Posts

Showing posts from October, 2019

ಹಿರಿಯ ಅನುಭವೀ ಸವ್ಯಸಾಚಿ ಕಲಾವಿದ ಪೂಕಳ ಶ್ರೀ ಲಕ್ಷ್ಮೀನಾರಾಯಣ ಭಟ್

Image
                ಹಿರಿಯ ಸದಸ್ಯರು, ಹೆಣ್ಮಕ್ಕಳು, ಮಕ್ಕಳು ತುಂಬಿರುವ ಮನೆಯು ಅಂದವಾಗಿರುತ್ತದೆ, ಲಕ್ಷಣವಾಗಿರುತ್ತದೆ. ಹಿರಿಯರ ಆಶೀರ್ವಾದ, ನಿರ್ದೇಶನಗಳಿಂದಲೇ ಕಿರಿಯರು ಬೆಳೆದು ಸಾಧಕರಾಗಿ ಕಾಣಿಸಿಕೊಳ್ಳಬಲ್ಲರು. ಜೀವನವೆಂಬ ಪಯಣದಲ್ಲಿ ಅನುಭವಗಳೇ ಪಾಠಗಳಾಗಿರುತ್ತವೆ. ಅದು ಒಳ್ಳೆಯ ಅನುಭವವಾಗಿರಬಹುದು ಅಥವಾ ಕೆಟ್ಟ ಅನುಭವಗಳೇ ಆಗಿರಬಹುದು. ಆದರೆ ಒಂದಂತೂ ಸತ್ಯ. ಈ ಉಭಯ ಅನುಭವಗಳೂ ಮಾನವನಿಗೆ ಬದುಕನ್ನು ರೂಪಿಸಲು ದಾರಿಯನ್ನು ತೋರುತ್ತದೆ. ಬದುಕಿನುದ್ದಕ್ಕೂ ಪಡೆದ ಅನುಭವಗಳೆಂಬ ಪಾಠಗಳಿಂದ ಮನೆಯ ಹಿರಿಯ ಸದಸ್ಯನು ಪಕ್ವನಾಗಿರುತ್ತಾನೆ. ಇದರ ಪರಿಣಾಮವನ್ನು ಮನೆಯ ಕಿರಿಯ ಸದಸ್ಯರು ಅನುಭವಿಸಬೇಕು. ಹಿರಿಯರಿಂದ ಸಲಹೆಗಳನ್ನು ಪಡೆದು, ಮುನ್ನಡೆಯುತ್ತಾ, ತಾನು ಒಳ್ಳೆಯವನೆಂದು ಎಲ್ಲರಿಂದಲೂ ಹೊಗಳಿಸಿಕೊಂಡು ಮನೆಯ ಕೀರ್ತಿಯನ್ನು ಬೆಳಗಿಸಬೇಕು. ಕಿರಿಯರು ಹಿರಿಯರನ್ನು ಗೌರವಿಸಿ ಅವರ ಆಶೀರ್ವಾದ, ಅನುಭವ, ನಿರ್ದೇಶನಗಳನ್ನು ಪಡೆಯುವುದು, ಹಿರಿಯರು ಕಿರಿಯರನ್ನು ವಂಚಿಸದೆ, ಪ್ರೀತಿಸಿ ಸಲಹೆಗಳನ್ನು ನೀಡಿ ಮುನ್ನಡೆಸುವುದು- ಇದು ಭಾರತೀಯ ಸಂಸ್ಕೃತಿ. ಭಾರತೀಯ ಕುಟುಂಬ ಪದ್ಧತಿ. ಮನೆಯಲ್ಲೆಂದಲ್ಲ, ಎಲ್ಲೆಡೆಯಲ್ಲೂ ಈ ವ್ಯವಸ್ಥೆಯ ಅಡಿಯಲ್ಲಿ ಸಾಗಿದರೆ ಆರೋಗ್ಯಪೂರ್ಣ ಸಮಾಜವು ಉಳಿಯುತ್ತದೆ, ನಿರ್ಮಾಣಗೊಳ್ಳುತ್ತದೆ. ಸಂಘ-ಸಂಸ್ಥೆಗಳಲ್ಲೂ, ಕಲಾಪ್ರಕಾರಗಳಲ್ಲೂ ಈ ವ್ಯವಸ್ಥೆಯು ನಡೆದು ಬಂದಿದೆ. ಮುಂದುವರಿದರೆ ಬಲು ಸೊಗಸಾಗಿರುತ್ತದೆ. ಅದುವೇ ನಮ್ಮೆಲ್ಲರ ಆ

