ ಪ್ರದರ್ಶನಗಳನ್ನು ಏರ್ಪಡಿಸುವವರು ಬೇಕು. ಉತ್ತಮ ಪ್ರದರ್ಶನಗಳನ್ನು ಸಂಘಟಿಸಿದ ಮಹನೀಯರುಗಳು ಕಲಾವಿದರಿಗೆ ಆಸರೆಯಾಗುವುದರ ಜತೆಗೆ, ಸಭಾಸದರ ಸಂತೋಷಕ್ಕೂ ಕಾರಣರಾಗುತ್ತಾರೆ. ಇಂದು ಸಂಘ-ಸಂಸ್ಥೆಗಳೂ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸುತ್ತವೆ. ಅನೇಕ ಮಹನೀಯರುಗಳೂ ಪ್ರದರ್ಶನಗಳನ್ನು ಆಯೋಜಿಸಿ ಕಲೆಯ ಮೇಲೆ ತಮಗಿರುವ ಗೌರವ, ಪ್ರೀತಿಯನ್ನು ಪ್ರಕಟಿಸುತ್ತಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯವನ್ನು ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಸತ್ಕಾರ್ಯವನ್ನೂ ಕೈಗೊಳ್ಳುತ್ತಿದ್ದಾರೆ. ಕಲೆಯನ್ನು ಪೋಷಿಸಿ ಬೆಳೆಸುವ ಕಾಯಕವನ್ನು ಈ ತೆರನಾಗಿ ಕೈಗೊಂಡು `ಕಲಾಪೋಷಕ’ ರೆನಿಸಿಕೊಳ್ಳುತ್ತಾರೆ. ಅಂತಹ ಮಹನೀಯರುಗಳಲ್ಲಿ ಒಬ್ಬರಾಗಿ ಮೆರೆದವರು ಸರ್ಪಂಗಳ ದಿ| ಸುಬ್ರಹ್ಮಣ್ಯ ಭಟ್ಟರು.
ಸರ್ಪಂಗಳ ಶ್ರೀ ಸುಬ್ರಹ್ಮಣ್ಯ ಭಟ್ ಅವರು ಈ ಲೋಕದ ಬೆಳಕನ್ನು ಕಂಡುದು 1948ರಲ್ಲಿ. ಕೇರಳ ರಾಜ್ಯದ ಕಾಸರಗೋಡು ತಾಲೂಕಿನ ಪೆರ್ಲ ಸಮೀಪದ ಸರ್ಪಂಗಳ ಎಂಬ ಹಳ್ಳಿ ಇವರ ಹುಟ್ಟೂರು. ಖ್ಯಾತ ಕಲಾವಿದ, ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ ಅವರ ಹುಟ್ಟೂರು ಶೇಣಿ ಸಮೀಪದ ಊರೇ ಸರ್ಪಂಗಳ.
ಯಕ್ಷಗಾನದ ಜನಕ ಪಾರ್ತಿಸುಬ್ಬನ ತವರೂರು ಕುಂಬಳೆಗೆ ಶೇಣಿ, ಸರ್ಪಂಗಳದಿಂದ ಹೆಚ್ಚೇನೂ ದೂರವಿಲ್ಲ. ಹತ್ತಾರು ಕಿ.ಮೀ.ಗಳಷ್ಟೆ. ಪೆರ್ಲ, ಪಡ್ರೆ (ಬಲಿಪ ಭಾಗವತರ ಹುಟ್ಟೂರು) ಬದಿಯಡ್ಕ ಪರಿಸರದಲ್ಲಿ ಯಕ್ಷಗಾನ, ತಾಳಮದ್ದಳೆಗಳು ಬೇಕಾದಷ್ಟು ನಡೆಯುತ್ತಿತ್ತು. ಸಹಜವಾಗಿ ಸುಬ್ರಹ್ಮಣ್ಯ ಭಟ್ಟರಿಗೆ ಯಕ್ಷಗಾನಾಸಕ್ತಿ ಹುಟ್ಟಿಕೊಂಡಿತ್ತು. ನೋಡುತ್ತಿದ್ದರು. ಆಸ್ವಾದಿಸುತ್ತಿದ್ದರು. ಯಕ್ಷಗಾನದ ತವರೂರಲ್ಲಿಯೇ ಜನಿಸಿ ಬೆಳೆದ ಕಾರಣದಿಂದಲೇ ಇರಬೇಕು ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರು ಸದ್ರಿ ಶ್ರೇಷ್ಠ ಕಲೆಯನ್ನು ಅತೀವವಾಗಿ ಗೌರವಿಸುತ್ತಿದ್ದರು. ಕಲಾವಿದರನ್ನು ಪ್ರೀತಿಸುತ್ತಿದ್ದರು.
ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರ ಪ್ರಾಥಮಿಕ ವಿದ್ಯಾಭ್ಯಾಸವು ಕೇರಳದಲ್ಲೇ ನಡೆದುವು. 7ನೇ ತರಗತಿ ವರೇಗೆ ಮನೆ ಸಮೀಪದ ಬಣ್ಪುತ್ತಡ್ಕ ಶಾಲೆಯಲ್ಲಿ. 10ನೇ ತರಗತಿ ವರೇಗೆ ಓದಿದ್ದು ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲಿನಲ್ಲಿ. ಪದವಿ ವಿದ್ಯಾರ್ಜನೆ ಮಾಡಿದ್ದು (ಬಿ.ಎಸ್ಸಿ.) ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ. ಶ್ರೀಯುತರು ಭಾರತೀಯ ಜೀವವಿಮಾ ನಿಗಮದ ಉದ್ಯೋಗಿಯಾಗಿ ಆಯ್ಕೆಯಾದ ಬಳಿಕ 1976ರ ಸುಮಾರಿಗೆ ಉಡುಪಿಗೆ ಬಂದು ನೆಲೆಸಿದ್ದರು.
ಯಕ್ಷಗಾನವೆಂಬ ಕಲೆಯು ಸತ್ಪಥದಲ್ಲಿ ಸಾಗಿ ರಂಜಿಸಲು ಅಭಿನಯಿಸುವ ಕಲಾವಿದರ ಜತೆ, ಕಲೆ, ಕಲಾವಿದರಿಗೆ ಆಸರೆ ನೀಡುವ ಸಜ್ಜನ ವ್ಯಕ್ತಿಗಳೂ ಕಾರಣರಾಗುತ್ತಾರೆ. ಆ ನಿಟ್ಟಿನಲ್ಲಿಯೇ ವ್ಯವಹರಿಸಿದ ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರು ಕಲಾಪೋಷಕರಾಗಿ ಕಾಣಿಸಿಕೊಂಡರು. ವಿದ್ಯಾರ್ಜನೆಯ ಬಳಿಕ ಭಾರತೀಯ ಜೀವವಿಮಾ ನಿಗಮದಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ವೃತ್ತಿಜೀವನದ ಸಂದರ್ಭ ಉಡುಪಿಗೆ ಬಂದು ನೆಲೆಸಿದ್ದು ಮಾತ್ರವಲ್ಲ, ಕಲಾಸಂಬಂಧೀ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಕಲೆ ಮತ್ತು ಕಲಾವಿದರಿಗೆ ನೆರವನ್ನು ನೀಡಿ ಆಸರೆಯಾಗುವುದು ತನ್ನ ಕರ್ತವ್ಯ ಎಂದು ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರು ತನ್ನನ್ನು ತಾನು ತೊಡಗಿಸಿ ಕೊಳ್ಳುತ್ತಿದ್ದರು. ಇತರ ಕಲಾಪ್ರಕಾರಗಳಾದ ಭರತನಾಟ್ಯ ಮತ್ತು ನಾಟಕಗಳನ್ನೂ ಪ್ರೋತ್ಸಾಹಿಸಿದ್ದರು. ಪರಂಪರೆಯ ಕಲಾಪ್ರದರ್ಶನಗಳಲ್ಲಿ ಒಲವನ್ನು ಹೊಂದಿದ್ದ ಇವರು ಅತ್ಯುತ್ತಮ ವಿಮರ್ಶಕರೂ ಆಗಿದ್ದರು. ಕಲಾವಿದರುಗಳ ಹೆಮ್ಮೆಯ ಸಂಸ್ಥೆ, ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಮೊತ್ತಮೊದಲು ಸ್ಥಾಪಿತವಾದ ಸಂಸ್ಥೆ ಎಂಬ ನೆಗಳ್ತೆಗೆ ಪಾತ್ರವಾಗಿ ತದ್‍ರೀತಿಯಲ್ಲಿ ಮುನ್ನಡೆಯುತ್ತಿರುವ ಉಡುಪಿ ಯಕ್ಷಗಾನ ಕಲಾರಂಗ (ರಿ.) ಸಂಸ್ಥೆಯ ಆಜೀವ ಸದಸ್ಯರಾಗಿದ್ದರು ಶ್ರೀ ಸುಬ್ರಹ್ಮಣ್ಯ ಭಟ್ಟರು. ಯಕ್ಷಗಾನವನ್ನೂ ಕಲಾವಿದರನ್ನೂ ಶ್ರೀಯುತರು ಅದೆಷ್ಟು ಪ್ರೀತಿಸುತ್ತಿದ್ದಾರೆಂಬುದಕ್ಕೆ ಇದುವೇ ಸಾಕ್ಷಿ. ಉಡುಪಿ ಭಾಗದಲ್ಲಿ ತೆಂಕುತಿಟ್ಟಿನ ಪ್ರದರ್ಶನಗಳ ಜನಪ್ರಿಯತೆಗೆ ಶ್ರಮಿಸಿ ಕಾರಣರಾಗಿದ್ದರು. ಯಕ್ಷಗಾನ ಎಂಬ ಗಂಡುಕಲೆಯನ್ನು ಗೌರವಿಸಿ, ಅದರ ವೈಭವವನ್ನು ಕಾಣಲು ಬಹಳಷ್ಟು ಶ್ರಮಿಸಿ, ಕಲಾವಿದರ, ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿ ‘ಕಲಾಪೋಷಕ’ರಾಗಿ ಮೆರೆದವರು ಸರ್ಪಂಗಳ ಶ್ರೀ ಸುಬ್ರಹ್ಮಣ್ಯ ಭಟ್ಟರು. ಶ್ರೀಯುತರು 2011ರಲ್ಲಿ ಅಲೌಕಿಕ ಪ್ರಪಂಚವನ್ನು ಸೇರಿಕೊಂಡಿದ್ದರು. ಅವರ ಕಾಯ ಅಳಿದರೂ ಕೀರ್ತಿಯು ಉಳಿದಿದೆ. ಕಲಾಪೋಷಕರಾಗಿ, ಜನಾನುರಾಗಿಯಾಗಿ ಸಾಧಕರಾಗಿ ಬದುಕಿ ಬೆಳಗಿದ ಶ್ರೀಯುತರು ಹಾಕಿಕೊಟ್ಟ ಸನ್ಮಾರ್ಗದಲ್ಲೇ ಅವರ ಧರ್ಮಪತ್ನಿ ಶ್ರೀಮತಿ ನಳಿನಿ ಸುಬ್ರಹ್ಮಣ್ಯ ಭಟ್ ಮತ್ತು ಮಕ್ಕಳು ಸಾಗುತ್ತಿದ್ದಾರೆ. ಅವರೆಲ್ಲರೂ ಅಭಿನಂದನಾರ್ಹರು. 2011ರಿಂದ ತೊಡಗಿ ಕಳೆದ 7 ವರ್ಷಗಳಿಂದ ``ಸರ್ಪಂಗಳ ಯಕ್ಷೋತ್ಸವ’’ ಎಂಬ ಕಾರ್ಯಕ್ರಮದಡಿಯಲ್ಲಿ ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸ್ಮಾರಕ ಯಕ್ಷಗಾನ ಕಲಾಸಾಧಕ ಪ್ರಶಸ್ತಿ ಪ್ರದಾನ, ಸಂಸ್ಮರಣ ಮತ್ತು ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರಂತೆ ಇವರೂ ಕಲಾಪೋಷಕರಾಗಿ, ಕಲಾವಿದರಿಗೆ ಆಸರೆಯಾಗಿ ಕಲಾಭಿಮಾನಿಗಳ ಒಲವನ್ನು ಗಳಿಸಿಕೊಂಡಿದ್ದಾರೆ. ಕಾರ್ಯಕ್ರಮಗಳು ಹರಿವ ನೀರಿನಂತೆ ನಿರಂತರವಾಗಿರಲಿ. ಇನ್ನೂ ಹೆಚ್ಚಿನ ಕಲಾಸೇವೆಯನ್ನು ಮಾಡುವ ಶಕ್ತಿಯನ್ನು ಇವರಿಗೆ ಶ್ರೀ ದೇವರು ಅನುಗ್ರಹಿಸಲಿ ಎಂದು ಸಮಸ್ತ ಕಲಾವಿದರ, ಕಲಾಭಿಮಾನಿಗಳ ಪರವಾಗಿ ಯಕ್ಷದೀಪ ಪತ್ರಿಕೆಯು ಹಾರೈಸುತ್ತದೆ.
