ಬಹು ಬೇಡಿಕೆಯ ಪುಂಡುವೇಷಧಾರಿ, ಸಿಡಿಲಮರಿ ಖ್ಯಾತಿಯ ಶ್ರೀ ದಿವಾಕರ ರೈ ಸಂಪಾಜೆ
‘ಯಕ್ಷಗಾನದಲ್ಲಿ ಪುಂಡುವೇಷಗಳು’ ಎಂಬ ಮಾತು ಬಂದಾಗ, ಅಭಿಮನ್ಯು, ಬಭ್ರುವಾಹನ, ಭಾರ್ಗವ, ಅಶ್ವತ್ಥಾಮ, ಲಕ್ಷ್ಮಣ, ಚಂಡ-ಮುಂಡರು, ಷಣ್ಮುಖ ಮೊದಲಾದ ಪಾತ್ರಗಳು ನಮ್ಮ ಕಣ್ಣಮುಂದೆ ಕಾಣಿಸಿಕೊಳ್ಳುತ್ತವೆ. ಪೂರ್ವ ರಂಗದಲ್ಲಿ ವೇಷಗಳನ್ನು ಮಾಡಿ, ನಾಟ್ಯದಲ್ಲಿ ಲಯಸಿದ್ಧಿಯನ್ನು ಪಡೆದು, ಬಳಿಕ ಪ್ರಹ್ಲಾದ, ಲೀಲೆಯ ಕೃಷ್ಣ ಮೊದಲಾದ ಬಾಲಪುಂಡುವೇಷಗಳನ್ನು ಮಾಡಿ ಮಾತುಗಾರಿಕೆಯಲ್ಲೂ ಬೆಳೆದರೆ ಮತ್ತೆ ಇಂತಹ ಪಾತ್ರಗಳನ್ನು ಮಾಡುವುದಕ್ಕೆ ಅನುಕೂಲವಾಗುತ್ತದೆ. ಕಲಾವಿದರು ಹಂತ ಹಂತವಾಗಿ ಬೆಳೆಯುತ್ತಾ ಸಾಗಿದರೆ ಅದರ ಸೊಗಸೇ ಬೇರೆ. ಪಾತ್ರಗಳನ್ನು ನಿರ್ವಹಿಸುವಾಗ ಎಲ್ಲೂ ಸೋಲದೆ ಪ್ರೌಢತೆಯು ಪ್ರಕಟವಾಗುತ್ತದೆ. ಕುಡಾಣ ಗೋಪಾಲಕೃಷ್ಣ ಭಟ್ (ಗೋಪಿ ಅಣ್ಣ) ಕ್ರಿಶ್ಚನ್ ಬಾಬು ಮೊದಲಾದವರು ಇಂದು ನಮ್ಮ ಜತೆ ಇಲ್ಲವಾದರೂ ಪುಂಡುವೇಷಧಾರಿಗಳಿಗೆ ಅವರು ಆದರ್ಶರು. ಪ್ರಸ್ತುತ ಹಿರಿಯ ಪುಂಡುವೇಷಧಾರಿ ಗಳಾದ ಪುತ್ತೂರು ಶ್ರೀಧರ ಭಂಡಾರಿ, ಗುಂಡಿಮಜಲು ಗೋಪಾಲ ಭಟ್, ವಸಂತ ಗೌಡ ಕಾಯರ್ತಡ್ಕ, ತಾರಾನಾಥ ಬಲ್ಯಾಯ ವರ್ಕಾಡಿ ಮೊದಲಾದ ಅನೇಕರು ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಕಲಿಕಾಸಕ್ತರು ಅವರ ಸಲಹೆ, ಮಾರ್ಗದರ್ಶನಗಳನ್ನು ಪಡೆಯಬಹುದಾಗಿದೆ. ಪ್ರಸ್ತುತ ಕಿರೀಟ ವೇಷಗಳನ್ನು ನಿರ್ವಹಿಸುವ ಹೆಚ್ಚಿನ ಕಲಾವಿದರುಗಳು ಪುಂಡುವೇಷಗಳನ್ನು ನಿರ್ವಹಿಸಿಯೇ ಬಂದವರು. ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ಕಲಾವಿದ ಕೆ. ಗೋವಿಂದ ಭಟ್ಟರು ತರುಣನಾಗಿದ್ದಾಗ ಕುರುಕ್ಷೇತ್ರ ಪ್ರಸಂಗದಲ್ಲಿ ಅಭಿಮನ್ಯು ಮಾಡಿ ಗದಾಯುದ್ಧ ಪ್ರಸಂಗದ ಕೌರವನ ಪಾತ್ರವನ್ನೂ ನಿರ್ವಹಿಸಿದ್ದರಂತೆ! ದೈಹಿಕ ಬಲವೊಂದಿದ್ದರೆ ಸಾಲದು. ಮಾನಸಿಕವಾಗಿಯೂ ಬಲಿಷ್ಠನಾಗಿರಬೇಕು. ಇವೆರಡೂ ಇಲ್ಲದೆ ಬರಿದೆ ಸಾಹಸವನ್ನು ತೋರಿದರೆ ಕಲಾವಿದರು ಗೆಲ್ಲಲಾರರು. ಪ್ರದರ್ಶನವೂ ಗೆಲ್ಲಲಾರದು’’. ಯಕ್ಷಗಾನದಲ್ಲಿ ಪ್ರಸ್ತುತ ಪುಂಡುವೇಷಧಾರಿಗಳಾಗಿ ಅಭಿನಯಿಸುತ್ತಾ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿರುವ ಕಲಾವಿದರನೇಕರು. ಅವರಲ್ಲೊಬ್ಬರು ಶ್ರೀ ದಿವಾಕರ ರೈ ಸಂಪಾಜೆ. ಪೂರ್ವರಂಗದಿಂದ ತೊಡಗಿ ಎಲ್ಲಾ ಹಂತಗಳನ್ನೂ ದಾಟಿ ಬೆಳೆದವರು. ಇವರು ಹನುಮಗಿರಿ ಮೇಳದ ಕಲಾವಿದ.
ಶ್ರೀ ದಿವಾಕರ ರೈ ಸಂಪಾಜೆ ಪ್ರಸುತ ಹನುಮಗಿರಿ ಮೇಳದ ಕಲಾವಿದನಾದರೂ ಧರ್ಮಸ್ಥಳ, ಎಡನೀರು ಮೇಳಗಳಲ್ಲೂ ತಿರುಗಾಟ ಮಾಡಿದವರು. ಇವರು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಎಂಬಲ್ಲಿ 1977ನೇ ಇಸವಿ ಎಪ್ರಿಲ್ 15ರಂದು ಶ್ರೀ ಕೆ. ವಾಸು ರೈ ಮತ್ತು ಶ್ರೀಮತಿ ಇಂದಿರಾ ರೈ ದಂಪತಿಗಳಿಗೆ ಮಗನಾಗಿ ಜನಿಸಿದವರು. ಕೆ. ವಾಸು ರೈ ಇಂದಿರಾ ದಂಪತಿಗಳಿಗೆ ಇಬ್ಬರು ಪುತ್ರರು. ದಿವಾಕರ ರೈಗಳ ತಮ್ಮ ಪ್ರಕಾಶ್ ರೈ ಕೃಷಿಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದಿವಾಕರ ರೈಗಳು ಓದಿದ್ದು ಕಲ್ಲುಗುಂಡಿ ಸರಕಾರೀ ಶಾಲೆಯಲ್ಲಿ. 7ನೇ ತರಗತಿಯ ವರೆಗೆ. ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದರು. ಕಲ್ಲುಗುಂಡಿ ಪರಿಸರದಲ್ಲಿ ಧರ್ಮಸ್ಥಳ, ಸುರತ್ಕಲ್, ಕರ್ನಾಟಕ, ಕದ್ರಿ ಮೇಳಗಳ ಪ್ರದರ್ಶನಗಳು ನಡೆಯುತ್ತಿತ್ತು. ಆಟ ನೋಡುವ ಅವಕಾಶಗಳು ಸಿಕ್ಕಿತ್ತು. ಅಲ್ಲದೆ ಬಣ್ಣದ ಮಹಾಲಿಂಗ, ಜಬ್ಬಾರ್ ಸಮೊ, ಸುಬ್ರಾಯ ಸಂಪಾಜೆ ಇವರುಗಳ ನೇತೃತ್ವದಲ್ಲಿ ‘ಗಜಾನನ ಯಕ್ಷಗಾನ ಸಂಘ’ವೂ ಕಾರ್ಯಾಚರಿಸುತ್ತಿತ್ತು. ಈ ಸಂಘದ ಆಶ್ರಯದಲ್ಲಿ ಆಟಕೂಟಗಳು ನಡೆಯುತ್ತಿತ್ತು. ಶಿವಪ್ಪ ಆಚಾರ್ಯ, ಫಕೀರಪ್ಪ ಪೂಜಾರಿ, ಟೈಲರ್ ಕೃಷ್ಣ ಮೊದಲಾದವರೂ ಕಲಾವಿದರಾಗಿ ಭಾಗವಹಿಸುತ್ತಿದ್ದರು. ಪ್ರದರ್ಶನಗಳನ್ನು ನೋಡುತ್ತಿದ್ದಂತೆಯೇ ದಿವಾಕರ ರೈಗಳಿಗೆ ತಾನೂ ಕಲಾವಿದನಾಗಬೇಕೆಂಬ ಬಯಕೆಯಾಗಿತ್ತು. ಹವ್ಯಾಸೀ ವೇಷಧಾರಿ ಶ್ರೀ ಲೋಕೇಶ್ ರಿಂದ ನಾಟ್ಯ ಕಲಿತರು. 5ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗ ಶಾಲಾ ವಾರ್ಷಿಕೋತ್ಸವದ ಪ್ರದರ್ಶನ-ಕುಶಲವರ ಕಾಳದ ಪ್ರಸಂಗದಲ್ಲಿ ‘ಲವ’ನಾಗಿ ರಂಗವೇರಿದರು. ಅಂದು ಕುಶ ಪಾತ್ರವನ್ನು ಮಾಡಿದವರು ಶಾಲಾ ಸಹಪಾಠಿ ಶ್ರೀ ರಾಧಾಕೃಷ್ಣ ಕಲ್ಲುಗುಂಡಿ. ಆ ಹೊತ್ತಿಗೆ ಗಜಾನನ ಯಕ್ಷಗಾನ ಸಂಘದ ಆಶ್ರಯದಲ್ಲಿ ನಾಟ್ಯ ತರಬೇತಿ ಮತ್ತು ಬಣ್ಣಗಾರಿಕಾ ಶಿಬಿರಗಳೂ ನಡೆಯುತ್ತಿತ್ತು. ಉತ್ತಮ ವೇಷಧಾರಿಯಾಗಿದ್ದ ಶ್ರೀ ಪರಮೇಶ್ವರ ಆಚಾರ್ಯರಿಂದಲೂ ನಾಟ್ಯ ಕಲಿತರು. ಹೆಚ್ಚಿನ ಕಲಿಕೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರಕ್ಕೆ ತೆರಳಿದರು. ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ಸ್ತ್ರೀಪಾತ್ರಧಾರಿ ಶ್ರೀ ಕೋಳ್ಯೂರು ರಾಮಚಂದ್ರ ರಾವ್ ಅವರಿಂದ ನಾಟ್ಯಾಭ್ಯಾಸ. ಆಗ ಬೈಪಾಡಿತ್ತಾಯ ದಂಪತಿಗಳು ಹಿಮ್ಮೇಳ ಗುರುಗಳಾಗಿದ್ದರು. (1991ರಲ್ಲಿ) ಅಡೂರು ಲಕ್ಷ್ಮೀನಾರಾಯಣ, ಕಾರಿಂಜ ವಿಶ್ವನಾಥ ನಾಯಕ್ ಕೇಂದ್ರದಲ್ಲಿ ದಿವಾಕರರ ಸಹಪಾಠಿಗಳಾಗಿದ್ದರು.
