Posts

Showing posts from September, 2018

ರಂಗದ ರಾಜ ಮಧೂರು ಶ್ರೀ ರಾಧಾಕೃಷ್ಣ ನಾವಡ

Image
                      ಯಕ್ಷಗಾನ ಎಂಬುದು ಒಂದು ಗಂಡುಕಲೆ. ಮೇರುಕಲೆ. ಎಲ್ಲಾ ಕಲಾಪ್ರಕಾರಗಳ ಮೇಲೂ ನಮಗೆ ಗೌರವವಿದೆ. ಪ್ರೀತಿಯಿದೆ. ನೋಡಿ ನಾವು ಆನಂದಿಸುತ್ತೇವೆ. ಆದರೂ ಆಕಾಶಕ್ಕೆ ಆಕಾಶವೇ ಸಾಟಿ. ಸಾಗರಕ್ಕೆ ಸಾಗರವೇ ಸಾಟಿ ಎಂಬಂತೆ ಯಕ್ಷಗಾನವು ರಂಜಿಸುತ್ತಿದೆ. ಕಲೆ, ಕಲಾವಿದ, ಪ್ರೇಕ್ಷಕರು ಈ ಮೂರು ವಿಚಾರಗಳು ಪೂರಕವಾಗಿ ಇದ್ದರೂ, ಕಲಾವಿದನಿಗಿಂತ ಕಲೆಯೇ ಶ್ರೇಷ್ಠ. ಪ್ರೇಕ್ಷಕರು ಶ್ರೇಷ್ಠರು. ಪ್ರೇಕ್ಷಕರನ್ನು ಸಭಾಸದರು ಎಂದು ಸಂಬೋಧಿಸಲಾಗುತ್ತದೆ. ಹಾಗಾಗಿಯೇ ಕಲಾವಿದ ರಂಗಪ್ರವೇಶ ಮಾಡಿದಾಗ ಸಭಾ ವಂದನೆಯನ್ನು ಮಾಡುತ್ತಾನೆ. ಕಲಾವಿದನಿಗಾಗಿ ಕಲೆಯಲ್ಲ. ಪ್ರೇಕ್ಷಕರೂ ಅಲ್ಲ. ಕಲೆಗಾಗಿ, ಪ್ರೇಕ್ಷಕರಿಗಾಗಿ ಕಲಾವಿದ. ಗಗನಸದೃಶವಾದ ಯಕ್ಷಗಾನವೆಂಬ ಕಲೆಯಲ್ಲಿ ಕಲಾವಿದರುಗಳೆಂಬ ಅದೆಷ್ಟೋ ನಕ್ಷತ್ರಗಳು ನಮಗೆ ಕಾಣಬಹುದು. ಕಲಾವಿದರೊಬ್ಬರ ಬಗ್ಗೆ ಬರೆಯಲು ಇದೊಂದು ಕಿರುಪ್ರಯತ್ನ ಅಷ್ಟೆ.                    ಸುಂದೋಪಸುಂದ ಕಾಳಗದ 'ಸುಂದ' ನಾಗಿ  ಮಧೂರು ಶ್ರೀ ರಾಧಾಕೃಷ್ಣ ನಾವಡ                                        ಫೋಟೋ : ಶ್ರೀ  ಮುರಳಿ ನಾವಡ                         ಪ್ರಸ್ತುತ ಇವರು ಕಾಸರಗೋಡಿನಲ್ಲಿ ವಾಸವಾಗಿದ್ದರೂ ಮಧೂರು ರಾಧಾಕೃಷ್ಣ ನಾವಡರೆಂದೇ ಪ್ರಸಿದ್ಧರು. ಕೇರಳ ರಾಜ್ಯ ಕಾಸರಗೋಡು ಸಮೀಪದ ಮಧೂರು (ಬನ್ನೂರು) ಇವರ ಹುಟ್ಟೂರು. ಶ್ರೀ ವಿಷ್ಣು ನಾವಡ ಮಧೂರು, ಲೀಲಾವತಿ ಅಮ್ಮ ದಂಪತಿಗಳ 5 ಮಂದಿ ಮಕ್ಕಳಲ

‘ಕಾಶಿಮಾಣಿ’ ಖ್ಯಾತಿಯ ಮವ್ವಾರು ಬಾಲಕೃಷ್ಣ ಮಣಿಯಾಣಿ

Image
                        ಯಕ್ಷಗಾನಕ್ಕೆ ಭಾಗವತನೇ ನಿರ್ದೇಶಕ. ಒಂದನೇ ವೇಷಧಾರಿ. ನಂತರದ ಸ್ಥಾನ ಹಾಸ್ಯಗಾರನಿಗೆ. ಬೆಳಗಿನವರೇಗೂ ಪ್ರಸಂಗವನ್ನು ಮುನ್ನಡೆಸಬಲ್ಲ ಚತುರತೆ ಅವನಿಗಿರಬೇಕು. ಎರಡನೇ ವೇಷಧಾರಿಯಾಗಿ ಚೌಕಿಗೆ ನಿರ್ದೇಶಕನಾಗಿ, ಸೇವಾಕರ್ತರಿಂದ ವೀಳ್ಯವನ್ನು ಪಡೆದು, ಪ್ರಸಂಗ ಮುಗಿಯುವ ತನಕವೂ ವ್ಯವಹರಿಸುತ್ತಾ ಕಾಣಿಸಿಕೊಳ್ಳುತ್ತಾನೆ. ಪ್ರಸ್ತುತ ಅನೇಕ ಹಾಸ್ಯಗಾರರು ತಮ್ಮ ವಿಶಿಷ್ಠ ಅಭಿನಯಗಳಿಂದ, ತಮ್ಮದೇ ಕಲ್ಪನೆಯಿಂದ, ಪಾತ್ರಗಳಿಗೆ ಜೀವತುಂಬಿ ರಂಗದಲ್ಲಿ ಮೆರೆಯುತ್ತಿದ್ದಾರೆ. ಅವರಲ್ಲೊಬ್ಬರು. ಮವ್ವಾರು ಶ್ರೀ ಬಾಲಕೃಷ್ಣ ಮಣಿಯಾಣಿ. ಮವ್ವಾರು ಬಾಲಕೃಷ್ಣ ಮಣಿಯಾಣಿ                              ಕೇರಳ ರಾಜ್ಯದ ಕಾಸರಗೋಡು ತಾಲೂಕು, ನೀರ್ಚಾಲು ಗ್ರಾಮದ ಪೂವಾಳ ಎಂಬಲ್ಲಿ 1966ನೇ ಇಸವಿ ಎಪ್ರಿಲ್ 12ರಂದು ಕುಂಞರಾಮ ಮಣಿಯಾಣಿ ಮತ್ತು ನಾರಾಯಣಿ ದಂಪತಿಗಳಿಗೆ ಮಗನಾಗಿ ಬಾಲಕೃಷ್ಣ ಮಣಿಯಾಣಿಯವರು ಜನಿಸಿದರು. ಎಳವೆಯಲ್ಲೇ ತೀರ್ಥರೂಪರನ್ನು ಕಳೆದುಕೊಂಡ ಇವರು ಅಜ್ಜನ ಮನೆಯಲ್ಲೇ ಬೆಳೆದವರು. ನಾರಂಪಾಡಿ ಫಾತಿಮಾ ಎ.ಎಲ್.ಪಿ. ಶಾಲೆಯಲ್ಲಿ ನಾಲ್ಕನೇ ತರಗತಿಯ ವರೇಗೆ ಓದಿದರು. ಇವರ ಚಿಕ್ಕಪ್ಪನಾದ ಅಪ್ಪಯ್ಯ ಮಣಿಯಾಣಿಯವರು ಆಗ ಮಾರ್ಪನಡ್ಕದಲ್ಲಿ ನಾಟ್ಯ ತರಗತಿಯನ್ನು ನಡೆಸುತ್ತಿದ್ದರು. (ಅಪ್ಪಯ್ಯ ಮಣಿಯಾಣಿಯವರು ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ). ಅವರಿಂದ ಯಕ್ಷಗಾನ ನಾಟ್ಯ ಕಲಿತು ಕಟೀಲು ಮೇಳದಲ್ಲಿ ತಿರುಗಾಟ

