Posts

Showing posts from April, 2020

ಕಲಾವಿದನಿಂದ ಕಲಾವಿದರಿಗಾಗಿ -ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು

{ವಿ.ಸೂ: ಇದು ಜೂನ್ 2016ರಲ್ಲಿ ಬರೆದ ಲೇಖನ. ಅದರಿಂದೀಚೆಗೆ ಆದ ಬೆಳವಣಿಗೆಗಳನ್ನು ಈ ಲೇಖನದಲ್ಲಿ ಸೇರಿಸಲಾಗಿಲ್ಲ} ಕಲಾವಿದನಿಂದ ಕಲಾವಿದರಿಗಾಗಿ ಚಿಗುರೊಡೆದ ಮೊತ್ತ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ಸಲ್ಲುತ್ತದೆ. ಖ್ಯಾತ ಭಾಗವತರಾದ ಶ್ರೀ ಪಟ್ಲ ಸತೀಶ್ ಶೆಟ್ಟಿ ಇದರ ಸ್ಥಾಪಕಾಧ್ಯಕ್ಷರು. ರಂಗದಲ್ಲಿ ಕಲಾವಿದನಾಗಿ ರಂಜಿಸುವುದರ ಜತೆಗೆ ಕಲೆಗೆ, ಕಲಾವಿದರಿಗಾಗಿ ಕೊಡುಗೆಗಳನ್ನು ನೀಡಬೇಕಾದುದು ಕಲಾವಿದರಿಗೆ ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಪಟ್ಲ ಸತೀಶ್ ಶೆಟ್ಟಿಯವರು ಶ್ರಮಿಸುತ್ತಿದ್ದಾರೆ. ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಲ್ಲಿ ಭಾಗವತಿಕೆಯನ್ನು ಕಲಿತ ಇವರು ಸತತ ಅಭ್ಯಾಸದಿಂದ ಎಳೆಯ ಪ್ರಾಯದಲ್ಲಿಯೇ ಪ್ರಸಿದ್ಧಿಯನ್ನು ಪಡೆದು ಕೀರ್ತಿಯ ಶಿಖರವನ್ನೇರಿದರು. ಪ್ರತಿಭೆಯಿದ್ದವರೆಲ್ಲಾ ಹೊಳೆದು ಕಾಣಿಸಿಕೊಳ್ಳಲಾರರು. ಪ್ರತಿಭೆಯ ಜೊತೆ ಯೋಗಭಾಗ್ಯಗಳು ಮೇಳೈಸಿದಾಗ ಆತ ಪ್ರಸಿದ್ಧನಾಗುತ್ತಾನೆ ಎಂಬುದಕ್ಕೆ ಇವರೇ ಸಾಕ್ಷಿ. ಭಾಗವತಿಕೆಯನ್ನಲ್ಲದೆ ಚೆಂಡೆ ಮದ್ದಳೆಯನ್ನೂ ನುಡಿಸಬಲ್ಲರು. ಶ್ರೀ ಪಟ್ಲ ಸತೀಶ್ ಶೆಟ್ಟಿಯವರಿಂದ ಕಲಾವಿದರಿಗಾಗಿ ಈ ತೆರನಾದ ಶ್ರೇಷ್ಟ ಕೊಡುಗೆಯಾದುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಚಾರ. ಯಕ್ಷಗಾನ ಕಲೆಯ ಬಗ್ಗೆ, ಮೇಳವನ್ನು ನಡೆಸಿ ಅನುಭವವಿರುವ ಪಟ್ಲಗುತ್ತು ಮಹಾಬಲ ಶೆಟ್ಟರಿಗೆ ಪುತ್ರನಾಗಿ ಜನಿಸಿದ ಪಟ್ಲ ಸತೀಶ್ ಶೆಟ್ಟಿಯವರು ಈಗ ಕಲಾಭಿಮಾನಿಗಳಿಗೆ ಪ್ರೀತಿಯ ಸತೀಶಣ್ಣ. ತ

ಯಕ್ಷಗಾನ ಕಲಾರಂಗ ಉಡುಪಿ (ರಿ)

{ವಿ.ಸೂ: ಇದು ಜೂನ್ 2016ರಲ್ಲಿ ಬರೆದ ಲೇಖನ. ಅದರಿಂದೀಚೆಗೆ ಆದ ಬೆಳವಣಿಗೆಗಳನ್ನು ಈ ಲೇಖನದಲ್ಲಿ ಸೇರಿಸಲಾಗಿಲ್ಲ} ಯಕ್ಷಗಾನ ಕಲಾವಿದರಿಗಾಗಿ, ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಸ್ಥಾಪಿಸಲ್ಪಟ್ಟ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪಡೆದ ಸಂಸ್ಥೆಯೇ ‘ಯಕ್ಷಕಲಾರಂಗ ಉಡುಪಿ (ರಿ)’. ಅನೇಕ ಮಹನೀಯರು ಪ್ರತಿಫಲಾಪೇಕ್ಷೆ ಇಲ್ಲದೆ ಕಲಾವಿದರ ಶ್ರೇಯಸ್ಸನ್ನೇ ಬಯಸಿ ಅವಿರತ ಶ್ರಮಿಸುತ್ತಿದ್ದಾರೆ. ಯಕ್ಷಗಾನವು ಗಂಡುಕಲೆಯೆಂದೇ ಪ್ರಸಿದ್ಧವಾಗಿದ್ದರೂ ಕಲೆಯ ಉಳಿವಿಗೆ ಕಲೆಗಾಗಿ ಕೊಡುಗೆ ನೀಡುವ, ಕಲಾವಿದರ ಶ್ರೇಯಸ್ಸಿಗಾಗಿ ಒಂದೇ ಒಂದು ಸಂಸ್ಥೆಯು ಇದಕ್ಕೆ ಮೊದಲು ಚಿಗುರೊಡೆಯದೇ ಇದ್ದುದು ವಿಪರ್ಯಾಸ. ಆದುದರಿಂದ ‘ಯಕ್ಷಕಲಾರಂಗ’ ಎಂಬ ಈ ಮೇರು ಸಂಸ್ಥೆಯ ಹುಟ್ಟಿಗೆ ಕಾರಣರಾದವರು ಅಭಿನಂದನಾರ್ಹರು, ಪ್ರಾತಃಸ್ಮರಣೀಯರು. ಕಲಾವಿದರ ಬಾಳು ಬಂಗಾರವಾಗಲು ಕಾಣಿಸಿಕೊಂಡ ಮೊದಲ ಸಂಸ್ಥೆ ಎಂಬ ಹಿರಿಮೆ, ಗರಿಮೆ ಯಾವಾಗಲೂ ‘ಯಕ್ಷಕಲಾರಂಗ’ಕ್ಕೆ ಶಾಶ್ವತವಾಗಿರುತ್ತದೆ. 1975ನೇ ಇಸವಿಯಲ್ಲಿ ಉಡುಪಿಯಲ್ಲಿ ಪ್ರಾರಂಭವಾದ ಈ ಸಂಸ್ಥೆ ಇಂದು ಬೃಹತ್ ಎತ್ತರಕ್ಕೆ ಬೆಳೆದು ಕೀರ್ತಿಯನ್ನು ಪಡೆದಿದೆ. ಕಲಾವಿದರಿಗೆ ಅತ್ಯಗತ್ಯವಾದ ಪ್ರಯೋಜನಗಳನ್ನು ಪಡೆಯುವಂತಹಾ, ಇಳಿವಯಸ್ಸಿನಲ್ಲಿ ಆಧಾರವಾಗಬಲ್ಲ ಹಲವಾರು ಯೋಜನೆಗಳನ್ನು ಯಕ್ಷಕಲಾರಂಗ ಪ್ರತಿ ವರ್ಷವೂ ಹಮ್ಮಿಕೊಳ್ಳುತ್ತಿದೆ. ಹಿರಿಯ ಕಲಾವಿದರಿಗೆ ತಲಾ ರೂ 10000/- ದಂತೆ ಹದಿನೆಂಟು ಪ್ರಶಸ್ತಿಗಳನ್ನು ಪ್ರತಿವರ್ಷವೂ ಯಕ್ಷಕಲಾ

