Posts

Showing posts from January, 2019

ಪರಂಪರೆಯ ಸಂಪ್ರದಾಯವನ್ನು ಮುರಿಯದೆ ಮೆರೆದ ಶ್ರೇಷ್ಠ ಭಾಗವತ ನೆಬ್ಬೂರು ನಾರಾಯಣ ಭಾಗವತರು

Image
               ನೆಬ್ಬೂರು ಶ್ರೀ ನಾರಾಯಣ ದೇವರು ಹೆಗಡೆಯವರು ಬಡಗಿನ ಶ್ರೇಷ್ಠ ಭಾಗವತರುಗಳಲ್ಲೊಬ್ಬರು. ಪ್ರಸಿದ್ಧಿಗಾಗಿ ಬಾಗದೆ ಪರಂಪರೆ ಸಂಪ್ರದಾಯವನ್ನು ಮುರಿಯದೆ ಭಾಗವತರಾಗಿ ಮೆರೆದವರು. ಇವರ ಹಾಡುಗಾರಿಕೆಯು ಬಡಗುತಿಟ್ಟಿನ ಯಕ್ಷಗಾನಕ್ಕೆ ಒಂದು ವಿಶೇಷ ಕೊಡುಗೆ ಎಂದೇ ಕಲಾಭಿಮಾನಿಗಳು ಗುರುತಿಸಿದ್ದಾರೆ. ಕಲಾವಿದರ ನಟನಾ ಸಾಮರ್ಥ್ಯವನ್ನು ಹೊರಗೆಡಹುವಲ್ಲಿ ಮತ್ತು ಹೆಚ್ಚಿಸುವಲ್ಲಿ ಇವರ ಹಾಡುಗಾರಿಕೆಯು ಅತ್ಯಂತ ಸಹಕಾರಿಯಾಗಿರುತ್ತಿತ್ತು ಎಂಬುದು ಎಲ್ಲರೂ ಒಪ್ಪಿಕೊಂಡ ವಿಚಾರ. ಘಟ್ಟದ ಮೇಲಿನಿಂದ ಭಾಗವತಿಕೆಯನ್ನು ಕಲಿಯಲೆಂದೇ ಕೆಳಗಿಳಿದು ಕೆರೆಮನೆಯತ್ತ ಸಾಗಿದವರು. ಪ್ರಸಿದ್ಧ ರಂಗನಟ ಶ್ರೀ ಇಡಗುಂಜಿ ಮೇಳದ ಸಂಸ್ಥಾಪಕ ಕೆರೆಮನೆ ಶ್ರೀ ಶಿವರಾಮ ಹೆಗಡೆಯವರಿಂದ ಅವರ ಮನೆಯಲ್ಲಿದ್ದುಕೊಂಡೇ ಕಲಿತರು. ಸದಾ ಅಧ್ಯಯನಶೀಲರಾಗಿ ಅಂದಿನ ಶ್ರೇಷ್ಠ ಕಲಾವಿದರ ಒಡನಾಟದಿಂದ ಬೆಳೆಯುತ್ತಾ ಮುಂದೆ ಸಾಗಿದರು. ನೆಬ್ಬೂರು ನಾರಾಯಣ ಭಾಗವತರು                           ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ (ಕೆರೆಮನೆ ಮೇಳ) ಪ್ರಧಾನ ಭಾಗವತರಾಗಿ ಸುಮಾರು ಐವತ್ತು ವರ್ಷಗಳ ಕಾಲ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕಾಸರಗೋಡು ಪ್ರದೇಶಗಳಲ್ಲಿ ನಡೆದ ಪ್ರದರ್ಶನಗಳ ಯಶಸ್ಸಿಗೆ ಕಾರಣರಾದವರು. ಹೊರರಾಜ್ಯಗಳ ಪ್ರೇಕ್ಷಕರಿಗೆ ಗಾನಸುಧೆಯನ್ನು ಉಣಿಸಿದರು. ವಿದೇಶಗಳಲ್ಲಿ ನಡೆದ ಅನೇಕ ಪ್ರದರ್ಶನಗಳಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಭಾಗವತರಾಗಿ ನೆಬ್ಬೂರು ನಾ

