ಯಶಸ್ವೀ ಯಾಜಮಾನ್ಯಕ್ಕೆ ಹದಿನೈದನೇ ವರ್ಷ - ಕಲ್ಲಾಡಿ ಮನೆತನದ ಶ್ರೀ ಕೆ. ದೇವೀಪ್ರಸಾದ ಶೆಟ್ಟರು
``ಕಲ್ಲಾಡಿ’’ ಎಂಬ ಹೆಸರು ಕೇಳಿದ ತಕ್ಷಣ `ಯಜಮಾನರು’ ಎಂಬ ಮಾತು ಕಲಾಭಿಮಾನಿಗಳ, ಕಲಾವಿದರ ಬಾಯಿಯಿಂದ ಹೊರಬಾರದೆ ಇರದು. ಇದು ಒತ್ತಾಯಕ್ಕೆ ಹೇಳುವ ಮಾತಲ್ಲ. ಈ ನುಡಿಯು ಅಂತಃರಂಗದ ಧ್ವನಿಯೇ ಆಗಿದೆ. ಅನೇಕ ವರುಷಗಳ ಹಿಂದಿನ ಕಾಲ. ಮೇಳಗಳನ್ನು ನಡೆಸುವ ನಾಯಕರನ್ನು ಕಲಾಭಿಮಾನಿಗಳೂ, ಕಲಾವಿದರೂ ಯಜಮಾನ ಎಂಬ ಹೆಸರಿನಿಂದ ಸಂಭೋದಿಸಿ ಗೌರವಿಸುತ್ತಿದ್ದರು. ಯಾಕೆ ಈ ತೆರನಾದ ಸಂಬೋಧನೆ? ನಮ್ಮನ್ನು ಮುನ್ನಡೆಸುತ್ತಾ ಕಲೆಯ ಉತ್ಕರ್ಷೆಗಾಗಿ ಶ್ರಮಿಸುವ ನಾಯಕ ಎಂಬ ಸಂತೋಷದಿಂದ, ಗೌರವಸೂಚಕವಾಗಿ ಯಜಮಾನ ಎಂದು ಕರೆಯಲಾರಂಭಿಸಿರಲೂ ಬಹುದು. ಕಲ್ಲಾಡಿ ಎಂಬುದು ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಒಂದು ಪ್ರದೇಶ. ಈ ಮನೆತನದ ನಾಲ್ಕು ಮಂದಿ ಸದಸ್ಯರು ಮೇಳಗಳ ಸಮರ್ಥ ಯಜಮಾನರಾಗಿ ಕಲ್ಲಾಡಿ ಎಂಬ ಊರಿಗೂ, ಕಲೆಗೂ, ತಾವು ಜನಿಸಿದ ಮನೆತನಕ್ಕೂ ಗೌರವವನ್ನು ತಂದಿತ್ತವರು. 1939ರಿಂದ ಕಲ್ಲಾಡಿ ಕೊರಗ ಶೆಟ್ಟರಿಂದ ತೊಡಗಿ ಇಂದಿನವರೇಗೂ ಕಲ್ಲಾಡಿ ಮನೆಯವರೇ ಕಟೀಲು ಮೇಳಗಳನ್ನು ಸಂಚಾಲಕರಾಗಿ ಮುನ್ನಡೆಸುತ್ತಿದ್ದಾರೆ. ಇವರ ನಾಯಕತ್ವದಲ್ಲಿ ಕಟೀಲು ಮೇಳಗಳು ಸರ್ವತೋಮುಖ ಬೆಳವಣಿಗೆಯನ್ನು ಕಂಡಿದೆ. ಮೇಳಗಳ ಯಾಜಮಾನ್ಯಕ್ಕೆ ನ್ಯಾಯ ಒದಗಿಸಿದ ಸಮರ್ಥ ನಾಯಕತ್ವ ಕಲ್ಲಾಡಿ ಮನೆತನದ್ದು. ಪ್ರಸ್ತುತ ಯಜಮಾನರಾಗಿ ಕಟೀಲು ಆರೂ ಮೇಳಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವವರು ಕಲ್ಲಾಡಿ ಶ್ರೀ ದೇವೀಪ್ರಸಾದ ಶೆಟ್ಟರು. 2005ರಿಂದ ತೊಡಗಿ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಸಂಚಾಲಕರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಯಶಸ್ವೀ ಯಾಜಮಾನ್ಯದ 14 ವರುಷಗಳನ್ನು ಕಳೆದು 15ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಬಹಳ ಹಿಂದಿನ ಕಾಲ. ನಾವು ನೋಡಿದವರಲ್ಲ. ಆದರೆ ಹಿರಿಯರಿಂದ ಕೇಳಿ, ಪುಸ್ತಕಗಳಿಂದ ಓದಿ ತಿಳಿದಿದ್ದೇವೆ. ಯಕ್ಷಗಾನ ಪ್ರದರ್ಶನಗಳು ಆಗ ತೀರಾ ವಿರಳ. ಬೆರಳೆಣಿಕೆಯ ಮೇಳಗಳಷ್ಟು ಕಾರ್ಯಾಚರಿಸುತ್ತಿದ್ದವು. ಮೇಳಗಳ ಸಂಖ್ಯೆ ಅಷ್ಟು ಕಡಿಮೆಯಿದ್ದಾಗಲೂ ವರ್ಷಪೂರ್ತಿ ಪ್ರದರ್ಶನಗಳಿರುತ್ತಿರಲಿಲ್ಲ. ಊರಿನ ಹಿರಿಯರನ್ನೂ, ಗಣ್ಯವ್ಯಕ್ತಿಗಳನ್ನೂ ಸಂಪರ್ಕಿಸಿ ಪ್ರದರ್ಶನಗಳನ್ನು ಮೇಳ ನಡೆಸುವವರು ಏರ್ಪಡಿಸುತ್ತಿದ್ದರು. ಇದೊಂದು ಕೈಸುಟ್ಟುಕೊಳ್ಳುವ ವ್ಯವಹಾರವೆಂದು ಗೊತ್ತಿದ್ದರೂ ಯಕ್ಷಗಾನ ಕಲೆಯ ಮೇಲಿನ ಪ್ರೀತಿಯಿಂದ ಅವರು ಹಿನ್ನಡೆಯದೆ ಮುನ್ನುಗ್ಗಿದರು. ಸಿಕ್ಕಿದ ಮೊತ್ತವನ್ನು ಪಡೆದು ಕಲಾವಿದರಿಗೆ ಹಂಚಿ ತಾನು ಬರಿಗೈಯಲ್ಲೇ ಮನೆಗೆ ಹಿಂತಿರುಗಿದವರೂ ಇದ್ದಾರೆ. ಆದರೆ ಇದು ಕಲಾವಿದರಲ್ಲಿ ಆತ್ಮವಿಶ್ವಾಸ ಹೆಚ್ಚಾಗಲು ಅನುಕೂಲವಾಯಿತು. ಮೇಳಗಳನ್ನು ಮುನ್ನಡೆಸುತ್ತಿದ್ದ ನಾಯಕರು ಯಕ್ಷಗಾನ ಕಲೆಯ ಉಳಿವಿಗಾಗಿ ಮಾಡಿದ ತ್ಯಾಗ ಅದು. ಕಲಾವಿದರೂ ತಮ್ಮನ್ನು ತಂಡವಾಗಿ ಮುನ್ನಡೆಸುತ್ತಿದ್ದ ನಾಯಕನನ್ನು ಉಳಿಸಲು ಮನಮಾಡುತ್ತಿದ್ದರು. ಸಂಗ್ರಹ ಕಡಿಮೆಯಾದರೆ ನಾಯಕನು ಕೊಟ್ಟುದನ್ನು ತೆಗೆದುಕೊಂಡು ಅವನ ಉಳಿವಿಗೂ ಪ್ರಯತ್ನಿಸಿದರು. ಕೆಲವೊಮ್ಮೆ ಸಂಭಾವನೆಯೇ ಇಲ್ಲದೆ ಕೇವಲ ಒಂದು ಹೊತ್ತಿನ ಊಟದಲ್ಲಿಯೇ ಪ್ರದರ್ಶನಗಳಲ್ಲಿ ಭಾಗವಹಿಸಿದ ನಿದರ್ಶನಗಳೂ ಬಹಳಷ್ಟು. ಹೀಗೆ ಮೇಳಗಳನ್ನು ನಡೆಸುತ್ತಿದ್ದ ಹಿರಿಯ ನಾಯಕರೂ, ಹಿರಿಯ ಕಲಾವಿದರೂ ಅನೇಕ ಮೈಲುಗಳ ದೂರ ಸರಂಜಾಮುಗಳನ್ನು ಹೊತ್ತುಕೊಂಡೇ ಸಾಗಿ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಆಟ ಆಡಿಸುವವರು ಇಲ್ಲದೆ, ಪ್ರದರ್ಶನಗಳಿಲ್ಲದೆ ನಿರಾಸೆಯಿಂದಲೇ ದಿನಗಳನ್ನು ಕಳೆದದ್ದೂ ಇದೆ. ಊಟೋಪಚಾರಗಳಿಲ್ಲದೆ ಉಪವಾಸ ಬಿದ್ದ ದಿನಗಳೂ ಇರಬಹುದು. ಅವರುಗಳು ಕೈಸುಟ್ಟು ಕೊಂಡರೂ, ಕಷ್ಟದ ಬದುಕನ್ನು ಸವೆಸಿದರೂ ಯಕ್ಷಗಾನದ ಉಳಿವಿಗೆ ಕಾರಣರಾದರು. ಮಾತ್ರವಲ್ಲ ಈ ಗಂಡುಕಲೆಯು ಬೆಳೆದು, ಹೊಳೆದು ಕಾಣಿಸಿಕೊಳ್ಳಲು ಕಾರಣರಾದರು. ಅವರ ಪರಿಶ್ರಮ, ತ್ಯಾಗದ ಫಲವನ್ನು ನಾವು ಇಂದು ಅನುಭವಿಸುತ್ತಿದ್ದೇವೆ. ಕಲೆಯು ಉಳಿದು ಬೆಳೆದು ನಾಲ್ಕು ಗೋಡೆಯ ತಡೆಗಳಿಂದ ನೆಗೆದು ಹೊರಬಂದು ವಿಶ್ವವ್ಯಾಪಿಯಾಗಿದೆ. ಈಗ ದೇಶ ವಿದೇಶಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯುತ್ತವೆ. ಮೇಳಗಳು ಹಾಗೂ ಪ್ರದರ್ಶನಗಳು ಗಣನೀಯವಾಗಿ ವೃದ್ಧಿಸಿವೆ. ಮಳೆಗಾಲದಲ್ಲೂ ಆಟಕೂಟಗಳೆಂಬ ಯಕ್ಷಗಾನ ಕಾರ್ಯಕ್ರಮಗಳು. ಹೀಗೆ ವ್ಯಾಪ್ತಿ ವಿಸ್ತರಣೆಯಾಗುವುದಕ್ಕೆ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗಲು ಕಾರಣಸ್ಥಾನದಲ್ಲಿ ಹಲವರಿರುತ್ತಾರೆ. ಹಳೆಯ ಸಂಘಟಕರು ಮತ್ತು ಕಲಾವಿದರು ಅಂದು ಶ್ರಮಿಸಿ ಕೀರ್ತಿವಂತರಾದರು. ಹೊಸ ತಲೆಮಾರಿನ ಅನೇಕ ಸಂಘಟಕರು, ನಾಯಕರು, ಕಲಾಪೋಷಕರು ಕಲಾಭಿಮಾನಿಗಳು, ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಸಾಗಿ ಈ ರೀತಿಯ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರೆಲ್ಲರೂ ಅಭಿನಂದನಾರ್ಹರು.
ಹಿಂದಿನ ಕಾಲದಲ್ಲಿ ಬಯಲಾಟಗಳು ಮಾತ್ರ ನಡೆಯುತ್ತಿದ್ದವು. ಟೆಂಟ್ ಮೇಳಗಳಿದ್ದಿರಲಿಲ್ಲ. ಆಟ ಆಡಿಸಲು ಒಪ್ಪಿಗೆ ಸಿಕ್ಕಾಗಲೇ ಮಧ್ಯಾಹ್ನ ಆಗುತ್ತಿತ್ತು. ಅದೂ ಕಾಡಿ ಬೇಡಿದರೆ ಮಾತ್ರ ಅನುಮತಿ. ಮಾತಿನಿಂದಲೇ ಊರಿನ ಆಢ್ಯರನ್ನು ಒಲಿಸಿ ಪ್ರದರ್ಶನಗಳನ್ನು ಗಿಟ್ಟಿಸಿಕೊಳ್ಳಬೇಕಾಗಿತ್ತು. ಅಲ್ಲಿಯವರೇಗೆ ಕಲಾವಿದರೂ, ಮೇಳಕ್ಕೆ ಸಂಬಂಧಿಸಿದ ಇತರ ಸಿಬ್ಬಂದಿಗಳೂ ಮರದಡಿಯಲ್ಲೇ ಕಾಲ ಕಳೆಯುತ್ತಿದ್ದರು. ಆ ಕಾಲ ಹಾಗಿತ್ತು. ಇದು ಪರಿವರ್ತನಾಶೀಲವಾದ ಪ್ರಪಂಚ. ಸಹಜವಾಗಿ ಬದಲಾವಣೆಯಾಗಲೇಬೇಕು. ಅವರು ಕಷ್ಟಪಟ್ಟಿದ್ದಾರೆ ಅನ್ನೋದು ನಾವೂ ಕಷ್ಟ ಪಡಬೇಕು ಎಂಬ ಅರ್ಥಕ್ಕೆ ಕಾರಣವಾಗಬಾರದು. ಕಲಾವಿದರಿಗೆ ವ್ಯವಸ್ಥೆಯಾದಷ್ಟೂ ಸಂತೋಷ ಪಡಬೇಕು. ಕಲಾವಿದರ ಬದುಕು ಶ್ರೇಷ್ಠ ರೀತಿಯಲ್ಲಿರಬೇಕು ಎಂಬುದು ಕಲಾಭಿಮಾನಿಗಳೆಲ್ಲರ ಆಶಯವೂ ಹೌದು. ಉತ್ತಮ ಸಂಭಾವನೆಯೂ ಅವರಿಗೆ ಸಿಗಬೇಕು. ಜತೆಗೆ ಮೇಳಗಳನ್ನು ನಡೆಸಿ ಕಲೆಯನ್ನೂ ಕಲಾವಿದರನ್ನೂ ಉಳಿಸಲು ಹಿರಿಯರು ಅದೆಷ್ಟು ಕಷ್ಟಪಟ್ಟಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಬೇಕಾದುದು ನಮಗೆ ಕರ್ತವ್ಯವಾಗಿದೆ. ಯಕ್ಷಗಾನ ಬಯಲಾಟದ ಮೇಳಗಳನ್ನು ನಡೆಸುವ ನಾಯಕನನ್ನು ಕಲಾಭಿಮಾನಿಗಳೂ, ಕಲಾವಿದರೂ `ಯಜಮಾನ’ ಎಂದು ಕರೆಯುವುದು, ಗೌರವಿಸುವುದು ಹಿಂದಿನಿಂದಲೂ ನಡೆದು