ಆಪದ್ಬಾಂಧವ ಸವ್ಯಸಾಚಿ ಕಲಾವಿದ ಪುತ್ತೂರು ಗಂಗಾಧರ ಜೋಗಿ

Image
                          ಶ್ರೀ ಪುತ್ತೂರು ಗಂಗಾಧರ ಜೋಗಿಯವರು ಶ್ರೀ ಧರ್ಮಸ್ಥಳ ಮೇಳದ ದಣಿವರಿಯದ ಕಲಾವಿದ. ಭಾಗವತರು ತನಗೆ ನೀಡಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಷ್ಠೆಯಿಂದ ಮಾಡುತ್ತಾ ಬಂದ ಕಲಾಮಾತೆಯ ಸುಪುತ್ರ. ಎಷ್ಟು ವೇಷಗಳನ್ನೂ ಮಾಡಬಲ್ಲರು. ಯಾವ ವೇಷವನ್ನೂ ಮಾಡಬಲ್ಲರು. ಸ್ತ್ರೀವೇಷ, ಪುಂಡುವೇಷ, ಕಿರೀಟ ವೇಷ, ಹಾಸ್ಯ, ಅನಿವಾರ್ಯವಾದರೆ ಕೇಶಾವರೀ ಬಣ್ಣದ ವೇಷಕ್ಕೂ ಸೈ. ಹೆಣ್ಣು ಬಣ್ಣಗಳನ್ನೂ ಅಂದವಾಗಿ ನಿರ್ವಹಿಸಬಲ್ಲರು. ಇಂತಹ ಕಲಾವಿದರು ಸಿದ್ಧರಾಗುವುದು ಬಹಳ ಅಪರೂಪ. ಮೇಳಕ್ಕೆ ಇವರಂತಹ ಕಲಾವಿದರು ಅನಿವಾರ್ಯ, ಹಿರಿಯ ಕಲಾವಿದನಾದರೂ ಅನಿವಾರ್ಯ ಸಂದರ್ಭದಲ್ಲಿ ಪ್ರಸಂಗದ ಸಣ್ಣಪುಟ್ಟ ಪಾತ್ರ  ಗಳನ್ನು ನಿರ್ವಹಿಸಿ ವ್ಯಕ್ತಿತ್ವದಲ್ಲಿ ದೊಡ್ಡವರಾಗಿ ಮೆರೆದವರು ಗಂಗಾಧರರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಕಳೆದ 36 ವರ್ಷಗಳಿಂದ ನಿರಂತರ ಕಲಾವಿದನಾಗಿ ವ್ಯವಸಾಯ ಮಾಡಿದ ಹಿರಿಮೆಗೆ ಪಾತ್ರರಾಗಿದ್ದಾರೆ ಶ್ರೀಯುತರು, ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ| ವೀರೇಂದ್ರ ಹೆಗಡೆಯವರ, ಡಿ. ಹರ್ಷೇಂದ್ರ ಕುಮಾರರ ಆಶೀರ್ವಾದ, ಸಹಕಲಾವಿದರ ಸಹಕಾರದಿಂದ ನಾವು ಕಲಾಮಾತೆಯ ಸೇವೆಯನ್ನು ಮಾಡುವಂತಾಯಿತು ಎಂಬುದು ಪುತ್ತೂರು ಗಂಗಾಧರರ ಪ್ರಾಮಾಣಿಕ ಅನಿಸಿಕೆ.                                                             ಶ್ರೀ ಪುತ್ತೂರ

ಹಾಸ್ಯಗಾರ - ಕೆ. ಮಹಾಬಲೇಶ್ವರ ಭಟ್ ಭಾಗಮಂಡಲ

Image
                          ಆತ್ಮೀಯರಿಂದ ಮಾಪಣ್ಣ, ಮಹಾಬಲಣ್ಣ ಎಂದೇ ಕರೆಸಿಕೊಳ್ಳುವ ಶ್ರೀ ಕೆ. ಮಹಾಬಲೇಶ್ವರ ಭಟ್ ಭಾಗಮಂಡಲ (ಹಾಸ್ಯಗಾರ) ಇವರನ್ನು ಯಕ್ಷಗಾನ ಕಲಾಭಿಮಾನಿಗಳೆಲ್ಲರೂ ಚೆನ್ನಾಗಿ ಬಲ್ಲರು. ಮುಳಿಯಾಲ ಈಶ್ವರ ಭಟ್ ಮತ್ತು ಪಾರ್ವತಿ ಅಮ್ಮ ದಂಪತಿಗಳಿಗೆ ಮಗನಾಗಿ ಫೆಬ್ರವರಿ 13, 1961ರಂದು ಶ್ರೀ ಕೆ. ಮಹಾಬಲೇಶ್ವರ ಭಟ್ ಜನಿಸಿದರು. ಕೊಮ್ಮೆ, ಕೋಳ್ಯೂರು ಇವರ ಹುಟ್ಟೂರು (ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ) ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೊಡ್ಲಮೊಗರು ಶ್ರೀ ವಾಣೀವಿಜಯ ಶಾಲೆಯಲ್ಲಿ ಪೂರೈಸಿದ ಇವರು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮಡಿಕೇರಿ ಜೂನಿಯರ್ ಕಾಲೇಜಿನಲ್ಲಿ ಪೂರೈಸಿದರು. ಎಳವೆಯಲ್ಲೇ ಇವರಿಗೆ ಯಕ್ಷಗಾನದಲ್ಲಿ ಅಪಾರ ಆಸಕ್ತಿ. ರಜಾದಿನಗಳಲ್ಲಿ ಮನೆಯ ಪರಿಸರದಲ್ಲಿ ನಡೆಯುತ್ತಿದ್ದ ಆಟ, ಕೂಟಗಳನ್ನು ಬಿಟ್ಟವರಲ್ಲ. ನಾನೂ ಕಲಾವಿದನಾಗಬೇಕೆಂಬ ಆಸೆ ತನ್ನಿಂದ ತಾನೆ ಹುಟ್ಟಿಕೊಂಡಿತು.                                                         ಕೆ. ಮಹಾಬಲೇಶ್ವರ ಭಟ್ ಭಾಗಮಂಡಲ                      ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಲಿತ ಕಲಾಕೇಂದ್ರಕ್ಕೆ ಸೇರಿಕೊಂಡ ಮಹಾಬಲಣ್ಣ  ಶ್ರೀ ಕೆ. ಗೋವಿಂದ ಭಟ್ಟರಿಂದ ಹೆಜ್ಜೆಗಾರಿಕೆ ಕಲಿತರು. ಮಹಾಬಲೇಶ್ವರ ಭಟ್ಟರು ಪ್ರಥಮವಾಗಿ ಗೆಜ್ಜೆಕಟ್ಟಿ ವೇಷ ಮಾಡಿದ್ದು ಉಪ್ಪಳ ಶ್ರೀ ಭಗವತೀ ಯಕ್ಷಗಾನ ಮಂಡಳಿಯಲ್ಲಿ. ನಂತರ ಕಟೀಲು ಮೇಳದಲ್ಲಿ ಎರಡು ವರ್ಷಗಳ ಕಾಲ ತಿರುಗಾಟ ನಡೆಸಿ

