ಉದಯೋನ್ಮುಖ ಬಣ್ಣದ ವೇಷಧಾರಿ, ಸವ್ಯಸಾಚಿ ಹರಿನಾರಾಯಣ ಭಟ್ ಎಡನೀರು
ಯಕ್ಷಗಾನದಲ್ಲಿ ಬಣ್ಣದ ವೇಷಗಳು ತಮ್ಮ ಅಟ್ಟಹಾಸ, ಮುಖವರ್ಣಿಕೆ, ಕುಣಿತ, ತೆರೆಕುಣಿತ, ನಡೆ ಇವುಗಳಿಂದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿವೆ. ಒಡ್ಡೋಲಗ ವೈಭವವನ್ನು ನೋಡುವುದೆಂದರೆ ಪ್ರೇಕ್ಷಕರ ಕಣ್ಣುಗಳಿಗೆ, ಕಿವಿಗಳಿಗೆ ಅದೊಂದು ಹಬ್ಬವೇ ಹೌದು. ಪ್ರಸಂಗದ ಕೊನೆಯಲ್ಲಿ ಯಾ ಬೆಳಗಿನ ಹೊತ್ತು ಬಣ್ಣದ ವೇಷಗಳು ರಂಗವೇರಿದರೆ ನೋಟಕರ ನಿದ್ದೆಯನ್ನು ಬಡಿದೆಬ್ಬಿಸಿ ಅವರನ್ನು ರೋಮಾಂಚನಗೊಳಿಸುತ್ತವೆ. ಆದರೂ, ಈಗೀಗ ಈ ವಿಭಾಗವು ಅವಜ್ಞೆಗೊಳಗಾಗುತ್ತಿದೆಯೇ? ಎಂಬ ಸಂಶಯವು ಕಲಾಭಿಮಾನಿಗಳಿಗೆ ಬಾರದಿರದು. ಅದಕ್ಕೆ ಹಲವು ಕಾರಣಗಳೂ ಇರಬಹುದು. ಹಾಗಾಗಬಾರದು. ಬಣ್ಣದ ವೇಷಗಳ ನಿಜಸೌಂದರ್ಯವನ್ನು ಸದಾ ಆಸ್ವಾದಿಸುವ ಅವಕಾಶಗಳು ಕಲಾಭಿಮಾನಿಗಳಿಗೆ ಸಿಗಲೇಬೇಕು. ಕಲಾವಿದರೂ, ಪ್ರೇಕ್ಷಕರೂ ಯಕ್ಷಗಾನಕ್ಕೆ ಬಣ್ಣದ ವೇಷಗಳ ಅನಿವಾರ್ಯತೆ ಮತ್ತು ಮಹತ್ತ್ವಗಳನ್ನು ಅರಿತು ಸ್ಪಂದಿಸಬೇಕಾದುದು ಯೋಚಿಸಬೇಕಾದ ವಿಚಾರ. ಹಿರಿಯ ಕಲಾವಿದರನೇಕರು ರಂಗವೇರಿ ಅಬ್ಬರಿಸಿ ಗಂಡುಕಲೆಯ ‘ಬಣ್ಣ’ ವಿಭಾಗಕ್ಕೆ ನ್ಯಾಯವನ್ನೂ ಶ್ರೀಮಂತಿಕೆಯನ್ನೂ ನೀಡಿದ್ದರು. ಹಳೆಯ ತಲೆಮಾರಿನ ಹಲವು ಕಲಾವಿದರನ್ನು ನಾವು ನೋಡಿಲ್ಲ. ಆದರೆ ಹೆಸರನ್ನು ಕೇಳಿದ್ದೇವೆ. ಯಾಕೆಂದರೆ ಅವರು ಕೀರ್ತಿವಂತರಾಗಿಯೇ ಇಹದ ವ್ಯವಹಾರವನ್ನು ಮುಗಿಸಿದ್ದರು. ಇನ್ನು ಕೆಲವು ಹಿರಿಯ ಕಲಾವಿದರ ವೇಷಗಳನ್ನು ನೋಡಿದ ಅನುಭವವು ಕಲಾಭಿಮಾನಿಗಳಿಗಿರಬಹುದು. ಬಣ್ಣದ ಮಹಾಲಿಂಗ, ಚಂದ್ರಗಿರಿ ಅಂಬು, ಬಣ್ಣದ ಕುಟ್ಯಪ್ಪು, ಕಾಟುಕುಕ್ಕೆ ಕುಂಞರಾಮ ಮಣಿಯಾಣಿ, ಪಕಳಕುಂಜ ಕೃಷ್ಣ ನಾಯ್ಕ, ತ್ರಿವಿಕ್ರಮ ಶೆಣೈ, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಸಂಜೀವ ಚೌಟರು ಮೊದಲಾದವರ ಸಾಧನೆ, ಕೊಡುಗೆಗಳು ಪ್ರಶಂಸನೀಯವಾದುದು. ಅವರು ಹಾಕಿಕೊಟ್ಟ ದಾರಿ, ರೀತಿಗಳು ಖಂಡಿತಾ ಅಳಿಯದೆ ಉಳಿದುಕೊಂಡಿದೆ. ಹಾಗಾಗಿ ಯಕ್ಷಗಾನದಲ್ಲಿ ‘ಬಣ್ಣ’ ಬಡವಾಗದು ಖಂಡಿತ. ಇಂದು ಉದಯೋನ್ಮುಖರನೇಕರು ಬಣ್ಣದ ವೇಷಧಾರಿಗಳಾಗಿ ಕಲಾಸೇವೆ ಮಾಡುತ್ತಿರುವುದನ್ನು ನಾವು ಗಮನಿಸಬಹುದು. ಅವರಲ್ಲೊಬ್ಬರು ಶ್ರೀ ಹರಿನಾರಾಯಣ ಭಟ್ ಎಡನೀರು.
ಶ್ರೀ ಹರಿನಾರಾಯಣ ಭಟ್ಟರು ಕಾಸರಗೋಡು ಜಿಲ್ಲೆಯ ಪಾಡಿ ಗ್ರಾಮದ ಪಟ್ಟಮ್ಮಾರಮೂಲೆ ಎಂಬಲ್ಲಿ 1974ನೇ ಇಸವಿ ಆಗಸ್ಟ್ 18ರಂದು ಶ್ರೀ ಡಿ. ಕೃಷ್ಣ ಭಟ್ ಮತ್ತು ಇಂದಿರಾ ದಂಪತಿಗಳಿಗೆ ಮಗನಾಗಿ ಜನಿಸಿದರು. ಇವರ ಮೂಲಮನೆ (ತರವಾಡು) ಬಂಟ್ವಾಳ ತಾಲೂಕು ಮುರುವ ಗ್ರಾಮದ ದೈತೋಟ. ಹರಿನಾರಾಯಣ ಭಟ್ಟರು ಚಿಕ್ಕವರಿದ್ದಾಗ ಇವರ ತಂದೆ ತಾಯಿಯರು ಚೊಕ್ಕಾಡಿ ಸಮೀಪ ವಾಸ್ತವ್ಯವಿದ್ದರು. ಎಸ್.ಎಸ್.ಎಲ್.ಸಿ. ವರೆಗೆ ಕುಕ್ಕುಜಡ್ಕ ಪ್ರೌಢಶಾಲೆಯಲ್ಲಿ ಓದಿ, ಕಾವು ಸಮೀಪದ ಪೆರ್ನಾಜೆ ಸೀತಾರಾಘವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದರು. ಇವರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ. ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನ ಗಳಿಗೆ ಇವರು ಖಾಯಂ ಪ್ರೇಕ್ಷಕ. ತಾನೂ ಕಲಾವಿದನಾಗಬೇಕೆಂಬ ಆಸೆ ಸಹಜವಾಗಿ ಮೂಡಿತು. ಬಾಲ್ಯದಲ್ಲಿ ಬಡತನವೂ ಇತ್ತು. 1993ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರವನ್ನು ಸೇರಿಕೊಂಡರು. ಪ್ರಖ್ಯಾತ ಸ್ತ್ರೀಪಾತ್ರಧಾರಿ ಶ್ರೀ ಕೋಳ್ಯೂರು ರಾಮಚಂದ್ರ ರಾವ್ ಅವರು ಅಲ್ಲಿ ನಾಟ್ಯಗುರುಗಳಾಗಿದ್ದರು. ಅವರಿಂದ ನಾಟ್ಯ ಕಲಿತರು. ಕೇಂದ್ರದಲ್ಲಿ ಗುರುಗಳಾಗಿದ್ದ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ದಂಪತಿಗಳಿಂದ ಭಾಗವತಿಕೆಯನ್ನೂ ಅಭ್ಯಸಿಸಿದರು. ಖ್ಯಾತ ಕಲಾವಿದ ಪುತ್ತೂರು ನಾರಾಯಣ ಹೆಗ್ಡೆಯವರ ಪುತ್ರ ಶ್ರೀ ಗಿರೀಶ್ ಹೆಗ್ಡೆಯವರು ಕೇಂದ್ರದಲ್ಲಿ ಹರಿನಾರಾಯಣ ಭಟ್ಟರ ಸಹಪಾಠಿ. ಗಿರೀಶ ಹೆಗ್ಡೆಯವರು ಭಾಗವತಿಕೆ ಅಲ್ಲದೆ ವೇಷವನ್ನೂ ಮಾಡುತ್ತಾರೆ. ಪ್ರಸ್ತುತ ಧರ್ಮಸ್ಥಳ ಮೇಳದ ಮೆನೇಜರ್. ಕೇಂದ್ರದ ವಿದ್ಯಾರ್ಥಿಯಾಗಿ ಹರಿನಾರಾಯಣ ಭಟ್ಟರು ದೇವೇಂದ್ರನಾಗಿ ಮೊದಲು ರಂಗಪ್ರವೇಶ ಮಾಡಿದ್ದರು. ಅಲ್ಲದೆ ಶೂರ್ಪನಖಿ ಪಾತ್ರವನ್ನೂ ಮಾಡಿದ್ದರು. ಕೇಂದ್ರದ ವಿದ್ಯಾರ್ಥಿಗಳ ಪ್ರದರ್ಶನಕ್ಕೆ ಭಾಗವತಿಕೆಯನ್ನೂ ಮಾಡಿದ್ದರು.
ಶ್ರೀ ಹರಿನಾರಾಯಣ ಭಟ್ಟರು 1993ರಲ್ಲಿ ಕಲ್ಲಾಡಿ ವಿಠಲ ಶೆಟ್ಟರ ಯಜಮಾನಿಕೆಯ ಕಟೀಲು ಮೇಳದಲ್ಲಿ ತನ್ನ ತಿರುಗಾಟ ಆರಂಭಿಸಿದರು. 1ನೇ ಮೇಳ ಪೂಂಜರು, ಪದ್ಯಾಣ ಗೋವಿಂದ ಭಟ್, ಕೋಳ್ಯೂರು, ಸುಣ್ಣಂಬಳ, ಸುಬ್ರಾಯ ಹೊಳ್ಳ, ದಿನಕರ ಗೋಖಲೆ, ಶಂಭಯ್ಯ ಕಂಜರ್ಪಣೆ, ರಮೇಶ್ ರೈ ಬೆಳ್ಳಾರೆ ಮೊದಲಾದ ಕಲಾವಿದರ ಒಡನಾಟ ಸಿಕ್ಕಿತ್ತು. ಕಲಾವಿದನಾಗಿ ಇವರ ಬೆಳವಣಿಗೆಗೆ ಇದು ಅತ್ಯಂತ ಸಹಕಾರಿಯಾಗಿತ್ತು. ಪೂರ್ವರಂಗದಲ್ಲಿ ಕೋಡಂಗಿ, ಬಾಲಗೋಪಾಲರು ಹೀಗೆ ಹಂತ ಹಂತವಾಗಿ ಬೆಳೆದು ಬಂದವರು. ಪ್ರಸಂಗದಲ್ಲಿ ಸಣ್ಣಪುಟ್ಟ ವೇಷಗಳನ್ನು ಮಾಡುತ್ತಾ ನಿದ್ದೆ ಮಾಡದೆ ಆಟವನ್ನು ಶ್ರದ್ಧೆಯಿಂದ ನೋಡುತ್ತಾ ಕಲಿತರು. ಕಿರೀಟ, ಬಣ್ಣದ ವೇಷಗಳನ್ನೂ ಮಾಡಲಾರಂಭಿಸಿದರು. ಔದಾಸೀನ್ಯವನ್ನು ತೋರದೆ ಕಸುಬು ಮಾಡುತ್ತಾ ಕಲಿತರು. ಕಲಿಯುತ್ತಾ ಕಸುಬು ಮಾಡಿದರು. ಅದರ ಫಲವನ್ನು ಇಂದು ಅನುಭವಿಸುತ್ತಿದ್ದಾರೆ. ಕೆಲವೇ ತಿರುಗಾಟಗಳಲ್ಲಿ ಮೇಳದ ಮುಖ್ಯ ಬಣ್ಣದ ವೇಷಧಾರಿ ಸ್ಥಾನ ಪ್ರತಿಭೆಯ ಆಧಾರದಲ್ಲೇ ಸಿಕ್ಕಿತ್ತು. ಹಿಮ್ಮೇಳವಾಗಲೀ, ಮುಮ್ಮೇಳವಾಗಲೀ ಕಲಾವಿದರು ಅರ್ಹತೆಯನ್ನು ಹೊಂದಿ ಸ್ಥಾನವೇರಿದರೆ ಚಂದ.
