ನಗದೆ ನಗಿಸಿದ ಯಕ್ಷರಾಜ್ಯದ ಆಸ್ಥಾನ ವಿದೂಷಕ ಹಾಸ್ಯರತ್ನ ನಯನ ಕುಮಾರ್
ಯಕ್ಷಗಾನದಲ್ಲಿ ಹಾಸ್ಯವು ಹೇಗಿರಬೇಕು? ಎಂದು ಕೆಲವರು ಕೇಳುವುದುಂಟು. ಹಾಸ್ಯ ಪಾತ್ರಗಳೆಂದೇನು? ಎಲ್ಲಾ ಪಾತ್ರಗಳೂ ಆ ಪಾತ್ರಕ್ಕೆ ಉಚಿತವಾಗಿಯೇ ಇರಬೇಕು. ಪಾತ್ರೋಚಿತವಾಗಿ ಕಲಾವಿದರು ಅಭಿನಯಿಸಿದಾಗ ಮಾತ್ರ ಪ್ರದರ್ಶನವು ಗೆಲ್ಲುತ್ತದೆ. ಹಾಸ್ಯವೂ ಹಾಗೆಯೇ. ‘ಹಾಸ್ಯ’ ಬೇಕೇ ಬೇಕು. ಆದರೆ ಅದರ ಪ್ರಮಾಣ ಎಷ್ಟು? ಎಷ್ಟು ತೀವ್ರವಾಗಿರಬೇಕು? ಎನ್ನುವ ನಿರ್ಣಯ ಇದೆ. ‘ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ’ ಎಂಬ ರೂಢಿಯಲ್ಲಿ ಆಡುವ ಮಾತಿನಂತೆ ಇರಬೇಕು. ಶುಚಿಯಾಗಿರಬೇಕು, ರುಚಿಯಾಗಿರಬೇಕು, ಆ ವಿಭಾಗವು ಬಲಿಷ್ಠವಾಗಿರಬೇಕು. ಪ್ರಸಂಗಕ್ಕೆ ಪೂರಕವಾಗಿ ಪ್ರದರ್ಶನವು ಗೆಲ್ಲುವಂತಿರಬೇಕೆಂಬುದೇ ಇದರ ಅರ್ಥ. ಪ್ರತಿಯೊಂದು ಪಾತ್ರವೂ ಹಾಗೆಯೇ ಇರಬೇಕು. ಪಾತ್ರಧಾರಿಯು ತಾನೊಬ್ಬನೇ ಕಾಣಿಸಿಕೊಳ್ಳಬೇಕೆಂದು ಬಯಸದೆ, ಪ್ರದರ್ಶನವು ಕೆಡದಂತೆ ಎಚ್ಚರದಿಂದ ಅಭಿನಯಿಸಲೇಬೇಕು. ಈ ಸಂದರ್ಭದಲ್ಲಿ ರಂಗನಾಯಕ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳ ಮಾತುಗಳು ನೆನಪಾಗುತ್ತದೆ. ಪ್ರದರ್ಶನ ಮುಗಿದ ನಂತರ ಕಲಾವಿದರನ್ನೋ ಪ್ರೇಕ್ಷಕರನ್ನೋ ಕರೆದು ಅವರು ಕೇಳುತ್ತಿದ್ದರು- ಆಟ ಹೇಗಾಗಿದೆ? ಎಂದು. ಒಂದು ದಿನವಾದರೂ ನನ್ನ ಪದ್ಯ ಹೇಗಾಗಿದೆ ಎಂದು ಕೇಳಿದವರಲ್ಲ. ನಿಮ್ಮ ಹಾಡು ಚೆನ್ನಾಗಿತ್ತು ಎಂದರೆ, ಅದಕ್ಕೆ ಸಹಕಲಾವಿದರು ಕಾರಣ. ನಾನು ಕಾರಣನಲ್ಲ. ಅವರು ಸಹಕರಿಸಿದ ಕಾರಣ ನಾನು ಪದ್ಯ ಹೇಳುವುದಕ್ಕೆ ಅನುಕೂಲ ಆಯಿತು. ನಾನು ನನ್ನ ಹಾಡಿನ ಬಗ್ಗೆ ಗಮನಿಸುವುದಿಲ್ಲ. ಆಟ ಒಳ್ಳೆಯದಾಗಬೇಕೆಂಬುದಷ್ಟೇ ನನ್ನ ಆಸೆ. ಆ ಬಗ್ಗೆ ಗಮನಹರಿಸುತ್ತೇನೆ ಎಂದು ಹೇಳುತ್ತಾರೆ. ಕಲಾವಿದರಿಗೆ ಎಂತಹ ಸಂದೇಶ ಕುರಿಯ ಗಣಪತಿ ಶಾಸ್ತ್ರಿಗಳಿಂದ. ಹಾಗಾಗಿಯೇ ಅವರು ಯಕ್ಷಗಾನದ ಶ್ರೇಷ್ಠ ನಿರ್ದೇಶಕರಾದರು. ಎಲ್ಲರೂ ಪ್ರದರ್ಶನದತ್ತ ಗಮನಹರಿಸಬೇಕು. ಪ್ರದರ್ಶನದ ಸೌಂದರ್ಯ ಹೆಚ್ಚಿಸಲು ಪ್ರಯತ್ನಿಸಬೇಕು. ಸಿಕ್ಕ ಅವಕಾಶದ ಮಿತಿಯೊಳಗೆ ಚೆನ್ನಾಗಿ ಪಾತ್ರೋಚಿತವಾಗಿ ಅಭಿನಯಿಸುವುದು ಕಲಾವಿದರಿಗೆ ಕರ್ತವ್ಯ. ಹಾಸ್ಯಗಾರನಿಗಂತೂ ಉಳಿದವರಿಗಿಂತ ಹೊಣೆ ಹೆಚ್ಚು. ಒಂದು ಪ್ರಸಂಗದಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಬೇಕು. ಪ್ರಸಂಗಕ್ಕೆ ತೊಡಕಾಗದಂತೆ ಎಲ್ಲಾ ಪಾತ್ರಗಳನ್ನೂ ನಿರ್ವಹಿಸಿ ಮೆಚ್ಚುಗೆಯನ್ನು ಗಳಿಸಿಕೊಳ್ಳುವುದು ಸುಲಭವಲ್ಲ. ಯೋಚನೆ, ಯೋಜನೆ, ನಿರ್ಣಯಗಳು ಸದಾ ಇರಬೇಕು. ತನ್ನ ಸಹಕಲಾವಿದರಾರು? ಅವರ ಸಾಮರ್ಥ್ಯವೇನು? ಯಾವ ಪಾತ್ರವನ್ನು ಬೆಳೆಸಬೇಕು? ಎಂಬುದನ್ನು ನಿರ್ಣಯಿಸಿ ನಿರ್ದೇಶಕರಾದ ಭಾಗವತರೊಂದಿಗೆ ಸಮನ್ವಯತೆಯಿಂದ ವ್ಯವಹರಿಸಬೇಕಾಗುತ್ತದೆ. ಯಕ್ಷಗಾನ ರಂಗದಲ್ಲಿ ಅದೆಷ್ಟೋ ಹಾಸ್ಯಗಾರರು ಈ ರೀತಿ ಸಾಧನೆಯನ್ನು ಮಾಡಿ ಕೀರ್ತಿಶೇಷರಾದರು. ಅವರಲ್ಲೊಬ್ಬರು ‘ಹಾಸ್ಯರತ್ನ’ ಶ್ರೀ ನಯನ ಕುಮಾರರು.
