Posts

ಪರಂಪರೆಯ ಸಂಪ್ರದಾಯವನ್ನು ಮುರಿಯದೆ ಮೆರೆದ ಶ್ರೇಷ್ಠ ಭಾಗವತ ನೆಬ್ಬೂರು ನಾರಾಯಣ ಭಾಗವತರು

Image
               ನೆಬ್ಬೂರು ಶ್ರೀ ನಾರಾಯಣ ದೇವರು ಹೆಗಡೆಯವರು ಬಡಗಿನ ಶ್ರೇಷ್ಠ ಭಾಗವತರುಗಳಲ್ಲೊಬ್ಬರು. ಪ್ರಸಿದ್ಧಿಗಾಗಿ ಬಾಗದೆ ಪರಂಪರೆ ಸಂಪ್ರದಾಯವನ್ನು ಮುರಿಯದೆ ಭಾಗವತರಾಗಿ ಮೆರೆದವರು. ಇವರ ಹಾಡುಗಾರಿಕೆಯು ಬಡಗುತಿಟ್ಟಿನ ಯಕ್ಷಗಾನಕ್ಕೆ ಒಂದು ವಿಶೇಷ ಕೊಡುಗೆ ಎಂದೇ ಕಲಾಭಿಮಾನಿಗಳು ಗುರುತಿಸಿದ್ದಾರೆ. ಕಲಾವಿದರ ನಟನಾ ಸಾಮರ್ಥ್ಯವನ್ನು ಹೊರಗೆಡಹುವಲ್ಲಿ ಮತ್ತು ಹೆಚ್ಚಿಸುವಲ್ಲಿ ಇವರ ಹಾಡುಗಾರಿಕೆಯು ಅತ್ಯಂತ ಸಹಕಾರಿಯಾಗಿರುತ್ತಿತ್ತು ಎಂಬುದು ಎಲ್ಲರೂ ಒಪ್ಪಿಕೊಂಡ ವಿಚಾರ. ಘಟ್ಟದ ಮೇಲಿನಿಂದ ಭಾಗವತಿಕೆಯನ್ನು ಕಲಿಯಲೆಂದೇ ಕೆಳಗಿಳಿದು ಕೆರೆಮನೆಯತ್ತ ಸಾಗಿದವರು. ಪ್ರಸಿದ್ಧ ರಂಗನಟ ಶ್ರೀ ಇಡಗುಂಜಿ ಮೇಳದ ಸಂಸ್ಥಾಪಕ ಕೆರೆಮನೆ ಶ್ರೀ ಶಿವರಾಮ ಹೆಗಡೆಯವರಿಂದ ಅವರ ಮನೆಯಲ್ಲಿದ್ದುಕೊಂಡೇ ಕಲಿತರು. ಸದಾ ಅಧ್ಯಯನಶೀಲರಾಗಿ ಅಂದಿನ ಶ್ರೇಷ್ಠ ಕಲಾವಿದರ ಒಡನಾಟದಿಂದ ಬೆಳೆಯುತ್ತಾ ಮುಂದೆ ಸಾಗಿದರು. ನೆಬ್ಬೂರು ನಾರಾಯಣ ಭಾಗವತರು                           ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ (ಕೆರೆಮನೆ ಮೇಳ) ಪ್ರಧಾನ ಭಾಗವತರಾಗಿ ಸುಮಾರು ಐವತ್ತು ವರ್ಷಗಳ ಕಾಲ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕಾಸರಗೋಡು ಪ್ರದೇಶಗಳಲ್ಲಿ ನಡೆದ ಪ್ರದರ್ಶನಗಳ ಯಶಸ್ಸಿಗೆ ಕಾರಣರಾದವರು. ಹೊರರಾಜ್ಯಗಳ ಪ್ರೇಕ್ಷಕರಿಗೆ ...

ಕಲಾವಿದ, ರಂಗಪ್ರಸಾಧನತಜ್ಞ ಶ್ರೀ ರಾಘವದಾಸ್, ಶ್ರೀ ಭಾರತೀ ಕಲಾ ಆರ್ಟ್ಸ್, ಮುಡಿಪು

Image
                       ಯಕ್ಷಗಾನ ಪ್ರದರ್ಶನಗಳಿಗೆ ವೇಷಭೂಷಣಗಳು ಬೇಕೇ ಬೇಕು. ಯಕ್ಷಗಾನದ ಇನ್ನೊಂದು ಪ್ರಾಕಾರವಾದ ತಾಳಮದ್ದಳೆಗೆ ಅದರ ಅಗತ್ಯವಿರುವುದಿಲ್ಲ. ಮೇಳಗಳು ತಮ್ಮದೇ ಆದ ವೇಷಭೂಷಣಗಳ ವ್ಯವಸ್ಥೆಯನ್ನು ಹೊಂದಿ ತಿರುಗಾಟ ನಡೆಸುತ್ತವೆ. ಆದರೆ ಸಂಘ, ಶಾಲಾ ಕಾಲೇಜುಗಳ ಪ್ರದರ್ಶನ, ಇನ್ನಿತರ ಸಮಾರಂಭಗಳ ಯಕ್ಷಗಾನ ಪ್ರದರ್ಶನಗಳ ಸಂಘಟಕರು ಬಾಡಿಗೆಗೆ ತರಿಸಿಕೊಳ್ಳಲೇಬೇಕಾಗುತ್ತದೆ. ಇಂದು ಹಲವಾರು ಸಂಘ ಸಂಸ್ಥೆಗಳು ವೇಷಭೂಷಣಗಳನ್ನು ಹೊಂದಿ ಅದನ್ನು ಸಂಘಟಕರಿಗೆ ಪೂರೈಸಿ ಪ್ರದರ್ಶನಗಳು ಯಶಸ್ವಿಯಾಗಿ ನಡೆಯುವುದಕ್ಕೆ ಕಾರಣ ಸ್ಥಾನದಲ್ಲಿವೆ. ಅಂತಹ ಸಂಸ್ಥೆಗಳಲ್ಲೊಂದು ಶ್ರೀ ಭಾರತೀ ಕಲಾ ಆರ್ಟ್ಸ್, ಮುಡಿಪು.   ಈ ಸಂಸ್ಥೆಯು ಹೂ ಹಾಕುವ ಕಲ್ಲು (ಮುಡಿಪು), ಅಲ್ಲದೆ ಬಿ.ಸಿ. ರೋಡ್ ಬಸ್ ನಿಲ್ದಾಣದ ಸಮೀಪದ ಕಟ್ಟಡದಲ್ಲೂ ಕಾರ್ಯಾಚರಿಸುತ್ತಿದೆ. ಶ್ರೀ ರಾಘವದಾಸ್ ಬಜಪೆ ಅವರು ಶ್ರೀ ಭಾರತೀ ಕಲಾ ಆರ್ಟ್ಸ್ ನ ಮಾಲೀಕರು. ಇವರು ಕಲಾವಿದರೂ ಹೌದು. ನಗುಮೊಗದ ಇವರು ಶುಭ್ರ ವಸನಧಾರಿ. ಯಾವಾಗಲೂ ಬಿಳಿ ಅಂಗಿ ಮತ್ತು ಬಿಳಿ ಪಂಚೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಪ್ರಸ್ತುತ ಮುಡಿಪು ಸಮೀಪ ವಾಸವಿದ್ದರೂ ಹುಟ್ಟೂರು ಬಜಪೆ ಸಮೀಪವಾದ ಕಾರಣ ಬಜಪೆ ರಾಘವದಾಸ್ ಎಂದೇ ಪ್ರಸಿದ್ಧರಾಗಿದ್ದಾರೆ.                     ...