ದೇಲಂತಮಜಲು ಸುಬ್ರಹ್ಮಣ್ಯ ಭಟ್

Image
                    ‘ಯಕ್ಷದೀಪ’ ಮಾಸಪತ್ರಿಕೆಯಲ್ಲಿ 2017 ಜನವರಿ ತಿಂಗಳ ಸಂಚಿಕೆಯಲ್ಲಿ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರು ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರ ಬಗ್ಗೆ ಲೇಖನವೊಂದನ್ನು ಬರೆದಿದ್ದರು. (ದೇಲಂತಮಜಲು ಸುಬ್ರಹ್ಮಣ್ಯ ಭಟ್ - ಒಂದು ಮೆಲೋಡಿ). ‘‘ಚೆಂಡೆ ಎಂಬುದು ಒಂದು ರಕ್ಕಸ ವಾದ್ಯ. ಹೊರಡಿಸುವ ಶಬ್ದ ತೀವ್ರತರವಾದದ್ದು. ಇದನ್ನು ಭಾವಪೂರ್ಣವಾಗಿ ಅಥವಾ ಸೌಮ್ಯತೆಯ ಹದದಲ್ಲಿ ನುಡಿಸುವುದು ಸವಾಲಿನ ಕೆಲಸ. ಇದನ್ನು ಮಾಡಲು ಅವನದ್ದ ವಾದಕನಲ್ಲಿ ಬೇಕಾದುದು ಅಸಾಧಾರಣ ತಾಳ್ಮೆ ಮತ್ತು ಹೃದಯಸ್ಥವಾಗಿ ಇರಲೇಬೇಕಾದ ಸೌಶೀಲ್ಯತೆ. ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರಲ್ಲಿ ಇದಿದೆ. ಅದೇ ಕಾರಣಕ್ಕೆ ಮೆಲೋಡಿಯನ್ ದೇಲಂತಮಜಲು ಎಂದು ಇವರನ್ನು ಕರೆಯುವುದು. ಮೆಲೋಡಿ ಕಲಾವಿದನ ಮನಸ್ಸಿನಲ್ಲಿ ಮೊದಲಾಗಿ ಇರಬೇಕು. ನಾದ ಮೊದಲು ಕಲಾವಿದನಲ್ಲಿ ಹುಟ್ಟಬೇಕು. ಹಾಗೆ ಹುಟ್ಟಿದರೆ ಅದು ತಾನು ನುಡಿಸುತ್ತಾ ಇರುವ ವಾದ್ಯದಲ್ಲೂ ಹೊಮ್ಮುತ್ತದೆ. ತೆಂಕುತಿಟ್ಟಿನಲ್ಲಿ ಇದೇ ಕಾರಣಕ್ಕೆ ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರಿಗೆ ವಿಶಿಷ್ಠ ಸ್ಥಾನ ಇದೆ.’’ ದೇಲಂತಮಜಲು ಸುಬ್ರಹ್ಮಣ್ಯ ಭಟ್ (ಫೋಟೋ: ಮಂಥನ್ ಶೆಟ್ಟಿ)                                  ಖ್ಯಾತ ಕಲಾವಿದನಿಂದಲೇ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರಿಗೆ ಹೊಗಳಿಕೆ! ಇದಕ್ಕಿಂತ ಹೆಚ್ಚು ಇನ್ನೇನು ಬೇಕು. ಸೌಮ್ಯ ಸ್ವಭಾವದ, ವಿನಯವಂತರಾದ ದೇಲಂತಮಜಲು ಈಗ ಖ್ಯಾತ ಮದ್ದಳೆಗಾರರಾಗಿ ರಂಗದಲ್ಲಿ ರಂಜಿ

ಬಹುಬೇಡಿಕೆಯ ಕಲಾವಿದ - ಜಗದಾಭಿರಾಮ ಪಡುಬಿದ್ರೆ

Image
                    ಯಕ್ಷಗಾನ ಕ್ಷೇತ್ರದಲ್ಲಿ ಇವರು ಈಗ ಬಹುಬೇಡಿಕೆಯ ಕಲಾವಿದರು. ಸ್ತ್ರೀವೇಷ, ಪುಂಡುವೇಷ, ರಾಜವೇಷ, ಬಣ್ಣದ ವೇಷ ಹೀಗೆ ಯಾವ ವೇಷಗಳನ್ನಾದರೂ ಮಾಡಬಲ್ಲ ಸಮರ್ಥರು. ಕಲಾಭಿಮಾನಿಗಳಿಂದ, ಸಹಕಲಾವಿದರಿಂದ, ಮಿತ್ರರಿಂದ ಜಗತ್, ಜಗದಾಭಿ, ಹಿರಿಯ ಕಲಾವಿದರಿಂದ ‘ಮಾಣಿ’ ಎಂದೇ ಕರೆಸಿಕೊಳ್ಳುತ್ತಿದ್ದ ಇವರ ಪೂರ್ಣ ಹೆಸರು ಜಗದಾಭಿರಾಮಸ್ವಾಮಿ ಪಡುಬಿದ್ರೆ. ಹುಟ್ಟೂರು ಪಡುಬಿದ್ರೆ ಉದಯಾದ್ರಿ ಮಠ. 11-11-1973 ರಂದು ಜನನ. ಜ್ಯೋತಿಷಿಯೂ, ಪಡುಬಿದಿರೆ ಬಾಲಗಣಪತಿ, ಪ್ರಸನ್ನ ಪಾರ್ವತೀ ದೇವಸ್ಥಾನದ ಅರ್ಚಕರೂ ಆಗಿದ್ದ ಶ್ರೀ ಪಟ್ಟಾಭಿರಾಮ ಸ್ವಾಮಿ, ವಸಂತಿ ದಂಪತಿಗಳ ನಾಲ್ಕು ಮಂದಿ ಮಕ್ಕಳಲ್ಲಿ ಹಿರಿಯವರೇ ಜಗದಾಭಿರಾಮಸ್ವಾಮಿ. ಪ್ರಾಥಮಿಕ ವಿದ್ಯಾಭ್ಯಾಸ ಪಡುಬಿದಿರೆಯಲ್ಲಿ ಪೂರೈಸಿ      (7ನೇ ತರಗತಿ) ಮನೆಯಲ್ಲಿ ತಂದೆಗೆ ಸಹಾಯಕನಾಗಿ ದೇವಸ್ಥಾನದ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. 1986ರಲ್ಲಿ ಶ್ರೀ ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಶ್ರೀ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯವನ್ನು ಅಭ್ಯಸಿಸಿದರು. ಆಗ ಶ್ರೀ ನಿಡ್ಲೆ ನರಸಿಂಹ ಭಟ್ಟರು ಕಲಿಕಾ ಕೇಂದ್ರದ ಹಿಮ್ಮೇಳ ಗುರುಗಳಾಗಿದ್ದರು. ಅದೇ ವರುಷವೇ ಜಗದಾಭಿ ಶ್ರೀ ಧರ್ಮಸ್ಥಳ ಮೇಳಕ್ಕೆ ಆಯ್ಕೆಯಾಗಿದ್ದರು. ಮೇಳಕ್ಕೆ ಆಯ್ಕೆಯಾಗುವೆ, ಸೇರುವೆ ಎಂಬ ಕಲ್ಪನೆಯೂ ಮೊದಲು ಅವರಿಗಿರಲಿಲ್ಲವಂತೆ. ಅಯೋಚಿತವಾಗಿ ಅನಿರೀಕ್ಷಿತವಾಗಿ ಅವಕಾಶ ಒದಗಿ ಬಂತು. ಹಿರಿಯ,

ಅನುಭವೀ ಪುಂಡುವೇಷಧಾರಿ ಶ್ರೀ ವಸಂತ ಗೌಡ ಕಾಯರ್ತಡ್ಕ

Image
                      ಶ್ರೀ ವಸಂತ ಗೌಡ ಕಾಯರ್ತಡ್ಕ ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದರಲ್ಲೊಬ್ಬರು. 1974ರಿಂದ ನಿರಂತರ 43 ವರುಷಗಳ ಕಾಲ ತಿರುಗಾಟ ನಡೆಸುತ್ತಾ ಬಂದಿರುವ ಹಿರಿಮೆ ಇವರದು. ಪುರಾಣ ಪ್ರಸಂಗಗಳ ಜ್ಞಾನ, ಪ್ರಸಂಗ ನಡೆಗಳ ಬಗ್ಗೆ ಇವರಿಗೆ ಇರುವ ಅರಿವು ನಿಜಕ್ಕೂ ಪ್ರಶಂಸನೀಯ. ಕಡತೋಕಾ, ಚಿಪ್ಪಾರು, ಪುತ್ತೂರು ನಾರಾಯಣ ಹೆಗ್ಡೆ, ವಿಟ್ಲ ಜೋಷಿ, ಕುಂಬಳೆ ಸುಂದರ ರಾವ್, ಕೆ. ಗೋವಿಂದ ಭಟ್, ಎಂಪೆಕಟ್ಟೆ ರಾಮಯ್ಯ ರೈ, ನಯನ ಕುಮಾರ್, ಪುತ್ತಿಗೆ ರಘುರಾಮ ಹೊಳ್ಳರು, ರಾಮಕೃಷ್ಣ ಮಯ್ಯರು, ಕುಂಬಳೆ ಶ್ರೀಧರ ರಾವ್, ನಿಡ್ಲೆ ಗೋವಿಂದ ಭಟ್, ಉಬರಡ್ಕ ಉಮೇಶ್ ಶೆಟ್ಟಿ, ಅಡೂರು ಗಣೇಶ ರಾವ್, ಕಡಬ ಸಾಂತಪ್ಪ ಮತ್ತು ಶ್ರೀಧರ ಭಂಡಾರಿ ಮೊದಲಾದವರ ಒಡನಾಟದಿಂದಲೇ ನಾನು ಕಲಾವಿದನಾಗಿ ಕಾಣಿಸಿಕೊಂಡೆ ಎಂಬುದು ಶ್ರೀ ವಸಂತ ಗೌಡರ ಪ್ರಾಮಾಣಿಕ ಅನಿಸಿಕೆ. ಕಿರಿಯ ಸಹಕಲಾವಿದರೂ ನನಗೆ ತುಂಬಾ ಸಹಕರಿಸಿದ್ದಾರೆ ಎಂದು ನೆನಪಿಸುವ ಇವರು ಪ್ರಸಂಗಗಳ ನಡೆಗಳನ್ನು ಅರಿತವರು. ಹೇಳಿಕೊಡಲೂ ಬಲ್ಲರು. ಹಾಗಾಗಿ ವಸಂತ ಗೌಡ ಅವರು ಯಕ್ಷಗಾನಕ್ಕೆ ಓರ್ವ ಸಂಪನ್ಮೂಲ ವ್ಯಕ್ತಿಯೂ ಹೌದು. ವಸಂತ ಗೌಡ ಕಾಯರ್ತಡ್ಕ (ಫೋಟೋ: ವೆಂಕಟ್ ಕೋಟೂರು )                     1962ನೇ ಇಸವಿ ಸೆಪ್ಟಂಬರ್ 1ನೇ ತಾರೀಕು ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಶ್ರೀ ಬಿರ್ಮಣ್ಣ ಗೌಡ ಮತ್ತು ಬೊಮ್ಮಿ ಅಮ್ಮ ದಂಪತ