ಹಾಸ್ಯರತ್ನ ದಿ| ನಯನ ಕುಮಾರರು ‘ರಸಿಕರತ್ನ’ ವಿಟ್ಲ ಗೋಪಾಲಕೃಷ್ಣ ಜೋಯಿಸರ ಶಿಷ್ಯ. ಅನೇಕ ವರ್ಷಗಳ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಯನ ಕುಮಾರರು ಗುರುಗಳಾದ ವಿಟ್ಲ ಜೋಯಿಸರನ್ನು ಸನ್ಮಾನಿಸಿ ಗೌರವಿಸಿದ್ದರು. ‘ರಸಿಕರತ್ನ’ ಎಂಬ ಹೊತ್ತಗೆಯೂ ಪ್ರಕಟವಾಗಿತ್ತು. ಯಕ್ಷಗಾನದ ವಿದ್ವಾಂಸರು ಜೋಯಿಸರ ಬಗೆಗೆ ಬರೆದ ಲೇಖನಗಳನ್ನು ಒಳಗೊಂಡ ಕೃತಿ ಅದು. ನಯನ ಕುಮಾರರು ನಾಟ್ಯ, ಅಭಿನಯ, ಮಾತುಗಾರಿಕೆಯಲ್ಲಿ ಪಳಗಿ ಜೋಯಿಸರ ಶಿಷ್ಯನಾಗಿ ಮುಖವರ್ಣಿಕೆಯಲ್ಲೂ ಹೆಸರನ್ನು ಗಳಿಸಿದ್ದರು. ಕ್ಷಿಪ್ರಾತಿಕ್ಷಿಪ್ರದಲ್ಲಿ ಬಣ್ಣಗಾರಿಕೆ ಹಾಗೂ ವೇಷಗಳನ್ನು ಧರಿಸಿ ರಂಗಪ್ರವೇಶ ಮಾಡುವ ಕಲೆ ಇವರಿಗೆ ಕರಗತವಾಗಿತ್ತು. ಜೋಯಿಸರಂತೆ ಪ್ರತ್ಯುತ್ಪನ್ನಮತಿ ಆಗಿದ್ದರು. ಚತುರಶಿಲ್ಪಿಯ ಕೈಯಲ್ಲಿ ಸಿಕ್ಕ ಒಂದು ಶಿಲೆ, ಸುಂದರವಾದ ವಿಗ್ರಹವಾಗುವಂತೆ, ತಾನು ಧರಿಸುವ ಪಾತ್ರದ ಗೌರವವನ್ನು ಎತ್ತಿಹಿಡಿದು, ಅದಕ್ಕೊಂದು ಹೊಸತನವನ್ನು ನೀಡಿ ಅಭಿನಯಿಸುವ ಸಾಮರ್ಥ್ಯ ನಯನಕುಮಾರರಿಗಿತ್ತು. ಅವರಲ್ಲಿದ್ದ ಚಿತ್ರರಚನೆಯ, ನಾಟ್ಯ, ಮಾತುಗಾರಿಕೆಯ, ನಟನಾಕೌಶಲ ನಿಜವಾಗಿಯೂ ಪ್ರಶಂಸನೀಯವಾದುದು. ಕಲಾಭಿಮಾನಿಗಳಿಗೆಲ್ಲರಿಗೂ ಅಚ್ಚುಮೆಚ್ಚಿನ ಹಾಸ್ಯಗಾರರಾಗಿದ್ದರು. ಹಾಸ್ಯಗಾರನು ನಿರ್ವಹಿಸಬೇಕಾದ ಎಲ್ಲಾ ಪಾತ್ರಗಳಿಗೂ ಕುಂದುಂಟಾಗದಂತೆ ತನ್ನ ಪ್ರತಿಭಾ ವ್ಯಾಪಾರದಿಂದ ಹೊಸತನವನ್ನು ನೀಡಿ ಆ ಪಾತ್ರಗಳನ್ನು ಸಹಕಲಾವಿದರ ನೆರವು ಪ್ರೋತ್ಸಾಹದಿಂದ ಮೆರೆಸುತ್ತಿದ್ದವರು ನಯನ ಕುಮಾರರು. ನಾರದ, ಸುಗ್ರೀವ, ಸಂಜಯ, ಅಕ್ರೂರ ಮೊದಲಾದ ಪಾತ್ರಗಳನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದರು. ರಾಕ್ಷಸದೂತನ ಬಣ್ಣಗಾರಿಕೆ ವೈವಿಧ್ಯಮಯವಾಗಿ ಮಾಡುತ್ತಿದ್ದರು. ಜೋಯಿಸರ ಕಲ್ಪನೆಯ ಕೂಸಾದ ಸಮುದ್ರಮಥನ ಪ್ರಸಂಗದ ‘ಮೂಕಾಸುರ’ನ ಪಾತ್ರವನ್ನು ಅವರನ್ನು ಅನುಸರಿಸಿ, ಹೊಸತನವನ್ನು ನೀಡಿ ಚಿತ್ರಿಸಿದ್ದರು. ಅಮೃತ ಸೋಮೇಶ್ವರರು ಬರೆದ ‘ಮಹಾಕಲಿ ಮಗಧೇಂದ್ರ’ ಪ್ರಸಂಗದ ‘ಜಗಜಟ್ಟಿ’ ಪಾತ್ರವು ನಯನ ಕುಮಾರರ ಕಲ್ಪನೆಯ ಸೃಷ್ಠಿ. ಮದುವೆಯ ಪುರೋಹಿತ, ಬಾಗಿಲದೂತ, ಮೂರ್ತೆಯವ, ಅಗಸ, ಬೆಸ್ತ, ಕಟ್ಟುಹಾಸ್ಯಕ್ಕೆ ಸಂಬಂಧಿಸಿದ ಮಡಕೆ ಮಾರುವವ, ಕಟ್ಟಿಗೆ ಮಾರುವವ ಮೊದಲಾದ ಪಾತ್ರಗಳು, ವಿಜಯ, ದಾರುಕ, ಮಕರಂದ, ಚಂದ್ರಾವಳೀ ವಿಲಾಸದ ಅತ್ತೆ, ಕುದುರೆ ವ್ಯಾಪಾರಿ, ದಕ್ಷಯಜ್ಞದ ವೃದ್ಧಬ್ರಾಹ್ಮಣ, ಯಾಗದ ಪುರೋಹಿತ, ಬೈರಾಗಿ ಹೀಗೆಯೇ ತಾನು ನಿರ್ವಹಿಸಿದ ಎಲ್ಲಾ ಪಾತ್ರಗಳಲ್ಲೂ ನಯನ ಕುಮಾರರು ಮಿಂಚಿದರು. ಪ್ರೇಕ್ಷಕರನ್ನು ರಂಜಿಸಿದರು.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಡಾಲುಮೇರ್ಕಳ ಗ್ರಾಮದ ಎಡಕ್ಕಾನ ಎಂಬಲ್ಲಿ 1948ನೇ ಇಸವಿಯಲ್ಲಿ ವೆಂಕಟ್ರಮಣ ಭಟ್ ಮತ್ತು ಪರಮೇಶ್ವರೀ ಅಮ್ಮ ದಂಪತಿಗಳಿಗೆ ಮಗನಾಗಿ ನಯನ ಕುಮಾರರು ಜನಿಸಿದರು. ತಂದೆ ತಾಯಿಯವರು ಇರಿಸಿದ ಹೆಸರು ನಾರಾಯಣ ಭಟ್. ನಯನ ಕುಮಾರರ ಅಜ್ಜ ಅಂಗ್ರಿ ನಾರಾಯಣ ಭಾಗವತರು. (ಅಣ್ಣಯ್ಯ ಭಾಗವತರು). ಬಂಧುಗಳೂ, ಮನೆಯವರೂ ಕಲಾವಿದರಾಗಿದ್ದರು. ನಯನ ಕುಮಾರರಿಗೆ ಯಕ್ಷಗಾನ ಕಲೆಯು ರಕ್ತಗತವಾಗಿತ್ತು.