ಬಂದ ರೀತಿ. ಕೆಲವರು `ಧನಿಗಳು’ ಎಂದೂ ಸಂಬೋಧಿಸಿ ಗೌರವಿಸುತ್ತಿದ್ದರು. ಈ ಸಂಪ್ರದಾಯವು ಮುಂದುವರಿದು ಈಗಲೂ ಚಾಲ್ತಿಯಲ್ಲಿದೆ. ಸಂಚಾಲಕರೆಂದು ಹೇಳಿಸಿ ಕೊಳ್ಳುತ್ತಿರುವುದು ಇತ್ತೀಚೆಗಿನ ಬೆಳವಣಿಗೆ. ಯಜಮಾನರಾಗಿ ಮೇಳವನ್ನು ಮುನ್ನಡೆಸುವುದು ಸುಲಭದ ಕೆಲಸವಲ್ಲ. ಅದೊಂದು ಕಠಿಣವಾದ ಕಾಯಕ. ತಪಸ್ಸು ಎಂದು ಹೇಳಿದರೂ ತಪ್ಪಲ್ಲ. ಸಾಹಸವೇ ಹೌದು. ಸಾಹಸ ಬೇರೆ. ಸಾಮರ್ಥ್ಯ ಬೇರೆ. ಸಾಮರ್ಥ್ಯವನ್ನು ಹೊರಗೆಡಹುವುದಕ್ಕೆ ಸಾಹಸಪಡಬೇಕಾಗುತ್ತದೆ. ಸಾಮರ್ಥ್ಯವೂ ಬೇಕು. ಅದನ್ನು ಪ್ರಕಟಿಸಲು ಸಾಹಸವನ್ನೂ ಪಡಬೇಕಾಗುತ್ತದೆ. ಯಶಸ್ವೀ ಪ್ರದರ್ಶನಕ್ಕೆ ಬೇಕಾಗಿರುವ ಎಲ್ಲಾ ವಿಚಾರಗಳನ್ನೂ ಯಜಮಾನರು ಹೊಂದಿರ ಬೇಕು. ಸಂಘಟಕರಿಗೆ, ಪ್ರೇಕ್ಷಕರಿಗೆ, ಕಲಾವಿದರಿಗೆ ನೋವಾಗದಂತೆ ವ್ಯವಹರಿಸುವ ಜಾಣ್ಮೆಯನ್ನೂ ಹೊಂದಿರಬೇಕು. ರೂಢಿಯಲ್ಲಿ ಆಡುತ್ತಿದ್ದ ಮಾತುಗಳು ಈ ಸಮಯದಲ್ಲಿ ನೆನಪಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ರೂಢಿಯ ಮಾತುಗಳು ಶಾಸ್ತ್ರಕ್ಕಿಂತಲೂ ಬಲಿಷ್ಠವಾಗಿರುತ್ತದೆ. ``ನಿನಗೆ ಯಾರಲ್ಲಾದರೂ ಹಗೆ ಸಾಧಿಸುವ ತುಡಿತ ಇದ್ದರೆ ಅವರಲ್ಲಿ ಮೇಳವನ್ನು ನಡೆಸಲು ಹೇಳು.’’ ಅದೆಷ್ಟು ಅರ್ಥಗರ್ಭಿತವಾಗಿದೆ ಈ ಮಾತು! ಮೇಳವನ್ನು ಯಜಮಾನನಾಗಿ ಮುನ್ನಡೆಸುವುದು ಅಷ್ಟು ಸುಲಭವಲ್ಲ ಎಂಬುದು ಈ ಮಾತಿನ ಅರ್ಥ. ``ಮೇಳಗಳನ್ನು ಮುನ್ನಡೆಸುವ ಯಜಮಾನನ ಸ್ಥಿತಿಯೂ, ಬ್ರಹ್ಮಕಪಾಲ ಹಿಡಿಸಿಕೊಂಡು ನೋವಿನಿಂದ ಅಲೆದ ಈಶ್ವರನ ಸ್ಥಿತಿಯೂ ಒಂದೇ’’ ಎಂಬ ಮಾತೂ ಇದೆ. ಯಕ್ಷಗಾನ ಮೇಳವೆಂದೇನು? ಯಾವುದೇ ಒಂದು ಸಂಸ್ಥೆಯನ್ನು ಕಟ್ಟಿ ವ್ಯವಹರಿಸುವುದು ಕಷ್ಟದ ಕೆಲಸ ತಾನೇ? ಎಲ್ಲರನ್ನೂ ಒಂದೇ ಸೂರಿನಡಿ ತಂದು ಮುನ್ನಡೆಸ ಬೇಕು. ``ಎಲ್ಲರನ್ನೂ ಒಂದೆಡೆ ಕಲೆಹಾಕುವುದು ಎಂದರೆ ಕಪ್ಪೆಗಳನ್ನು ತೂಗಿದ ಹಾಗೆ. ಲೆಕ್ಕಕ್ಕೆ ಸಿಕ್ಕೀತು. ಆದರೆ ತೂಕಕ್ಕೆ ಸಿಗದು. ಕೊನೆಯ ವರೆಗೂ ನಿಲ್ಲದು’’ ಎಂಬ ಮಾತೂ ಇದೆ. ಯಾರನ್ನೋ ಆಕ್ಷೇಪಿಸಲು ಹಿಂದಿನವರು ಈ ಮಾತುಗಳನ್ನು ಹೇಳಿರಲಾರರು. ತುಂಬಾ ಮಂದಿಗಳನ್ನು ಒಟ್ಟು ಸೇರಿಸಿ ಸಂಸ್ಥೆಯನ್ನು ಮುನ್ನಡೆಸಲು ತುಂಬಾ ಕಷ್ಟ ಎಂಬುದನ್ನು ಪ್ರಕಟಪಡಿಸಲು ಈ ಮಾತುಗಳನ್ನು ಹೇಳಿರಬಹುದು. ಕಲಾವಿದರೇ ಯಜಮಾನನಾಗಿ ಮೇಳವನ್ನು ಮುನ್ನಡೆಸಿದ್ದೂ ಇದೆ. ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕುರಿಯ ವಿಠಲ ಶಾಸ್ತ್ರಿಗಳು (ಧರ್ಮಸ್ಥಳ ಮೇಳ) ಅಲ್ಲದೆ ಶೇಣಿ ಗೋಪಾಲಕೃಷ್ಣ ಭಟ್ಟರೂ ಮೇಳದ ನೇತೃತ್ವವನ್ನು ವಹಿಸಿದ್ದರು. ಅಲ್ಲದೆ ಪಳ್ಳಿ ಶ್ರೀ ಸೋಮನಾಥ ಹೆಗ್ಡೆಯವರೂ, ಕಸ್ತೂರಿ ಪೈಗಳು ಕ್ರಮವಾಗಿ ಸಾಲಿಗ್ರಾಮ ಮತ್ತು ಸುರತ್ಕಲ್ಲು ಮೇಳಗಳ ಯಜಮಾನರಾಗಿ ಪ್ರಸಿದ್ಧರು. ಇವರಾರೂ ಇಂದು ನಮ್ಮ ಜತೆಗಿಲ್ಲ. ಆದರೆ ``ಅಳಿವುದು ಕಾಯವು, ಜಗದೊಳಗುಳಿವುದು ಕೀರ್ತಿಯು’’ ಎಂಬಂತೆ ಬದುಕಿ ಖ್ಯಾತರಾದರು. ಮೇಳವನ್ನು ನಡೆಸುವುದು ಕಷ್ಟವೆಂದು ಇವರಾರೂ ಹೇಳಿರಲಾರರು. ಹಾಗೆಂದು ಸುಲಭವೆಂದು ಖಂಡಿತಾ ಹೇಳಲಾರರು. ನಾಯಕನಾದವನು ಕಷ್ಟ ನಷ್ಟ ಎಂಬ ಮಾತುಗಳನ್ನು ಆಡಲೇಬಾರದು ಎಂಬ ಸಾಮಾನ್ಯಜ್ಞಾನ ಅವರಿಗಿದ್ದಿತ್ತು. ವಿಶ್ವವಿದ್ಯಾನಿಲಯದಲ್ಲಿ ಓದಿ ಪದವಿಯನ್ನು ಪಡೆದು ವಿದ್ಯಾವಂತರಲ್ಲದಿದ್ದರೂ ಅವರೆಲ್ಲಾ ಬುದ್ಧಿವಂತರಾಗಿದ್ದರು. ಬದುಕು