ಅಧ್ಯಾಪಕ, ಲೇಖಕ, ಅರ್ಥಧಾರಿ, ವೇಷಧಾರಿ - ಪಕಳಕುಂಜ ಶ್ಯಾಮ ಭಟ್

Image
                            ಪಕಳಕುಂಜ ಶ್ರೀ ಶ್ಯಾಮ ಭಟ್ಟರು ಶ್ರೀ ವಿಠಲ ಪದವಿಪೂರ್ವ ಕಾಲೇಜು ವಿಟ್ಲ ಇಲ್ಲಿ 32 ವರ್ಷಗಳ ಕಾಲ ಅಧ್ಯಾಪಕನಾಗಿ ಸೇವೆ ಸಲ್ಲಿಸಿ ಈಗ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ.  ಓರ್ವ ಉತ್ತಮ ಕಲಾವಿದನಾಗಿ ಕಲಾಮಾತೆಯ ಸೇವೆಯನ್ನು ಮಾಡುತ್ತಿದ್ದಾರೆ. ಅಧ್ಯಾಪಕನಾಗಿ ಸಹೋದ್ಯೋಗಿಗಳ ಮತ್ತು ವಿದ್ಯಾರ್ಥಿಗಳ, ಕಲಾವಿದನಾಗಿ ಕಲಾಭಿಮಾನಿಗಳ ಮತ್ತು ಸಹಕಲಾವಿದರ ಮೆಚ್ಚುಗೆ, ಪ್ರೀತಿಗೆ ಪಾತ್ರರಾದ ಪಕಳಕುಂಜ ಶ್ಯಾಮ ಭಟ್ಟರು ಬಹುಮುಖ ಪ್ರತಿಭೆ ಉಳ್ಳವರು. ಇವರು ಶ್ರೇಷ್ಠ ಲೇಖಕರೂ ಹೌದು. ಪಕಳಕುಂಜ ಶ್ಯಾಮ ಭಟ್                                 ಪಕಳಕುಂಜ ಶ್ರೀ ಶ್ಯಾಮ ಭಟ್ಟರು ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ಪಕಳಕುಂಜ ಎಂಬಲ್ಲಿ 23-12-1949ರಂದು ಶ್ರೀ ನಾರಾಯಣ ಭಟ್ ಮತ್ತು ಪರಮೇಶ್ವರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ತಂದೆಯವರ ಸಂಚಾಲಕತ್ವದ ವೇಣುಗೋಪಾಲ ಹಿರಿಯ ಪ್ರಾಥಮಿಕ ಶಾಲೆ ಪಕಳಕುಂಜ ಇಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಹೈಸ್ಕೂಲು ವಿದ್ಯಾಭ್ಯಾಸವನ್ನು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯಲ್ಲಿ ಪೂರೈಸಿದರು. ಪ್ರಸ್ತುತ ಖ್ಯಾತ ಮದ್ದಳೆಗಾರರಾದ ಪದ್ಯಾಣ ಶ್ರೀ ಶಂಕರನಾರಾಯಣ ಭಟ್ಟರು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಇವರ ಸಹಪಾಠಿಯಾಗಿದ್ದರು. ಆದುದರಿಂದಲೇ ತಾಳಮದ್ದಳೆ ಕೂಟಗಳಲ್ಲಿ ಭೇಟಿಯಾದಾಗ ಪ್ರೀತಿ ಮತ್ತು ಸಲುಗೆಯಿಂದ ಇವರಿಬ್ಬರೂ ಮಾತನಾಡುವುದನ್ನು ನಮಗೆ ಕಾಣಬಹುದು. ವಿವೇಕಾ

ಕಲಾಮಾತೆಯ ಸುಪುತ್ರ ಕುಂಬಳೆ ಶ್ರೀಧರ ರಾವ್

Image
                                     ಶ್ರೀ ಧರ್ಮಸ್ಥಳ ಮೇಳದ ರಂಗಸ್ಥಳ. ಕಡತೋಕ ಮಂಜುನಾಥ ಭಾಗವತರ ಹಾಡುಗಾರಿಕೆ. ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಳೆವಾದನ. ಕುಂಬಳೆ ಸುಂದರ ರಾವ್, ವಿಟ್ಲ ಜೋಷಿ, ಪುತ್ತೂರು ನಾರಾಯಣ ಹೆಗ್ಡೆ, ಪಾತಾಳ ವೆಂಕಟರಮಣ ಭಟ್, ಎಂಪೆಕಟ್ಟೆ ರಾಮಯ್ಯ ರೈ, ಕೆ. ಗೋವಿಂದ ಭಟ್, ಚಂದ್ರಗಿರಿ ಅಂಬು, ಪಕಳಕುಂಜ ಕೃಷ್ಣ ನಾಯ್ಕ, ನಯನ ಕುಮಾರ್, ಕಡಬ ಸಾಂತಪ್ಪ, ಬೆಳಾಲು ಧರ್ಣಪ್ಪ ನಾಯ್ಕ, ಬೆಳಾಲು ಶೀನ ಆಚಾರಿ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟದಲ್ಲಿ ಕುಂಬಳೆ ಶ್ರೀಧರ ರಾಯರು ಸ್ತ್ರೀ ಪಾತ್ರಗಳನ್ನು ಮಾಡುತ್ತಾ ರಂಜಿಸುತ್ತಿದ್ದ ದಿನಗಳವು. ಈಗಲೂ ನೆನಪಾಗುತ್ತದೆ. ದಮಯಂತಿ, ದಾಕ್ಷಾಯಿಣಿ, ಅಮ್ಮು ಬಲ್ಲಾಳ್ತಿ, ಲಕ್ಷ್ಮಿ, ಸುಭದ್ರೆ, ಸತ್ಯಭಾಮೆ ಅಲ್ಲದೆ ಪ್ರಮೀಳೆ, ಶಶಿಪ್ರಭೆ, ಮಹಾಕಲಿ ಮಗದೇಂದ್ರ ಪ್ರಸಂಗದ ವಜ್ರಲೇಖೆ ಮೊದಲಾದ ಕಸೆ ಸ್ತ್ರೀವೇಷಗಳನ್ನೂ ಮಾಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಸ್ತ್ರೀ ಪಾತ್ರಗಳಿಗೆ ಜೀವತುಂಬಿದ ಕುಂಬಳೆ ಶ್ರೀಧರ ರಾಯರು ಈಗ ಅದೇ ರಂಗಸ್ಥಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ರಾಮಕೃಷ್ಣ ಮಯ್ಯ, ಅಡೂರು ಗಣೇಶ ರಾಯರೇ ಮೊದಲಾದವರ ಹಿಮ್ಮೇಳದಲ್ಲಿ ಪುರುಷ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ವಯಸ್ಸು ಮತ್ತು ದೇಹದ ಭಾಷೆ ತೊಡಕಾಗುವ ಮೊದಲೇ ಸ್ತ್ರೀ ಪಾತ್ರಗಳ ನಿರ್ವಹಣೆಯನ್ನು ಬಿಟ್ಟು ಪುರುಷ ಪಾತ್ರಗಳನ್ನು ಆಯ್ಕೆ ಮಾಡಿಕೊಂಡ ಚತುರಮತಿ ಇವರು.                                