ವೀರಕಂಭ ಮತ್ತು ವಿಟ್ಲದಲ್ಲಿ ವಿದ್ಯಾಭ್ಯಾಸ. ಎಸ್.ಎಸ್.ಎಲ್.ಸಿ.ವರೇಗೆ ಓದು. 8ನೇ ತರಗತಿಯಲ್ಲಿ ಕಲಿಯುತ್ತಿರುವಾಗ ‘ರಾಮಾಶ್ವಮೇಧ’ ಪ್ರಸಂಗದಲ್ಲಿ ಕುದುರೆದೂತನಾಗಿ ರಂಗಪ್ರವೇಶ. ಹೈಸ್ಕೂಲ್ ವಿದ್ಯಾಭ್ಯಾಸದ ಸಮಯದಲ್ಲಿ ನಾಟ್ಯಾಭ್ಯಾಸವನ್ನು ಮಾಡಿದ್ದರು. ಎಸ್.ಎಸ್.ಎಲ್.ಸಿ. ಓದಿನ ನಂತರ ವಿಟ್ಲದಲ್ಲಿ ಖ್ಯಾತ ವೈದ್ಯರಾಗಿದ್ದ ಮೂರ್ತಿ ಡಾಕ್ಟರಲ್ಲಿ ಕಾಂಪೌಂಡರ್ ಆಗಿ ಕೆಲಸಮಯ ದುಡಿದಿದ್ದರು. ಪ್ರಸಿದ್ಧ ಮದ್ದಳೆಗಾರರಾಗಿದ್ದ ನೆಡ್ಲೆ ನರಸಿಂಹ ಭಟ್ಟರಿಂದ ಮದ್ದಳೆಯನ್ನೂ ನಯನ ಕುಮಾರರು ಕಲಿತಿದ್ದರು. ಮನೆಯಲ್ಲಿ ಆರ್ಥಿಕ ಅಡಚಣೆ. ಜೀವನ ಸಾಗಿಸಲು ಬಹಳ ಕಷ್ಟದ ದಿನಗಳು. ಹೇಳದೆಯೇ ಮನೆಬಿಟ್ಟು ತೆರಳಿದ ನಯನ ಕುಮಾರರು ಬೆಂಗಳೂರು ನಗರವನ್ನು ಸೇರಿದರು. ಬೆಂಗಳೂರು ಸುಭಾಷ್‍ನಗರದ ಮಾ| ಹಿರಣ್ಣಯ್ಯನವರ ಹಿರಣ್ಣಯ್ಯ ಮಿತ್ರ ಮಂಡಳಿ ಹಾಗೂ ಇತರ ಕೆಲವು ಕಂಪೆನಿಗಳ ನಾಟಕ ಪ್ರದರ್ಶನಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದರು. ಇವರ ಸಾಧನೆಗೆ ಮೆಚ್ಚಿದ ಮಾ| ಹಿರಣ್ಣಯ್ಯನವರು ನಯನ ಕುಮಾರ್ ಎಂದೇ ಹೆಸರನ್ನು ಬದಲಿಸಿದರು. ಎಡಕ್ಕಾನ ನಾರಾಯಣ ಭಟ್ಟರು ನಯನ ಕುಮಾರರಾದರು. ಈ ಸಂದರ್ಭದಲ್ಲಿ ‘ಸುಭದ್ರಾ ಕಲ್ಯಾಣ’ ಎಂಬ ಸಿನೆಮಾದಲ್ಲೂ ನಯನ ಕುಮಾರರು ಅಭಿನಯಿಸಿದ್ದರು.