ಎಂಬ ಪಾಠಶಾಲೆಯಲ್ಲಿ ಅನುಭವಗಳೆಂಬ ಪಾಠಗಳಿಂದ ಪಕ್ವರಾಗಿದ್ದರು. ಕಷ್ಟ ನಷ್ಟ ಎಂದು ಹೇಳಿದರೆ ಸಂಘಟನೆಗೆ ಆ ಮಾತು ಮಾರಕವಾಗುತ್ತದೆ. ನಮ್ಮನ್ನು ಅನುಸರಿಸಿ ಬರುವ ಕಲಾವಿದರೂ, ಕಲಾಭಿಮಾನಿಗಳೂ ಸ್ಥೈರ್ಯ ಕಳೆದುಕೊಂಡಾರು ಎಂಬ ನಿರ್ಣಯ ಅವರಿಗಿತ್ತು. ಅವರು ಗಳಿಸದೆ ಅಳಿದರೂ ಯಕ್ಷಗಾನವನ್ನು ಉಳಿಸಿದರು. ಗಳಿಸಿದ್ದು ಒಳ್ಳೆಯ ಹೆಸರನ್ನು ಎಂಬುದು ಮುಖ್ಯ. ಅನೇಕ ವರುಷಗಳಿಂದ ಶ್ರೀ ಧರ್ಮಸ್ಥಳ ಮೇಳವು ಶ್ರೀ ಕ್ಷೇತ್ರದ ವತಿಯಿಂದಲೇ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಪೂಜ್ಯ ರಾಜರ್ಷಿ ಡಾ. ವೀರೇಂದ್ರ ಹೆಗಡೆಯವರ ಮತ್ತು ಶ್ರೀ ಡಿ. ಹರ್ಷೇಂದ್ರ ಕುಮಾರರ ನಿರ್ದೇಶನದಲ್ಲಿ ಕಾರ್ಯಾಚರಿಸುತ್ತಿರುವುದು ಕಲಾಭಿಮಾನಿಗಳಿಗೆಲ್ಲಾ ಸಂತಸ ತರುವ ವಿಚಾರ. ಅಲ್ಲದೆ ಯಕ್ಷಗಾನದ ಉಳಿವಿಗೆ ಶ್ರೀ ಕ್ಷೇತ್ರದ ಕೊಡುಗೆಯು ಅಪಾರ. ಶ್ರೀ ಧರ್ಮಸ್ಥಳ ಕ್ಷೇತ್ರದಿಂದ ನಡೆಸಲ್ಪಡುತ್ತಿದ್ದ ಲಲಿತಕಲಾ ಕೇಂದ್ರದಲ್ಲಿ ನಾಟ್ಯ ಕಲಿತ ವಿದ್ಯಾರ್ಥಿಗಳೇ ಇಂದು ಹೆಚ್ಚಿನ ಎಲ್ಲಾ ಮೇಳಗಳಲ್ಲಿ ಕಲಾವಿದರಾಗಿ ವ್ಯವಸಾಯವನ್ನು ಮಾಡು ತ್ತಿದ್ದಾರೆ. ಮೇಳದ ಯಜಮಾನನಲ್ಲದಿದ್ದರೂ ಕಲೆಯ ಉಳಿವಿಗೆ, ಕಲಾವಿದರ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು ಸಂಪಾಜೆ ಯಕ್ಷೋತ್ಸವದ ರೂವಾರಿ, ಕಲಾಪೋಷಕರಾದ ಡಾ. ಟಿ. ಶ್ಯಾಮ ಭಟ್ಟರು. ಕಲಾವಿದರು ಅವರನ್ನು ಯಜಮಾನರು, ಧನಿಗಳೆಂದೇ ಕರೆಯುವುದನ್ನು ನಾವು ಕಾಣ ಬಹುದು. ಪಳ್ಳಿ ಶ್ರೀ ಕಿಶನ್ ಕುಮಾರ್ ಹೆಗ್ಡೆ ಯವರು ಸಾಲಿಗ್ರಾಮವೇ ಮೊದಲಾದ ಮೇಳಗಳ ಯಜಮಾನರಾಗಿ ಪ್ರಸಿದ್ಧರಾಗಿದ್ದಾರೆ. ಅಲ್ಲದೆ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಮೊತ್ತಮೊದಲು ಸ್ಥಾಪಿತವಾದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ``ಯಕ್ಷಗಾನ ಕಲಾರಂಗ (ರಿ.) ಉಡುಪಿ’’ ಈ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ಯಕ್ಷಗಾನ ಕಲೆ ಮತ್ತು ಕಲಾವಿದರ ಮೇಲಿರುವ ಅವರ ಕಾಳಜಿ ಶ್ಲಾಘನೀಯವಾದುದು. ಪ್ರಸ್ತುತ ನಮ್ಮ ಜತೆಗಿರುವ ಖ್ಯಾತ, ಹಿರಿಯ ಹಾಸ್ಯಗಾರರಾದ ಪೆರುವಡಿ ಶ್ರೀ ನಾರಾಯಣ ಭಟ್ಟರೂ ಮೇಳವನ್ನು ಯಜಮಾನನಾಗಿ ಮುನ್ನಡೆಸಿದವರು. ಮುಲ್ಕಿ ಮೇಳವನ್ನು ಅನೇಕ ವರ್ಷಗಳ ಕಾಲ ಸಂಚಾಲಕನಾಗಿ ನಡೆಸಿದ್ದರು. ಏನನ್ನೂ ಗಳಿಸಿಲ್ಲ. ಕೈಸುಟ್ಟುಕೊಂಡೆ ಎಂದು ಅವರೇ ಹೇಳುತ್ತಾರೆ. ಮೇಳವನ್ನು ನಡೆಸುವಾಗ ಕಷ್ಟವೆಂದು ಹೇಳದೆ ಈಗ ಆ ಸತ್ಯವನ್ನು ಹೊರಗೆಡಹುತ್ತಾರೆ. ಬಡಗಿನ ಅನೇಕ ಮೇಳಗಳನ್ನು ಸಂಚಾಲಕರಾಗಿ ಮುನ್ನಡೆಸಿ ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡ ಮಹನೀಯರನ್ನು ಸ್ಮರಿಸೋಣ. ಪ್ರಸ್ತುತ ಮೇಳಗಳನ್ನು ಮುನ್ನಡೆಸುತ್ತಿರುವ ಯಜಮಾನರು ಗಳನ್ನು ಪ್ರೋತ್ಸಾಹಿಸೋಣ. ಯಾಕೆಂದರೆ ಯಜಮಾನನಾಗಿ ಯಕ್ಷಗಾನ ಮೇಳಗಳನ್ನು ನಡೆಸುವುದು ಕಠಿಣವಾದ ಒಂದು ಕಾಯಕ. ಅದೊಂದು ಮುಳ್ಳಿನ ಹಾದಿ. ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮೇಳದ ಯಜಮಾನರುಗಳ ಪಾತ್ರವು ಹಿರಿದಾದುದು. ಹಾಗಾಗಿ ಎಲ್ಲಾ ಮೇಳಗಳ ಯಜಮಾನರುಗಳನ್ನು ನಾವು ಗೌರವಿಸುತ್ತೇವೆ. ಸಹಕಾರವನ್ನಿತ್ತು ಅವರನ್ನು ಪ್ರೋತ್ಸಾಹಿಸುತ್ತೇವೆ.