ಸಂಘಟಕರಿಗೆ ಆಪತ್ಬಾಂಧವ - ಕಲಾವಿದ, ಉದ್ಯಮಿ ಪದ್ಯಾಣ ಶ್ರೀ ಪರಮೇಶ್ವರ ಭಟ್

Image
                               ಶ್ರೀ ಪದ್ಯಾಣ ಪರಮೇಶ್ವರ ಭಟ್ ಇವರು ಬೆಳ್ಳಾರೆಯ ಕಿರಣ್ ಪ್ರಿಂಟರ್ಸ್ ಸಂಸ್ಥೆಯ ಮಾಲಿಕರು. ಇವರು ಒಬ್ಬ ಅತ್ಯುತ್ತಮ ಕಲಾವಿದರೂ, ಸಂಘಟಕರೂ ಹೌದು. ಸುಳ್ಯ, ಪುತ್ತೂರು ತಾಲೂಕಿನ ಆಟಕೂಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ವ್ಯವಹಾರದ ಒತ್ತಡದಿಂದ ಕಾರ್ಯಕ್ರಮಕ್ಕೆ ಒಪ್ಪಿಕೊಳ್ಳದೆ ತನ್ನ ವ್ಯವಹಾರದಲ್ಲಿ ತೊಡಗಿಕೊಂಡಿದ್ದರೂ ಅನಿವಾರ್ಯ ಪ್ರಸಂಗ ಒದಗಿದರೆ ತಕ್ಷಣ ಬಂದು ಪ್ರದರ್ಶನವು ಯಶಸ್ವಿಯಾಗಲು ಸಹಕರಿಸುತ್ತಾರೆ. ಯಕ್ಷಗಾನ ಕಲೆಯ ಮೇಲಿರುವ ಗೌರವ ಇದಕ್ಕೆ ಕಾರಣವಿರಬಹುದು. ಸಂಘಟಕನಾಗಿ ತಾನು ಅನುಭವಿಸಿದ ಕಷ್ಟವಿರಬಹುದು, ಪ್ರೇಕ್ಷಕರಿಗೆ ರಸಭಂಗವಾಗದಿರಲಿ ಎಂದಿರಬಹುದು. ಅವರ ಸರಳ ವ್ಯಕ್ತಿತ್ವವೂ ಕಾರಣವಿರಬಹುದು. ಏನೇ ಇರಲಿ ಪರಮೇಶ್ವರ ಭಟ್ಟರು ಯಕ್ಷಗಾನವನ್ನು ಪ್ರೀತಿಸಿ ಆರಾಧಿಸುತ್ತಾರೆ. ಕಲಾವಿದರನ್ನು ಗೌರವಿಸುತ್ತಾರೆ ಎಂಬುದಂತೂ ನಿಜ. ಹಾಗಾಗಿಯೇ ಬೆಳ್ಳಾರೆ ಪರಿಸರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬರುವ ಕಲಾವಿದರು ಇವರನ್ನೊಮ್ಮೆ ಭೇಟಿಯಾಗಿ, ಮಾತನಾಡಿ ಹೋಗುವುದನ್ನು ಗಮನಿಸಬಹುದು. ಖ್ಯಾತ ಕಲಾವಿದರಾದ ಪದ್ಯಾಣ ಶಂಕರನಾರಾಯಣ ಭಟ್ಟರು ಸಂಬಂಧದಲ್ಲಿ ಇವರಿಗೆ ಚಿಕ್ಕಪ್ಪ (ಸಣ್ಣಜ್ಜನ ಮಗ), ಪದ್ಯಾಣ ಗಣಪತಿ ಭಟ್ ಮತ್ತು ಪದ್ಯಾಣ ಜಯರಾಮ ಭಟ್ ಇವರ ತಮ್ಮಂದಿರು. ಯುವ ಮದ್ದಳೆಗಾರ ಚೈತನ್ಯಕೃಷ್ಣರೂ ಇವರ ಕುಟುಂಬದ ಸದಸ್ಯ.                                                    

ಆಕರ್ಷಕ ಕಿರೀಟ ವೇಷಧಾರಿ ಶಂಭಯ್ಯ ಕಂಜರ್ಪಣೆ

Image
                    ಶ್ರೀ ಶಂಭಯ್ಯ ಕಂಜರ್ಪಣೆ... ತೆಂಕುತಿಟ್ಟಿನ ಅತ್ಯುತ್ತಮ ಕಿರೀಟವೇಷಧಾರಿಗಳಲ್ಲಿ ಒಬ್ಬರು. ಪೂರ್ವರಂಗದಲ್ಲಿ ಬರುವ ಎಲ್ಲಾ ಪಾತ್ರಗಳ ಬಗ್ಗೆ, ಪ್ರಸಂಗದಲ್ಲಿ ಬರುವ ವೇಷಗಳ ಒಡ್ಡೋಲಗದ (ಪರಂಪರೆ) ಕ್ರಮದ ಬಗ್ಗೆ ಹೇಳಬಲ್ಲ ಮತ್ತು ಮಾಡಬಲ್ಲ ಸಾಮರ್ಥ್ಯ, ಜ್ಞಾನ ಇವರಿಗಿದೆ. ಸದಾ ಅಧ್ಯಯನಶೀಲ ಕಲಾವಿದ. ವಿದ್ಯಾರ್ಥಿಗಳಿಗೆ ನಾಟ್ಯವನ್ನು ಚೆನ್ನಾಗಿ ಹೇಳಿಕೊಡಬಲ್ಲರು. ಪ್ರಸ್ತುತ ಎಡನೀರು ಮೇಳದ ಕಲಾವಿದ.                                                   ಶ್ರೀ ಶಂಭಯ್ಯ ಕಂಜರ್ಪಣೆ                                   ಸುಳ್ಯ ತಾಲೂಕು ಅಮರಮುಡ್ನೂರು ಕಂಜರ್ಪಣೆ ಅವರ ಹುಟ್ಟೂರು. ಕೆ. ಗೋಪಾಲ ಕೃಷ್ಣಯ್ಯ, ಕೆ. ಚಂದ್ರಮತಿ ದಂಪತಿಗಳ ನಾಲ್ಕು ಮಂದಿ ಮಕ್ಕಳಲ್ಲಿ ಮೂರನೆಯವರು. ಪ್ರಾಥಮಿಕ ವಿದ್ಯಾಭ್ಯಾಸ ಮುಂಡೂರು ಹಾಸನಡ್ಕ ಶಾಲೆಯಲ್ಲಿ. ಹೈಸ್ಕೂಲ್ ವಿದ್ಯಾರ್ಜನೆ ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ. ಬಾಲ್ಯದಲ್ಲಿ ಕಷ್ಟದ ಜೀವನ ಎದುರಾಗಿತ್ತು. ಆರ್ಥಿಕ ಸಮಸ್ಯೆಯಿಂದಾಗಿ ಪುತ್ತೂರು ಶ್ರೀ ರಾಮಕೃಷ್ಣ ಸೇವಾ ಸಮಾಜದ ಆಶ್ರಮದಲ್ಲಿದ್ದು ವಿದ್ಯಾರ್ಜನೆ ಮಾಡಿದ್ದರು. ಗಿರಿಜಾ ಕ್ಲಿನಿಕ್‍ನ ಡಾ. ಗೌರಿ ಪೈಗಳು ಯಕ್ಷಗಾನವನ್ನು ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು. ಅವರ ಆಸಕ್ತಿ, ಮುತುವರ್ಜಿಯಲ್ಲಿ ವಿದ್ಯಾಲಯದಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಶಾಲಾ ವಿದ್ಯಾರ್ಥಿಯಾಗಿದ್ದಾಗ ‘ವಾಲಿಮೋಕ್ಷ’ ಪ್ರಸಂಗದ ಸ