ಪರಂಪರೆಯ ಹಾಸ್ಯ ಚಕ್ರವರ್ತಿ - ಪೆರುವಡಿ ನಾರಾಯಣ ಭಟ್

Image
                         ಹಾಸ್ಯವು  ನವರಸಗಳಲ್ಲೊಂದು. ಶೃಂಗಾರಾದಿ ಒಂಬತ್ತು ರಸಗಳಲ್ಲಿ ಹಾಸ್ಯಕ್ಕೆ ವಿಶೇಷ ಸ್ಥಾನವಿದೆ. ಯಕ್ಷಗಾನದಲ್ಲಂತೂ ಹಾಸ್ಯಕ್ಕೆ ವಿಫುಲ ಅವಕಾಶಗಳಿವೆ. ಹಾಸ್ಯಗಾರನಿಗೆ ವಿಶಿಷ್ಟ ಸ್ಥಾನ ಗೌರವವೂ ಇದೆ. ಭಾಗವತನು ಒಂದನೇ ವೇಷಧಾರಿಯಾದರೆ ಹಾಸ್ಯಗಾರನು ಎರಡನೇ ವೇಷಧಾರಿ. ಯಕ್ಷಗಾನದ ಎಲ್ಲಾ ವಿಭಾಗಗಳನ್ನೂ ಆತ ಬಲ್ಲವನಾಗಿರಬೇಕೆಂಬುದು ನಿಯಮ. ಅನಿವಾರ್ಯ ಕಾರಣಗಳಿಂದ ಕಲಾವಿದನೊಬ್ಬನಿಗೆ ಕರ್ತವ್ಯವನ್ನು ನಿರ್ವಹಿಸಲು ಅಸಾಧ್ಯವಾದರೆ ಹಾಸ್ಯಗಾರನು ಅದನ್ನು ನಿರ್ವಹಿಸಬೇಕು. ನಿರ್ವಹಿಸಬೇಕಾದರೆ ಆತ ಅದನ್ನು ತಿಳಿದಿರಬೇಕು. ಎಲ್ಲಾ ವೇಷಗಳನ್ನು ನಿರ್ವಹಿಸಿ ಹಂತ ಹಂತವಾಗಿ ಬೆಳೆದು ಪಕ್ವವಾದವನೇ ಹಾಸ್ಯಗಾರನಾಗುತ್ತಾನೆ. ಇಡೀ ರಾತ್ರಿಯ ಪ್ರಸಂಗಗಳಲ್ಲಿ ಹಾಸ್ಯಗಾರನು ಹಲವು ವೇಷಗಳನ್ನೂ  ಮಾಡ ಬೇಕಾಗುತ್ತದೆ. ಪೂರ್ವರಂಗದಲ್ಲಿ ಹೊಗಳಿಕೆ ಹಾಸ್ಯದಿಂದ ತೊಡಗಿ, ಪ್ರಸಂಗದಲ್ಲಿ ಅವನೇ ಮಾಡಬೇಕಾದ ಪಾತ್ರಗಳನ್ನೆಲ್ಲಾ ನಿರ್ವಹಿಸಿ ಬಣ್ಣ ತೆಗೆದು ಸೇವಾಕರ್ತರನ್ನು ಭಾಗವತರೊಡನೆ ಸೇರಿಕೊಂಡು ಹೊಗಳಿ ಅವರಿಂದ ವೀಳ್ಯ ತೆಗೆದು ಕೊಂಡಲ್ಲಿಗೆ ಮಾತ್ರ ಅವನ ಅಂದಿನ ಕರ್ತವ್ಯ ಮುಗಿಯುವುದು.                                    ...

‘ಕದ್ರಿ ವಿಷ್ಣು’ ಪ್ರಶಸ್ತಿ ವಿಜೇತ ಮಾಡಾವು ಕೊರಗಪ್ಪ ರೈ

Image
                 ಶ್ರೀ ಮಾಡಾವು ಕೊರಗಪ್ಪ ರೈ ಪ್ರಸ್ತುತ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿರುವ ಯಕ್ಷಗಾನ ಕಲಾವಿದ. ಮೃದು ಮನಸ್ಸಿನ, ವಿನಯವಂತ, ಹೆಚ್ಚು ಮಾತನಾಡುವವರಲ್ಲ. ಕೆಲವು ಪ್ರಶ್ನೆಗಳಿಗೆ ನಗುವೇ ಇವರ ಉತ್ತರ. ತೆರೆದುಕೊಳ್ಳುವ ಸ್ವಭಾವ ಇವರದಲ್ಲ. ಯಾವಾಗಲೂ ಮುಚ್ಚಿಕೊಳ್ಳುವ ಸ್ವಭಾವ. ಅತಿರೇಕಗಳಿಗೆ ಎಡೆಕೊಡದ ಕಾರಣವೇ ಈ ಉತ್ತಮ ಕಲಾವಿದ ಪ್ರಸಿದ್ಧಿಯಿಂದ ದೂರ ಉಳಿದರೇನೋ? ಎಂದೆನಿಸಿದರೆ ತಪ್ಪಾಗಲಾರದು. ಸ್ವಭಾವವನ್ನರಿತು, ಹಿತಮಿತವಾದ ಮಾತು, ಕುಣಿತಗಳಿಂದ ಪಾತ್ರಕ್ಕೆ ಜೀವ ತುಂಬುವ ಮಾಡಾವು ಕೊರಗಪ್ಪಣ್ಣನವರ ಬಗ್ಗೆ ಬರೆಯುವುದು ಕಲಾಭಿಮಾನಿಗಳೆಲ್ಲರಿಗೂ ಸಂತಸ ತರುವ ವಿಚಾರ.                          ಶ್ರೀ ಮಾಡಾವು ಕೊರಗಪ್ಪ ರೈಗಳು 26-12-1955ರಂದು ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಸಣಂಗಲ ನಡುಮನೆಯಲ್ಲಿ ಮಹಾಬಲ ರೈ, ಶ್ರೀಮತಿ ಕಮಲ ಎಂ. ರೈ ದಂಪತಿಗಳಿಗೆ ಮಗನಾಗಿ ಜನಿಸಿದರು. ಪ್ರಾಥಮಿಕ ವಿದ್ಯಾರ್ಜನೆಯನ್ನು ಕೆಯ್ಯೂರು ಶಾಲೆಯಲ್ಲಿ ಪೂರೈಸಿದರು (7ನೇ ತರಗತಿ). ಎಳವೆಯಲ್ಲೇ ಯಕ್ಷಗಾನದತ್ತ ಆಕರ್ಷಿತರಾದರು. ಶಾಲಾದಿನಗಳಲ್ಲಿ ಪುತ್ತೂರು ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ತಪ್ಪದೆ ನೋಡುತ್ತಿದ್ದರಂತೆ. ಕಲಾವಿದನಾಗಬೇಕೆಂಬ ಆಸೆಯು ಸಹಜವಾಗಿ ಎಳೆಮನಸ್ಸಿನಲ್ಲಿ ಚಿಗ...