ಎಂಟನೆಯ ವರ್ಷದ ಸರ್ಪಂಗಳ ಯಕ್ಷೋತ್ಸವಕ್ಕೆ ವೇದಿಕೆಯಾದುದು ಉಡುಪಿ ಟೌನ್‍ಹಾಲ್ ಸಭಾಂಗಣ. ಜುಲೈ 27ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಆರಂಭವಾದ ಕಾರ್ಯಕ್ರಮವು ರಾತ್ರೆ 9ರ ತನಕ ನಡೆಯಿತು. ಈ ಸುಂದರ ಕಾರ್ಯಕ್ರಮಕ್ಕೆ ಯಕ್ಷಗಾನ ಕಲಾರಂಗ (ರಿ.) ಉಡುಪಿ ಸಹಕಾರವನ್ನು ನೀಡಿತ್ತು. ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಚಿತ್ತೈಸಿ ದಿವ್ಯಾನುಗ್ರಹವನ್ನು ನೀಡಿದ್ದರು. ಖ್ಯಾತ ಸ್ತ್ರೀವೇಷಧಾರಿ, ಕಟೀಲು ಮೇಳದ ಕಲಾವಿದ ಶ್ರೀ ಸಂಜೀವ ಬಳೆಗಾರ, ಶಂಕರನಾರಾಯಣ ಇವರಿಗೆ ಸರ್ಪಂಗಳ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ನೇಪಥ್ಯ ಕಲಾವಿದರಿಗಾಗಿ ಕೊಡುವ `ಸರ್ಪಂಗಳ ಪುರಸ್ಕಾರ’ವನ್ನು ವಿಷ್ಣು ಸಜಂಕಿಲ ಇವರಿಗೆ ನೀಡಿ ಗೌರವಿಸಲಾಯಿತು. ಕಲಾಪೋಷಕರಾದ ಶ್ರೀಮತಿ ನಳಿನಿ ಸುಬ್ರಹ್ಮಣ್ಯ ಭಟ್, ಡಾ. ನರೇಂದ್ರ ಶೆಣೈ, ಡಾ. ಶೈಲಜಾ ಎಸ್., ಜೈದೀಪ್ ಎಸ್. ಭಟ್, ರಮ್ಯಲಕ್ಷ್ಮೀ, ಪ್ರಣಮ್ಯಾ, ಅನಿರುದ್ಧ, ಆವಂತಿಕಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಲ್ಲರಿಗೂ ಅಭಿನಂದನೆಗಳು. ಶುಭಾಶಯಗಳು. ಬಳಿಕ ‘ಭೀಮಭಾರತ’ ಎಂಬ ಯಕ್ಷಗಾನ ಪ್ರದರ್ಶನವು ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ನಡೆಯಿತು. ಕಥೆಯನ್ನು ಸಂಯೋಜಿಸಿದವರು ಖ್ಯಾತ ಕಲಾವಿದ ಶ್ರೀ ವಾಸುದೇವ ರಂಗಾಭಟ್ಟರು. ಪ್ರಸಂಗಕ್ಕೆ ಪದ್ಯಗಳನ್ನು ರಚಿಸಿ ಸಹಕರಿಸಿದವರು ಖ್ಯಾತ, ಹಿರಿಯ ಸ್ತ್ರೀ ಪಾತ್ರಧಾರಿ ಶ್ರೀ ಎಂ. ಕೆ. ರಮೇಶಾಚಾರ್ಯ ಅವರು.