``ಯಕ್ಷಮಯೂರಿ’’ - ಸಂಜಯಕುಮಾರ್ ಶೆಟ್ಟಿ, ಗೋಣಿಬೀಡು

Image
                           ಗಂಡಾಗಿ ಹುಟ್ಟಿ ಹೆಣ್ಣಾಗಿ ಅಭಿನಯಿಸುವುದು ಅಷ್ಟು ಸುಲಭವಲ್ಲ. ಆಲಸಿಯಾದವನಿಂದ ಇದನ್ನೂ ನಿರೀಕ್ಷಿಸಕೂಡದು. ಅವಿರತವಾದ ಸಾಧನೆ, ಸತತ ಅಭ್ಯಾಸ, ಅರ್ಪಣಾಭಾವಗಳಿಂದ ಮಾತ್ರ ಸಾಧ್ಯ. ಕಲಾವಿದನು ಪಾತ್ರವಾಗಬೇಕಾದರೆ ಅದರ ಸ್ವಭಾವವೇನೆಂದು ಅರಿತು ಅಭ್ಯಸಿಸಬೇಕು. ಆಳವಾದ ಅಧ್ಯಯನ ಅತ್ಯಗತ್ಯ. ಪಾತ್ರದೊಳಗೆ ಅಡಗಿರುವ ವಿಚಾರಗಳನ್ನು ಹೊರಗೆಡಹುವಲ್ಲಿ ಆತ ‘ವಿಜ್ಞಾನಿ’ಯೇ ಆಗಿರಬೇಕು. ಒಂದರ್ಥದಲ್ಲಿ ‘ಪರಕಾಯ ಪ್ರವೇಶ’. ಇಲ್ಲವಾದರೆ ಪಾತ್ರವು ಪೇಲವವಾಗುವುದನ್ನು ನಾವು ಕಾಣಬಹುದು. ಯಕ್ಷಗಾನದಲ್ಲಿ ಸ್ತ್ರೀಪಾತ್ರಗಳನ್ನು ಪುರುಷನು ನಿರ್ವಹಿಸುವುದು ನಿಜವಾಗಿಯೂ ಒಂದು ಸಾಧನೆ. ರೂಪ ಮತ್ತು ಆಕೃತಿಯಾದರೂ ದೇವರ ಕೊಡುಗೆ. ಪ್ರೇಕ್ಷಕರಿಗೆ ಅದು ತಿಳಿದಿದೆ. ಆದರೆ ಅಭಿನಯ, ಹಾವಭಾವ, ಮಾತನಾಡುವಲ್ಲಿ ಸ್ವರದ ಬಗ್ಗೆ ಕಾಳಜಿ ಇವುಗಳನ್ನೆಲ್ಲಾ ಸತತ ಸಾಧನೆಗಳಿಂದ ಮಾತ್ರ ಸಿದ್ಧಿಸಲು ಸಾಧ್ಯ. ಮಾತುಗಾರಿಕೆಯಲ್ಲೂ ಉಳಿದ ಪಾತ್ರಧಾರಿಗಳಷ್ಟು ಸ್ವಾತಂತ್ರ್ಯ ಖಂಡಿತಾ ಸ್ತ್ರೀಪಾತ್ರಧಾರಿಗೆ ಇರಲಾರದು. ಯಾಕೆಂದರೆ ತಾನು ಗಂಡು ಅಲ್ಲ, ಹೆಣ್ಣು. ರಂಗದಲ್ಲಿ ಹೆಣ್ಣಾಗಿಯೇ ವ್ಯವಹರಿಸಬೇಕಾದುದು ಆ ಪಾತ್ರವನ್ನು ಧರಿಸಿದ ಕಲಾವಿದನಿಗೆ ಅನಿವಾರ್ಯವಾದುದರಿಂದ ಅಡಿಗಡಿಗೆ ಎಚ್ಚರವಿರಬೇಕಾಗುತ್ತದೆ. (ಯಕ್ಷಗಾನದಲ್ಲಿ ಪುರುಷವೇಷಗಳನ್ನು ಧರಿಸುವ ಕಲಾವಿದೆಯರೂ ಗಮನಿಸಬೇಕಾದ ವಿಚಾರವಿದು. ತಾನು ಧರಿಸಿದ್ದು ಪುರುಷಪಾತ್ರ ಎಂಬ ಎಚ್ಚರ ಕೊನೆಯವರೇಗೂ ಇದ್ದಾಗ ಮ

ಹಾಸ್ಯ ವಿಶಾರದ ಶ್ರೀ ಬಂಟ್ವಾಳ ಜಯರಾಮ ಆಚಾರ್ಯ

Image
                      ಯಕ್ಷಗಾನದಲ್ಲಿ ಹಾಸ್ಯಗಾರನಿಗೆ ವಿಶೇಷವಾದ ಸ್ಥಾನ ಗೌರವವಿದೆ. ರಂಗದಲ್ಲೂ ಚೌಕಿಯಲ್ಲೂ ನಮಗದು ಕಂಡುಬರುತ್ತದೆ. ಪ್ರತಿಭಾವಂತನೂ, ಪ್ರತ್ಯುತ್ಪನ್ನಮತಿಯೂ ಆಗಿರಬೇಕು. ಪ್ರಸಂಗಜ್ಞಾನ, ರಂಗನಡೆಗಳನ್ನೂ ತಿಳಿದಿರಬೇಕು. ಪ್ರದರ್ಶನವು ಕೆಡದಂತೆ, ರಂಜಿಸುವಂತೆ ಮಾಡುವಲ್ಲಿ ಭಾಗವತರಂತೆ ವಿದೂಷಕನಿಗೂ ಹೊಣೆಯಿದೆ. ಪ್ರತಿ ಪ್ರಸಂಗಗಳಲ್ಲೂ ಅವನೇ ನಿರ್ವಹಿಸಬೇಕಾದ ಪಾತ್ರಗಳು ಹಲವು. (ಉದಾ: ತ್ರಿಜನ್ಮ ಮೋಕ್ಷ ಪ್ರಸಂಗದಲ್ಲಿ ಸನತ್ಕುಮಾರ, ಹಿರಣ್ಯಾಕ್ಷನಿಗೆ ವರನೀಡುವ ಬ್ರಹ್ಮ, ದೇವದೂತ, ನಾರದ, ಪ್ರಹ್ಲಾದನಿಗೆ ವಿದ್ಯೆ ಹೇಳಿಕೊಡುವ ಗುರು, ಕುಂಭಕರ್ಣನನ್ನು ನಿದ್ದೆಯಿಂದ ಎಬ್ಬಿಸುವ ದೂತ, ಅಗ್ರಪೂಜೆಯ ಭೀಷ್ಮ) ಈ ಎಲ್ಲಾ ಪಾತ್ರಗಳನ್ನೂ ಹಾಸ್ಯಗಾರನೇ ನಿರ್ವಹಿಸಬೇಕಾಗುತ್ತದೆ. ಒಂದೊಂದೂ ಪಾತ್ರದ ಸ್ವಭಾವವು ಭಿನ್ನವಾಗಿರುತ್ತದೆ. ಹೀಗೆ ಪ್ರತಿಯೊಂದು ಪ್ರಸಂಗದಲ್ಲೂ ಬೇರೆ ಬೇರೆ ಸ್ವಭಾವದ ವೇಷಗಳನ್ನು ಹಾಸ್ಯಗಾರನು ನಿರ್ವಹಿಸಲೇಬೇಕು. ಇದು ಅಷ್ಟೊಂದು ಸುಲಭವಲ್ಲ. ಪಾತ್ರದ ಸ್ವಭಾವ, ಪ್ರಸಂಗಜ್ಞಾನವನ್ನು ತಿಳಿದವನಿಗೆ ಮಾತ್ರ ಸಾಧ್ಯ. ಆಲಸಿಯಾಗದೆ ದೈಹಿಕವಾಗಿಯೂ, ಮಾನಸಿಕವಾಗಿಯೂ ಚುರುಕಾಗಿದ್ದವನಿಗೆ ಮಾತ್ರ ಸಾಧ್ಯ. ವೇಗವಾಗಿ, ವೈವಿಧ್ಯಮಯವಾಗಿ, ಪಾತ್ರೋಚಿತವಾಗಿ ಬಣ್ಣ ಹಾಕಿ, ವೇಷ ಮಾಡಿಕೊಂಡು ರಂಗಪ್ರವೇಶ ಮಾಡುವ ಕಲೆಯೂ ಅವನಿಗೆ ಕರಗತವಾಗಿರಬೇಕು. ಹೀಗೆ ಸದಾ ಅಧ್ಯಯನಶೀಲರಾಗಿ, ಕಲಾಸೇವೆಯನ್ನು ಮಾಡುತ್ತಾ ಹಾಸ್ಯಗಾರರಾಗಿ ರಂಜಿಸಿದವರು