ದ. ಕ. ಜಿಲ್ಲೆಯ ಅನೇಕ ಪ್ರಸಿದ್ಧ ಪುಣ್ಯಕ್ಷೇತ್ರ ಗಳಲ್ಲಿ ಒಂದು ಶ್ರೀ ಕ್ಷೇತ್ರ ಕಟೀಲು. ಶ್ರೀ ಕ್ಷೇತ್ರದ ವತಿಯಿಂದ ನಡೆಸಲ್ಪಡುವ ಯಕ್ಷಗಾನ ತಂಡಗಳು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ (ರಿ.), ಕಟೀಲು ಎಂದು ಪ್ರಸಿದ್ಧವಾಗಿದೆ. ಕಟೀಲು ಕ್ಷೇತ್ರದಲ್ಲಿ ಭಕ್ತವತ್ಸಲೆಯಾಗಿ ನೆಲೆಸಿರುವ ಲೋಕಮಾತೆಯು ಯಕ್ಷಗಾನಪ್ರಿಯೆ ಎಂದೇ ಖ್ಯಾತಳಾಗಿದ್ದಾಳೆ. ಯಕ್ಷಗಾನವು ಆಕೆಗೆ ಅತ್ಯಂತ ಪ್ರಿಯವಾದ ಸೇವೆಯು. 1939ರಿಂದ ತೊಡಗಿ ಇಂದಿನ ವರೇಗೂ ಕಟೀಲು ಮೇಳಗಳನ್ನು ಕಲ್ಲಾಡಿ ಮನೆಯ ಸದಸ್ಯರೇ ಯಜಮಾನರಾಗಿ ಮುನ್ನಡೆಸುತ್ತಿದ್ದಾರೆ. 1939ರಲ್ಲಿ ದಿ| ಕಲ್ಲಾಡಿ ಕೊರಗ ಶೆಟ್ಟರು ಮೇಳವನ್ನು ನಡೆಸುವ ಮನಮಾಡಿದ್ದರು. ಬದುಕಿಗಾಗಿ ಬೇರೆ ದಾರಿಯನ್ನು ಕಂಡುಕೊಳ್ಳಲು ಅವಕಾಶಗಳಿತ್ತು ಅವರಿಗೆ. ಆದರೂ ಕಲಾತಂಡದ ನಾಯಕನಾಗಲು ನಿರ್ಣಯಿಸಿದರು. ಕಾಡಿನಲ್ಲಿ ದಾರಿಯು ಕವಲುಗಳೊಡೆದಿತ್ತು. ಎಲ್ಲರೂ ಸಾಗಿದ ಸುಲಭ ದಾರಿಯನ್ನು ಅವಲಂಬಿಸದೆ ಯಾರೂ ತುಳಿಯದ ದುರ್ಗಮ ಹಾದಿಯನ್ನೇ ತುಳಿದು ಸಾಗಿ ಗುರಿ ತಲುಪಿದ ಸಾಹಸಿಯಾಗಿ ಮೆರೆದಿದ್ದರು. ಹಿಂದಿನ ಕಾಲದಲ್ಲಿ ಮೇಳಗಳ, ಕಲಾವಿದರ ಸ್ಥಿತಿಗತಿ ಹೇಗಿತ್ತೆಂದು ವಯೋವೃದ್ಧ ರಾದ ಪ್ರೇಕ್ಷಕರಲ್ಲಿ, ಕಲಾವಿದರನ್ನು ಕೇಳಿ ತಿಳಿಯಬಹುದು. ಸಾರಿಗೆ ಸಂಪರ್ಕವಿಲ್ಲದ, ವಾಹನಗಳಿಲ್ಲದ ಕಾಲ ಅದು. ಪ್ರದರ್ಶನಗಳನ್ನು ಪಡೆಯುವಲ್ಲಿ ಅನಾನುಕೂಲತೆ. ಇಂತಹ ಪರಿಸ್ಥಿತಿಯಲ್ಲೂ ಯಕ್ಷಗಾನವನ್ನೇ ಅವಲಂಬಿಸಿ ಬದುಕಿದ್ದರು. ಕಟೀಲು ಮಾತ್ರವಲ್ಲದೆ ಕುಂಡಾವು ಮೇಳವನ್ನು ಸ್ಥಾಪಿಸಿ ನೂತನ ಪ್ರಯೋಗಗಳನ್ನು ಆರಂಭಿಸಿದ್ದರು. ಯಕ್ಷಗಾನ ಕಲೆಯನ್ನೂ ಕಲಾವಿದರನ್ನೂ ಕಡೆಗಣ್ಣಿನಿಂದ ನೋಡಿದ ಕಾಲವದು. ಕಲ್ಲಾಡಿ ಕೊರಗ ಶೆಟ್ರ ಪರಿಶ್ರಮದಿಂದ ಕಲೆಯನ್ನೂ ಕಲಾವಿದರನ್ನೂ ಸಮಾಜವು ಗೌರವಿಸಿತು. ಊರಿನ ಗಣ್ಯರ ಗೌರವಕ್ಕೆ ಕೊರತೆಯಾಗದಂತೆ ಎಚ್ಚರವಹಿಸಿ ಪ್ರದರ್ಶನಗಳನ್ನು ಏರ್ಪಡಿಸಿ ಅವರು ನೀಡಿದ ಹಣವನ್ನು ಕಲಾವಿದರಿಗೆ ಹಂಚಿಕೊಟ್ಟವರು. 1939ರಿಂದ 1966ರ ವರೇಗೂ ಇವರು ಮೇಳವನ್ನು ನಡೆಸಿದ್ದರಂತೆ. ಈತನ್ಮಧ್ಯೆ ಕೆಲವು ಸಮಯ ಇವರ ಮಿತ್ರರಾದ ನೂಜಿಪ್ಪಾಡಿ ಶಂಕರನಾರ್ಣಪ್ಪಯ್ಯನವರೂ, ಇನ್ನಿತರರೂ ನಡೆಸಿ ಪುನಃ ಕೊರಗ ಶೆಟ್ಟರಿಗೇ ಸಂಚಾಲಕತ್ವವು ಸಿಕ್ಕಿತ್ತೆಂಬ ಹೇಳಿಕೆಯೂ ಇದೆ. 1966ರ ನಂತರ ತನ್ನ ಪುತ್ರ ಕಲ್ಲಾಡಿ ವಿಠಲ ಶೆಟ್ಟರಿಗೆ ಸಂಚಾಲಕತ್ವವನ್ನು ವಹಿಸಿ ಯಕ್ಷಗಾನ ರಂಗದಿಂದ ನಿವೃತ್ತರಾಗಿದ್ದರು. ಆಗ ಇದ್ದುದು ಒಂದೇ ಮೇಳ. 1967ರಿಂದ ತೊಡಗಿ 2004ರ ವರೇಗೆ ಕಲ್ಲಾಡಿ ವಿಠಲ ಶೆಟ್ಟರ ಯಾಜಮಾನ್ಯ. 1975ರಲ್ಲಿ ಎರಡನೇ ಮೇಳ, 1983ರಲ್ಲಿ ಮೂರನೇ ಮೇಳ, 1993ರಲ್ಲಿ ನಾಲ್ಕನೇ ಮೇಳ ಆರಂಭವಾಯಿತು. ಇವರ ಸಂಚಾಲಕತ್ವದಲ್ಲಿ ಮೇಳಗಳ ಮತ್ತು ಪ್ರದರ್ಶನಗಳ ಸಂಖ್ಯೆಯೂ ವೃದ್ಧಿಸಿತು. ಸಮರ್ಥ ಯಜಮಾನರೆಂಬ ಹೆಸರನ್ನೂ ಗಳಿಸಿದರು. ಕಲಾಮಾತೆ ಮತ್ತು ಶ್ರೀ ಸೋಮನಾಥೇಶ್ವರ ಅನುಗ್ರಹದಿಂದ ಮೇಳವನ್ನು ಮುನ್ನಡೆಸುವುದಕ್ಕೆಂದೇ ವಿಠಲ ಶೆಟ್ಟರು ಕಲ್ಲಾಡಿ ಕೊರಗ ಶೆಟ್ಟರಿಗೆ ಮಗನಾಗಿ ಜನಿಸಿದರೆಂದು ಜನರು ಆಡಿಕೊಳ್ಳುತ್ತಿದ್ದರು. 2005ರಲ್ಲಿ ಇವರು ಮರಣಿಸಿದಾಗ ಸಹಜವಾಗಿ ಎಲ್ಲರಿಗೂ ದುಃಖವಾಗಿತ್ತು. ಇವರ ಸಹೋದರ ಕಲ್ಲಾಡಿ ನಾಗರಾಜ ಶೆಟ್ರೂ ಮೇಳದ ಸಂಚಾಲಕರಾಗಿ ಕೆಲಸ ಮಾಡಿದ್ದರು.
