ಕಲಾವಿದನಿಂದ ಕಲಾವಿದರಿಗಾಗಿ -ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು
{ವಿ.ಸೂ: ಇದು ಜೂನ್ 2016ರಲ್ಲಿ ಬರೆದ ಲೇಖನ. ಅದರಿಂದೀಚೆಗೆ ಆದ ಬೆಳವಣಿಗೆಗಳನ್ನು ಈ ಲೇಖನದಲ್ಲಿ ಸೇರಿಸಲಾಗಿಲ್ಲ}
ಕಲಾವಿದನಿಂದ ಕಲಾವಿದರಿಗಾಗಿ ಚಿಗುರೊಡೆದ ಮೊತ್ತ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ಸಲ್ಲುತ್ತದೆ. ಖ್ಯಾತ ಭಾಗವತರಾದ ಶ್ರೀ ಪಟ್ಲ ಸತೀಶ್ ಶೆಟ್ಟಿ ಇದರ ಸ್ಥಾಪಕಾಧ್ಯಕ್ಷರು. ರಂಗದಲ್ಲಿ ಕಲಾವಿದನಾಗಿ ರಂಜಿಸುವುದರ ಜತೆಗೆ ಕಲೆಗೆ, ಕಲಾವಿದರಿಗಾಗಿ ಕೊಡುಗೆಗಳನ್ನು ನೀಡಬೇಕಾದುದು ಕಲಾವಿದರಿಗೆ ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಪಟ್ಲ ಸತೀಶ್ ಶೆಟ್ಟಿಯವರು ಶ್ರಮಿಸುತ್ತಿದ್ದಾರೆ. ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಲ್ಲಿ ಭಾಗವತಿಕೆಯನ್ನು ಕಲಿತ ಇವರು ಸತತ ಅಭ್ಯಾಸದಿಂದ ಎಳೆಯ ಪ್ರಾಯದಲ್ಲಿಯೇ ಪ್ರಸಿದ್ಧಿಯನ್ನು ಪಡೆದು ಕೀರ್ತಿಯ ಶಿಖರವನ್ನೇರಿದರು. ಪ್ರತಿಭೆಯಿದ್ದವರೆಲ್ಲಾ ಹೊಳೆದು ಕಾಣಿಸಿಕೊಳ್ಳಲಾರರು. ಪ್ರತಿಭೆಯ ಜೊತೆ ಯೋಗಭಾಗ್ಯಗಳು ಮೇಳೈಸಿದಾಗ ಆತ ಪ್ರಸಿದ್ಧನಾಗುತ್ತಾನೆ ಎಂಬುದಕ್ಕೆ ಇವರೇ ಸಾಕ್ಷಿ. ಭಾಗವತಿಕೆಯನ್ನಲ್ಲದೆ ಚೆಂಡೆ ಮದ್ದಳೆಯನ್ನೂ ನುಡಿಸಬಲ್ಲರು. ಶ್ರೀ ಪಟ್ಲ ಸತೀಶ್ ಶೆಟ್ಟಿಯವರಿಂದ ಕಲಾವಿದರಿಗಾಗಿ ಈ ತೆರನಾದ ಶ್ರೇಷ್ಟ ಕೊಡುಗೆಯಾದುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಚಾರ.
