Posts

ರಂಗದ ರಾಜ ಮಧೂರು ಶ್ರೀ ರಾಧಾಕೃಷ್ಣ ನಾವಡ

Image
                      ಯಕ್ಷಗಾನ ಎಂಬುದು ಒಂದು ಗಂಡುಕಲೆ. ಮೇರುಕಲೆ. ಎಲ್ಲಾ ಕಲಾಪ್ರಕಾರಗಳ ಮೇಲೂ ನಮಗೆ ಗೌರವವಿದೆ. ಪ್ರೀತಿಯಿದೆ. ನೋಡಿ ನಾವು ಆನಂದಿಸುತ್ತೇವೆ. ಆದರೂ ಆಕಾಶಕ್ಕೆ ಆಕಾಶವೇ ಸಾಟಿ. ಸಾಗರಕ್ಕೆ ಸಾಗರವೇ ಸಾಟಿ ಎಂಬಂತೆ ಯಕ್ಷಗಾನವು ರಂಜಿಸುತ್ತಿದೆ. ಕಲೆ, ಕಲಾವಿದ, ಪ್ರೇಕ್ಷಕರು ಈ ಮೂರು ವಿಚಾರಗಳು ಪೂರಕವಾಗಿ ಇದ್ದರೂ, ಕಲಾವಿದನಿಗಿಂತ ಕಲೆಯೇ ಶ್ರೇಷ್ಠ. ಪ್ರೇಕ್ಷಕರು ಶ್ರೇಷ್ಠರು. ಪ್ರೇಕ್ಷಕರನ್ನು ಸಭಾಸದರು ಎಂದು ಸಂಬೋಧಿಸಲಾಗುತ್ತದೆ. ಹಾಗಾಗಿಯೇ ಕಲಾವಿದ ರಂಗಪ್ರವೇಶ ಮಾಡಿದಾಗ ಸಭಾ ವಂದನೆಯನ್ನು ಮಾಡುತ್ತಾನೆ. ಕಲಾವಿದನಿಗಾಗಿ ಕಲೆಯಲ್ಲ. ಪ್ರೇಕ್ಷಕರೂ ಅಲ್ಲ. ಕಲೆಗಾಗಿ, ಪ್ರೇಕ್ಷಕರಿಗಾಗಿ ಕಲಾವಿದ. ಗಗನಸದೃಶವಾದ ಯಕ್ಷಗಾನವೆಂಬ ಕಲೆಯಲ್ಲಿ ಕಲಾವಿದರುಗಳೆಂಬ ಅದೆಷ್ಟೋ ನಕ್ಷತ್ರಗಳು ನಮಗೆ ಕಾಣಬಹುದು. ಕಲಾವಿದರೊಬ್ಬರ ಬಗ್ಗೆ ಬರೆಯಲು ಇದೊಂದು ಕಿರುಪ್ರಯತ್ನ ಅಷ್ಟೆ.                    ಸುಂದೋಪಸುಂದ ಕಾಳಗದ 'ಸುಂದ' ನಾಗಿ  ಮಧೂರು ಶ್ರೀ ರಾಧಾಕೃಷ್ಣ ನಾವಡ                                        ಫೋಟೋ : ಶ್ರೀ  ಮುರಳಿ ನಾವಡ   ...

