ಬಡಗಿನ ಬಾಲ ಪ್ರತಿಭೆ - ಮಾ| ವರುಣ್ ಟಿ. ಹೆಗಡೆ
ಭಾರತೀಯ ಕಲೆಗಳೆಲ್ಲಾ ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ, ಪ್ರಸಾರ ಮಾಡುತ್ತವೆ. ಶ್ರೇಷ್ಠ ಸಂದೇಶಗಳನ್ನೂ ವಾಹಿಸುತ್ತವೆ. ಧರ್ಮಪ್ರಸಾರವನ್ನು ಮಾಡುವುದಕ್ಕೆ ಮಾಧ್ಯಮವಾಗಿವೆ. ಆದುದರಿಂದಲೇ ಅವುಗಳೆಲ್ಲಾ ನಮ್ಮ ಹೆಮ್ಮೆಯ ಸಂಕೇತ ಎಂದು ಅಭಿಮಾನದಿಂದ ಹೇಳುತ್ತೇವೆ. ಯಕ್ಷಗಾನವಂತೂ ಗಂಡುಕಲೆಯೆಂದೇ ಪ್ರಸಿದ್ಧವಾಗಿದೆ. ವೃತ್ತಿ ಕಲಾವಿದರು, ಹವ್ಯಾಸೀ ಕಲಾವಿದರ ಜೊತೆಯಲ್ಲಿ ಶಾಲಾ ವಿದ್ಯಾರ್ಥಿಗಳೂ ರಂಗವೇರಿ ಮಿಂಚುತ್ತಿದ್ದಾರೆ. ಈ ಮೇರುಕಲೆಯಲ್ಲಿ ತೆಂಕು, ಬಡಗು ಅಲ್ಲದೆ ಬಡಾ ಬಡಗು, ನಡುತಿಟ್ಟು ಎಂಬ ಪ್ರಭೇದಗಳನ್ನು ಗುರುತಿಸುವುದೂ ಇದೆ. ಇರಲಿ. ಅದು ರಂಗಕ್ಕೆ, ಸ್ವರೂಪಕ್ಕೆ ಸಂಬಂಧಿಸಿದ ವಿಚಾರ. ಆದರೆ ಪ್ರದರ್ಶನದ ಸೌಂದರ್ಯವನ್ನು ಸವಿಯುವಲ್ಲಿ ಕಲಾಭಿಮಾನಿಗಳಿಗೆ ಆ ವಿಚಾರ ತೊಡಕಾಗುವುದಿಲ್ಲ. ನಮಗೆ ಬೇಕಾದುದು ಸಮಗ್ರವಾದ ಯಕ್ಷಗಾನ. ಮನಕೊಪ್ಪುವ ಅದರ ನಿಜ ಸೌಂದರ್ಯ. ಇಂದು ಅನೇಕ ಶಾಲಾ ವಿದ್ಯಾರ್ಥಿಗಳು ಕಲಿತು ಹಿಮ್ಮೇಳ, ಮುಮ್ಮೇಳದ ಕಲಾವಿದರಾಗಿ ರಂಗವೇರುತ್ತಿದ್ದಾರೆ. ಇದು ಸಂತೋಷ ಪಡಬೇಕಾದ ವಿಚಾರ. ಅವರನ್ನು ಪ್ರೋತ್ಸಾಹಿಸಬೇಕಾದುದು ನಮಗೆ ಕರ್ತವ್ಯ. ಕಲಾಭಿಮಾನಿಗಳು ನೀಡುವ ಪ್ರೋತ್ಸಾಹ ಹಾರೈಕೆಗಳು ಅವರನ್ನು ಭವಿಷ್ಯದ ಕಲಾವಿದರನ್ನಾಗಿ ರೂಪಿಸಲಿ. ಆಗ ಯಕ್ಷಗಾನವು ಶ್ರೀಮಂತವಾಗುತ್ತದೆ. ನಮಗೂ ಆಗಬೇಕಾದುದು ಇದೇ ತಾನೇ? ಇಂದು ಕಲಾಸೇವೆಯನ್ನು ಮಾಡುತ್ತಿರುವ ಅನೇಕ ಬಾಲ ಕಲಾವಿದರಲ್ಲಿ ಮಾ| ವರುಣ್ ಟಿ. ಹೆಗಡೆಯೂ ಒಬ್ಬ.
ಮಾ| ವರುಣ್ ಟಿ. ಹೆಗಡೆ ಎಂಬ ಬಾಲ ಕಲಾವಿದನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ಸಮೀಪದ ತೂಕದಬೈಲು ಕಲಾವನ ಮನೆಯಲ್ಲಿ ಶ್ರೀ ತಿರುಮಲೇಶ್ವರ ಹೆಗಡೆ ಮತ್ತು ಸುಚೇತಾ ಟಿ. ಹೆಗಡೆ ದಂಪತಿಗಳಿಗೆ ಮಗನಾಗಿ 2004ನೇ ಇಸವಿ ಮಾರ್ಚ್ 27 ರಂದು ಜನಿಸಿದನು. ಪ್ರಸ್ತುತ ಚಂದನ ವಿದ್ಯಾಲಯ ಶಿರಸಿಯಲ್ಲಿ (ನರೇಬೈಲು) 9ನೆಯ ತರಗತಿಯಲ್ಲಿ ಓದುತ್ತಿದ್ದಾನೆ. ಈತನ ಅಜ್ಜ ಶ್ರೀ ರಾಮಚಂದ್ರ ಹೆಗಡೆಯವರು ಹವ್ಯಾಸಿ ಕಲಾವಿದರು. ಶ್ರೀ ರಾಜರಾಜೇಶ್ವರೀ ಯಕ್ಷಗಾನ ಸಂಘದ ಉಪಾಧ್ಯಕ್ಷರೂ ಆಗಿದ್ದಾರೆ. ಬಡಗಿನ ಖ್ಯಾತ ಹಾಸ್ಯಗಾರರಾದ ಚಪ್ಪರಮನೆ ಶ್ರೀಧರ ಹೆಗಡೆಯವರು ಬಂಧುಗಳು. (ವರುಣನ ತಂದೆ ತಿರುಮಲೇಶ್ವರ ಹೆಗಡೆಯವರ ಅತ್ತೆಯ ಮಗ.) ವರುಣ್ ಅಜ್ಜ ಮತ್ತು ಅಪ್ಪನ ಜೊತೆ ಹೋಗಿ ಶ್ರದ್ಧೆಯಿಂದ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದ. ಚಿಕ್ಕ ಮಗುವಾಗಿದ್ದಾಗ ವರುಣನನ್ನು ತೊಟ್ಟಿಲಲ್ಲಿರಿಸಿ ಸುಚೇತಾ ಹೆಗಡೆಯವರು ಯಕ್ಷಗಾನದ ಹಾಡುಗಳನ್ನು ಹೇಳುತ್ತಾ ತೂಗುತ್ತಿದ್ದರಂತೆ. ಹಾಗಾಗಿಯೇ ಮಗನಿಗೆ ಯಕ್ಷಗಾನದಲ್ಲಿ ಆಸಕ್ತಿ ಹುಟ್ಟಿಕೊಂಡಿರಬೇಕೆಂಬುದು ಅವರ ಅನಿಸಿಕೆ. ಮನೆಯಲ್ಲಿ ಮಗನಿಂದಲೇ ಯಕ್ಷಗಾನದ ಹೆಜ್ಜೆಗಳನ್ನು ಕಲಿಯುತ್ತಾರಂತೆ. ವರುಣ್ ನನಗೆ ಮಗನೂ ಹೌದು. ಗುರುವೂ ಹೌದು ಎಂದು ಅವರು ಹೇಳುತ್ತಾರೆ. ಉಡುಪಿಯ ಶ್ರೀ ಸತೀಶ ಉಪಾಧ್ಯಾಯರು ನಡೆಸುತ್ತಿದ್ದ ತರಬೇತಿ ಶಿಬಿರದಲ್ಲಿ ನಾಟ್ಯ ಕಲಿತ ಬಾಲಕ ವರುಣನು ಪ್ರಸ್ತುತ ಎರಡು ವರುಷಗಳಿಂದ ಭಾಗವತರಾದ ಶ್ರೀ ಅನಂತ ಹೆಗಡೆ ದಂತಳಿಕೆ ಮತ್ತು ಮಲವಳ್ಳಿ ಸದಾಶಿವ ಭಟ್ಟರಿಂದಲೂ ಅಭ್ಯಾಸಮಾಡುತ್ತಿದ್ದಾನೆ. ಬಾಲಗೋಪಾಲನಾಗಿ ಮೊಟ್ಟಮೊದಲು ಮಂಚಿಕೇರಿಯಲ್ಲಿ ರಂಗಪ್ರವೇಶ ಮಾಡಿ ಎರಡನೇ ಪ್ರಯೋಗದಲ್ಲಿ ಚಕ್ರವ್ಯೂಹದ ಅಭಿಮನ್ಯುವಾಗಿ ಅಭಿನಯಿಸಿದನು. ಮಕ್ಕಳ ಯಕ್ಷಗಾನ ಪ್ರದರ್ಶನದಲ್ಲಿ ಕುಶಲವರ ಕಾಳಗ ಪ್ರಸಂಗದ ಚಂದ್ರಕೇತ, ಭೌಮಾಸುರ ಪ್ರಸಂಗದಲ್ಲಿ ವಾಯು, ಪಾಂಚಜನ್ಯ ಪ್ರಸಂಗದ ಯಮ, ಮಹಿಷಮರ್ದಿನಿ ಪ್ರಸಂಗದಲ್ಲಿ ಮಧು, ಬ್ರಹ್ಮಕಪಾಲ ಪ್ರಸಂಗದ ಮನ್ಮಥ ಮೊದಲಾದ ಪಾತ್ರಗಳನ್ನೂ ನಿರ್ವಹಿಸಿರುತ್ತಾನೆ. ವೃತ್ತಿ ಕಲಾವಿದರ ಜೊತೆ ವೇಷಗಳನ್ನು ಮಾಡಿ ಅವರ ಮೆಚ್ಚುಗೆಗೂ ಪಾತ್ರನಾಗಿದ್ದಾನೆ. ಉದಯ ಕಡಬಾಳರ ಸುಧನ್ವ ಹಾಗೂ ಮಂಕಿ ಈಶ್ವರ ನಾಯ್ಕರ ಅರ್ಜುನನ ಜೊತೆ ವೃಷಕೇತು ಪಾತ್ರವನ್ನು ಮಾಡಿದ್ದ. ಭೀಷ್ಮ ಪರ್ವದ ಅಭಿಮನ್ಯು ಪಾತ್ರ ಮಾಡಿದ ದಿನ ಥಂಡಿಮನೆ ಶ್ರೀಪಾದ ಭಟ್ಟರು ಭೀಷ್ಮನ ಪಾತ್ರವನ್ನು ನಿರ್ವಹಿಸಿದ್ದರು. ಸತ್ಯ ಹರಿಶ್ಚಂದ್ರ ಪ್ರಸಂಗದಲ್ಲಿ ಕೊಂಡದಕುಳಿಯವರ ಹರಿಶ್ಚಂದ್ರ, ನೀಲ್ಕೋಡು ಅವರ ಚಂದ್ರಮತಿ, ಚಪ್ಪರೆಮನೆಯವರ ನಕ್ಷತ್ರಿಕ. ಇವರ ಜೊತೆ ವರುಣ್ ಆ ದಿನ ಲೋಹಿತಾಶ್ವನಾಗಿ ಅಭಿನಯಿಸಿದ್ದನು. ಇತ್ತೀಚಿಗೆ ಯಲ್ಲಾಪುರದಲ್ಲಿ ನಡೆದ ಕೃಷ್ಣಾರ್ಜುನ ಕಾಳಗದ ಅಭಿಮನ್ಯುವಾಗಿ ಕಾಣಿಸಿಕೊಂಡಿದ್ದನು. ಜನ್ಸಾಲೆ ಶ್ರೀ ರಾಘವೇಂದ್ರ ಆಚಾರ್ಯರ ಭಾಗವತಿಕೆಯಲ್ಲಿ ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅರ್ಜುನನಾಗಿಯೂ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ ಸುಭದ್ರೆಯಾಗಿಯೂ ಅಂದು ಅಭಿನಯಿಸಿದ್ದರು. ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ನಡೆದ ಪ್ರದರ್ಶನ ವೀರವರ್ಮ ವಿಜಯ ಪ್ರಸಂಗದಲ್ಲಿ ಯಮನಾಗಿ ವೇಷ ಮಾಡಿದಾಗ ಅಂದು ವರುಣನ ತಾಯಿ ಸುಚೇತಾ ಹೆಗಡೆಯವರು ಅರ್ಜುನನ ಪಾತ್ರವನ್ನು ಮಾಡಿದ್ದರು. ಕೊಳಗಿ ಕೇಶವ ಹೆಗಡೆ, ಹಿಲ್ಲೂರು ಶ್ರೀ ರಾಮಕೃಷ್ಣ ಹೆಗಡೆ, ಜನ್ಸಾಲೆ ರಾಘವೇಂದ್ರ ಆಚಾರ್ಯ, ತಿಮ್ಮಪ್ಪ ಹೆಗಡೆ ಬಾಳೆಹದ್ದ, ಅನಂತ ಹೆಗಡೆ ದಂತಳಿಕೆ, ಗಜಾನನ ಭಟ್ ತುಳಗೇರಿ ಮೊದಲಾದ ಭಾಗವತರ ಜೊತೆ, ಹಿರಿಯ ಅನೇಕ ವೇಷಧಾರಿಗಳ ಜೊತೆ ಬಾಲಕನಾದ ನನಗೆ ವೇದಿಕೆಯನ್ನು ಹಂಚಿಕೊಳ್ಳಲು ಸಿಕ್ಕಿದ್ದು ಭಾಗ್ಯ. ಕಿರಿಯವನಾದರೂ ಅವರೆಲ್ಲಾ ನನ್ನನ್ನು ಆಶೀರ್ವದಿಸಿ ಹುರಿದುಂಬಿಸಿದರು ಎಂದು ಹೇಳುವ ಮೂಲಕ ವರುಣ್ ಕೃತಜ್ಞತೆಯನ್ನು ಸಲ್ಲಿಸುತ್ತಾನೆ.
ತಾಳಮದ್ದಳೆ ಅರ್ಥಧಾರಿಗಳೂ ವೇಷಧಾರಿಗಳೂ ಆದ ಸಿದ್ಧಾಪುರ ಮಂತಿಗೆ ಮನೆಯ ಕಮಲಾಕರ ಹೆಗ್ಡೆಯವರೂ, ಚಂದನ ಶಾಲೆಯ ಅಧ್ಯಾಪಕರ ಪ್ರೋತ್ಸಾಹವೂ ಈತನಿಗಿದೆ. ಶಾಲೆಯ ಛದ್ಮವೇಷ ಸ್ಪರ್ಧೆಯಲ್ಲಿ ಪ್ರತಿವರುಷವೂ ಪ್ರಥಮ ಬಹುಮಾನ, ಪ್ರತಿಭಾ ಕಾರಂಜಿ, ನಾಟಕಗಳಲ್ಲೂ ಭಾಗವಹಿಸುತ್ತಿದ್ದಾನೆ. ಶಾಲಾ ಪ್ರದರ್ಶನಗಳ ಜಾಂಬವತೀ ಕಲ್ಯಾಣದ ಪ್ರಸೇನನಾಗಿಯೂ ರುಕ್ಮಿಣೀ ಕಲ್ಯಾಣದ ಕೃತವರ್ಮನಾಗಿಯೂ ಪಾತ್ರಗಳನ್ನೂ ನಿರ್ವಹಿಸಿದ್ದಾನೆ. ಬಾಸವತೀ ಕಲ್ಯಾಣ ಪ್ರಸಂಗದ ಬಣ್ಣದ ವೇಷ ಕ್ರೂರಮತಿ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾನೆ. ಪಾಠ ಹಾಗೂ ಪಾಠೇತರ ಚಟುವಟಿಕೆಗಳಲ್ಲೂ ಚುರುಕಾಗಿರುವ ವರುಣನನ್ನು ಅಜ್ಜ, ತಂದೆ ತಾಯಿಯರು ಪ್ರೋತ್ಸಾಹ ಕೊಟ್ಟು ಬೆಳೆಸುತ್ತಿದ್ದಾರೆ. ವರುಣನಿಗೆ ಉಜ್ವಲವಾದ ಭವಿಷ್ಯ ಸಿದ್ಧಿಸಲಿ. ಉತ್ತಮ ಕಲಾವಿದನಾಗಿ ಕಾಣಿಸಿಕೊಳ್ಳಲಿ. ಪ್ರೌಢ ಉನ್ನತ ವ್ಯಾಸಂಗಗಳಲ್ಲಿ ಅತ್ಯುತ್ತಮ ಅಂಕಗಳು ಲಭಿಸಲಿ. ಭಾರತೀಯ ಸಂಸ್ಕೃತಿಯ ಸಂಕೇತವಾದ, ದೇಶ ವಿದೇಶಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಕಲೆ ಯಕ್ಷಗಾನ. ಅದನ್ನು ಉಳಿಸಬೇಕು. ಬೆಳೆಸಬೇಕು. ನಾನು ಸ್ವಲ್ಪ ಮಾತ್ರ ಕಲಿತಿದ್ದೇನೆ. ಇನ್ನೂ ತುಂಬಾ ಕಲಿಯಬೇಕು. ದೊಡ್ಡವನಾದ ಮೇಲೆ ನಾನು ಕಲಿತದ್ದನ್ನು ಕಲಿಸಬೇಕೆಂಬ ಆಸೆಯಿದೆ ಎಂದು ಮುಗ್ಧತೆಯಿಂದ ಹೇಳುವ ವರುಣ್ ಎಂಬ ಬಾಲಕನಿಗೆ ಶುಭಾಶಯಗಳು. ಕಲಾಮಾತೆಯ ಅನುಗ್ರಹವು ಸದಾ ಇರಲಿ. ು
ಲೇಖನ : ರವಿಶಂಕರ್ ವಳಕ್ಕುಂಜ
ಮಾ| ವರುಣ್ ಟಿ. ಹೆಗಡೆ

Comments
Post a Comment