Posts

ಹಿರಿಯ ಅನುಭವೀ ಸವ್ಯಸಾಚಿ ಕಲಾವಿದ ಪೂಕಳ ಶ್ರೀ ಲಕ್ಷ್ಮೀನಾರಾಯಣ ಭಟ್

Image
                ಹಿರಿಯ ಸದಸ್ಯರು, ಹೆಣ್ಮಕ್ಕಳು, ಮಕ್ಕಳು ತುಂಬಿರುವ ಮನೆಯು ಅಂದವಾಗಿರುತ್ತದೆ, ಲಕ್ಷಣವಾಗಿರುತ್ತದೆ. ಹಿರಿಯರ ಆಶೀರ್ವಾದ, ನಿರ್ದೇಶನಗಳಿಂದಲೇ ಕಿರಿಯರು ಬೆಳೆದು ಸಾಧಕರಾಗಿ ಕಾಣಿಸಿಕೊಳ್ಳಬಲ್ಲರು. ಜೀವನವೆಂಬ ಪಯಣದಲ್ಲಿ ಅನುಭವಗಳೇ ಪಾಠಗಳಾಗಿರುತ್ತವೆ. ಅದು ಒಳ್ಳೆಯ ಅನುಭವವಾಗಿರಬಹುದು ಅಥವಾ ಕೆಟ್ಟ ಅನುಭವಗಳೇ ಆಗಿರಬಹುದು. ಆದರೆ ಒಂದಂತೂ ಸತ್ಯ. ಈ ಉಭಯ ಅನುಭವಗಳೂ ಮಾನವನಿಗೆ ಬದುಕನ್ನು ರೂಪಿಸಲು ದಾರಿಯನ್ನು ತೋರುತ್ತದೆ. ಬದುಕಿನುದ್ದಕ್ಕೂ ಪಡೆದ ಅನುಭವಗಳೆಂಬ ಪಾಠಗಳಿಂದ ಮನೆಯ ಹಿರಿಯ ಸದಸ್ಯನು ಪಕ್ವನಾಗಿರುತ್ತಾನೆ. ಇದರ ಪರಿಣಾಮವನ್ನು ಮನೆಯ ಕಿರಿಯ ಸದಸ್ಯರು ಅನುಭವಿಸಬೇಕು. ಹಿರಿಯರಿಂದ ಸಲಹೆಗಳನ್ನು ಪಡೆದು, ಮುನ್ನಡೆಯುತ್ತಾ, ತಾನು ಒಳ್ಳೆಯವನೆಂದು ಎಲ್ಲರಿಂದಲೂ ಹೊಗಳಿಸಿಕೊಂಡು ಮನೆಯ ಕೀರ್ತಿಯನ್ನು ಬೆಳಗಿಸಬೇಕು. ಕಿರಿಯರು ಹಿರಿಯರನ್ನು ಗೌರವಿಸಿ ಅವರ ಆಶೀರ್ವಾದ, ಅನುಭವ, ನಿರ್ದೇಶನಗಳನ್ನು ಪಡೆಯುವುದು, ಹಿರಿಯರು ಕಿರಿಯರನ್ನು ವಂಚಿಸದೆ, ಪ್ರೀತಿಸಿ ಸಲಹೆಗಳನ್ನು ನೀಡಿ ಮುನ್ನಡೆಸುವುದು- ಇದು ಭಾರತೀಯ ಸಂಸ್ಕೃತಿ. ಭಾರತೀಯ ಕುಟುಂಬ ಪದ್ಧತಿ. ಮನೆಯಲ್ಲೆಂದಲ್ಲ, ಎಲ್ಲೆಡೆಯಲ್ಲೂ ಈ ವ್ಯವಸ್ಥೆಯ ಅಡಿಯಲ್ಲಿ ಸಾಗಿದರೆ ಆರೋಗ್ಯಪೂರ್ಣ ಸಮಾಜವು ಉಳಿಯುತ್ತದೆ, ನಿರ್ಮಾಣಗೊಳ್ಳುತ್ತದೆ. ಸಂಘ-ಸಂಸ್ಥೆಗಳಲ್ಲೂ, ಕಲಾಪ್ರಕಾರಗಳಲ್ಲೂ ಈ ವ್ಯವಸ್ಥೆಯು ನಡೆದು ಬಂದಿದೆ. ಮುಂದುವರಿದರ...