‘ಕಾಶಿಮಾಣಿ’ ಖ್ಯಾತಿಯ ಮವ್ವಾರು ಬಾಲಕೃಷ್ಣ ಮಣಿಯಾಣಿ

Image
                        ಯಕ್ಷಗಾನಕ್ಕೆ ಭಾಗವತನೇ ನಿರ್ದೇಶಕ. ಒಂದನೇ ವೇಷಧಾರಿ. ನಂತರದ ಸ್ಥಾನ ಹಾಸ್ಯಗಾರನಿಗೆ. ಬೆಳಗಿನವರೇಗೂ ಪ್ರಸಂಗವನ್ನು ಮುನ್ನಡೆಸಬಲ್ಲ ಚತುರತೆ ಅವನಿಗಿರಬೇಕು. ಎರಡನೇ ವೇಷಧಾರಿಯಾಗಿ ಚೌಕಿಗೆ ನಿರ್ದೇಶಕನಾಗಿ, ಸೇವಾಕರ್ತರಿಂದ ವೀಳ್ಯವನ್ನು ಪಡೆದು, ಪ್ರಸಂಗ ಮುಗಿಯುವ ತನಕವೂ ವ್ಯವಹರಿಸುತ್ತಾ ಕಾಣಿಸಿಕೊಳ್ಳುತ್ತಾನೆ. ಪ್ರಸ್ತುತ ಅನೇಕ ಹಾಸ್ಯಗಾರರು ತಮ್ಮ ವಿಶಿಷ್ಠ ಅಭಿನಯಗಳಿಂದ, ತಮ್ಮದೇ ಕಲ್ಪನೆಯಿಂದ, ಪಾತ್ರಗಳಿಗೆ ಜೀವತುಂಬಿ ರಂಗದಲ್ಲಿ ಮೆರೆಯುತ್ತಿದ್ದಾರೆ. ಅವರಲ್ಲೊಬ್ಬರು. ಮವ್ವಾರು ಶ್ರೀ ಬಾಲಕೃಷ್ಣ ಮಣಿಯಾಣಿ. ಮವ್ವಾರು ಬಾಲಕೃಷ್ಣ ಮಣಿಯಾಣಿ                              ಕೇರಳ ರಾಜ್ಯದ ಕಾಸರಗೋಡು ತಾಲೂಕು, ನೀರ್ಚಾಲು ಗ್ರಾಮದ ಪೂವಾಳ ಎಂಬಲ್ಲಿ 1966ನೇ ಇಸವಿ ಎಪ್ರಿಲ್ 12ರಂದು ಕುಂಞರಾಮ ಮಣಿಯಾಣಿ ಮತ್ತು ನಾರಾಯಣಿ ದಂಪತಿಗಳಿಗೆ ಮಗನಾಗಿ ಬಾಲಕೃಷ್ಣ ಮಣಿಯಾಣಿಯವರು ಜನಿಸಿದರು. ಎಳವೆಯಲ್ಲೇ ತೀರ್ಥರೂಪರನ್ನು ಕಳೆದುಕೊಂಡ ಇವರು ಅಜ್ಜನ ಮನೆಯಲ್ಲೇ ಬೆಳೆದವರು. ನಾರಂಪಾಡಿ ಫಾತಿಮಾ ಎ.ಎಲ್.ಪಿ. ಶಾಲೆಯಲ್ಲಿ ನಾಲ್ಕನೇ ತರಗತಿಯ ವರೇಗೆ ಓದಿದರು. ಇವರ ಚಿಕ್ಕಪ್ಪನಾದ ಅಪ್ಪಯ್ಯ ಮಣಿಯಾಣಿಯವರು ಆಗ ಮಾರ್ಪನಡ್ಕದಲ್ಲಿ ನಾಟ್ಯ ತರಗತಿಯನ್ನು ನಡ...

ಆಪದ್ಬಾಂಧವ ಸವ್ಯಸಾಚಿ ಕಲಾವಿದ ಪುತ್ತೂರು ಗಂಗಾಧರ ಜೋಗಿ

Image
                          ಶ್ರೀ ಪುತ್ತೂರು ಗಂಗಾಧರ ಜೋಗಿಯವರು ಶ್ರೀ ಧರ್ಮಸ್ಥಳ ಮೇಳದ ದಣಿವರಿಯದ ಕಲಾವಿದ. ಭಾಗವತರು ತನಗೆ ನೀಡಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಷ್ಠೆಯಿಂದ ಮಾಡುತ್ತಾ ಬಂದ ಕಲಾಮಾತೆಯ ಸುಪುತ್ರ. ಎಷ್ಟು ವೇಷಗಳನ್ನೂ ಮಾಡಬಲ್ಲರು. ಯಾವ ವೇಷವನ್ನೂ ಮಾಡಬಲ್ಲರು. ಸ್ತ್ರೀವೇಷ, ಪುಂಡುವೇಷ, ಕಿರೀಟ ವೇಷ, ಹಾಸ್ಯ, ಅನಿವಾರ್ಯವಾದರೆ ಕೇಶಾವರೀ ಬಣ್ಣದ ವೇಷಕ್ಕೂ ಸೈ. ಹೆಣ್ಣು ಬಣ್ಣಗಳನ್ನೂ ಅಂದವಾಗಿ ನಿರ್ವಹಿಸಬಲ್ಲರು. ಇಂತಹ ಕಲಾವಿದರು ಸಿದ್ಧರಾಗುವುದು ಬಹಳ ಅಪರೂಪ. ಮೇಳಕ್ಕೆ ಇವರಂತಹ ಕಲಾವಿದರು ಅನಿವಾರ್ಯ, ಹಿರಿಯ ಕಲಾವಿದನಾದರೂ ಅನಿವಾರ್ಯ ಸಂದರ್ಭದಲ್ಲಿ ಪ್ರಸಂಗದ ಸಣ್ಣಪುಟ್ಟ ಪಾತ್ರ  ಗಳನ್ನು ನಿರ್ವಹಿಸಿ ವ್ಯಕ್ತಿತ್ವದಲ್ಲಿ ದೊಡ್ಡವರಾಗಿ ಮೆರೆದವರು ಗಂಗಾಧರರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಕಳೆದ 36 ವರ್ಷಗಳಿಂದ ನಿರಂತರ ಕಲಾವಿದನಾಗಿ ವ್ಯವಸಾಯ ಮಾಡಿದ ಹಿರಿಮೆಗೆ ಪಾತ್ರರಾಗಿದ್ದಾರೆ ಶ್ರೀಯುತರು, ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ| ವೀರೇಂದ್ರ ಹೆಗಡೆಯವರ, ಡಿ. ಹರ್ಷೇಂದ್ರ ಕುಮಾರರ ಆಶೀರ್ವಾದ, ಸಹಕಲಾವಿದರ ಸಹಕಾರದಿಂದ ನಾವು ಕಲಾಮಾತೆಯ ಸೇವೆಯನ್ನು ಮಾಡುವಂತಾಯಿತು ಎಂಬುದು ಪುತ್ತೂರು ಗಂಗಾಧರರ ಪ್ರಾಮಾಣಿಕ ಅನಿಸಿಕೆ. ...