2012ರಲ್ಲಿ ಪದ್ಯಾಣ ಶಂಕರನಾರಾಯಣ ಭಟ್; 2013ರಲ್ಲಿ ಸಂಪಾಜೆ ಶೀನಪ್ಪ ರೈ; 2014ರಲ್ಲಿ ಪದ್ಯಾಣ ಗಣಪತಿ ಭಟ್; 2015ರಲ್ಲಿ ಬಂಟ್ವಾಳ ಜಯರಾಮ ಆಚಾರ್ಯ; 2016ರಲ್ಲಿ ಪೆರುವಾಯಿ ನಾರಾಯಣ ಭಟ್; 2017ರಲ್ಲಿ ಗುಂಡಿಮಜಲು ಗೋಪಾಲ ಭಟ್ ಮತ್ತು 2018ರಲ್ಲಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರನ್ನು `ಸರ್ಪಂಗಳ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದ್ದರು. ು
ಸರ್ಪಂಗಳ ಸುಬ್ರಹ್ಮಣ್ಯ ಭಟ್

ಹಿರಿಯ ಕಲಾವಿದರಾದ ಸಂಜೀವ ಬಳೆಗಾರರಿಗೆ ಈ ವರ್ಷದ ಸರ್ಪಂಗಳ ಪ್ರಶಸ್ತಿ.
ನೇಪಥ್ಯ ಕಲಾವಿದರಿಗಾಗಿ ಕೊಡುವ `ಸರ್ಪಂಗಳ ಪುರಸ್ಕಾರ’ವನ್ನು ವಿಷ್ಣು ಸಜಂಕಿಲ ಇವರಿಗೆ ನೀಡಿ ಗೌರವಿಸಲಾಯಿತು. ಕಲಾಪೋಷಕರಾದ ಶ್ರೀಮತಿ ನಳಿನಿ ಸುಬ್ರಹ್ಮಣ್ಯ ಭಟ್, ಡಾ. ನರೇಂದ್ರ ಶೆಣೈ, ಡಾ. ಶೈಲಜಾ ಎಸ್., ಜೈದೀಪ್ ಎಸ್. ಭಟ್, ರಮ್ಯಲಕ್ಷ್ಮೀ, ಪ್ರಣಮ್ಯಾ, ಅನಿರುದ್ಧ, ಆವಂತಿಕಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಲ್ಲರಿಗೂ ಅಭಿನಂದನೆಗಳು. ಶುಭಾಶಯಗಳು. ಬಳಿಕ ‘ಭೀಮಭಾರತ’ ಎಂಬ ಯಕ್ಷಗಾನ ಪ್ರದರ್ಶನವು ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ನಡೆಯಿತು. ಕಥೆಯನ್ನು ಸಂಯೋಜಿಸಿದವರು ಖ್ಯಾತ ಕಲಾವಿದ ಶ್ರೀ ವಾಸುದೇವ ರಂಗಾಭಟ್ಟರು. ಪ್ರಸಂಗಕ್ಕೆ ಪದ್ಯಗಳನ್ನು ರಚಿಸಿ ಸಹಕರಿಸಿದವರು ಖ್ಯಾತ, ಹಿರಿಯ ಸ್ತ್ರೀ ಪಾತ್ರಧಾರಿ ಶ್ರೀ ಎಂ. ಕೆ. ರಮೇಶಾಚಾರ್ಯ ಅವರು.
2012ರಲ್ಲಿ ಪದ್ಯಾಣ ಶಂಕರನಾರಾಯಣ ಭಟ್; 2013ರಲ್ಲಿ ಸಂಪಾಜೆ ಶೀನಪ್ಪ ರೈ; 2014ರಲ್ಲಿ ಪದ್ಯಾಣ ಗಣಪತಿ ಭಟ್; 2015ರಲ್ಲಿ ಬಂಟ್ವಾಳ ಜಯರಾಮ ಆಚಾರ್ಯ; 2016ರಲ್ಲಿ ಪೆರುವಾಯಿ ನಾರಾಯಣ ಭಟ್; 2017ರಲ್ಲಿ ಗುಂಡಿಮಜಲು ಗೋಪಾಲ ಭಟ್ ಮತ್ತು 2018ರಲ್ಲಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರನ್ನು `ಸರ್ಪಂಗಳ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದ್ದರು. ು
ರವಿಶಂಕರ್ ವಳಕ್ಕುಂಜ

Comments
Post a Comment