ಅಗಲಿದ ಯಕ್ಷಕಲಾ ಕುಸುಮ ಪುತ್ತೂರು ಶ್ರೀ ಚಂದ್ರಶೇಖರ ಹೆಗ್ಡೆ

Image
                       ಪುತ್ತೂರು ಶ್ರೀ ಚಂದ್ರಶೇಖರ ಹೆಗ್ಡೆಯವರು ತೆಂಕುತಿಟ್ಟು ಕಂಡ ಒಬ್ಬ ಶ್ರೇಷ್ಠ ಕಲಾವಿದ. ಖಳಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದವರು. ವೃತ್ತಿಕಲಾವಿದರಾಗಿ ಅನೇಕ ವರ್ಷಗಳ ಕಾಲ ಮೇಳಗಳಲ್ಲಿ ತಿರುಗಾಟ ನಡೆಸಿದವರು. ಖ್ಯಾತ ಯಕ್ಷಗಾನ ಕಲಾವಿದರಾಗಿ ಪ್ರೇಕ್ಷಕರ ಮನಗೆದ್ದಿದ್ದ ಪುತ್ತೂರು ಶ್ರೀ ನಾರಾಯಣ ಹೆಗ್ಡೆಯವರ ಸುಪುತ್ರರು. ಪುತ್ತೂರು ಶ್ರೀ ನಾರಾಯಣ ಹೆಗ್ಡೆ ಮತ್ತು ಶ್ರೀಮತಿ ಸಂಜೀವಿನಿ ಅಮ್ಮ ದಂಪತಿಗಳ ಮಗನಾಗಿ ಪುತ್ತೂರು ಸಮೀಪ ಬಪ್ಪಳಿಗೆ ಎಂಬಲ್ಲಿ 1960ರಲ್ಲಿ ಜನನ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನಾಸಕ್ತಿ ಇತ್ತು. ಅದು ರಕ್ತಗತವಾಗಿಯೇ ಸಿದ್ಧಿಸಿತ್ತು. ತಂದೆಯವರ ಜತೆ ಸಾಗಿ ಶ್ರೀ ಧರ್ಮಸ್ಥಳ ಮೇಳದ ಪ್ರದರ್ಶನಗಳನ್ನು ನೋಡುತ್ತಿದ್ದರು. ತಾನು ಕಲಾವಿದನಾಗಬೇಕೆಂಬ ಬಯಕೆಯೂ ಮೂಡಿತ್ತು. ನಾರಾಯಣ ಹೆಗ್ಡೆಯವರು ಮಗನ ಆಸೆಗೆ ಅಡ್ಡಿಪಡಿಸಿರಲಿಲ್ಲ. ಯಕ್ಷಗಾನ ನಾಟ್ಯ ಕಲಿಯುವ ಆಸೆಯಿಂದ ಚಂದ್ರಶೇಖರ ಹೆಗ್ಡೆಯವರು 1979ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಲಲಿತ ಕಲಾಕೇಂದ್ರವನ್ನು ಸೇರಿಕೊಂಡರು. ಶ್ರೀ ಕೆ. ಗೋವಿಂದ ಭಟ್ಟರಿಂದ ನಾಟ್ಯಾಭ್ಯಾಸ. ಬಳಿಕ ಶ್ರೀ ಕ್ಷೇತ್ರ ಸುಂಕದಕಟ್ಟೆಯ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಮೇಳದಲ್ಲಿ ತಿರುಗಾಟ. ಪೂರ್ವರಂಗ ಮತ್ತು ಪ್ರಸಂಗಗಳಲ್ಲಿ ವೇಷಗಳನ್ನು ಮಾಡುತ್ತಾ ಹಂತ ಹಂತವಾಗಿ ಬೆಳೆದವರು ಚಂದ್ರಶೇಖ...