ಹಾಸ್ಯಗಾರ - ಕೆ. ಮಹಾಬಲೇಶ್ವರ ಭಟ್ ಭಾಗಮಂಡಲ

Image
                          ಆತ್ಮೀಯರಿಂದ ಮಾಪಣ್ಣ, ಮಹಾಬಲಣ್ಣ ಎಂದೇ ಕರೆಸಿಕೊಳ್ಳುವ ಶ್ರೀ ಕೆ. ಮಹಾಬಲೇಶ್ವರ ಭಟ್ ಭಾಗಮಂಡಲ (ಹಾಸ್ಯಗಾರ) ಇವರನ್ನು ಯಕ್ಷಗಾನ ಕಲಾಭಿಮಾನಿಗಳೆಲ್ಲರೂ ಚೆನ್ನಾಗಿ ಬಲ್ಲರು. ಮುಳಿಯಾಲ ಈಶ್ವರ ಭಟ್ ಮತ್ತು ಪಾರ್ವತಿ ಅಮ್ಮ ದಂಪತಿಗಳಿಗೆ ಮಗನಾಗಿ ಫೆಬ್ರವರಿ 13, 1961ರಂದು ಶ್ರೀ ಕೆ. ಮಹಾಬಲೇಶ್ವರ ಭಟ್ ಜನಿಸಿದರು. ಕೊಮ್ಮೆ, ಕೋಳ್ಯೂರು ಇವರ ಹುಟ್ಟೂರು (ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ) ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೊಡ್ಲಮೊಗರು ಶ್ರೀ ವಾಣೀವಿಜಯ ಶಾಲೆಯಲ್ಲಿ ಪೂರೈಸಿದ ಇವರು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮಡಿಕೇರಿ ಜೂನಿಯರ್ ಕಾಲೇಜಿನಲ್ಲಿ ಪೂರೈಸಿದರು. ಎಳವೆಯಲ್ಲೇ ಇವರಿಗೆ ಯಕ್ಷಗಾನದಲ್ಲಿ ಅಪಾರ ಆಸಕ್ತಿ. ರಜಾದಿನಗಳಲ್ಲಿ ಮನೆಯ ಪರಿಸರದಲ್ಲಿ ನಡೆಯುತ್ತಿದ್ದ ಆಟ, ಕೂಟಗಳನ್ನು ಬಿಟ್ಟವರಲ್ಲ. ನಾನೂ ಕಲಾವಿದನಾಗಬೇಕೆಂಬ ಆಸೆ ತನ್ನಿಂದ ತಾನೆ ಹುಟ್ಟಿಕೊಂಡಿತು.                                                         ಕೆ. ಮಹಾಬಲೇಶ್ವರ ಭಟ್ ಭಾಗಮಂಡಲ                   ...

ದೇಲಂತಮಜಲು ಸುಬ್ರಹ್ಮಣ್ಯ ಭಟ್

Image
                    ‘ಯಕ್ಷದೀಪ’ ಮಾಸಪತ್ರಿಕೆಯಲ್ಲಿ 2017 ಜನವರಿ ತಿಂಗಳ ಸಂಚಿಕೆಯಲ್ಲಿ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರು ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರ ಬಗ್ಗೆ ಲೇಖನವೊಂದನ್ನು ಬರೆದಿದ್ದರು. (ದೇಲಂತಮಜಲು ಸುಬ್ರಹ್ಮಣ್ಯ ಭಟ್ - ಒಂದು ಮೆಲೋಡಿ). ‘‘ಚೆಂಡೆ ಎಂಬುದು ಒಂದು ರಕ್ಕಸ ವಾದ್ಯ. ಹೊರಡಿಸುವ ಶಬ್ದ ತೀವ್ರತರವಾದದ್ದು. ಇದನ್ನು ಭಾವಪೂರ್ಣವಾಗಿ ಅಥವಾ ಸೌಮ್ಯತೆಯ ಹದದಲ್ಲಿ ನುಡಿಸುವುದು ಸವಾಲಿನ ಕೆಲಸ. ಇದನ್ನು ಮಾಡಲು ಅವನದ್ದ ವಾದಕನಲ್ಲಿ ಬೇಕಾದುದು ಅಸಾಧಾರಣ ತಾಳ್ಮೆ ಮತ್ತು ಹೃದಯಸ್ಥವಾಗಿ ಇರಲೇಬೇಕಾದ ಸೌಶೀಲ್ಯತೆ. ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರಲ್ಲಿ ಇದಿದೆ. ಅದೇ ಕಾರಣಕ್ಕೆ ಮೆಲೋಡಿಯನ್ ದೇಲಂತಮಜಲು ಎಂದು ಇವರನ್ನು ಕರೆಯುವುದು. ಮೆಲೋಡಿ ಕಲಾವಿದನ ಮನಸ್ಸಿನಲ್ಲಿ ಮೊದಲಾಗಿ ಇರಬೇಕು. ನಾದ ಮೊದಲು ಕಲಾವಿದನಲ್ಲಿ ಹುಟ್ಟಬೇಕು. ಹಾಗೆ ಹುಟ್ಟಿದರೆ ಅದು ತಾನು ನುಡಿಸುತ್ತಾ ಇರುವ ವಾದ್ಯದಲ್ಲೂ ಹೊಮ್ಮುತ್ತದೆ. ತೆಂಕುತಿಟ್ಟಿನಲ್ಲಿ ಇದೇ ಕಾರಣಕ್ಕೆ ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರಿಗೆ ವಿಶಿಷ್ಠ ಸ್ಥಾನ ಇದೆ.’’ ದೇಲಂತಮಜಲು ಸುಬ್ರಹ್ಮಣ್ಯ ಭಟ್ (ಫೋಟೋ: ಮಂಥನ್ ಶೆಟ್ಟಿ)                                  ಖ್ಯಾತ ಕಲಾವಿದನಿಂದಲೇ ದೇಲಂತಮಜಲ...