ಕಲಾವಿದ, ರಂಗಪ್ರಸಾಧನತಜ್ಞ ಶ್ರೀ ರಾಘವದಾಸ್, ಶ್ರೀ ಭಾರತೀ ಕಲಾ ಆರ್ಟ್ಸ್, ಮುಡಿಪು

Image
                       ಯಕ್ಷಗಾನ ಪ್ರದರ್ಶನಗಳಿಗೆ ವೇಷಭೂಷಣಗಳು ಬೇಕೇ ಬೇಕು. ಯಕ್ಷಗಾನದ ಇನ್ನೊಂದು ಪ್ರಾಕಾರವಾದ ತಾಳಮದ್ದಳೆಗೆ ಅದರ ಅಗತ್ಯವಿರುವುದಿಲ್ಲ. ಮೇಳಗಳು ತಮ್ಮದೇ ಆದ ವೇಷಭೂಷಣಗಳ ವ್ಯವಸ್ಥೆಯನ್ನು ಹೊಂದಿ ತಿರುಗಾಟ ನಡೆಸುತ್ತವೆ. ಆದರೆ ಸಂಘ, ಶಾಲಾ ಕಾಲೇಜುಗಳ ಪ್ರದರ್ಶನ, ಇನ್ನಿತರ ಸಮಾರಂಭಗಳ ಯಕ್ಷಗಾನ ಪ್ರದರ್ಶನಗಳ ಸಂಘಟಕರು ಬಾಡಿಗೆಗೆ ತರಿಸಿಕೊಳ್ಳಲೇಬೇಕಾಗುತ್ತದೆ. ಇಂದು ಹಲವಾರು ಸಂಘ ಸಂಸ್ಥೆಗಳು ವೇಷಭೂಷಣಗಳನ್ನು ಹೊಂದಿ ಅದನ್ನು ಸಂಘಟಕರಿಗೆ ಪೂರೈಸಿ ಪ್ರದರ್ಶನಗಳು ಯಶಸ್ವಿಯಾಗಿ ನಡೆಯುವುದಕ್ಕೆ ಕಾರಣ ಸ್ಥಾನದಲ್ಲಿವೆ. ಅಂತಹ ಸಂಸ್ಥೆಗಳಲ್ಲೊಂದು ಶ್ರೀ ಭಾರತೀ ಕಲಾ ಆರ್ಟ್ಸ್, ಮುಡಿಪು.   ಈ ಸಂಸ್ಥೆಯು ಹೂ ಹಾಕುವ ಕಲ್ಲು (ಮುಡಿಪು), ಅಲ್ಲದೆ ಬಿ.ಸಿ. ರೋಡ್ ಬಸ್ ನಿಲ್ದಾಣದ ಸಮೀಪದ ಕಟ್ಟಡದಲ್ಲೂ ಕಾರ್ಯಾಚರಿಸುತ್ತಿದೆ. ಶ್ರೀ ರಾಘವದಾಸ್ ಬಜಪೆ ಅವರು ಶ್ರೀ ಭಾರತೀ ಕಲಾ ಆರ್ಟ್ಸ್ ನ ಮಾಲೀಕರು. ಇವರು ಕಲಾವಿದರೂ ಹೌದು. ನಗುಮೊಗದ ಇವರು ಶುಭ್ರ ವಸನಧಾರಿ. ಯಾವಾಗಲೂ ಬಿಳಿ ಅಂಗಿ ಮತ್ತು ಬಿಳಿ ಪಂಚೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಪ್ರಸ್ತುತ ಮುಡಿಪು ಸಮೀಪ ವಾಸವಿದ್ದರೂ ಹುಟ್ಟೂರು ಬಜಪೆ ಸಮೀಪವಾದ ಕಾರಣ ಬಜಪೆ ರಾಘವದಾಸ್ ಎಂದೇ ಪ್ರಸಿದ್ಧರಾಗಿದ್ದಾರೆ.                                                                      ಶ್ರೀ ರಾಘವದಾಸ್                       ಶ್ರೀ ರಾಘವದಾಸ್ ಅವರು ಮಂಗಳೂರು ತಾಲೂಕು