ಯಶಸ್ವೀ ಯಾಜಮಾನ್ಯಕ್ಕೆ ಹದಿನೈದನೇ ವರ್ಷ - ಕಲ್ಲಾಡಿ ಮನೆತನದ ಶ್ರೀ ಕೆ. ದೇವೀಪ್ರಸಾದ ಶೆಟ್ಟರು

Image
                ``ಕಲ್ಲಾಡಿ’’ ಎಂಬ ಹೆಸರು ಕೇಳಿದ ತಕ್ಷಣ `ಯಜಮಾನರು’ ಎಂಬ ಮಾತು ಕಲಾಭಿಮಾನಿಗಳ, ಕಲಾವಿದರ ಬಾಯಿಯಿಂದ ಹೊರಬಾರದೆ ಇರದು. ಇದು ಒತ್ತಾಯಕ್ಕೆ ಹೇಳುವ ಮಾತಲ್ಲ. ಈ ನುಡಿಯು ಅಂತಃರಂಗದ ಧ್ವನಿಯೇ ಆಗಿದೆ. ಅನೇಕ ವರುಷಗಳ ಹಿಂದಿನ ಕಾಲ. ಮೇಳಗಳನ್ನು ನಡೆಸುವ ನಾಯಕರನ್ನು ಕಲಾಭಿಮಾನಿಗಳೂ, ಕಲಾವಿದರೂ ಯಜಮಾನ ಎಂಬ ಹೆಸರಿನಿಂದ ಸಂಭೋದಿಸಿ ಗೌರವಿಸುತ್ತಿದ್ದರು. ಯಾಕೆ ಈ ತೆರನಾದ ಸಂಬೋಧನೆ? ನಮ್ಮನ್ನು ಮುನ್ನಡೆಸುತ್ತಾ ಕಲೆಯ ಉತ್ಕರ್ಷೆಗಾಗಿ ಶ್ರಮಿಸುವ ನಾಯಕ ಎಂಬ ಸಂತೋಷದಿಂದ, ಗೌರವಸೂಚಕವಾಗಿ ಯಜಮಾನ ಎಂದು ಕರೆಯಲಾರಂಭಿಸಿರಲೂ ಬಹುದು. ಕಲ್ಲಾಡಿ ಎಂಬುದು ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಒಂದು ಪ್ರದೇಶ. ಈ ಮನೆತನದ ನಾಲ್ಕು ಮಂದಿ ಸದಸ್ಯರು ಮೇಳಗಳ ಸಮರ್ಥ ಯಜಮಾನರಾಗಿ ಕಲ್ಲಾಡಿ ಎಂಬ ಊರಿಗೂ, ಕಲೆಗೂ, ತಾವು ಜನಿಸಿದ ಮನೆತನಕ್ಕೂ ಗೌರವವನ್ನು ತಂದಿತ್ತವರು. 1939ರಿಂದ ಕಲ್ಲಾಡಿ ಕೊರಗ ಶೆಟ್ಟರಿಂದ ತೊಡಗಿ ಇಂದಿನವರೇಗೂ ಕಲ್ಲಾಡಿ ಮನೆಯವರೇ ಕಟೀಲು ಮೇಳಗಳನ್ನು ಸಂಚಾಲಕರಾಗಿ ಮುನ್ನಡೆಸುತ್ತಿದ್ದಾರೆ. ಇವರ ನಾಯಕತ್ವದಲ್ಲಿ ಕಟೀಲು ಮೇಳಗಳು ಸರ್ವತೋಮುಖ ಬೆಳವಣಿಗೆಯನ್ನು ಕಂಡಿದೆ. ಮೇಳಗಳ ಯಾಜಮಾನ್ಯಕ್ಕೆ ನ್ಯಾಯ ಒದಗಿಸಿದ ಸಮರ್ಥ ನಾಯಕತ್ವ ಕಲ್ಲಾಡಿ ಮನೆತನದ್ದು. ಪ್ರಸ್ತುತ ಯಜಮಾನರಾಗಿ ಕಟೀಲು ಆರೂ ಮೇಳಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವವರು ಕಲ್ಲಾಡಿ ಶ್ರೀ ದೇವೀಪ್ರಸಾದ ಶೆಟ್ಟರು. 2005ರಿಂದ ತೊಡಗಿ ಕಟೀಲು ಶ್ರೀ ದುರ್ಗಾ ಪರಮೇಶ್ವರೀ