ಶ್ರೀ ದಿವಾಕರ ರೈಗಳ ಮೊದಲ ತಿರುಗಾಟ ಶ್ರೀ ಧರ್ಮಸ್ಥಳ ಮೇಳದಲ್ಲಿ (1991-92). ನಿರಂತರ 10 ವರ್ಷ ಸದ್ರಿ ಮೇಳದಲ್ಲಿ ಕಲಾಸೇವೆ. ಪೂರ್ವರಂಗದಲ್ಲಿ ಬಾಲಗೋಪಾಲರು, ಮುಖ್ಯ ಸ್ತ್ರೀವೇಷ ನಂತರ ಪ್ರಸಂಗದಲ್ಲಿ ದೇವೇಂದ್ರ ಬಲ ಮೊದಲಾದ ಸಣ್ಣಪುಟ್ಟ ಪಾತ್ರಗಳು. ಹೆಚ್ಚು ಸ್ತ್ರೀಪಾತ್ರಗಳನ್ನೇ ಮಾಡಬೇಕಾಗಿತ್ತು. ಸಖಿಯರು ಇತ್ಯಾದಿ ಚಿಕ್ಕ ಪಾತ್ರಗಳು. ಆಗ ಕಡತೋಕಾ ಮಂಜುನಾಥ ಭಾಗವತರು ಮೊದಲು ಪದ್ಯ ಹೇಳುತ್ತಿದ್ದರು. (ಅನಾರೋಗ್ಯದ ಕಾರಣದಿಂದ). ಪೀಠಿಕೆಗೆ ದಿವಾಕರ ರೈಗಳು ದೇವೇಂದ್ರನ ಬಲನಾಗಿ ಕುಣಿದು ಅಭಿನಯಿಸಿದ್ದನ್ನು ನೋಡಿ ಸಂತಸಪಟ್ಟಿದ್ದರು. ನೀನು ಸ್ತ್ರೀವೇಷ ಮಾಡುವುದು ಬೇಡ. ಪುಂಡುವೇಷವನ್ನೇ ಮಾಡು ಎಂಬ ಸಲಹೆಯನ್ನೂ ನೀಡಿದ್ದರು. ಪುಂಡುವೇಷಧಾರಿಯಾಗಿ ಭಡ್ತಿ ಸಿಕ್ಕಿತ್ತು. ಅಲ್ಲದೆ ಕಿರೀಟ ವೇಷಗಳನ್ನು ಮಾಡುವ ಅವಕಾಶಗಳೂ ಸಿಕ್ಕಿತ್ತು. ಪುರಾಣ ಪ್ರಸಂಗಗಳ ಅನುಭವವೂ ಆಗಿತ್ತು. ``ಪೂಜ್ಯ ವೀರೇಂದ್ರ ಹೆಗ್ಗಡೆಯವರ ಮತ್ತು ಡಿ. ಹರ್ಷೇಂದ್ರ ಕುಮಾರರ ಆಶೀರ್ವಾದವಿತ್ತು. ನಾನು ಕಲಾವಿದನಾಗಿ ಬೆಳೆಯಲು ಧರ್ಮಸ್ಥಳ ಮೇಳದ ಹತ್ತು ತಿರುಗಾಟಗಳೇ ಭದ್ರ ಅಡಿಪಾಯವಾಗಿತ್ತು. ಕಡತೋಕಾ, ಹೊಳ್ಳರು, ಚಿಪ್ಪಾರು, ಕುಂಬಳೆ ಸುಂದರ ರಾವ್, ಎಂಪೆಕಟ್ಟೆ, ಗೋವಿಂದ ಭಟ್, ನಯನ ಕುಮಾರ್ ಮೊದಲಾದ ದಿಗ್ಗಜ ಕಲಾವಿದರ ಒಡನಾಟ ಕಲಿಯಲು, ಬೆಳೆಯಲು ಅನುಕೂಲವಾಗಿತ್ತು. ಇನ್ನೂ ನಾಲ್ಕೈದು ವರ್ಷಗಳ ಕಾಲ ಅವರ ಒಡನಾಟ ಬೇಕಿತ್ತು ಎಂದು ಈಗ ಅನಿಸುತ್ತದೆ.’’ ಇದು ಧರ್ಮಸ್ಥಳ ಮೇಳದ ತಿರುಗಾಟದ ಬಗೆಗೆ ದಿವಾಕರ ರೈಗಳು ಅನುಭವಿಸಿ ಹೇಳುವ ಮಾತುಗಳು.