ಸ್ವಾಭಿಮಾನೀ, ಶಿಸ್ತಿನ, ನಿಷ್ಠಾವಂತ ಕಲಾವಿದ - ದಿ| ಅಳಿಕೆ ಲಕ್ಷ್ಮಣ ಶೆಟ್ಟಿ

Image
                    1950ನೇ ಇಸವಿ. ಅಂದರೆ 68 ವರ್ಷಗಳಷ್ಟು ಹಿಂದೆ ಈಗಿನಂತೆ ವಾಹನ ಸೌಕರ್ಯಗಳಿಲ್ಲದ ಕಾಲ. ಕೆಲವು ದಿನಪತ್ರಿಕೆಗಳನ್ನು ಬಿಟ್ಟರೆ ಬೇರೆ ಮಾಧ್ಯಮಗಳು ಇಲ್ಲ. ಅದನ್ನು ಓದಲು ಸಂಜೆ ವರೇಗೆ ಕಾಯುತ್ತಿದ್ದ ಜನರೂ ಇದ್ದರು. ಮನೆಗೆ ತೆರಳಲು ಕಲಾವಿದರಿಗೆ ಅವಕಾಶಗಳಿಲ್ಲ. ಮನೆಯವರ ಸಂಪರ್ಕದಿಂದ ದೂರ ಉಳಿದು ಬಿಡಾರದಲ್ಲೇ ಇದ್ದುಕೊಂಡು ಸಾಧನೆಯ ಮೂಲಕವೇ ಕಲಾವಿದರಾಗಿ ಕಾಣಿಸಿಕೊಂಡರು. ಅವರುಗಳೆಲ್ಲಾ ನಡೆದುಕೊಂಡೇ ಅನೇಕ ಮೈಲುಗಳನ್ನು ದಾಟಿ ಪ್ರದರ್ಶನ ನಡೆಯುವ ಸ್ಥಳಕ್ಕೆ ಸಾಗಿದರು. ಪೆಟ್ಟಿಗೆಗಳನ್ನು ಹೊತ್ತುಕೊಂಡೇ ಹೋದರು. ಕೊಟ್ಟ ಸ್ಥಳದಲ್ಲೋ, ಮರದಡಿಯಲ್ಲೋ ಮಲಗಿ ಹಗಲುಗಳನ್ನು ಕಳೆದರು. ಕಷ್ಟವನ್ನನುಭವಿಸುತ್ತಾ ಕಲಿತ ಕಾರಣ ಶ್ರೇಷ್ಠ ಕಲಾವಿದರಾದರೊ? ಕಲೆಯನ್ನು ಶ್ರೀಮಂತಗೊಳಿಸಿದರೊ? ನಾವು ಯೋಚಿಸಲೇ ಬೇಕಾದ ವಿಚಾರವಿದು. ಈಗ ಕಾಲ ಹಾಗಿಲ್ಲ. ಬದಲಾಗಿದೆ. ಕಲಾವಿದರಿಗೆ ಎಲ್ಲಾ ಸೌಕರ್ಯ ಗಳೂ ಸಂಘಟಕರಿಂದ ಕೊಡಲ್ಪಡುತ್ತಿದೆ. ಉತ್ತಮ ಸಂಭಾವನೆಯೂ ಇದೆ. ಪ್ರಚಾರಕ್ಕೆ ಮಾಧ್ಯಮಗಳು! ಯಕ್ಷಗಾನದಿಂದಲೇ ಜೀವಿಸುವ ಕಲಾವಿದರಿದ್ದಾರೆ. ಭೂಮಿ, ಮನೆ ಖರೀದಿಸಿದವರಿದ್ದಾರೆ. ಸ್ವಂತ ವಾಹನದಲ್ಲೇ ಸಾಗಿ ಪ್ರದರ್ಶನಗಳಲ್ಲಿ ಭಾಗವಹಿಸಿ ಮನೆಗೆ ಬರುತ್ತಾರೆ! ಅಂದಿನ ಕಲಾವಿದರ ಕಷ್ಟದ ದಿನಗಳ ಅನುಭವ ಇತ್ತೀಚೆಗಿನ ಕಲಾವಿದರಿಗಂತೂ ಇರಲಾರದು. ಆದರೂ ಅವರುಗಳ ಸಾಧನೆಯನ್ನೂ ಕೊಡುಗೆಗಳನ್ನೂ ನಾವು ಸ್...