ಬಹುಬೇಡಿಕೆಯ ಕಲಾವಿದ - ಜಗದಾಭಿರಾಮ ಪಡುಬಿದ್ರೆ

Image
                    ಯಕ್ಷಗಾನ ಕ್ಷೇತ್ರದಲ್ಲಿ ಇವರು ಈಗ ಬಹುಬೇಡಿಕೆಯ ಕಲಾವಿದರು. ಸ್ತ್ರೀವೇಷ, ಪುಂಡುವೇಷ, ರಾಜವೇಷ, ಬಣ್ಣದ ವೇಷ ಹೀಗೆ ಯಾವ ವೇಷಗಳನ್ನಾದರೂ ಮಾಡಬಲ್ಲ ಸಮರ್ಥರು. ಕಲಾಭಿಮಾನಿಗಳಿಂದ, ಸಹಕಲಾವಿದರಿಂದ, ಮಿತ್ರರಿಂದ ಜಗತ್, ಜಗದಾಭಿ, ಹಿರಿಯ ಕಲಾವಿದರಿಂದ ‘ಮಾಣಿ’ ಎಂದೇ ಕರೆಸಿಕೊಳ್ಳುತ್ತಿದ್ದ ಇವರ ಪೂರ್ಣ ಹೆಸರು ಜಗದಾಭಿರಾಮಸ್ವಾಮಿ ಪಡುಬಿದ್ರೆ. ಹುಟ್ಟೂರು ಪಡುಬಿದ್ರೆ ಉದಯಾದ್ರಿ ಮಠ. 11-11-1973 ರಂದು ಜನನ. ಜ್ಯೋತಿಷಿಯೂ, ಪಡುಬಿದಿರೆ ಬಾಲಗಣಪತಿ, ಪ್ರಸನ್ನ ಪಾರ್ವತೀ ದೇವಸ್ಥಾನದ ಅರ್ಚಕರೂ ಆಗಿದ್ದ ಶ್ರೀ ಪಟ್ಟಾಭಿರಾಮ ಸ್ವಾಮಿ, ವಸಂತಿ ದಂಪತಿಗಳ ನಾಲ್ಕು ಮಂದಿ ಮಕ್ಕಳಲ್ಲಿ ಹಿರಿಯವರೇ ಜಗದಾಭಿರಾಮಸ್ವಾಮಿ. ಪ್ರಾಥಮಿಕ ವಿದ್ಯಾಭ್ಯಾಸ ಪಡುಬಿದಿರೆಯಲ್ಲಿ ಪೂರೈಸಿ      (7ನೇ ತರಗತಿ) ಮನೆಯಲ್ಲಿ ತಂದೆಗೆ ಸಹಾಯಕನಾಗಿ ದೇವಸ್ಥಾನದ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. 1986ರಲ್ಲಿ ಶ್ರೀ ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಶ್ರೀ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯವನ್ನು ಅಭ್ಯಸಿಸಿದರು. ಆಗ ಶ್ರೀ ನಿಡ್ಲೆ ನರಸಿಂಹ ಭಟ್ಟರು ಕಲಿಕಾ ಕೇಂದ್ರದ ಹಿಮ್ಮೇಳ ಗುರುಗಳಾಗಿದ್ದರು. ಅದೇ ವರುಷವೇ ಜಗದಾಭಿ ಶ್ರೀ ಧರ್ಮಸ್ಥಳ ಮೇಳಕ್ಕೆ ಆಯ್ಕೆಯಾಗಿದ್ದರು. ಮೇಳಕ್ಕೆ ಆಯ್ಕೆಯಾಗುವೆ, ಸೇರುವೆ ಎಂಬ ಕಲ್ಪನೆಯೂ ಮೊದಲು ಅವರ...