ಯಕ್ಷಗಾನ ಕಲೆಯ ಬಗ್ಗೆ, ಮೇಳವನ್ನು ನಡೆಸಿ ಅನುಭವವಿರುವ ಪಟ್ಲಗುತ್ತು ಮಹಾಬಲ ಶೆಟ್ಟರಿಗೆ ಪುತ್ರನಾಗಿ ಜನಿಸಿದ ಪಟ್ಲ ಸತೀಶ್ ಶೆಟ್ಟಿಯವರು ಈಗ ಕಲಾಭಿಮಾನಿಗಳಿಗೆ ಪ್ರೀತಿಯ ಸತೀಶಣ್ಣ. ತೆಂಕು ಹಾಗೂ ಬಡಗು ಎಂಬ ಭೇದವಿಲ್ಲದೆ ಅಶಕ್ತ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸಲು ಅವರ ಬಾಳಿನಲ್ಲಿ ಹೊಸ ಬೆಳಕನ್ನು ಮೂಡಿಸುವ ಸದುದ್ದೇಶದಿಂದ ಸಮಾನ ಮನಸ್ಕ ಬಂಧುಗಳ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಕಟೀಲಿನಲ್ಲಿ 2015ನೇ ಸೆಪ್ಟಂಬರ್ ತಿಂಗಳಿನಲ್ಲಿ ಈ ಸಂಸ್ಥೆ ಆರಂಭವಾಯಿತು. ಅಂದು ಹನ್ನೊಂದು ಮಂದಿ ಅಶಕ್ತ ಕಲಾವಿದರಿಗೆ ತಲಾ ರೂ. 50000/- ಧನ ಸಹಾಯ ಮಾಡಲಾಯಿತು. ಆರಂಭದ ವರ್ಷವೇ ಇಷ್ಟು ಮಂದಿ ಕಲಾವಿದರಿಗೆ ಇಷ್ಟು ದೊಡ್ಡ ಮೊತ್ತ ನೀಡಿ ನೆರವಾದುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಯೋಜನೆಗಳು ಮುಂದುವರಿಯುತ್ತಾ ಅನಾರೋಗ್ಯದಿಂದ ಬಳಲುತ್ತಿರುವ ಕಲಾವಿದರಿಗೆ ಅಕಾಲ ಮರಣಕ್ಕೆ ತುತ್ತಾದ ಕಲಾವಿದರ ಕುಟುಂಬಕ್ಕೆ ಟ್ರಸ್ಟ್ ಸ್ಪಂದಿಸಿತು.
ದಿ| ಕಣ್ಣಿಮನೆ ಗಣಪತಿ ಭಟ್, ದಿ| ಶಶಿ ಪಡುಕೋಣೆ, ದಿ| ವಸಂತ ಪೆರ್ಲ, ದಿ| ರವಿ ಶೃಂಗೇರಿ ಇವರ ಮನೆಯವರಿಗೆ ತಲಾ 50000 ರೂಪಾಯಿಗಳ ಸಹಾಯ ನೀಡಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವ ಶ್ರೀ ಹೆರಂಜಾಲು ಗೋಪಾಲ ಗಾಣಿಗ, ಶ್ರೀ ವಿಶ್ವನಾಥ ಶೆಟ್ಟಿ ಸಿದ್ದಕಟ್ಟೆ, ಶ್ರೀ ಪ್ರಕಾಶ್ ವಿಟ್ಲ ಇವರ ಚಿಕಿತ್ಸಾ ವೆಚ್ಚಕ್ಕಾಗಿ ತಲಾ 25000 ರೂಪಾಯಿಗಳನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ನೀಡಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ್ನು ಬೃಹತ್ ಸಂಸ್ಥೆಯನ್ನಾಗಿ ಬೆಳೆಸಲು ಹಲವಾರು ಕಡೆ ಉಪಸಮಿತಿಗಳನ್ನು ರಚಿಸಲಾಯಿತು. ಎಲ್ಲಾ ಯೋಜನೆಗಳು ನೆರವೇರಲು ಧನಸಂಗ್ರಹವನ್ನು ಮಾಡುವ ಸದುದ್ದೇಶದಿಂದ ನಿಧಿ ಸಂಚಯನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಒಂದು ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ಮೊತ್ತ ನೀಡುವವರನ್ನು ಟ್ರಸ್ಟಿಗಳಾಗಿ, 10000 ದಿಂದ 99000 ರೂಪಾಯಿಗಳ ವರೆಗಿನ ದಾನಿಗಳನ್ನು ಅಜೀವ ಸದಸ್ಯರನ್ನಾಗಿ. 1000 ರೂಪಾಯಿಗಳಿಂದ 9999 ರೂಪಾಯಿಗಳ ವರೆಗಿನ ದಾನಿಗಳನ್ನು ಸದಸ್ಯರನ್ನಾಗಿಯೂ ನೇಮಿಸುವ ಆಶಯವನ್ನು ಟ್ರಸ್ಟ್ ಹೊಂದಿದೆ.
ಲೇಖನ: ರವಿಶಂಕರ್ ವಳಕ್ಕುಂಜ

Comments
Post a Comment