ಕಲಾರಸಿಕರ ಕರ್ಣಗಳಿಗೆ ಗಾನಸುಧಾರಸವನ್ನು ಹರಿಸುವ ಗಾಯಕ ಶ್ರೀ ದಿನೇಶ ಅಮ್ಮಣ್ಣಾಯರು ಅರುವತ್ತರ ಸಂಭ್ರಮದಲ್ಲಿ

Image
                  ತೆಂಕುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ ‘ಗಾನಕೋಗಿಲೆ’ ಶ್ರೀ ದಿನೇಶ ಅಮ್ಮಣ್ಣಾಯರನ್ನು ಯಕ್ಷದೀಪ ಪತ್ರಿಕೆಯು ಸಂದರ್ಶಿಸಿ, ‘‘ಭಾವಗಳ ಗರಿಬಿಚ್ಚಿದ ಹಾಡುಹಕ್ಕಿ - ದಿನೇಶ ಅಮ್ಮಣ್ಣಾಯ’’ ಎಂಬ ಶೀರ್ಷಿಕೆಯಡಿ 2016 ಸೆಪ್ಟಂಬರ್ ತಿಂಗಳಿನಲ್ಲಿ (6ನೇ ಸಂಚಿಕೆ) ಲೇಖನವನ್ನು ಪ್ರಕಟಿಸಿತ್ತು. ಆಗ ಅವರ ವಯಸ್ಸು 57. ಅರುವತ್ತರ ಸಂಭ್ರಮವನ್ನು ಹೇಗೆ ಆಚರಿಸುತ್ತೀರಿ? ಎಂದು ಸಂದರ್ಶಕ, ಯಕ್ಷದೀಪ ಮಾಸಪತ್ರಿಕೆಯ ಸಂಪಾದಕ ಶ್ರೀ ಮನಮೋಹನ್ ವಳಕ್ಕುಂಜ ಅವರು ಕೇಳಿದಾಗ ಅಮ್ಮಣ್ಣಾಯರು ಪ್ರತಿಕ್ರಿಯಿಸಿದ ರೀತಿ ಹೀಗಿತ್ತು. ‘‘ಇಷ್ಟು ವರ್ಷ ದಿನೇಶ ಅಮ್ಮಣ್ಣಾಯರು ಯಾರು ಅಂತ ಜನರಿಗೆ ತೋರಿಸಿ ಕೊಟ್ಟದ್ದು ಯಕ್ಷಗಾನ. ಆ ಶಕ್ತಿ ದೇವರು ಕೊಟ್ಟದ್ದು. ಇಷ್ಟು ವರ್ಷ ನನ್ನನ್ನು ಎತ್ತಿ ಆಡಿಸಿದವ ದೇವರು. ಇದನ್ನು ಅವನಿಗೇ ಅರ್ಪಿಸಿದ್ದೇನೆ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಅಂತ ಸೇವೆ ಮಾಡಿಕೊಂಡು ಬರ್ತೇನೆ. ಅದು ಮುಖ್ಯ. ಪ್ರದರ್ಶನಕ್ಕೆ, ಪ್ರಚಾರಕ್ಕೆ ನಾನು ಮುಂದಾಗುವುದಿಲ್ಲ. ನಾಲ್ಕಾರು ಜನರು ಹೇಳಿದ್ದಾರೆ- ನಾವೆಲ್ಲಾ ಇದ್ದೇವೆ. ಅರುವತ್ತರ ಸಂಭ್ರಮವನ್ನು ಆಚರಿಸಲೇಬೇಕೆಂದು. ಅವರನ್ನು ನಿರುತ್ಸಾಹಗೊಳಿಸಬಾರದು ಎಂಬ ಕಾರಣಕ್ಕೆ ‘‘ನಿಮ್ಮ ಇಷ್ಟ. ನಿಮ್ಮ ಚಿತ್ತ. ನಾನು ಮಾತ್ರ ಅದನ್ನು ಬಯಸುವುದೂ ಇಲ್ಲ’’ ಎಂದೆ. ‘‘ಕಲಾವಿದನು ಕಲೆಗಿಂತ ದೊಡ್ಡವನಲ್ಲ. ಕಲೆಯಿಂದಾಗಿಯೇ ಕಲಾವಿದ’’ ಎಂಬ ಧ್ವ...