ಅನುಭವೀ ಪುಂಡುವೇಷಧಾರಿ ಶ್ರೀ ವಸಂತ ಗೌಡ ಕಾಯರ್ತಡ್ಕ

Image
                      ಶ್ರೀ ವಸಂತ ಗೌಡ ಕಾಯರ್ತಡ್ಕ ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದರಲ್ಲೊಬ್ಬರು. 1974ರಿಂದ ನಿರಂತರ 43 ವರುಷಗಳ ಕಾಲ ತಿರುಗಾಟ ನಡೆಸುತ್ತಾ ಬಂದಿರುವ ಹಿರಿಮೆ ಇವರದು. ಪುರಾಣ ಪ್ರಸಂಗಗಳ ಜ್ಞಾನ, ಪ್ರಸಂಗ ನಡೆಗಳ ಬಗ್ಗೆ ಇವರಿಗೆ ಇರುವ ಅರಿವು ನಿಜಕ್ಕೂ ಪ್ರಶಂಸನೀಯ. ಕಡತೋಕಾ, ಚಿಪ್ಪಾರು, ಪುತ್ತೂರು ನಾರಾಯಣ ಹೆಗ್ಡೆ, ವಿಟ್ಲ ಜೋಷಿ, ಕುಂಬಳೆ ಸುಂದರ ರಾವ್, ಕೆ. ಗೋವಿಂದ ಭಟ್, ಎಂಪೆಕಟ್ಟೆ ರಾಮಯ್ಯ ರೈ, ನಯನ ಕುಮಾರ್, ಪುತ್ತಿಗೆ ರಘುರಾಮ ಹೊಳ್ಳರು, ರಾಮಕೃಷ್ಣ ಮಯ್ಯರು, ಕುಂಬಳೆ ಶ್ರೀಧರ ರಾವ್, ನಿಡ್ಲೆ ಗೋವಿಂದ ಭಟ್, ಉಬರಡ್ಕ ಉಮೇಶ್ ಶೆಟ್ಟಿ, ಅಡೂರು ಗಣೇಶ ರಾವ್, ಕಡಬ ಸಾಂತಪ್ಪ ಮತ್ತು ಶ್ರೀಧರ ಭಂಡಾರಿ ಮೊದಲಾದವರ ಒಡನಾಟದಿಂದಲೇ ನಾನು ಕಲಾವಿದನಾಗಿ ಕಾಣಿಸಿಕೊಂಡೆ ಎಂಬುದು ಶ್ರೀ ವಸಂತ ಗೌಡರ ಪ್ರಾಮಾಣಿಕ ಅನಿಸಿಕೆ. ಕಿರಿಯ ಸಹಕಲಾವಿದರೂ ನನಗೆ ತುಂಬಾ ಸಹಕರಿಸಿದ್ದಾರೆ ಎಂದು ನೆನಪಿಸುವ ಇವರು ಪ್ರಸಂಗಗಳ ನಡೆಗಳನ್ನು ಅರಿತವರು. ಹೇಳಿಕೊಡಲೂ ಬಲ್ಲರು. ಹಾಗಾಗಿ ವಸಂತ ಗೌಡ ಅವರು ಯಕ್ಷಗಾನಕ್ಕೆ ಓರ್ವ ಸಂಪನ್ಮೂಲ ವ್ಯಕ್ತಿಯೂ ಹೌದು. ವಸಂತ ಗೌಡ ಕಾಯರ್ತಡ್ಕ (ಫೋಟೋ: ವೆಂಕಟ್ ಕೋಟೂರು )                     1962ನೇ ಇಸವಿ ಸೆಪ್ಟ...