ಅಗಲಿದ ಯಕ್ಷಕಲಾ ಕುಸುಮ ಪುತ್ತೂರು ಶ್ರೀ ಚಂದ್ರಶೇಖರ ಹೆಗ್ಡೆ

Image
                       ಪುತ್ತೂರು ಶ್ರೀ ಚಂದ್ರಶೇಖರ ಹೆಗ್ಡೆಯವರು ತೆಂಕುತಿಟ್ಟು ಕಂಡ ಒಬ್ಬ ಶ್ರೇಷ್ಠ ಕಲಾವಿದ. ಖಳಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದವರು. ವೃತ್ತಿಕಲಾವಿದರಾಗಿ ಅನೇಕ ವರ್ಷಗಳ ಕಾಲ ಮೇಳಗಳಲ್ಲಿ ತಿರುಗಾಟ ನಡೆಸಿದವರು. ಖ್ಯಾತ ಯಕ್ಷಗಾನ ಕಲಾವಿದರಾಗಿ ಪ್ರೇಕ್ಷಕರ ಮನಗೆದ್ದಿದ್ದ ಪುತ್ತೂರು ಶ್ರೀ ನಾರಾಯಣ ಹೆಗ್ಡೆಯವರ ಸುಪುತ್ರರು. ಪುತ್ತೂರು ಶ್ರೀ ನಾರಾಯಣ ಹೆಗ್ಡೆ ಮತ್ತು ಶ್ರೀಮತಿ ಸಂಜೀವಿನಿ ಅಮ್ಮ ದಂಪತಿಗಳ ಮಗನಾಗಿ ಪುತ್ತೂರು ಸಮೀಪ ಬಪ್ಪಳಿಗೆ ಎಂಬಲ್ಲಿ 1960ರಲ್ಲಿ ಜನನ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನಾಸಕ್ತಿ ಇತ್ತು. ಅದು ರಕ್ತಗತವಾಗಿಯೇ ಸಿದ್ಧಿಸಿತ್ತು. ತಂದೆಯವರ ಜತೆ ಸಾಗಿ ಶ್ರೀ ಧರ್ಮಸ್ಥಳ ಮೇಳದ ಪ್ರದರ್ಶನಗಳನ್ನು ನೋಡುತ್ತಿದ್ದರು. ತಾನು ಕಲಾವಿದನಾಗಬೇಕೆಂಬ ಬಯಕೆಯೂ ಮೂಡಿತ್ತು. ನಾರಾಯಣ ಹೆಗ್ಡೆಯವರು ಮಗನ ಆಸೆಗೆ ಅಡ್ಡಿಪಡಿಸಿರಲಿಲ್ಲ. ಯಕ್ಷಗಾನ ನಾಟ್ಯ ಕಲಿಯುವ ಆಸೆಯಿಂದ ಚಂದ್ರಶೇಖರ ಹೆಗ್ಡೆಯವರು 1979ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಲಲಿತ ಕಲಾಕೇಂದ್ರವನ್ನು ಸೇರಿಕೊಂಡರು. ಶ್ರೀ ಕೆ. ಗೋವಿಂದ ಭಟ್ಟರಿಂದ ನಾಟ್ಯಾಭ್ಯಾಸ. ಬಳಿಕ ಶ್ರೀ ಕ್ಷೇತ್ರ ಸುಂಕದಕಟ್ಟೆಯ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಮೇಳದಲ್ಲಿ ತಿರುಗಾಟ. ಪೂರ್ವರಂಗ ಮತ್ತು ಪ್ರಸಂಗಗಳಲ್ಲಿ ವೇಷಗಳನ್ನು ಮಾಡುತ್ತಾ ಹಂತ ಹಂತವಾಗಿ ಬೆಳೆದವರು ಚಂದ್ರಶೇಖರ ಹೆಗ್ಡೆ. ಸುಂಕದಕಟ್ಟೆ ಮೇಳದಲ್ಲಿ ಪುರಾಣ ಮತ್ತು ತುಳುಪ್ರಸಂಗಗಳಲ್ಲಿ