ಕಲ್ಲಾಡಿ ವಿಠಲ ಶೆಟ್ಟರ ನಂತರ ಕಟೀಲು ಮೇಳಗಳನ್ನು ಯಜಮಾನರಾಗಿ ಮುನ್ನಡೆಸುತ್ತಿರುವವರು ಅವರ ಸುಪುತ್ರರಾದ ಕಲ್ಲಾಡಿ ದೇವೀಪ್ರಸಾದ ಶೆಟ್ಟರು. ಶ್ರೀಯುತರು ಕಲ್ಲಾಡಿ ಶ್ರೀ ವಿಠಲ ಶೆಟ್ಟಿ ಮತ್ತು ಕಿರಾಳೆಗುತ್ತು ಸರೋಜಿನಿ ಶೆಟ್ಟಿ ದಂಪತಿಗಳ ಪುತ್ರರು. 2005ರಿಂದ ತೊಡಗಿ ಹದಿನಾಲ್ಕು ವರುಷಗಳಿಂದ ಸಂಚಾಲಕರಾಗಿ ಕಟೀಲು ಮೇಳಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಬಾಲ್ಯದಲ್ಲಿಯೇ ಇವರು ಯಕ್ಷಗಾನಾಸಕ್ತರಾಗಿದ್ದರು. ಶಾಲಾ ವಿದ್ಯಾರ್ಥಿಯಾಗಿರುವಾಗ ರಜಾದಿನಗಳಲ್ಲಿ ಪ್ರದರ್ಶನಗಳನ್ನು ನೋಡುತ್ತಿದ್ದರು. ಅಲ್ಲದೆ ಬಣ್ಣದ ಮನೆಯಲ್ಲಿ ಕಲಾವಿದರೊಂದಿಗೆ ಜತೆಯಾಗಿ ಇರುತ್ತಿದ್ದವರು. ತನ್ನ ತೀರ್ಥರೂಪರು ಮೇಳವನ್ನು ನಾಯಕನಾಗಿ ಮುನ್ನಡೆಸುತ್ತಿದ್ದ ರೀತಿಯನ್ನು ನೋಡುತ್ತಾ ಬೆಳೆದವರು. ಇದರಿಂದ ಅನುಕೂಲವೇ ಆಗಿತ್ತು. ಪ್ರಸಂಗಗಳ ಮಾಹಿತಿಯನ್ನು ತಿಳಿಯುವ ಜತೆಗೆ ಕಲಾವಿದರ ಕಷ್ಟಸುಖಗಳಿಗೆ ಹೇಗೆ ಸ್ಪಂದಿಸಬೇಕಾದುದು ಎಂಬುದನ್ನೂ ಅರಿತುಕೊಂಡರು. ಯಶಸ್ವೀ ಪ್ರದರ್ಶನಕ್ಕೆ ಅನುಸರಿಸಬೇಕಾದ ಕ್ರಮಗಳನ್ನು ನೋಡಿಯೇ ತಿಳಿದಿದ್ದರು. ಕಲಾವಿದರ ಕಷ್ಟಗಳಿಗೆ ಸ್ಪಂದಿಸುವ ಸದ್ಗುಣವು ಎಳವೆಯಲ್ಲಿಯೇ ಹುಟ್ಟಿಕೊಂಡಿತ್ತು. ತಂದೆಯಿಂದ ಕೊಡಲ್ಪಟ್ಟ ಕರ್ನಾಟಕ ಮೇಳವನ್ನು ಅನೇಕ ವರ್ಷಗಳ ಕಾಲ ಮುನ್ನಡೆಸಿದ್ದರು. ಈ ಸಂದರ್ಭದಲ್ಲಿ ನೋವು-ನಲಿವು, ಕಷ್ಟ-ನಷ್ಟಗಳ ಅನುಭವವೂ ಆಗಿತ್ತು. ಆರ್ಥಿಕವಾಗಿ ತಾನೇನೂ ಗಳಿಸದಿದ್ದರೂ ಯಕ್ಷಗಾನ ಪ್ರದರ್ಶನಗಳನ್ನು ನಡೆಸಿ ಕಲೆಯು ರಂಜಿಸಲು ಕಾರಣರಾಗಿದ್ದರು. ಅನೇಕ ಕಲಾವಿದರ ಪ್ರತಿಭಾ ಪ್ರಕಟೀಕರಣಕ್ಕೆ ಅವಕಾಶವೂ ಆಗಿತ್ತು. ಕಲ್ಲಾಡಿ ದೇವಿಪ್ರಸಾದ ಶೆಟ್ಟರು ಗಳಿಸಿದ್ದು ಯಕ್ಷಗಾನ ಮೇಳಗಳನ್ನು ಮುನ್ನಡೆಸುವ ಅನುಭವಗಳನ್ನು ಮಾತ್ರ. ಈ ಅನುಭವಗಳು ನ್ಯೂನತೆಗಳಿಲ್ಲದ ಸುಂದರ ಭವನದಡಿ ಅಲೌಕಿಕವಾಗಿರುವ ಅಡಿಪಾಯದಂತೆ ದೃಢವಾಗಿತ್ತು. ಈ ಅಡಿಪಾಯದಡಿಯಲ್ಲಿಯೇ ಈಗ ``ಕಟೀಲು ಆರೂ ಮೇಳಗಳ ಸಂಚಾಲಕರು’’ ಎಂಬ ಸೌಧವು ಶೋಭಿಸುತ್ತಿದೆ. ಇವರ ಯಾಜಮಾನ್ಯದಲ್ಲಿ ಮೇಳಗಳ, ಪ್ರದರ್ಶನಗಳ ಸಂಖ್ಯೆಯೂ ವೃದ್ಧಿಸಿತು. ``ಕಲ್ಲಾಡಿ ಕೊರಗ ಶೆಟ್ಟರಿಂದ ಪುತ್ರ ಕಲ್ಲಾಡಿ ವಿಠಲ ಶೆಟ್ಟರಿಗೆ ಪ್ರಸಾದವಾಗಿ ಬಂದುದು ಒಂದು ಮೇಳ. ಶ್ರೀ ವಿಠಲ ಶೆಟ್ಟರ ಕಾಲದಲ್ಲಿ ಅದು ನಾಲ್ಕಾಗಿ ವೃದ್ಧಿಸಿತು’’ ಎಂದು ಕಲಾಭಿಮಾನಿಗಳು ಆಡಿಕೊಳ್ಳುತ್ತಿದ್ದರು. ದೇವೀಪ್ರಸಾದ ಶೆಟ್ಟರು ಸಂಚಾಲಕರಾಗಿ ನಿಯುಕ್ತರಾದಾಗ ಇದ್ದುದು ನಾಲ್ಕು ಮೇಳಗಳು. ಈಗ ಆರು ಆಗಿ ವೃದ್ಧಿಸಿದೆ. ಕಲಾವಿದರು ಯಜಮಾನರೆಂದು ಕರೆಯುವುದು ಕರ್ತವ್ಯ. ಆದರೆ ನಾನು `ಯಜಮಾನ’ ಎಂದು ಹೇಳಿದವರಲ್ಲ ದೇವೀಪ್ರಸಾದ ಶೆಟ್ಟರು. ನಾನು ಕಲಾಮಾತೆಯ ಸೇವಕ. ಕಲೆಗೆ, ಕಲಾವಿದರಿಗೆ, ಕಲಾಭಿಮಾನಿಗಳಿಗಾಗಿ ಕೆಲಸ ಮಾಡುತ್ತಿದ್ದೇವೆ. ಕಟೀಲು ಮಹಾತಾಯಿಯ ಅನುಗ್ರಹವಿರುವ ತನಕವೂ ತೊಡಗಿಸಿಕೊಳ್ಳುತ್ತೇನೆ ಎನ್ನುತ್ತಾರೆ. ಇವರು ಸಂಚಾಲಕರಾದ ಬಳಿಕ ಸುಧಾರಣೆಗಳಡಿಯಲ್ಲಿ ಅತ್ಯುತ್ತಮ ವ್ಯವಸ್ಥೆಗಳೂ ಆದುವು. ಮೊದಲು ನೆಲದಲ್ಲೇ ಹಾಕಿದ ರಂಗಸ್ಥಳದಲ್ಲಿ ಪ್ರದರ್ಶನಗಳು ನಡೆಯುತ್ತಿದ್ದುದು ಎಲ್ಲರಿಗೂ ತಿಳಿದ ವಿಚಾರ. ಈಗ ಎತ್ತರದ ರಂಗಸ್ಥಳ (Stage), ಕಲಾವಿದರಿಗೆ ಬಸ್, ಸರಂಜಾಮುಗಳನ್ನು ಸಾಗಿಸಲು ವಾಹನ ಎಲ್ಲವೂ ಇವೆ. ಮೇಳದ ವರಮಾನದ ಮಿತಿಯೊಳಗೆ ಗಣನೀಯವಾಗಿ ಕಲಾವಿದರ, ನೇಪಥ್ಯ ಕಲಾವಿದರುಗಳ ಆದಾಯವೂ ಹೆಚ್ಚಾದುದು ಸಂತಸದ ಸಂಗತಿ. ಅನೇಕ ವರ್ಷಗಳಿಂದ ಮಳೆಗಾಲದಲ್ಲಿ ಆರ್ಥಿಕ ಸಹಾಯವು ಒದಗುತ್ತಿದೆ. ಈ ಸತ್ಕಾರ್ಯಗಳಿಗೆ ಶ್ರೀ ಕ್ಷೇತ್ರ ಕಟೀಲಿನ ಭಕ್ತರೂ, ಕಲಾಪೋಷಕರೂ ಆದ ಮಹನೀಯರನೇಕರ ಬೆಂಬಲ ಸಹಕಾರಗಳಿವೆ. ಕಲಾವಿದರಿಗೆ ಇನ್ನಷ್ಟು ವ್ಯವಸ್ಥೆಗಳಾಗಬೇಕೆಂಬ ನಿರ್ಣಯವೂ ಶ್ರೀ ದೇವೀಪ್ರಸಾದ ಶೆಟ್ಟರಲ್ಲಿದೆ. ಸೇವಾಕರ್ತರು, ಕಲಾಭಿಮಾನಿಗಳು ಯಜಮಾನರಾದ ನಿಮ್ಮನ್ನು ಸನ್ಮಾನಿಸುತ್ತೇವೆ ಎಂದರೆ ನಯವಾಗಿ ಅವರಿಗೆ ನೋವಾಗದಂತೆ ತಿರಸ್ಕರಿಸುತ್ತಾರೆ. ಸೇವಾ ಬಯಲಾಟ ನಡೆಯುವುದು ಕಲಾವಿದರಿಂದ. ನೇಪಥ್ಯ ಕಲಾವಿದರೂ ದುಡಿಯುತ್ತಾರೆ. ನಾನು ನಿಮಿತ್ತ ಮಾತ್ರ. ಅವರನ್ನು ಸನ್ಮಾನಿಸಿ ಎಂದು ಹೇಳುತ್ತಾರೆ.
ಕೆಲವರ್ಷಗಳ ಹಿಂದೆ ನಡೆದ ಘಟನೆ- ಅನೇಕ ವರ್ಷಗಳ ಕಾಲ ವೃತ್ತಿಜೀವನದಿಂದ ದೂರವಾಗಿ ಅತಂತ್ರರಾಗಿದ್ದ ಕಲಾವಿದರೊಬ್ಬರು ಕಟೀಲು ಮೇಳ ಸೇರಿದ್ದರು. ತನ್ನ ಬದುಕಿನ ಬವಣೆಯನ್ನು ಕಲ್ಲಾಡಿ ದೇವೀಪ್ರಸಾದ ಶೆಟ್ಟರಲ್ಲಿ ವಿವರಿಸಿದ್ದರು. ಎಲ್ಲವನ್ನೂ ಸಹನೆಯಿಂದ ಕೇಳಿಸಿಕೊಂಡ ದೇವೀಪ್ರಸಾದ ಶೆಟ್ಟರು ಆ ಕಲಾವಿದನನ್ನು ಸಂತೈಸಿದ ರೀತಿ ಎಲ್ಲರೂ ಮೆಚ್ಚುವಂತಿತ್ತು- ``ನಾನೂ ಯಕ್ಷಗಾನದಿಂದ ಬಹುಕಾಲ ದೂರವಾಗಿ ಉಳಿದಿದ್ದೆ. ಬದುಕು ಕಷ್ಟವಾಗಿತ್ತು. ಯಾರೂ ಗುರುತಿಸಲಾರದ ಕಷ್ಟದ ದಿನಗಳನ್ನು ಕಳೆದಿದ್ದೆ. ಆದರೆ ಕಲಾಮಾತೆಯಾದ ಕಟೀಲು ಮಹಾತಾಯಿಯು ಕೈಹಿಡಿದು ಮೇಲೆತ್ತಿದಳು. ಮೇಳಗಳನ್ನು ನಡೆಸುವ ಅವಕಾಶವನ್ನಿತ್ತು ಅನುಗ್ರಹಿಸಿದಳು. ಕಲಾಮಾತೆಯಾದ ಆಕೆಯನ್ನು ನಂಬಿ. ತಿರುಗಾಟ ಮಾಡಿ. ನಂಬಿದವರನ್ನು ಆಕೆ ಕೈಬಿಡುವುದಿಲ್ಲ. ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಸೇವೆಮಾಡಿದವರನ್ನು ಕಲಾಮಾತೆಯು ಅನುಗ್ರಹಿಸುತ್ತಾಳೆ. ಹೆದರಬೇಡಿ. ಅನ್ಯ ಯೋಚನೆಗಳಿಗೆ ಅವಕಾಶ ಕೊಡದೆ ಧೈರ್ಯ ವಾಗಿ ಮುಂದುವರಿಯಿರಿ’’ ಎಂದು ಹೇಳಿದ್ದರು. ಬದುಕಿನ ಕಷ್ಟಗಳಿಗೆ ತನ್ನನ್ನೇ ಉದಾಹರಿಸಿ ಆ ಕಲಾವಿದನಲ್ಲಿ ಧೈರ್ಯ ತುಂಬಿದ್ದರು!
ಯಶಸ್ವೀ ಪ್ರದರ್ಶನಗಳಿಗೆ ಸಂಘಟಕರು, ಪ್ರೇಕ್ಷಕರು, ಕಲಾವಿದರು ಇವರೊಳಗೆ ಸೌಹಾರ್ದ ಸಂಪರ್ಕವೂ ಬೇಕು. ಯಜಮಾನರಾಗಿ ದೇವೀಪ್ರಸಾದ ಶೆಟ್ಟರು ಈ ನಿಟ್ಟಿನಲ್ಲೂ ಪ್ರಯತ್ನಿಸುತ್ತಾರೆ. ರಂಗದೊಳಗೆ ಅತ್ಯುತ್ತಮನಾದರೆ ಸಾಲದು. ಎಲ್ಲರಿಗೂ ಬೇಕಾದವನಾಗಿ ಬದುಕಿ ಒಳ್ಳೆಯವನೆಂದು ಹೇಳಿಸಿಕೊಳ್ಳಬೇಕು ಎಂಬ ಸಂದೇಶವನ್ನು ಮೇಳದ ಸರ್ವಸದಸ್ಯರಿಗೂ ಆಗಾಗ ಹೇಳಿ ಎಚ್ಚರಿಸುತ್ತಾರೆ. ಮೇಳಗಳ ತಿರುಗಾಟ ಪ್ರಾರಂಭವಾದ ನಂತರ ಹತ್ತನಾವಧಿ ವರೇಗೆ 6 ತಿಂಗಳು ಕಲಾವಿದರಂತೆ ಇವರೂ ರಾತ್ರೆ ವಿಶ್ರಾಂತಿ ಅನುಭವಿಸಿದ್ದಿರಲಾರದು. ಪ್ರತಿದಿನವೂ ಕಡಿಮೆ ಪಕ್ಷ ನಾಲ್ಕು ಮೇಳಗಳ ಪ್ರದರ್ಶನಗಳಿರುವ ಕಡೆಗೆ ಹೋಗುತ್ತಾರೆ. ಬೆಳಗಿನ ಹೊತ್ತು ಅಥವಾ ಹಗಲೇ ವಿಶ್ರಾಂತಿ. ಪ್ರಸಿದ್ಧಿಯ ಜತೆ ಕೊರತೆಗಳಿಗೂ ತಾನೇ ಹೊಣೆಯನ್ನು ಹೊರಬೇಕಾಗುತ್ತದೆ ಎಂಬ ಪ್ರಜ್ಞೆಯಿದ್ದು ವ್ಯವಹರಿಸುತ್ತಾರೆ. ಇವರು ಹೆಚ್ಚು ಮಾತನಾಡುವವರಲ್ಲ. ಆದರೆ ಸಹನೆಯಿಂದ ಎಲ್ಲವನ್ನೂ ಕೇಳಿ ಯೋಗ್ಯ ನಿರ್ಣಯವನ್ನು ಕೈಗೊಳ್ಳಬಲ್ಲರು. ಹೂವಿಗಿಂತಲೂ ಮೃದುವಾದ ಮನಸ್ಸು ಹೊಂದಿದರೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ನಾಯಕನಿಗಿರಬೇಕಾದ ಗುಣಗಳಿವು. ಯಕ್ಷಗಾನ ಕಲೆಯ ಬಗೆಗೆ ಕಲ್ಪನೆ, ಸಂಘಟನಾ ಚಾತುರ್ಯ, ಸಂಚಾಲಕನಲ್ಲಿರಬೇಕಾದ ಗಾಂಭೀರ್ಯ, ಕಲಾವಿದರ ಬಗೆಗೆ ಕಾಳಜಿಯನ್ನು ಹೊಂದಿದ್ದಾರೆ. ಕೆಲವೊಂದು ಪ್ರಶ್ನೆಗಳಿಗೆ ಮೌನ ಮತ್ತು ನಗುವೇ ಉತ್ತರ ವಾಗಿರುತ್ತದೆ. ಇದು ದೌರ್ಬಲ್ಯವಲ್ಲ. ಅಳೆದು ತೂಗಿ, ಯೋಚಿಸಿಯೇ ಮಾತನಾಡುತ್ತಾರೆ.