ಬೆಂಗಳೂರಿನಿಂದ ‘ನಯನ ಕುಮಾರ’ರಾಗಿ ಊರಿಗೆ ಬಂದ ನಾರಾಯಣ ಭಟ್ಟರನ್ನು ನೆಡ್ಲೆ ನರಸಿಂಹ ಭಟ್ಟರೂ ಕಟೀಲು ಮೇಳಕ್ಕೆ ಕರೆದೊಯ್ದರು. ಒಂದು ವರ್ಷ ತಿರುಗಾಟ. ನಂತರ ವಿಟ್ಲದ ಅಧ್ಯಾಪಕ ವಿಠಲ ಶೆಟ್ಟರಿಂದ ಶಾಸ್ತ್ರೀಯ ನಾಟ್ಯವನ್ನು ಕಲಿತು ಇದನ್ನೇ ಯಕ್ಷಗಾನಕ್ಕೆ ಅಳವಡಿಸಿಕೊಂಡರು. ಬಳಿಕ ಸುಂಕದಕಟ್ಟೆ ಮೇಳದಲ್ಲಿ ಪ್ರಧಾನ ಹಾಸ್ಯಗಾರರಾಗಿ ಸೇವೆ. ನಿತ್ಯವೇಷದ ತನಕ ಮದ್ದಳೆ ಬಾರಿಸಿ ನಂತರ ತನ್ನ ಎಲ್ಲಾ ಪಾತ್ರಗಳನ್ನೂ ನಿರ್ವಹಿಸುತ್ತಿದ್ದರು. 1977ರಲ್ಲಿ ಶ್ರೀ ಧರ್ಮಸ್ಥಳ ಮೇಳಕ್ಕೆ ರಸಿಕರತ್ನ ಜೋಷಿಯವರ ಶಿಷ್ಯನಾಗಿ ಕಲಿಕೆ ಮತ್ತು ಪೆರುವಡಿ ನಾರಾಯಣ ಭಟ್ಟರಿಂದಲೂ ಮಾರ್ಗದರ್ಶನ ದೊರಕಿ ನಯನ ಕುಮಾರರು ಬೆಳೆಯತೊಡಗಿದರು. ವಿಟ್ಲ ಜೋಯಿಸರ ನಂತರ ಆ ಸ್ಥಾನವನ್ನು ಸರಿಯಾಗಿಯೇ ತುಂಬಿ ನಯನ ಕುಮಾರರು ರಂಗಸ್ಥಳದಲ್ಲಿ ಮಿಂಚಿದರು. ಶ್ರೇಷ್ಠ ಮೇಳ. ಶ್ರೇಷ್ಠ ಕಲಾವಿದರ ಒಡನಾಟ. ಕಡತೋಕಾ, ಚಿಪ್ಪಾರು ಅಲ್ಲದೇ ಮುಮ್ಮೇಳದ ಸರ್ವಶ್ರೇಷ್ಠ ಕಲಾವಿದರ ತಂಡವಾಗಿತ್ತು. ಶ್ರೀ ಧರ್ಮಸ್ಥಳ ಮೇಳ. ಹಾಗಾಗಿಯೇ ನನ್ನ ವೇಷಗಳು ರಂಜಿಸಿತು ಎಂದು ನಯನ ಕುಮಾರರು ಹೇಳುತ್ತಿದ್ದ ಮಾತುಗಳು, ಯಕ್ಷಗಾನವು ಒಬ್ಬನಿಂದಲ್ಲ. ಅದೊಂದು ಸಮಷ್ಠಿ ಕಲೆ. ತಂಡವಾಗಿ ಶ್ರಮಿಸಲೇಬೇಕು (Team Work) ಎಂಬುದನ್ನು ಸಾರುತ್ತದೆ. ಎಲ್ಲಾ ಪುರಾಣ ಪ್ರಸಂಗಗಳು. ಅಲ್ಲದೆ ಅಮೃತಸೋಮೇಶ್ವರರು, ಡಾ| ಕೆ. ಎಂ. ರಾಘವ ನಂಬಿಯಾರ್ ಮೊದಲಾದವರು ಬರೆದ ಪ್ರಸಂಗಗಳು ಧರ್ಮಸ್ಥಳ ಮೇಳದಲ್ಲಿ ರಂಜಿಸುತ್ತಿದ್ದ ಕಾಲ. ಒಂದು ರಾತ್ರಿಯಲ್ಲಿ ಎಂಟು, ಹತ್ತರಷ್ಟು ಪಾತ್ರಗಳನ್ನು ನಿರ್ವಹಿಸಿ ಕಲಾಭಿಮಾನಿಗಳನ್ನು ನಗೆಕಡಲಲ್ಲಿ ತೇಲಾಡಿಸಿದರು ನಯನ ಕುಮಾರರು. ಸತತ 27 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ತಿರುಗಾಟ. ಬಾಹುಕ, ಗುಹ, ಬೇಹಿನಚರ, ನಾರದ, ಸಂಜಯ ಮೊದಲಾದ ಪಾತ್ರಗಳನ್ನು ಮೆಚ್ಚುತ್ತಿದ್ದ ಇವರು ಧರ್ಮಸ್ಥಳ ಮೇಳದಲ್ಲಿ ಹಿಮ್ಮೇಳದ ಮತ್ತು ಮುಮ್ಮೇಳದ ಸರ್ವ ಕಲಾವಿದರಿಂದ ರಂಗಸ್ಥಳದಲ್ಲಿ ಉತ್ತೇಜನ ಸಿಕ್ಕಿದೆ ಎನ್ನುತ್ತಿದ್ದರು.