ಯಕ್ಷಗಾನ ಪ್ರದರ್ಶನಗಳಲ್ಲಿ ಪರಿವರ್ತನೆ - ಮಾರಕವೋ? ಪೂರಕವೋ

Image
                          ಅರ್ಹರನ್ನು ಗೌರವಿಸುವುದು ಮಾನವ ಸಹಜ ಗುಣ. ಮಾನವೀಯತೆ ಇರುವವರು ಅದೇ ತೆರನಾಗಿ ವ್ಯವಹರಿಸುತ್ತಾರೆ. ಇದು ಸಂಸ್ಕಾರ. ಸನಾತನಿಗಳು ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿ ನಮಗೆ ಕೊಡುಗೆಯಾಗಿ ನೀಡಿದ ಸಂದೇಶವದು. ಅನುಗ್ರಹವೂ ಹೌದು. ಅನಪೇಕ್ಷಿತ ವಿಚಾರಗಳು ಬಂದಾಗ ಆಕ್ಷೇಪಿಸುವುದು, ನಮಗೇಕೆ ಆ ವಿಚಾರ? ವಿರೋಧವೇಕೆ ಕಟ್ಟಿಕೊಳ್ಳಬೇಕು? ಎಂದು ಮೌನವಾಗಿ ಸಹಿಸಿಕೊಳ್ಳುವುದು. ಹೀಗೆ ಎರಡೂ ಕ್ರಿಯೆಗಳನ್ನೂ ನಾವು ಮಾಡುತ್ತೇವೆ. ಮಾನವ ಸಹಜ ಗುಣಗಳಿವು. ಆಕ್ಷೇಪಿಸಿದರೆ ಸ್ವಚ್ಛವಾಗಲೂಬಹುದು. ಟೀಕೆಗೊಳಗಾಗಲೂಬಹುದು. ಮೌನವಾಗಿದ್ದರೆ ಸರಿಮಾಡಿಕೊಳ್ಳಲು ಎಲ್ಲಿದೆ ಅವಕಾಶ? ಹೀಗೆ ಕೆಲವೊಂದು ಬಾರಿ ಉಭಯಸಂಕಟಕ್ಕೊಳಗಾಗಬೇಕಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಈ ಸಮಸ್ಯೆಗಳು ಸಹಜ. ಆದರೂ ಆಡಳಿತ ವರ್ಗವು, ಸಪಾತ್ರರೊಡನೆ, ಆ ಕ್ಷೇತ್ರಕ್ಕೆ ಸಂಬಂಧಪಟ್ಟು, ಇದಮಿತ್ಥಂ ಎಂದು ಹೇಳಬಲ್ಲ ವಿದ್ವಾಂಸರೊಡನೆ ವಿಮರ್ಶಿಸಿ ನಿರ್ಣಯವನ್ನು ಕೈಗೊಳ್ಳುವುದು ಹಿಂದಿನಿಂದಲೂ ನಡೆದು ಬಂದ ರೀತಿ. ಅದನ್ನು ಕೇಳಿ ಸನ್ಮಾರ್ಗದಲ್ಲಿ ನಡೆಯುವವರೇ ಹೌದು ನಮ್ಮವರು. ಕೇಳದೆ ನಿರ್ಲಕ್ಷಿಸಿದವರಿಗೆ ಶಿಕ್ಷೆ ಎಂಬ ನಿಯಮವೂ ನಮ್ಮ ಸಮಾಜದ ಪದ್ಧತಿಯಲ್ಲವೇ?                      ಎಲ್ಲಾ ಕಲಾಪ್ರಕಾರಗಳಲ್ಲೂ ನಮಗೆ ಗ...