``ಕಲಾಮಾತೆಯ ಅನುಗ್ರಹ ಮತ್ತು ಸೇವಾ ದಾರರ, ಆಸ್ರಣ್ಣಬಂಧುಗಳ, ಕಲಾವಿದರ, ಕಲಾಭಿಮಾನಿಗಳ ಸಹಕಾರದಿಂದ ಈ ವರೇಗೂ ಮುನ್ನಡೆಸಿದ್ದೇನೆ. ಕಟೀಲು ಶ್ರೀ ದೇವರ ಅನುಗ್ರಹ ಇರುವ ತನಕವೂ, ಎಲ್ಲರ ಸಹಕಾರದಿಂದಲೇ ಸಾಗುತ್ತೇನೆ’’ ಎನ್ನುವ ಕಲ್ಲಾಡಿ ಶ್ರೀ ದೇವೀಪ್ರಸಾದ ಶೆಟ್ಟರ ಆಡಳಿತಾವಧಿಯಲ್ಲೇ ಕಟೀಲಿನಲ್ಲಿ ಕಲಾವಿದರಿಗೆ ಅತ್ಯುತ್ತಮ ವಸತಿ ವ್ಯವಸ್ಥೆಯೂ ಆಗಿತ್ತು. ಸಹನೆ, ಕಲಾವಿದರ ಬಗ್ಗೆ ಕಾಳಜಿ, ಸಂಘಟನಾ ಚಾತುರ್ಯ, ಶ್ರೀ ಕ್ಷೇತ್ರಕ್ಕೆ ಮತ್ತು ಸಂಘಟಕರಿಗೆ ಕೊರತೆಯಾಗದಂತೆ ವ್ಯವಹರಿಸುವ ರೀತಿ, ಪ್ರಸಂಗಜ್ಞಾನ, ಕಲಾವಿದರ ಪ್ರತಿಭೆಯನ್ನು ಅಳೆದು ನಿರ್ಧರಿಸುವ ಜಾಣ್ಮೆ ಈ ಎಲ್ಲಾ ಗುಣಗಳನ್ನೂ ಹೊಂದಿದ ಕಾರಣದಿಂದಲೇ ಯಶಸ್ವೀ ಯಜಮಾನರಾಗಿ ದೇವೀಪ್ರಸಾದ ಶೆಟ್ಟರು ಕಳೆದ 14 ವರ್ಷಗಳಿಂದ ಮುನ್ನಡೆಯುತ್ತಿದ್ದಾರೆ. ಹಿರಿಯರಿಗೆ, ಕಲಾಭಿಮಾನಿಗಳಿಗೆ ಇವರು ಪ್ರೀತಿಯ ಕೊರಗಣ್ಣ. (ಅಜ್ಜನ ಹೆಸರು, ಕಲ್ಲಾಡಿ ಕೊರಗ ಶೆಟ್ಟಿ). ಕಲಾವಿದರ ಪಾಲಿಗೆ `ಯಜಮಾನರು’. ಕಲ್ಲಾಡಿ ಶ್ರೀ ದೇವೀಪ್ರಸಾದ ಶೆಟ್ಟರ ಸಂಚಾಲಕತ್ವದಲ್ಲಿ ಕಟೀಲು ಮೇಳಗಳು ಮುನ್ನಡೆಯಲಿ. ಯಕ್ಷಗಾನ ಕಲೆಯು ವಿಜೃಂಭಿಸಲಿ. ು
- ರವಿಶಂಕರ್ ವಳಕ್ಕುಂಜ
ಕಲ್ಲಾಡಿ ಶ್ರೀ ದೇವೀಪ್ರಸಾದ ಶೆಟ್ಟರು

Shubhavagali
ReplyDeleteKateelu melada Kala kusuma Ravishakar avara bhavapoorna ...arthapoorna...shubhavaagali
ReplyDelete.......olleya lekhana
ReplyDeleteಪರಮ ಸಾತ್ವಿಕರಾದ ಶೆಟ್ಟರ ನಡೆನುಡಿಗಳನ್ನ್ನು ಸಾತ್ವಿಕ ನುಡಿಮುತ್ತುಗಳಿಂದಲೇ ಲೇಖನವಾಗಿಸಿದ್ದೀರಿ. ಅಷ್ಟೇ ಸತ್ವಯುತವಾಗಿ ಲೇಖನ ಮೂಡಿಬಂದಿದೆ. ಧನ್ಯವಾದಗಳು.
ReplyDeleteಹದಿನೈದು ಸಂವತ್ಸರಗಳನ್ನು ಪೂರೈಸಿದ ನಿಮಗಿದೋ,
ReplyDeleteಅಭಿನಂದನೆಗಳು,
ಅಭಿನಂದನೆಗಳು,
ಕಷ್ಟಕಾರ್ಪಣ್ಯಗಳನ್ನು ಮೆಟ್ಟಿನಿಂತು ಮುನ್ನಡೆವ ಧೀಮಂತ ವ್ಯಕ್ತಿತ್ವ ನಿಮ್ಮದು, ತಾಯಿ ಕಟೀಲ್ ದುರ್ಗಾಪರಮೇಶ್ವರಿ ಆಯು, ಆರೋಗ್ಯ, ನೆಮ್ಮದಿ, ಸುಖ, ಸಂಪತ್ತನ್ನು ಕರುಣಿಸಲೆಂದು ಪ್ರಾರ್ಥಿಸುತ್ತಾ, ಶುಭ ಹಾರೈಸುವ ಯಕ್ಷಗಾನ ಅಭಿಮಾನಿ,
ಕರುಣಾಕರ್ ಶೆಟ್ಟಿ ಕುಕ್ಕುಂದೂರು.
ಹಾರ್ದಿಕ ಶುಭಾಶಯಗಳು.
ಕಲ್ಲಾಡಿ ನಾಗರಾಜ ಶೆಟ್ರು ಕಟೀಲು ಮೇಳವನ್ನು ಮುನ್ನಡೆಸಿದ್ದು ಯಾವ ಇಸವಿಯಲ್ಲಿ ಎಂಬುವುದನ್ನು ತಿಳಿಸಿದರೆ ಒಳ್ಲೆಯದಿತ್ತು. 1975-80ರ ಸಮಯದಲ್ಲಿ ಅವರು 'ಇರಾ ಸೋಮನಾಥೇಶ್ವರ ಯಕ್ಷಗಾನ ಮೇಳ ಕುಂಡಾವು' ವನ್ನು ಹೊಸದಾಗಿ ಪ್ರಾರಂಭಿಸಿದ್ದರು. ಅದರೆ ಅದನ್ನು ಮುನ್ನಡೆಸಲಾಗದೆ ಆರ್ಥಿಕವಾಗಿ ಕುಗ್ಗಿ Gulf country ಗೆ ಹೋದರು. ಅಲ್ಲಿ ಅಪಘಾತದಲ್ಲಿ ಮೃತಪಟ್ಟರು ಎಂಬುದಾಗಿ ಹೇಳುತ್ತಾರೆ.
ReplyDeleteUtthama maahithiyannolagonda sangraha yogya lekhana Dhanyavaadagalu
ReplyDeleteನಿಮ್ಮ ಯಜಮಾನಿಕೆಯಲ್ಲಿ ಕಟೀಲು ಮೇಳವು ಇನ್ನಷ್ಟು ಉತ್ತುಂಗಕ್ಕೆ ಏರಲಿ
ReplyDelete