ಸಹಕಲಾವಿದರೊಂದಿಗೆ ಇವರ ಪಾತ್ರ ಗಳಿರುವ 200ಕ್ಕೂ ಮಿಕ್ಕಿ ಧ್ವನಿಸುರುಳಿಗಳು ಬಿಡುಗಡೆಗೊಂಡಿವೆ. ಆದರೂ ಕಲಾವಿದನ ಪ್ರತಿಭಾ ಪ್ರಕಟೀಕರಣಕ್ಕೆ ಇದರಿಂದ ಅಸಾಧ್ಯ ಅದಕ್ಕೆ ರಂಗಸ್ಥಳವೇ ಉತ್ತಮ ಮಾಧ್ಯಮ ಎನ್ನುತ್ತಿದ್ದರು. ಹಲವಾರು ಬಾರಿ ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲೂ ಭಾಗವಹಿ ಸಿರುತ್ತಾರೆ. ಅಲ್ಲದೆ ಅಬುದಾಭಿ, ಸೌದಿ, ಕುವೈಟ್, ದುಬಾಯಿ, ಜರ್ಮನಿ ಅಲ್ಲದೆ ಭಾರತದ ದೆಹಲಿ, ಮುಂಬಯಿ, ಬೆಂಗಳೂರು ಮೊದಲಾದ ನಗರಗಳಲ್ಲಿ ತಂಡದೊಂದಿಗೆ ಸಾಗಿ ಪ್ರದರ್ಶನಗಳಲ್ಲಿ ನಯನ ಕುಮಾರರು ಭಾಗವಹಿಸಿದ್ದಾರೆ. 1994ರಲ್ಲಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಧರ್ಮಸ್ಥಳ ಮೇಳದ ಕಲಾವಿದರಿಂದ ಪ್ರದರ್ಶಿಸಲ್ಪಟ್ಟ ‘ನರಕಾಸುರ ಮೋಕ್ಷ’ ಪ್ರದರ್ಶನದಲ್ಲೂ ಇವರು ಭಾಗವಹಿಸಿ, ರಾಷ್ಟ್ರಪತಿಗಳಿಂದ ಸಹಕಲಾವಿದರೊಂದಿಗೆ ಸನ್ಮಾನ ಸ್ವೀಕರಿಸಿರುತ್ತಾರೆ. ದೆಹಲಿಯ ಕನ್ನಡ ಸಂಘ ನಯನ ಕುಮಾರರಿಗೆ ‘ರಸಿಕರತ್ನ’ ಎಂಬ ಬಿರುದು ನೀಡಿ ಗೌರವಿಸಿತು. ಶ್ರೀ ನಯನ ಕುಮಾರರು ತಾಳಮದ್ದಳೆಯಲ್ಲೂ ಬೇಡಿಕೆಯ ಕಲಾವಿದರಾಗಿದ್ದರು. 1980ನೇ ಇಸವಿ ಪುತ್ತೂರಿನ ಸಮೀಪ ಬಲ್ನಾಡು ಎಂಬಲ್ಲಿ ಭೂಮಿಯನ್ನು ಖರೀದಿಸಿದ್ದ ಶ್ರೀಯುತರು ಉತ್ತಮ ಕೃಷಿಕರೂ ಆಗಿದ್ದರು. 2004ರಲ್ಲಿ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆ ಯವರ ಪಟ್ಟಾಭಿಷೇಕ ಮಹೋತ್ಸವದ ಸನ್ಮಾನ ಅಲ್ಲದೆ ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಸನ್ಮಾನಗಳನ್ನೂ ನಯನ ಕುಮಾರರು ಪಡೆದಿದ್ದರು. ಅನೇಕ ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಮುಂಬಯಿ ಕನ್ನಡ ಸಂಘವು ಇವರಿಗೆ ಮರಣೋತ್ತರ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಉತ್ತಮ ಕೃಷಿಕರೂ ಆದ ಇವರು ಪುತ್ತೂರು ಸಮೀಪ ಬಲ್ನಾಡಿನಲ್ಲಿ ಪತ್ನಿ ಸೀತಾ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಹಿರಿಯ ಪುತ್ರಿ ರೇಖಾ ವಿವಾಹಿತೆ. ಪುತ್ರ ಉದಯ ವೆಂಕಟೇಶ ಪುತ್ತೂರಿನಲ್ಲಿ ವಾಸ (ಹಣಕಾಸು ಸಂಸ್ಥೆ ಉದ್ಯೋಗಿ). ಕಿರಿಯ ಪುತ್ರಿ ಕವಿತಾ ವಿವಾಹಿತೆ.
ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆಯವರಿಗೆ, ಅವರ ಮನೆಯವರಿಗೆ, ಎಡನೀರು ಮಠಾಧೀಶರಿಗೆ, ಕಲಾಪೋಷಕರಾದ ಡಾ| ಟಿ. ಶ್ಯಾಮಭಟ್ಟರಿಗೆ ನಯನ ಕುಮಾರರ ಹಾಸ್ಯವೆಂದರೆ ಬಲುಪ್ರೀತಿ. ಅವರೆಲ್ಲರ ಪಾಲಿಗೆ ನಯನ ಕುಮಾರರು ಆಸ್ಥಾನ ವಿದೂಷಕನಂತೆಯೇ ಇದ್ದವರು. ಕಲಾಭಿಮಾನೀ ಪ್ರೇಕ್ಷಕರೆಲ್ಲಾ ಅವರ ಪಾತ್ರಗಳನ್ನು ನೋಡಲು ಹಾತೊರೆಯುತ್ತಿದ್ದರು. ಆದರೂ ಅವರನ್ನು ನಾವು ಕಳೆದುಕೊಳ್ಳಬೇಕಾಯಿತು. ಮಧುಮೇಹ ರೋಗದಿಂದ ಬಳಲುತ್ತಿದ್ದ ಅವರು ಅನಿವಾರ್ಯವಾಗಿ ಮೇಳದ ತಿರುಗಾಟವನ್ನು ನಿಲ್ಲಿಸಿದರು. 2005ನೇ ಇಸವಿ ನವಂಬರ್ 8 ತಾನು ನಗದೆ ಕಲಾಭಿಮಾನಿಗಳನ್ನು ನಗಿಸಿದ ಹಾಸ್ಯರತ್ನ ನಯನ ಕುಮಾರರು ಇಹಲೋಕವನ್ನು ತ್ಯಜಿಸಿ ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡರು. ಅವಿರತ ಸಾಧನೆಯಿಂದ ರಂಗದಲ್ಲಿ ಮಿಂಚಿ ಬೆಳಗಿದ ಯಕ್ಷಲೋಕದ ತಾರೆಯೊಂದು ನಮ್ಮಿಂದ ಮರೆಯಾಯಿತು. ನಯನ ಕುಮಾರ್... ಇನ್ನು ನೆನಪು ಮಾತ್ರ.
- ರವಿಶಂಕರ್ ವಳಕ್ಕುಂಜ
ನಯನ ಕುಮಾರ್
(ಫೋಟೋ : ನಾ. ಕಾರಂತ ಪೆರಾಜೆಯವರ ಸಂಗ್ರಹದಿಂದ)

Naanu kanda aparupada hasya kalaavidaru sri nayan Kumar...avara nenapu indigu mareyeda ulidide..
ReplyDeleteಸಂಗ್ರಹಯೋಗ್ಯ ಬರಹಗಳು ಪ್ರತಿಯೊಂದೂ.. ಮುಂದೊಂದು ದಿನ ಕಲಾವಿದರ ಕುರಿತು ಇರುವ ಉಪಯುಕ್ತ documentary ಸಾಲಿಗೆ ಸೇರ್ಪಡೆಯಾಗುತ್ತೆ
ReplyDelete