ಯಕ್ಷಾಗಸದ ಪೂರ್ಣಚಂದ್ರ - ಕೊಂಡದಕುಳಿ ರಾಮಚಂದ್ರ ಹೆಗಡೆ

Image
ಯಕ್ಷಗಾನವು ನಮ್ಮ ಹೆಮ್ಮೆಯ ಸಂಕೇತ ಎನಿಸಿಕೊಂಡ ಕಲೆ. ಹಿಂದಿನ ತಲೆಮಾರಿನ, ಈಗಿನ ಹಿರಿಯ ಕಲಾವಿದರು, ಕಲಾಪೋಷಕರು, ಕಲಾಭಿಮಾನಿಗಳೆಲ್ಲಾ ತ್ಯಾಗ ಪರಿಶ್ರಮಗಳಿಂದ ಈ ಸರ್ವಾಂಗ ಸುಂದರವಾದ ಕಲಾಪ್ರಕಾರವನ್ನು ಬೆಳೆಸಿದ್ದಾರೆ, ಉಳಿಸಿದ್ದಾರೆ. ಅವರೆಲ್ಲರ ಸಾಧನೆ, ಸಹಕಾರಗಳೆಂಬ ಭದ್ರವಾದ ಅಡಿಪಾಯದಲ್ಲೇ ಈ ಗಂಡುಕಲೆ ರಂಜಿಸುತ್ತಿದೆ. ನಾವೂ ಕಲಾವಿದರಾಗಿ, ಈ ಕಲೆಯ ಒಂದು ಅಂಗವಾಗಿ ಕಾಣಿಸಿಕೊಳ್ಳುತ್ತಿದ್ದೇವೆ. ತೆಂಕು ಮತ್ತು ಬಡಗು ಎಂಬ ಉಭಯತಿಟ್ಟುಗಳಲ್ಲೂ ಬಾಲಕಲಾವಿದನಾಗಿ ರಂಗಪ್ರವೇಶ ಮಾಡಿ, ಹಂತ ಹಂತವಾಗಿ ಬೆಳೆದು ಅನೇಕರು ಪ್ರಸಿದ್ಧರಾಗಿದ್ದಾರೆ. ಈಗ ಬೇಡಿಕೆಯ ಕಲಾವಿದರಾಗಿ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಅಂತವರಲ್ಲೊಬ್ಬರು ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು. ಬಡಗುತಿಟ್ಟಿನ ಶ್ರೇಷ್ಠ ಕಲಾವಿದ. ಪ್ರದರ್ಶನಗಳನ್ನು ನೋಡುತ್ತಾ ಅಭಿನಯಿಸುತ್ತಾ ತನ್ನ ಪರಿಶ್ರಮ ಮತ್ತು ಹಿರಿಯ ಕಲಾವಿದರ ಒಡನಾಟ, ನಿರ್ದೇಶನಗಳಿಂದ ಬೆಳೆದು ಪಕ್ವರಾದವರು. ತನ್ನ ಹನ್ನೆರಡನೆಯ ವರ್ಷದಿಂದ ಆರಂಭಿಸಿ, ಸತತ 38 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಾ ಕಲಾಭಿಮಾನಿಗಳ ಮನಸೂರೆಗೊಂಡಿದ್ದಾರೆ. ಕೊಂಡದಕುಳಿಯವರು ಇದ್ದಾರಾ? ಅವರೇನು ವೇಷ ಮಾಡ್ತಾರೆ ಇಂದು? ಎಂದು ಕೇಳುವಷ್ಟು ಪ್ರೇಕ್ಷಕರ ಮನದಲ್ಲಿ ತುಂಬಿಕೊಂಡಿದ್ದಾರೆ. ಪ್ರಸಂಗ ಗೊತ್ತಾದರೆ ಸಾಕು, ಕೊಂಡದಕುಳಿಯವರು ಇಂತಹ ವೇಷವನ್ನೇ ಮಾಡುತ್ತಾರೆ ಎಂದು ಕಲಾಭಿಮಾನಿಗಳು ನಿರ್ಣಯಿಸುವಷ್ಟು ಪ...