ಯಕ್ಷಗಾನದ ಕಲ್ಪನಾ - ಕಾಡ ‘ಮಲ್ಲಿಗೆ’ ಖ್ಯಾತಿಯ ಬೆಳ್ಳಾರೆ ವಿಶ್ವನಾಥ ರೈ

Image
                     ಶ್ರೀ ಕೆ. ವಿಶ್ವನಾಥ ರೈಗಳು 28-02-1951 ರಂದು ಸುಳ್ಯ ತಾಲೂಕು ಬೆಳ್ಳಾರೆ ಸಮೀಪದ ಕಾವಿನಮೂಲೆ ಎಂಬಲ್ಲಿ ಸುಬ್ಬಯ್ಯ ರೈ ಮತ್ತು ಮಂಜಕ್ಕೆ ದಂಪತಿಗಳಿಗೆ ಮಗನಾಗಿ ಜನಿಸಿದರು. ಬೆಳ್ಳಾರೆ ಶಾಲೆಯಲ್ಲಿ 4ನೇ ತರಗತಿ ವರೆಗೆ ಓದಿದವರು. ತುಳುನಾಡಿನ ಜನರು ದೈವಭಕ್ತರು, ಭೂತಾರಾಧಕರೂ ಹೌದಷ್ಟೆ. ದೈವಗಳ ಕುಣಿತವನ್ನು ನೋಡಿ ಮನೆಗೆ ಬಂದು ವಿಶ್ವನಾಥ ರೈಗಳು ಹಾಗೇ ಕುಣಿಯುತ್ತಿದ್ದರಂತೆ. ಅದನ್ನು ನೋಡಿದ ಅವರ ತಾಯಿ ಹುಡುಗನಿಗೆ ಆಟದ ಹುಚ್ಚು ಜೋರಿದೆ ಎನ್ನುತ್ತಿದ್ದರಂತೆ. ಶಾಲಾ ವಿದ್ಯಾರ್ಥಿಯಾಗಿರುವಾಗಲೇ ವಿಶ್ವನಾಥ ರೈಗಳು ಆ ಕಾಲದಲ್ಲಿ ಖ್ಯಾತ ಕಲಾವಿದರಾಗಿದ್ದ ಬೆಳ್ಳಾರೆ ಅಚ್ಯುತ ಮಣಿಯಾಣಿ (ಅಗಲ್ಪಾಡಿ)ಯವರಿಂದ ಯಕ್ಷಗಾನ ನಾಟ್ಯವನ್ನು ಕಲಿತರು. ತನ್ನ 9ನೇ ವರ್ಷದಲ್ಲಿ ರಂಗಪ್ರವೇಶ ಮಾಡಿ, ಕರ್ನಾಟಕ ಮೇಳದಲ್ಲಿ ಬಾಲಕಲಾವಿದನಾಗಿ ಕಲಾವ್ಯವಸಾಯವನ್ನು ಆರಂಭಿಸಿದರು. ಇವರಿಗೆ 10ನೇ ವರುಷ ಪೂರ್ತಿಯಾದಾಗ 4 ತಿಂಗಳ ಮೇಳದ ತಿರುಗಾಟವನ್ನೂ ಪೂರೈಸಿಯಾಗಿತ್ತು! ಬಡತನದ ಅನುಭವವಿದ್ದ ಇವರಿಗೆ ಮೇಳದಲ್ಲಿ ಎರಡು ಹೊತ್ತು ಹೊಟ್ಟೆ ತುಂಬಾ ಒಳ್ಳೆಯ ಊಟ ಸಿಕ್ಕಾಗ ಕಲಾವಿದನಾಗಿ ಜೀವನ ನಡೆಸುವುದೇ ಉತ್ತಮ ಎಂದು ನಿರ್ಣಯಕ್ಕೂ ಬಂದಾಗಿತ್ತು. ಶ್ರೀ ಬೆಳ್ಳಾರೆ ವಿಶ್ವನಾಥ ರೈಗಳು ಕರ್ನಾಟಕ ಮೇಳದಲ್ಲಿ ಬಾಲಕಲಾವಿದನಾಗಿ ಕಳೆದ ದಿನಗಳನ್ನು ಈಗಲೂ ನೆನಪಿಸುತ್ತಾರೆ. ಶ್ರೀ ಕಲ್ಲಾಡಿ ವಿಠಲ ಶೆಟ್ಟರು ನನಗೆ ಅನ್ನದಾತರು. ಪ್ರಾಣದಾತರೂ ಹೌದು. ಚಿಕ್ಕ ಹುಡುಗ

ಅನುಭವೀ ಯಕ್ಷತಾರೆ - ಶ್ರೀ ಬೆಳ್ಳಾರೆ ಮಂಜುನಾಥ ಭಟ್

Image
                ಪಕ್ವ ಫಲಕ್ಕಿರುವ ರುಚಿಯೇ ಬೇರೆ. ಬಲವಂತದಿಂದ ಹಣ್ಣುಗಳನ್ನು ಸಿದ್ಧಗೊಳಿಸಿದರೆ ಅದು ಕೇವಲ ಹಣ್ಣಾಗಿರುತ್ತದೆ. ಬಳಕೆಗೆ ಯೋಗ್ಯವಾಗಿರುವುದಿಲ್ಲ. ಮಿಡಿ ಬಲಿತು ಕಾಯಿಯಾಗಬೇಕು. ಪ್ರಕೃತಿಯ ನಿಯಮದಂತೆ ಮಾಗಿ ಹಣ್ಣಾಗಬೇಕು. ಅದನ್ನು ಎಲ್ಲರೂ ಬಯಸುತ್ತಾರೆ. ಬಳಸುತ್ತಾರೆ. ನೋಡಲು ಸುಂದರವಾಗಿದ್ದರೂ ಅಪಕ್ವವಾದವುಗಳು ಎಂದು ಗೊತ್ತಾದರೆ ಬಳಸದೆ ಎಸೆಯುವುದು ಈ ಲೋಕದ ನಿಯಮವೇ ಹೌದು. ಕಲಾವಿದರೂ ಹೀಗೆಯೇ ಬೆಳೆದರೆ ಚಂದ. ಯಕ್ಷಗಾನದ ಶುದ್ಧ ನಾಟ್ಯವನ್ನು ಕಲಿತು, ಬಾಲಕಲಾವಿದನಾಗಿ ಪೂರ್ವರಂಗದ ಅನುಭವಗಳನ್ನು ಪಡೆದು, ಸತತ ಅಭ್ಯಾಸಿಯಾಗಿ ಶ್ರೇಷ್ಠ ಕಲಾವಿದರ ಒಡನಾಟದಿಂದ ಪಕ್ವವಾದಾಗ ನಿಜ ಕಲಾವಿದನಾಗುತ್ತಾನೆ. ಯಕ್ಷಗಾನ ಕಲೆಗೆ ಶ್ರೇಷ್ಠ ಸಂಪನ್ಮೂಲ ವ್ಯಕ್ತಿಯೂ ಆಗುತ್ತಾನೆ. ಕಲಾವಿದರೆಲ್ಲರೂ ಸಂಪನ್ಮೂಲ ವ್ಯಕ್ತಿಗಳಾಗಲು ಸಾಧ್ಯವೇ ಇಲ್ಲ. ಶ್ರೇಷ್ಠ ಮದ್ದಳೆಗಾರರಾಗಿದ್ದ ನಿಡ್ಲೆ ನರಸಿಂಹ ಭಟ್ಟರ ಮಾತುಗಳು ಅದೆಷ್ಟು ಅರ್ಥಪೂರ್ಣವಾದುದು... ಕಲಿತು ಮೇಳಕ್ಕೆ ಬರುವುದಕ್ಕಿಂತ ಮೇಳಕ್ಕೆ ಬಂದು ಕಲಿತರೆ ಚಂದ! ಅವಿರತ ಪರಿಶ್ರಮದಿಂದ ಕಲಾವಿದರಾಗಿ, ಸಂಪನ್ಮೂಲ ವ್ಯಕ್ತಿಗಳೂ ಆಗಿ ಕಾಣಿಸಿಕೊಂಡವರು ಹಲವರು. ಅವರಲ್ಲಿ ಬೆಳ್ಳಾರೆ ಮಂಜುನಾಥ ಭಟ್ಟರೂ ಒಬ್ಬರು.                        ಕೆ. ಜಿ. ಮಂಜುನಾಥ ಭಟ್ಟರು ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ 2ನೇ ಮೇಳದಲ್ಲಿ ಇದಿರು ವೇಷಧಾರಿ. ಕಲಾವಿದನಾಗಿ 42 ತಿರುಗಾ