ಪರಂಪರೆಯ ಹಾಸ್ಯ ಚಕ್ರವರ್ತಿ - ಪೆರುವಡಿ ನಾರಾಯಣ ಭಟ್

Image
                         ಹಾಸ್ಯವು  ನವರಸಗಳಲ್ಲೊಂದು. ಶೃಂಗಾರಾದಿ ಒಂಬತ್ತು ರಸಗಳಲ್ಲಿ ಹಾಸ್ಯಕ್ಕೆ ವಿಶೇಷ ಸ್ಥಾನವಿದೆ. ಯಕ್ಷಗಾನದಲ್ಲಂತೂ ಹಾಸ್ಯಕ್ಕೆ ವಿಫುಲ ಅವಕಾಶಗಳಿವೆ. ಹಾಸ್ಯಗಾರನಿಗೆ ವಿಶಿಷ್ಟ ಸ್ಥಾನ ಗೌರವವೂ ಇದೆ. ಭಾಗವತನು ಒಂದನೇ ವೇಷಧಾರಿಯಾದರೆ ಹಾಸ್ಯಗಾರನು ಎರಡನೇ ವೇಷಧಾರಿ. ಯಕ್ಷಗಾನದ ಎಲ್ಲಾ ವಿಭಾಗಗಳನ್ನೂ ಆತ ಬಲ್ಲವನಾಗಿರಬೇಕೆಂಬುದು ನಿಯಮ. ಅನಿವಾರ್ಯ ಕಾರಣಗಳಿಂದ ಕಲಾವಿದನೊಬ್ಬನಿಗೆ ಕರ್ತವ್ಯವನ್ನು ನಿರ್ವಹಿಸಲು ಅಸಾಧ್ಯವಾದರೆ ಹಾಸ್ಯಗಾರನು ಅದನ್ನು ನಿರ್ವಹಿಸಬೇಕು. ನಿರ್ವಹಿಸಬೇಕಾದರೆ ಆತ ಅದನ್ನು ತಿಳಿದಿರಬೇಕು. ಎಲ್ಲಾ ವೇಷಗಳನ್ನು ನಿರ್ವಹಿಸಿ ಹಂತ ಹಂತವಾಗಿ ಬೆಳೆದು ಪಕ್ವವಾದವನೇ ಹಾಸ್ಯಗಾರನಾಗುತ್ತಾನೆ. ಇಡೀ ರಾತ್ರಿಯ ಪ್ರಸಂಗಗಳಲ್ಲಿ ಹಾಸ್ಯಗಾರನು ಹಲವು ವೇಷಗಳನ್ನೂ  ಮಾಡ ಬೇಕಾಗುತ್ತದೆ. ಪೂರ್ವರಂಗದಲ್ಲಿ ಹೊಗಳಿಕೆ ಹಾಸ್ಯದಿಂದ ತೊಡಗಿ, ಪ್ರಸಂಗದಲ್ಲಿ ಅವನೇ ಮಾಡಬೇಕಾದ ಪಾತ್ರಗಳನ್ನೆಲ್ಲಾ ನಿರ್ವಹಿಸಿ ಬಣ್ಣ ತೆಗೆದು ಸೇವಾಕರ್ತರನ್ನು ಭಾಗವತರೊಡನೆ ಸೇರಿಕೊಂಡು ಹೊಗಳಿ ಅವರಿಂದ ವೀಳ್ಯ ತೆಗೆದು ಕೊಂಡಲ್ಲಿಗೆ ಮಾತ್ರ ಅವನ ಅಂದಿನ ಕರ್ತವ್ಯ ಮುಗಿಯುವುದು.                                                              ಪೆರುವಡಿ ನಾರಾಯಣ ಭಟ್                                        ಪರಂಪರೆಯ ಬಯಲಾಟ ಮೇಳಗಳಲ್ಲಿ ಈ ನಿಯಮವನ್ನು ನಾವು ಇಂದೂ ಕಾಣಬಹುದು. ಹಾಸ್ಯಗಾರನು ನಿರ್ವಹಿಸಬೇಕಾದ