ಗಂಡುಕಲೆಯ ಪುಂಡುವೇಷಧಾರಿ ಶ್ರೀ ವಿನೋದ್ ರೈ ಸೊರಕೆ

Image
                ಶ್ರೀ ವಿನೋದ್ ರೈ ಸೊರಕೆ ಉತ್ತಮ ಪುಂಡುವೇಷಧಾರಿಗಳಲ್ಲಿ ಒಬ್ಬರು. ರಂಗದಲ್ಲಿ ಅಂದದ ನಾಟ್ಯ, ಹಿತಮಿತವಾದ ಮಾತುಗಳಿಂದ, ಸೊಗಸಾದ ದಿಗಿಣಗಳಿಂದ ಪ್ರೇಕ್ಷಕರನ್ನು ರಂಜಿಸಿ ಅವರ ಮೆಚ್ಚುಗೆಗೆ ಪಾತ್ರರಾದರು. ಕಲಾಭಿಮಾನಿಗಳೆಲ್ಲರೂ ಶ್ರೀ ವಿನೋದ್ ರೈಗಳನ್ನು ಚೆನ್ನಾಗಿ ತಿಳಿದವರು. ವಿನೋದ್ ರೈ ಸೊರಕೆ                ಪುತ್ತೂರು ತಾಲೂಕು ಬನ್ನೂರು ಆನೆಮಜಲು ಶ್ರೀ ವಿನೋದ್ ರೈಗಳ ಹುಟ್ಟೂರು. ಶ್ರೀ ನಾರಾಯಣ ರೈ, ಶ್ರೀಮತಿ ಸರಸ್ವತಿ ನಾರಾಯಣ ರೈ ದಂಪತಿಗಳಿಗೆ ಮಗನಾಗಿ 1968 ಮಾರ್ಚ್ 15ರಂದು ಜನಿಸಿದರು. ಹಾರಾಡಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ವನ್ನು ಪೂರೈಸಿದರು. ಎಳವೆಯಲ್ಲೇ ಯಕ್ಷಗಾನದಲ್ಲಿ ಇವರಿಗೆ ಅಪಾರ ಆಸಕ್ತಿ. ಶಾಲಾ ವಿದ್ಯಾರ್ಥಿಯಾಗಿದ್ದಾಗ ರಜಾದಿನಗಳಲ್ಲಿ ಆಸುಪಾಸಿನಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ತಪ್ಪದೆ ನೋಡುತ್ತಿದ್ದರು. ಅದು ನನಗೆ ಕಲಾವಿದನಾಗಿ ರೂಪುಗೊಳ್ಳುವುದಕ್ಕೆ ಅನುಕೂಲವಾಯಿತು. ನೋಡಿ ಕಲಿಯುವುದು ಬಹಳಷ್ಟಿದೆ. ನೋಡುವ, ಕೇಳುವ, ಓದುವ, ಪ್ರಶ್ನಿಸುವ ಗುಣಗಳು ಕಲಾವಿದನಲ್ಲಿರಬೇಕು. ಸಹನೆ ಬೇಕು. ವಿನಯವೂ ಬೇಕು. ಯಾವಾತನು ಸದಾ ನೋಡುತ್ತಾ, ಕೇಳುತ್ತಾ ಪ್ರಶ್ನಿಸುತ್ತಾನೋ ಅವನ ಬುದ್ಧಿಯು ಸೂರ್ಯನ ಕಿರಣಗಳಿಂದ ಪ್ರಚೋದಿಸಲ್ಪಟ್ಟ ಕಮಲಪುಷ್ಪದಂತೆ ಅರಳುತ್ತದೆ ಎಂಬುದು ಶ್ರೀ ವಿನೋದ್ ರೈ ಅಭಿಪ್ರಾಯ. ತೆಂಕುತಿಟ್ಟಿನ ಹೆಸರಾಂತ ಹಾ