ಯಕ್ಷ ಸವ್ಯಸಾಚಿ ರೆಂಜಾಳ ರಾಮಕೃಷ್ಣ ರಾವ್

Image
ಯಕ್ಷ ಸವ್ಯಸಾಚಿ  ಶ್ರೀ  ರೆಂಜಾಳ ರಾಮಕೃಷ್ಣ ರಾವ್ ‘ಲೋಕೋ ಭಿನ್ನ ರುಚಿಃ’ ಎಷ್ಟು ಸೊಗಸಾದ ಅರ್ಥಪೂರ್ಣವಾದ ಮಾತು! ಪ್ರತಿಯೊಬ್ಬರ ರುಚಿಯೂ ಒಂದೇ ತೆರನಾಗಿರುವುದಿಲ್ಲ. ಒಬ್ಬೊಬ್ಬರದು ಒಂದೊಂದು ತೆರನಾಗಿರುತ್ತದೆ. ಕಲಾಭಿಮಾನಿಗಳೂ ಹಾಗೆಯೇ. ಒಬ್ಬೊಬ್ಬರ ಆಸಕ್ತಿಯೂ ಒಂದಕ್ಕೊಂದು ಭಿನ್ನವಾಗಿರುತ್ತದೆ. ಕೆಲವರಿಗೆ ಭರತನಾಟ್ಯದಲ್ಲಿ ಆಸಕ್ತಿ. ಕೆಲವರು ಸಂಗೀತಾಸಕ್ತರು. ಇನ್ನು ಕೆಲವರು ಸಿನಿಮಾಪ್ರೇಮಿಗಳು. ಆದರೂ ಯಕ್ಷಗಾನವನ್ನು ಎಲ್ಲರೂ ಇಷ್ಟಪಡುತ್ತಾರೆ. ಯಾಕೆ? ಅದರೊಳಗೆ ಎಲ್ಲವೂ ಅಡಗಿದೆ. ಹಾಡು, ಕುಣಿತ, ಮಾತು, ಅಭಿನಯ, ಉತ್ತಮ ಸಂದೇಶಗಳನ್ನೊಳಗೊಂಡ ಉತ್ಕೃಷ್ಟ ಕಲೆ ಯಕ್ಷಗಾನ. ಹಾಗಾಗಿ ಈ ಗಂಡುಕಲೆ ಎಲ್ಲವನ್ನೂ ಆಕರ್ಷಿಸಿತು. ಯಾವ ವಿಭಾಗವನ್ನು ಕಲಾಭಿಮಾನಿಗಳು ಇಷ್ಟಪಡುತ್ತಾರೋ ಅದನ್ನು ಅನುಭವಿಸಿ ಸವಿಯುವ ಅವಕಾಶ ಈ ಕಲಾಪ್ರಕಾರದಲ್ಲಿದೆ. ಇವನ್ನು ನಮಗೆ ಕೊಡುಗೆಯಾಗಿ ನೀಡಿದ ಮಹನೀಯರು ಪ್ರಾತಃಸ್ಮರಣೀಯರು. ನಾವು ವಂದಿಸಲೇಬೇಕು. ಕಲಾವಿದರ ಆಸಕ್ತಿಯೂ ಹಾಗೆಯೇ. ಕೆಲವರು ಭಾಗವತನಾಗಬೇಕೆಂದೂ, ಮದ್ದಳೆಗಾರನಾಗಬೇಕೆಂದೂ ಬಯಸುತ್ತಾರೆ. ನಾನೊಬ್ಬ ಸ್ತ್ರೀವೇಷಧಾರಿಯಾಗಬೇಕು, ಹಾಸ್ಯಗಾರನಾಗಬೇಕು, ಒಳ್ಳೆಯ ಕಿರೀಟ ವೇಷಧಾರಿಯಾಗಬೇಕು, ಪುಂಡುವೇಷಧಾರಿಯಾಗಬೇಕೆಂದು ಬಯಸುವವರು ಹಲವರು. ಬಯಕೆಯು ಸಹಜ. ಸತತ ಅಭ್ಯಾಸ, ಅರ್ಪಣಾ ಮನೋಭಾವ, ಪರಿಶ್ರಮದಿಂದ ಮಾತ್ರ ಎತ್ತರಕ್ಕೇರಲು ಸಾಧ್ಯ. ಹೀಗೆ ಬೆಳೆದು ಬಂದು ಕಲಾವಿದನಾಗಿ, ಸಂಪನ್ಮೂಲ ವ್ಯಕ್ತಿಯಾಗಿ ರೂಪುಗೊಂಡ

ಯಕ್ಷರಂಗದ ಸವ್ಯಸಾಚಿ - ವಾಟೆಪಡ್ಪು ವಿಷ್ಣುಶರ್ಮ

Image
ಯಕ್ಷರಂಗದ ಸವ್ಯಸಾಚಿ - ವಾಟೆಪಡ್ಪು ವಿಷ್ಣುಶರ್ಮ ಶ್ರೀ ವಾಟೆಪಡ್ಪು ವಿಷ್ಣುಶರ್ಮರು ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ (4) ವ್ಯವಸಾಯ ಮಾಡುತ್ತಿದ್ದಾರೆ. ನಗುಮೊಗದ ಶರ್ಮರು ಉತ್ತಮ ವೇಷಧಾರಿಯೂ ಹೌದು. ತಾಳಮದ್ದಳೆ ಅರ್ಥಧಾರಿಯೂ ಹೌದು. ನಾಟ್ಯ ಮತ್ತು ಮಾತುಗಾರಿಕೆ ಈ ಎರಡೂ ವಿಭಾಗಗಳಲ್ಲಿ ವಿಷ್ಣುಶರ್ಮರು ಪರಿಣತರು. ಸಾತ್ವಿಕ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಇವರು ಸಂಭಾಷಣಾ ಚತುರರಾಗಿ ಕಲಾಭಿಮಾನಿಗಳ ಮನ ಗೆದ್ದವರು. ಪುಂಡುವೇಷಧಾರಿಯಾದ ಶರ್ಮರು ಕಿರೀಟ ವೇಷಗಳನ್ನೂ ಚೆನ್ನಾಗಿ ನಿರ್ವಹಿಸಬಲ್ಲರು. ಅಗತ್ಯ ಬಿದ್ದರೆ ಸ್ತ್ರೀವೇಷಕ್ಕೂ ಸೈ.                                                             ಶ್ರೀ ವಾಟೆಪಡ್ಪು ವಿಷ್ಣುಶರ್ಮ ವಿಷ್ಣುಶರ್ಮ ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ವಾಟೆಪಡ್ಪು ಎಂಬಲ್ಲಿ 1967ನೇ ಇಸವಿ ಎಪ್ರಿಲ್ 6ರಂದು ತಲೆಂಗಳ ಸುಬ್ರಾಯ ಭಟ್ ಪರಮೇಶ್ವರೀ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಮೂರು ಮಂದಿ ಮಕ್ಕಳಲ್ಲಿ ಇವರೇ ಹಿರಿಯವರು. 7ನೇ ತರಗತಿಯ ವರೆಗೆ ಪೆರುವಾಯಿ ಶಾಲೆಯಲ್ಲಿ ಓದಿದ ಇವರು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಕಾಯರ್‍ಕಟ್ಟೆ ಸರಕಾರಿ ಶಾಲೆಯಲ್ಲಿ ಪೂರೈಸಿದರು. ನಂತರ 2 ವರ್ಷ ಮನೆಯಲ್ಲೇ ಇದ್ದು ತಂದೆಯವರ ಜತೆ ಕೃಷಿಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತಿ ಅತೀವವಾಗಿತ್ತು ಇವರಿಗೆ. ಶಾಲಾ ವಿ