ಪ್ರತಿಭಾವಂತನಲ್ಲದಿದ್ದರೂ ಅನಿವಾರ್ಯಕ್ಕೆ ಕೆಲವೊಮ್ಮೆ ಸ್ಥಾನವು ಕೊಡಬೇಕಾಗುತ್ತದೆ. ಕಲಾವಿದರಿಗೆ ಮಾತ್ರ ಅನ್ವಯವಲ್ಲ ಈ ಮಾತು. ಅನಿವಾರ್ಯವಾಗಿ ನಾನು ಈ ಸ್ಥಾನದಲ್ಲಿ ಕುಳಿತಿದ್ದೇನೆ ಎಂಬ ಪ್ರಜ್ಞೆ ಪಡೆದುಕೊಂಡವರಿಗೆ ಬೇಕೇಬೇಕು. ಮಾನವನು ಸ್ವಸ್ವರೂಪ ಜ್ಞಾನವನ್ನು ಹೊಂದಿರಲೇಬೇಕು. ಶ್ರೀ ಹರಿನಾರಾಯಣ ಭಟ್ಟರು ಅಗತ್ಯ ಬಿದ್ದರೆ ಭಾಗವತಿಕೆಯನ್ನೂ ಮಾಡುತ್ತಾರೆ. ಸವ್ಯಸಾಚಿ ಕಲಾವಿದ. ಮೇಳಕ್ಕೆ, ಸಂಘಟಕರಿಗೆ ಆಪದ್ಬಾಂಧವ. ಬಣ್ಣದ ವೇಷಧಾರಿಯಾದರೂ ಪೀಠಿಕೆ ವೇಷ ಇನ್ನಿತರ ವೇಷಗಳನ್ನೂ ಮಾಡಬಲ್ಲರು. ಕಟೀಲು ಮೇಳದಲ್ಲಿ ಕಳೆದ 26 ವರ್ಷಗಳಿಂದ ತಿರುಗಾಟ ನಡೆಸುತ್ತಿದ್ದಾರೆ. ಶುಂಭ, ನಿಶುಂಭ, ರಾವಣ, ತಾರಕಾಸುರ, ಶೂರಪದ್ಮ, ಶತ್ರುಪ್ರಸೂಧನ, ಕಿರಾತ, ಭೀಮ, ದುಶ್ಶಾಸನ, ಮೈರಾವಣ, ನರಕಾಸುರ, ವೀರವರ್ಮ, ಹೆಣ್ಣು ಬಣ್ಣಗಳು, ಮಹಿಷಾಸುರ, ವೀರಭದ್ರ, ಯಮ, ಬಲಿ ಮೊದಲಾದ ಪಾತ್ರಗಳನ್ನು ಮಾಡಿ ಹೆಸರನ್ನು ಗಳಿಸಿದ್ದಾರೆ. ಕಲಾಬದುಕಿನಲ್ಲಿ ತೃಪ್ತರು.
ಸಾಂಸಾರಿಕವಾಗಿಯೂ ತೃಪ್ತರು. 2010ರಲ್ಲಿ ವಿವಾಹ. ಬಾಳಸಂಗಾತಿ ಅರುಣಕುಮಾರಿ. ಹರಿನಾರಾಯಣ ಭಟ್ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಅನುಶ್ರೀಗೆ 3 ವರ್ಷ ಪ್ರಾಯ. ಪುತ್ರ ಅರವಿಂದಕೃಷ್ಣ. ಹಿರಿಯ ಕಲಾವಿದರಿಗೆ ಇವರು ಹರಿ. ಕಿರಿಯ ಕಲಾವಿದರಿಗೆ ಪ್ರೀತಿಯ ಹರಿಯಣ್ಣ. ಕಲಾಬದುಕು ಸುಖಮಯವಾಗಲಿ. ಸಂತಸದಿಂದ ಕೂಡಿರಲಿ. ಇನ್ನಷ್ಟು ಸಾಧನೆಗಳಿಗಾಗಿ ಶ್ರೀ ದೇವರ ಅನುಗ್ರಹವಿರಲಿ. ು
- ರವಿಶಂಕರ ವಳಕ್ಕುಂಜ
ಹರಿನಾರಾಯಣ ಭಟ್ ಎಡನೀರು

Comments
Post a Comment