‘ಯಕ್ಷಲೋಕದ ರಸಋಷಿ’ - ದೇರಾಜೆ ಸೀತಾರಾಮಯ್ಯ ಮಹಾನ್ ಚೇತನಕ್ಕೆ ‘ನುಡಿನಮನ

Image
                    ಶ್ರೀ ದೇರಾಜೆ ಸೀತಾರಾಮಯ್ಯನವರನ್ನು ನೋಡಿದ ನೆನಪಿಲ್ಲ. ಆದರೂ ಅವರ ಬಗೆಗೆ ನನ್ನ ಹಿರಿಯರು, ಹಿರಿಯ ಕಲಾಭಿಮಾನಿಗಳು ಆಡುವ ಮೆಚ್ಚುಗೆಯ ನುಡಿಗಳನ್ನು ಕೇಳಿದ್ದೇನೆ. ‘ರಸಋಷಿ’ ಎಂದೇ ಖ್ಯಾತರಾದ ಅವರು  ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಕಲಾವಿದನಾಗಿ ನಾನೂ ಅನುಭವಿಸಿದ್ದೇನೆ. ದೇರಾಜೆಯವರ ‘ಶ್ರೀರಾಮಚರಿತಾಮೃತಂ’ ಮತ್ತು ‘ಶ್ರೀಮನ್ಮಹಾಭಾರತ ಕಥಾಮೃತಂ’ ಎಂಬ ಶ್ರೇಷ್ಠ ಕೃತಿಗಳನ್ನು ಓದಿದ್ದೇನೆ. ಕಲಾವಿದನಾಗಿ ಬೆಳೆಯಲು ಅನುಕೂಲವಾಗಿದೆ. ಕಲಾವಿದರೆಲ್ಲರೂ ಮಾಹಿತಿಗಾಗಿ ಅವಲಂಬಿಸುವ ಕೃತಿಗಳಿವು. ಬರಹದ ಮೌಲ್ಯ ನಿರ್ಣಯಿಸಲ್ಪಡುವುದು ಅದರ ಉಪಯೋಗದ ನೆಲೆಯಿಂದ. ಕಲಾವಿದರ ಬಳಿ ಇರುವ, ಇರಲೇಬೇಕಾದ ಎರಡು ಕೃತಿಗಳಿವು. ಅಲ್ಲದೆ ಓದಿನಲ್ಲಿ ಆಸಕ್ತಿ ಹೊಂದಿದ ಎಲ್ಲರ ಮನೆಗಳಲ್ಲೂ ಇರುವ ಪುಸ್ತಕಗಳಿವು. ರಾಮಾಯಣ ಮತ್ತು ಮಹಾಭಾರತ ಪುರಾಣಗಳ ಬಗ್ಗೆ ಮಾಹಿತಿ ಬೇಕಾದಾಗ ಈ ಎರಡು ಹೊತ್ತಗೆಗಳ ಮೊರೆ ಹೋಗುತ್ತಾರೆ. ಹಾಗಾಗಿ ದೇರಾಜೆ ರಾಮಾಯಣ ಮತ್ತು ದೇರಾಜೆ ಮಹಾಭಾರತ ಕೃತಿಗಳ ಮೌಲ್ಯವನ್ನು ಯಾರಿಂದಲೂ ಅಳೆಯಲಸಾಧ್ಯ. ವಾಲ್ಮೀಕಿ ರಾಮಾಯಣಕ್ಕೆ ಮತ್ತು ವ್ಯಾಸರ ಭಾರತಕ್ಕೆ ಅತ್ಯಂತ ಹತ್ತಿರವಾಗಿ, ಕನ್ನಡ ಸಾರಸ್ವತ ಲೋಕಕ್ಕೆ, ಯಕ್ಷಗಾನ ಸಾಹಿತ್ಯಕ್ಕೆ ಈ ಎರಡು ಗ್ರಂಥಗಳು ಅಮೂಲ್ಯ ಕೊಡುಗೆಗಳೆಂದು ಓದುಗರು ಈಗಾಗಲೇ ನಿರ್ಣಯಿಸಿರುತ್ತಾರೆ. ಇವುಗಳು ಯಕ್ಷಗಾನ ಕ್ಷೇತ್ರಕ್ಕೆ ಆಕರ ಗ್ರಂಥಗಳಾಗಿ ಪರಿಣಮಿಸಿದೆ. ಸಾಮಾಜಿಕ, ಧಾರ್ಮಿಕ, ಸಾಹಿತ್ಯ