ಕಲಾರಸಿಕರ ಕರ್ಣಗಳಿಗೆ ಗಾನಸುಧಾರಸವನ್ನು ಹರಿಸುವ ಗಾಯಕ ಶ್ರೀ ದಿನೇಶ ಅಮ್ಮಣ್ಣಾಯರು ಅರುವತ್ತರ ಸಂಭ್ರಮದಲ್ಲಿ

Image
                  ತೆಂಕುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ ‘ಗಾನಕೋಗಿಲೆ’ ಶ್ರೀ ದಿನೇಶ ಅಮ್ಮಣ್ಣಾಯರನ್ನು ಯಕ್ಷದೀಪ ಪತ್ರಿಕೆಯು ಸಂದರ್ಶಿಸಿ, ‘‘ಭಾವಗಳ ಗರಿಬಿಚ್ಚಿದ ಹಾಡುಹಕ್ಕಿ - ದಿನೇಶ ಅಮ್ಮಣ್ಣಾಯ’’ ಎಂಬ ಶೀರ್ಷಿಕೆಯಡಿ 2016 ಸೆಪ್ಟಂಬರ್ ತಿಂಗಳಿನಲ್ಲಿ (6ನೇ ಸಂಚಿಕೆ) ಲೇಖನವನ್ನು ಪ್ರಕಟಿಸಿತ್ತು. ಆಗ ಅವರ ವಯಸ್ಸು 57. ಅರುವತ್ತರ ಸಂಭ್ರಮವನ್ನು ಹೇಗೆ ಆಚರಿಸುತ್ತೀರಿ? ಎಂದು ಸಂದರ್ಶಕ, ಯಕ್ಷದೀಪ ಮಾಸಪತ್ರಿಕೆಯ ಸಂಪಾದಕ ಶ್ರೀ ಮನಮೋಹನ್ ವಳಕ್ಕುಂಜ ಅವರು ಕೇಳಿದಾಗ ಅಮ್ಮಣ್ಣಾಯರು ಪ್ರತಿಕ್ರಿಯಿಸಿದ ರೀತಿ ಹೀಗಿತ್ತು. ‘‘ಇಷ್ಟು ವರ್ಷ ದಿನೇಶ ಅಮ್ಮಣ್ಣಾಯರು ಯಾರು ಅಂತ ಜನರಿಗೆ ತೋರಿಸಿ ಕೊಟ್ಟದ್ದು ಯಕ್ಷಗಾನ. ಆ ಶಕ್ತಿ ದೇವರು ಕೊಟ್ಟದ್ದು. ಇಷ್ಟು ವರ್ಷ ನನ್ನನ್ನು ಎತ್ತಿ ಆಡಿಸಿದವ ದೇವರು. ಇದನ್ನು ಅವನಿಗೇ ಅರ್ಪಿಸಿದ್ದೇನೆ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಅಂತ ಸೇವೆ ಮಾಡಿಕೊಂಡು ಬರ್ತೇನೆ. ಅದು ಮುಖ್ಯ. ಪ್ರದರ್ಶನಕ್ಕೆ, ಪ್ರಚಾರಕ್ಕೆ ನಾನು ಮುಂದಾಗುವುದಿಲ್ಲ. ನಾಲ್ಕಾರು ಜನರು ಹೇಳಿದ್ದಾರೆ- ನಾವೆಲ್ಲಾ ಇದ್ದೇವೆ. ಅರುವತ್ತರ ಸಂಭ್ರಮವನ್ನು ಆಚರಿಸಲೇಬೇಕೆಂದು. ಅವರನ್ನು ನಿರುತ್ಸಾಹಗೊಳಿಸಬಾರದು ಎಂಬ ಕಾರಣಕ್ಕೆ ‘‘ನಿಮ್ಮ ಇಷ್ಟ. ನಿಮ್ಮ ಚಿತ್ತ. ನಾನು ಮಾತ್ರ ಅದನ್ನು ಬಯಸುವುದೂ ಇಲ್ಲ’’ ಎಂದೆ. ‘‘ಕಲಾವಿದನು ಕಲೆಗಿಂತ ದೊಡ್ಡವನಲ್ಲ. ಕಲೆಯಿಂದಾಗಿಯೇ ಕಲಾವಿದ’’ ಎಂಬ ಧ್ವನಿಯನ್ನು ಶ್ರೀ ದಿನೇಶ ಅಮ್ಮಣ್ಣಾಯರ ಮಾತುಗಳಲ್ಲಿ ಗಮನ