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು

Image
                     ‘ಯಕ್ಷಗಾನ’ ಎಂಬ ಶ್ರೇಷ್ಠ ಕಲೆಯು ಯಾವಾಗ ಪ್ರಾರಂಭವಾಯಿತು? ಆಗ ಕಲೆಯ ಸ್ವರೂಪ ಹೇಗಿತ್ತು? ಯಾವ ರೀತಿಯಲ್ಲಿ ಇಂದಿನವರೇಗೂ ಸಾಗಿ ಬಂತು? ಈ ಪ್ರಶ್ನೆಗಳಿಗೆ ಉತ್ತರಿಸಲು ನಾವು ಶಕ್ಯರಲ್ಲ. ತಿಳಿದವರಲ್ಲ. ಹಿರಿಯರು, ವಿದ್ವಾಂಸರು ಉತ್ತರಿಸಬೇಕು. ಆದರೂ ಓದಿ ಸಂಗ್ರಹಿಸಿದ ಕೆಲವೊಂದು ವಿಚಾರಗಳ ಆಧಾರದಲ್ಲಿ ಕೆಲವು ಶತಮಾನಗಳ ಹಿಂದೆಯೇ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದ್ದವು ಎಂಬುದನ್ನು ತಿಳಿಯಬಹುದು. ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಶ್ರೇಷ್ಠ ಕವಿಗಳಾದ ದೇವಿದಾಸ, ಧ್ವಜಪುರ ರಾಮಯ್ಯ, ಮಯ್ಯವತಿ ವೆಂಕಟ, ಹೆರ್ಗ ವೆಂಕರಮಣ ಪ್ರಭು, ಅಮ್ಮನಳ್ಳಿ ಆತ್ಮಾರಾಮ, ನಂದಳಿಕೆ ಲಕ್ಷ್ಮೀನಾರಾಯಣ ಮೊದಲಾದವರು 16ನೆಯ ಶತಮಾನದ ಕೊನೆಯವರೆಂದೂ, ನಗಿರೆ ಸುಬ್ಬ, ವಿಷ್ಣು ವಾರಂಬಳ್ಳಿ ಮೊದಲಾದವರು ಕ್ರಿ. ಶ. 1600ರ ಮೊದಲಿನವರೆಂದೂ ಪುಸ್ತಕಗಳಲ್ಲಿ ಓದಿದ ನೆನಪು. ಇರಲಿ. ಶ್ರೇಷ್ಠ ಸಂದೇಶಗಳನ್ನೂ, ಪುರಾಣಜ್ಞಾನವನ್ನೂ, ಮನೋರಂಜನೆಯನ್ನೂ ಜತೆಯಾಗಿ ನೀಡಬಲ್ಲ ಅತ್ಯುತ್ತಮ, ಅನುಪಮವಾದ ಕಲಾಪ್ರಕಾರವನ್ನು ನೋಡಿ ಆನಂದಿಸುವ ಅವಕಾಶವನ್ನು ಪಾರ್ತಿಸುಬ್ಬನಿಂದ ಹಿಡಿದು ಅನೇಕ ಹಿರಿಯ ಕವಿಶ್ರೇಷ್ಠರು ನಮಗೆ ನೀಡಿದರು. ಅವರುಗಳೆಲ್ಲಾ ನಿಜಕ್ಕೂ ಪ್ರಾತಃಸ್ಮರಣೀಯರು. ಯಕ್ಷಗಾನದಲ್ಲಿ ಗಾನ ಮಾತ್ರ ಇರುವುದಲ್ಲ. ಗಾಯನ, ವಾದನ, ನರ್ತನ, ವಾಚಿಕಗಳಿಂದ ಬಣ್ಣ ವೇಷಗಳಿಂದ ಪರಿಪೂರ್ಣವಾಗಿ, ಸಮೃ...

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ, ಕಲಾವಿದರುಗಳಿಗೆ ಶುಭಾಶಯಗಳು

Image
                     ‘ಯಕ್ಷಗಾನ’ ಎಂಬ ಶ್ರೇಷ್ಠ ಕಲೆಯು ಯಾವಾಗ ಪ್ರಾರಂಭವಾಯಿತು? ಆಗ ಕಲೆಯ ಸ್ವರೂಪ ಹೇಗಿತ್ತು? ಯಾವ ರೀತಿಯಲ್ಲಿ ಇಂದಿನವರೇಗೂ ಸಾಗಿ ಬಂತು? ಈ ಪ್ರಶ್ನೆಗಳಿಗೆ ಉತ್ತರಿಸಲು ನಾವು ಶಕ್ಯರಲ್ಲ. ತಿಳಿದವರಲ್ಲ. ಹಿರಿಯರು, ವಿದ್ವಾಂಸರು ಉತ್ತರಿಸಬೇಕು. ಆದರೂ ಓದಿ ಸಂಗ್ರಹಿಸಿದ ಕೆಲವೊಂದು ವಿಚಾರಗಳ ಆಧಾರದಲ್ಲಿ ಕೆಲವು ಶತಮಾನಗಳ ಹಿಂದೆಯೇ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದ್ದವು ಎಂಬುದನ್ನು ತಿಳಿಯಬಹುದು. ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಶ್ರೇಷ್ಠ ಕವಿಗಳಾದ ದೇವಿದಾಸ, ಧ್ವಜಪುರ ರಾಮಯ್ಯ, ಮಯ್ಯವತಿ ವೆಂಕಟ, ಹೆರ್ಗ ವೆಂಕರಮಣ ಪ್ರಭು, ಅಮ್ಮನಳ್ಳಿ ಆತ್ಮಾರಾಮ, ನಂದಳಿಕೆ ಲಕ್ಷ್ಮೀನಾರಾಯಣ ಮೊದಲಾದವರು 16ನೆಯ ಶತಮಾನದ ಕೊನೆಯವರೆಂದೂ, ನಗಿರೆ ಸುಬ್ಬ, ವಿಷ್ಣು ವಾರಂಬಳ್ಳಿ ಮೊದಲಾದವರು ಕ್ರಿ. ಶ. 1600ರ ಮೊದಲಿನವರೆಂದೂ ಪುಸ್ತಕಗಳಲ್ಲಿ ಓದಿದ ನೆನಪು. ಇರಲಿ. ಶ್ರೇಷ್ಠ ಸಂದೇಶಗಳನ್ನೂ, ಪುರಾಣಜ್ಞಾನವನ್ನೂ, ಮನೋರಂಜನೆಯನ್ನೂ ಜತೆಯಾಗಿ ನೀಡಬಲ್ಲ ಅತ್ಯುತ್ತಮ, ಅನುಪಮವಾದ ಕಲಾಪ್ರಕಾರವನ್ನು ನೋಡಿ ಆನಂದಿಸುವ ಅವಕಾಶವನ್ನು ಪಾರ್ತಿಸುಬ್ಬನಿಂದ ಹಿಡಿದು ಅನೇಕ ಹಿರಿಯ ಕವಿಶ್ರೇಷ್ಠರು ನಮಗೆ ನೀಡಿದರು. ಅವರುಗಳೆಲ್ಲಾ ನಿಜಕ್ಕೂ ಪ್ರಾತಃಸ್ಮರಣೀಯರು. ಯಕ್ಷಗಾನದಲ್ಲಿ ಗಾನ ಮಾತ್ರ ಇರುವುದಲ್ಲ. ಗಾಯನ, ವಾದನ, ನರ್ತನ, ವಾಚಿಕಗಳಿಂದ ಬಣ್ಣ ವೇಷಗಳಿಂದ ಪರಿಪೂರ್ಣವಾಗಿ, ಸಮೃ...