ತೆಂಕುತಿಟ್ಟು-ಪುಂಡುವೇಷಕ್ಕೆ ಅನನ್ಯ ಮಾದರಿ ‘ಲಿಂಗಣ್ಣ’ ಹೊಸಹಿತ್ತಿಲು ಶ್ರೀ ಮಹಾಲಿಂಗ ಭಟ್

Image
                   ಯಕ್ಷಗಾನವೆಂಬ ಗಂಡುಕಲೆಯಲ್ಲಿ ‘ಪುಂಡುವೇಷ’ಗಳಿಗೆ ವಿಶಿಷ್ಟ ಸ್ಥಾನವಿದೆ. ‘ಪುಂಡುವೇಷ’ ಎಂದು ಯಾಕಾಗಿ ಕರೆಸಿಕೊಂಡಿರಬಹುದು? ಇಂತಹ ಕಾರಣಗಳಿಂದ ಎಂದು ನಿಖರವಾಗಿ ಹೇಳಲು ಶಕ್ಯನಲ್ಲ. ಆದರೂ ಪುಂಡುವೇಷ ಎಂದಾಗ ಅಭಿಮನ್ಯು, ಬಭ್ರುವಾಹನ, ಚಂಡಮುಂಡರು, ಲಕ್ಷ್ಮಣ, ಭಾರ್ಗವ, ಕುಶ-ಲವರು, ಶ್ರೀಕೃಷ್ಣ ಮೊದಲಾದ ಪಾತ್ರಗಳು ನಮ್ಮ ಮನದಲ್ಲಿ ಬಂದು ನೆಲೆಸುತ್ತವೆ. ತರುಣವೀರರ ಪಾತ್ರಗಳು ಎಂಬುದರಿಂದ ಹೀಗೆ ಹೆಸರಾಯಿತೇ? ಇರಲಿ. ಇಂತಹ ಪಾತ್ರಗಳು ರಂಗಪ್ರವೇಶಿಸಿ ವೀರರಸದ ಪದ್ಯಗಳಿಗೆ ಕುಣಿದು ಅಭಿನಯಿಸುವಾಗ ಪ್ರೇಕ್ಷಕರು ಎಲ್ಲವನ್ನೂ ಮರೆತು ಯಕ್ಷಲೋಕದಲ್ಲಿ ವಿಹರಿಸುವುದಂತೂ ಸತ್ಯ. ಪ್ರಬುದ್ಧ ಪ್ರೇಕ್ಷಕರು, ಕಲಾವಿದನು ಪಾತ್ರೋಚಿತವಾಗಿ ಕುಣಿದು ಮಾತನಾಡಿದನೇ ಎಂದು ಯೋಚಿಸಿ ತೀರ್ಮಾನಿಸಿದರೆ, ಮಕ್ಕಳು ಅವರ ಮತಿಯ ಮಿತಿಯಲ್ಲಿ ಮಾತನಾಡುತ್ತಾರೆ. ಪುಂಡುವೇಷಧಾರಿಯು ಎಷ್ಟು ಹಾರಿದ ಎಂದು ಲೆಕ್ಕಮಾಡಿ ಮತ್ತೆ ಮತ್ತೆ ಅದನ್ನು ಗೆಳೆಯರಲ್ಲೆಲ್ಲಾ ಹೇಳಿ ಸಂತೋಷಪಡುವವರೂ ಇದ್ದಾರೆ. ಅವರ ಯೋಚನೆ, ನಿರ್ಣಯಗಳು ಹೇಗೇ ಇರಲಿ. ಅವರಲ್ಲಿರುವ ಕಲಾಸಕ್ತಿಯನ್ನು ಮೆಚ್ಚಲೇಬೇಕು. ಅಂತಹ ಕರ್ಷಕ ಶಕ್ತಿಯನ್ನು ಹೊಂದಿದೆ ಈ ಶ್ರೇಷ್ಠ ಕಲೆ. ಪುಂಡುವೇಷಧಾರಿಯಾಗಿ ಪ್ರೇಕ್ಷಕರ ಮನಸೂರೆಗೊಂಡು ತಾನು ಕಾಣಿಸಿಕೊಳ್ಳಲು ಕಲಾವಿದರಿಗೆ ಅವಕಾಶಗಳು ಧಾರಾಳ ಇವೆ. ಪ್ರವೇಶದ ರೀತಿ, ಧೀಂಗಿಣ, ಅಭಿನಯ, ವನವಿಹಾರ, ಯುದ್ಧದ ಸಂದರ್ಭಗಳ ವೈವಿಧ್ಯತೆ ಹೀಗೆ ಅವಕಾಶಗಳು ಒದಗುತ್ತವೆ.