ನಗದೆ ನಗಿಸಿದ ಯಕ್ಷರಾಜ್ಯದ ಆಸ್ಥಾನ ವಿದೂಷಕ ಹಾಸ್ಯರತ್ನ ನಯನ ಕುಮಾರ್

Image
ಯಕ್ಷಗಾನದಲ್ಲಿ ಹಾಸ್ಯವು ಹೇಗಿರಬೇಕು? ಎಂದು ಕೆಲವರು ಕೇಳುವುದುಂಟು. ಹಾಸ್ಯ ಪಾತ್ರಗಳೆಂದೇನು? ಎಲ್ಲಾ ಪಾತ್ರಗಳೂ ಆ ಪಾತ್ರಕ್ಕೆ ಉಚಿತವಾಗಿಯೇ ಇರಬೇಕು. ಪಾತ್ರೋಚಿತವಾಗಿ ಕಲಾವಿದರು ಅಭಿನಯಿಸಿದಾಗ ಮಾತ್ರ ಪ್ರದರ್ಶನವು ಗೆಲ್ಲುತ್ತದೆ. ಹಾಸ್ಯವೂ ಹಾಗೆಯೇ. ‘ಹಾಸ್ಯ’ ಬೇಕೇ ಬೇಕು. ಆದರೆ ಅದರ ಪ್ರಮಾಣ ಎಷ್ಟು? ಎಷ್ಟು ತೀವ್ರವಾಗಿರಬೇಕು? ಎನ್ನುವ ನಿರ್ಣಯ ಇದೆ. ‘ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ’ ಎಂಬ ರೂಢಿಯಲ್ಲಿ ಆಡುವ ಮಾತಿನಂತೆ ಇರಬೇಕು. ಶುಚಿಯಾಗಿರಬೇಕು, ರುಚಿಯಾಗಿರಬೇಕು, ಆ ವಿಭಾಗವು ಬಲಿಷ್ಠವಾಗಿರಬೇಕು. ಪ್ರಸಂಗಕ್ಕೆ ಪೂರಕವಾಗಿ ಪ್ರದರ್ಶನವು ಗೆಲ್ಲುವಂತಿರಬೇಕೆಂಬುದೇ ಇದರ ಅರ್ಥ. ಪ್ರತಿಯೊಂದು ಪಾತ್ರವೂ ಹಾಗೆಯೇ ಇರಬೇಕು. ಪಾತ್ರಧಾರಿಯು ತಾನೊಬ್ಬನೇ ಕಾಣಿಸಿಕೊಳ್ಳಬೇಕೆಂದು ಬಯಸದೆ, ಪ್ರದರ್ಶನವು ಕೆಡದಂತೆ ಎಚ್ಚರದಿಂದ ಅಭಿನಯಿಸಲೇಬೇಕು. ಈ ಸಂದರ್ಭದಲ್ಲಿ ರಂಗನಾಯಕ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳ ಮಾತುಗಳು ನೆನಪಾಗುತ್ತದೆ. ಪ್ರದರ್ಶನ ಮುಗಿದ ನಂತರ ಕಲಾವಿದರನ್ನೋ ಪ್ರೇಕ್ಷಕರನ್ನೋ ಕರೆದು ಅವರು ಕೇಳುತ್ತಿದ್ದರು- ಆಟ ಹೇಗಾಗಿದೆ? ಎಂದು. ಒಂದು ದಿನವಾದರೂ ನನ್ನ ಪದ್ಯ ಹೇಗಾಗಿದೆ ಎಂದು ಕೇಳಿದವರಲ್ಲ. ನಿಮ್ಮ ಹಾಡು ಚೆನ್ನಾಗಿತ್ತು ಎಂದರೆ, ಅದಕ್ಕೆ ಸಹಕಲಾವಿದರು ಕಾರಣ. ನಾನು ಕಾರಣನಲ್ಲ. ಅವರು ಸಹಕರಿಸಿದ ಕಾರಣ ನಾನು ಪದ್ಯ ಹೇಳುವುದಕ್ಕೆ ಅನುಕೂಲ ಆಯಿತು. ನಾನು ನನ್ನ ಹಾಡಿನ ಬಗ್ಗೆ ಗಮನಿಸುವುದಿಲ್ಲ. ಆಟ ಒಳ್ಳೆಯದಾಗಬೇಕೆಂಬುದಷ್ಟೇ ನ...