ಧರ್ಮಸ್ಥಳ ಮೇಳದಲ್ಲಿ 10 ವರ್ಷಗಳ ಕಲಾಸೇವೆಯನ್ನು ಮಾಡಿ ತಿರುಗಾಟ ನಿಲ್ಲಿಸಿದ್ದರು. ಯಕ್ಷಗಾನ ಬೇಡ ಎಂಬ ತೀರ್ಮಾನಕ್ಕೂ ಬಂದಿದ್ದರು. ಮನೆಯಲ್ಲೇ ಕೃಷಿಕಾರ್ಯಗಳಲ್ಲಿ ನಿರತನಾಗಿದ್ದಾಗ ಕಲಾಪೋಷಕ ಡಾ. ಟಿ. ಶ್ಯಾಮ ಭಟ್ಟರು ಮೇಳಕ್ಕೆ ಸೇರಲು ಸೂಚಿಸಿದ್ದರು. ಅವರ ``ಮೇಳಕ್ಕೆ ಸೇರೆಂದು ಸೂಚನೆ ಬಂದ ಅಂದಿನ ದಿನದಿಂದ ಇಂದಿನ ದಿನದವರೇಗೂ ಡಾ. ಟಿ. ಶ್ಯಾಮ ಭಟ್ಟರ ಆಶ್ರಯದಲ್ಲೇ ಬೆಳೆದಿದ್ದೇನೆ ಮತ್ತು ಬದುಕುತ್ತಿದ್ದೇನೆ. ಅವರು ನನ್ನ ಪಾಲಿಗೆ ಆಶ್ರಯದಾತರು, ಅನ್ನದಾತರು’’- ಶ್ಯಾಮ ಭಟ್ ಅವರ ಬಗೆಗೆ ದಿವಾಕರ ರೈಗಳು ಗೌರವಿಸಿ ಆಡುವ ಮಾತುಗಳಿವು. ಮುಖ್ಯ ಪುಂಡುವೇಷ ಧಾರಿಯಾಗಿ ಕುಂಟಾರು ಮೇಳದಲ್ಲಿ 2 ವರ್ಷ ತಿರುಗಾಟ. ಮತ್ತೆ 2 ವರ್ಷ ಎಡನೀರು ಮೇಳದಲ್ಲಿ ಕಲಾಸೇವೆ. ಶ್ರೀ ಧರ್ಮಸ್ಥಳ ಮೇಳದ ತಿರುಗಾಟದ ಸಂದರ್ಭ-ಕುಂದಾಪುರದ ಅಡ್ಪೆಸಣ್ಣೊಣಿ ಎಂಬಲ್ಲಿ ಮೊತ್ತಮೊದಲು ಅಭಿಮನ್ಯು ಪಾತ್ರವನ್ನು ನಿರ್ವಹಿಸಿದ್ದರು. ಅದಕ್ಕಿಂತ ಮೊದಲು ಶ್ರೀಧರ ಭಂಡಾರಿಯವರ ಅಭಿಮನ್ಯುವಿಗೆ ಸಾರಥಿಯಾಗಿ, ಕರ್ಣನಾಗಿ ಅಭಿನಯಿಸಿದ್ದರು. ``ಅನಿವಾರ್ಯಕ್ಕೆ ಅಭಿಮನ್ಯು ಪಾತ್ರವನ್ನು ನಿರ್ವಹಿಸಬೇಕಾಗಿತ್ತು. ನಾನು ಹೆದರಿಕೊಂಡಿದ್ದೆ. ಆದರೆ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳರು ಧೈರ್ಯ ತುಂಬಿದರು. ಅವರೇ ಮೊದಲು ಪದ್ಯ ಹೇಳಿ ಪ್ರೋತ್ಸಾಹಿಸಿದ್ದರು. ನಾನು ಅಭಿಮನ್ಯು ಮಾಡಿದೆ ಎನ್ನುವುದಕ್ಕಿಂತ ಅವರು ನನ್ನಿಂದ ಮಾಡಿಸಿದರು ಎಂದು ಹೇಳುವುದೇ ಸರಿ. ಅಂದು ಉದ್ಯಾವರ ಜಯಕುಮಾರರು ಸುಭದ್ರೆಯಾಗಿ ಅಭಿನಯಿಸಿದ್ದರು.’’ ಹೀಗೆ ಅಂದಿನ ದಿನವನ್ನು ದಿವಾಕರ ರೈಗಳು ನೆನಪಿಸುತ್ತಾರೆ. ಉಬರಡ್ಕ ಉಮೇಶ ಶೆಟ್ಟರು ತಿರುಗಾಟದುದ್ದಕ್ಕೂ ಮಾರ್ಗದರ್ಶನ ನೀಡಿದ್ದರು. ಪುತ್ತೂರು ಶ್ರೀಧರ ಭಂಡಾರಿಗಳ ವೇಷ ನೋಡಿ ದಿವಾಕರ ರೈಗಳಿಗೆ ಪುಂಡುವೇಷ ಗಳತ್ತ ಆಸಕ್ತಿ ಉಂಟಾಗಿತ್ತು. ದಿವಾಕರ ರೈಗಳಿಗೆ ಅವರ ಮಾರ್ಗದರ್ಶನವೂ ಇತ್ತು. ಎಡನೀರು ಮೇಳದಲ್ಲಿ ಎರಡು ವರ್ಷ ತಿರುಗಾಟ. ನಂತರ ಹೊಸನಗರ ಮೇಳದಲ್ಲಿ. ಪ್ರಸ್ತುತ ಹನುಮಗಿರಿ ಮೇಳದಲ್ಲಿ ವ್ಯವಸಾಯ. ``ಹೊಸನಗರ, ಎಡನೀರು, ಹನುಮಗಿರಿ ಮೇಳಗಳಲ್ಲಿ ಹಿರಿಯ, ಕಿರಿಯ ಕಲಾವಿದರೆಲ್ಲ ಸಹಕರಿಸಿದ್ದಾರೆ. ನನ್ನ ವೇಷಗಳು ಮೆರೆಯಲು ಅವರೆಲ್ಲರೂ ಕಾರಣರು. ವಿಶೇಷವಾಗಿ ಪದ್ಯಾಣ ಗಣಪತಿ ಭಟ್ ಮತ್ತು ಪದ್ಯಾಣ ಶಂಕರನಾರಾಯಣ ಭಟ್ಟರು ಸಹಕರಿಸಿದ್ದಾರೆ. ರಂಗದಲ್ಲಿ ನನ್ನ ವೇಷಗಳು ಗೆಲ್ಲುವಂತೆ ಪ್ರೋತ್ಸಾಹಿಸಿದ್ದಾರೆ. ಯಕ್ಷಗಾನವು ಏಕಪಾತ್ರಾಭಿನಯ ಅಲ್ಲ. ಸಹಕಲಾವಿದರ ಸಹಕಾರವಿಲ್ಲದೆ ಯಾವ ಕಲಾವಿದನೂ ಮೆರೆಯಲಾರ. ಕಲಾಭಿಮಾನೀ ಬಂಧುಗಳೂ ಪ್ರೋತ್ಸಾಹಿಸಿದ್ದಾರೆ. ಸರ್ವರ ಸಹಕಾರದಿಂದ ಇನ್ನಷ್ಟು ಕಲಾಸೇವೆ ಮಾಡುವ ಆಸೆಯಿದೆ’’ ಎನ್ನುವ ಶ್ರೀ ದಿವಾಕರ ರೈಗಳು ಮಳೆಗಾಲದ ಪ್ರದರ್ಶನಗಳಲ್ಲೂ ಭಾಗವಹಿಸುತ್ತಾರೆ. ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಮತ್ತು ಪುತ್ತೂರು ಶ್ರೀಧರ ಭಂಡಾರಿಗಳ ನೇತೃತ್ವದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪುತ್ತೂರು ಈ ತಂಡಗಳ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ವೃತ್ತಿ ಬದುಕಿನಲ್ಲೂ ಸಾಂಸಾರಿಕವಾಗಿಯೂ ದಿವಾಕರ ರೈಗಳು ತೃಪ್ತರು. 2011ನೇ ಇಸವಿ ದಶಂಬರ 28ರಂದು ಆರತಿ ಕೆ. ರೈ ಜತೆ ವಿವಾಹ. ಆರತಿ ರೈ ಅವರು ಕಾಸರಗೋಡು ಕೂಡ್ಲು ಶ್ರೀ ವಿಠಲ ಶೆಟ್ಟಿ ಮತ್ತು ಶ್ರೀಮತಿ ಚಂದ್ರಾವತಿ ದಂಪತಿಗಳ ಪುತ್ರಿ. ಶ್ರೀ ದಿವಾಕರ ರೈ ಮತ್ತು ಶ್ರೀಮತಿ ಆರತಿ ದಿವಾಕರ ರೈ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ಮಾ| ಸಮೃದ್ಧ ಡಿ. ರೈ 1ನೇ ತರಗತಿಯ ವಿದ್ಯಾರ್ಥಿ. ಪುತ್ರಿ ಕು| ವಿಭಾ ಡಿ. ರೈ (4 ವರ್ಷ ಪ್ರಾಯ). ಮಕ್ಕಳಿಬ್ಬರೂ ವಿದ್ಯಾವಂತರಾಗಿ ಅವರ ಬದುಕು ಬಂಗಾರವಾಗಿರಲಿ. ದಿವಾಕರ ರೈಗಳಿಂದ ಕಲಾಮಾತೆಯ ಸೇವೆಯು ನಿರಂತರವಾಗಿ ನಡೆಯಲಿ. ಶ್ರೀದೇವರ ಅನುಗ್ರಹವಿರಲಿ ಎಂಬ ಹಾರೈಕೆಗಳು. ು
- ರವಿಶಂಕರ್ ವಳಕ್ಕುಂಜ
ದಿವಾಕರ ರೈ ಸಂಪಾಜೆ

Comments
Post a Comment