ಸರ್ಪಂಗಳ ಯಕ್ಷೋತ್ಸವ

Image
                    ಯಕ್ಷಗಾನವು ನಮ್ಮ ನಾಡಿನ ಹೆಮ್ಮೆಯ ಸಂಕೇತವಾದ ಕಲೆ. ಪಂಡಿತರಿಂದ ತೊಡಗಿ ಪಾಮರರ ವರೇಗೆ ಪ್ರತಿಯೊಬ್ಬರನ್ನೂ ಆಕರ್ಷಿಸಿ, ಅವರೆಲ್ಲರ ಮನಸೂರೆಗೊಂಡು ರಂಜನೆಯನ್ನು ನೀಡಿದ ಕಲಾಪ್ರಕಾರವು ಯಕ್ಷಗಾನದಂತೆ ಬೇರೊಂದಿಲ್ಲ. ಕಾಸರಗೋಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಪ್ರತಿ ಮನೆಗಳಲ್ಲೂ ಕಲಾವಿದರೋ, ಪ್ರದರ್ಶನಗಳನ್ನು ನೋಡಿ ಆಸ್ವಾದಿಸುವ ಕಲಾಭಿಮಾನಿಗಳೋ, ಕಲಾಪೋಷಕರೋ ಇದ್ದೇ ಇರುತ್ತಾರೆ. ಜನಮಾನಸದಲ್ಲಿ ಯಕ್ಷಗಾನ ಎಂಬ ಅನುಪಮವಾದ ಕಲೆಯು ಈ ತೆರನಾಗಿ, ಭದ್ರವಾಗಿ ನೆಲೆಯೂರಿ ವಿಜೃಂಭಿಸುತ್ತಿದೆ ಎಂಬುದು ನಮಗೆಲ್ಲರಿಗೂ ಸಂತೋಷದ ವಿಚಾರ. ಹಿಂದಿನ ತಲೆಮಾರಿನ ಅನೇಕರು ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಬಹಳಷ್ಟು ಶ್ರಮಿಸಿದರು. ದೇಶ ವಿದೇಶಗಳಲ್ಲಿ ಇಂದು ಕಲಾಪ್ರದರ್ಶನಗಳು ನಡೆಯುತ್ತಿವೆ. ಇದಕ್ಕೆ ಕಾರಣ ಸ್ಥಾನದಲ್ಲಿ ಅನೇಕರಿದ್ದಾರೆ. ಹಿರಿಯ ಕಲಾವಿದರು, ಪ್ರೇಕ್ಷಕರು, ಕಲಾಪೋಷಕರ ಪರಿಶ್ರಮ, ತ್ಯಾಗಗಳಿಂದ ಕಲೆಯು ಈಗ ವಿಶ್ವವ್ಯಾಪಿಯಾಗಿದೆ. ಅದರ ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಯಶಸ್ವೀ ಯಕ್ಷಗಾನ ಪ್ರದರ್ಶನವೊಂದು ನಡೆಯಿತು ಎಂದಾದರೆ ಅದಕ್ಕೆ ಕಲಾವಿದರು ಮಾತ್ರ ಕಾರಣರಲ್ಲ. ಕಲಾವಿದರು ಅರ್ಪಣಾಭಾವದಿಂದ ಅಭಿನಯಿಸುತ್ತಾರೆ. ತಮ್ಮ ಕರ್ತವ್ಯವೆಂದು ತಿಳಿದು ಮಾಡುತ್ತಾರೆ. ಸಹೃದಯೀ ಪ್ರೇಕ್ಷಕರೂ ಬೇಕು. ಅವರು ಕಲಾವಿದರ  ಅಭಿನಯವನ್ನು ...