Posts

Showing posts from February, 2019

ಸಹೃದಯಿ ಕಲಾಕುಸುಮ ಶ್ರೀ ಕೃಷ್ಣ ಮೂಲ್ಯ ಕೈರಂಗಳ

                    ಯಕ್ಷಗಾನ ನಮ್ಮ ಹೆಮ್ಮೆಯ ಸಂಕೇತವಾದ ಒಂದು ಶ್ರೇಷ್ಠ ಕಲೆ. ಅದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಮೇರುಕಲೆ. ಆರೋಗ್ಯಕರವಾದ ಸಮಾಜ ನಿರ್ಮಾಣ, ವ್ಯಕ್ತಿ ನಿರ್ಮಾಣಕ್ಕೆ ಯಾವ ಉತ್ತಮ ಗುಣಗಳು ಬೇಕು? ರೂಢಿಸಿಕೊಳ್ಳ ಬೇಕೆಂಬುದನ್ನು ತಿಳಿಸುತ್ತದೆ. ಸನಾತನಿಗಳು ನೀಡಿದ ಸಂದೇಶಗಳನ್ನು ಅತ್ಯಂತ ಸರಳವಾಗಿ ನಮಗೆ ಯಕ್ಷಗಾನವು ನೀಡುತ್ತದೆ. ದೈವೀಕಲೆ ಯಾದ ಯಕ್ಷಗಾನವು ಉತ್ತಮ ವಿಚಾರಗಳನ್ನು ವಾಹಿಸುವ ಒಂದು ಅತ್ಯುತ್ತಮ ಮಾಧ್ಯಮವೂ ಹೌದು. ಯಾವುದು ಒಳ್ಳೆಯ ವಿಚಾರ? ಯಾವುದು ಕೆಟ್ಟ ವಿಚಾರ? ಏನನ್ನು ಮಾಡಬಹುದು? ಏನನ್ನು ಮಾಡಬಾರದು? ಮಾಡಬಾರದ್ದನ್ನು ಮಾಡಿದರೆ ಕೆಟ್ಟ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಒಳಿತನ್ನು ಮಾಡಿದರೆ ದೇವತಾನುಗ್ರಹಕ್ಕೆ ಪಾತ್ರರಾಗುತ್ತೇವೆ. ಯಕ್ಷಗಾನ ಪ್ರದರ್ಶನಗಳನ್ನು ನೋಡಿದಾಗ ನಮಗೆ ಈ ವಿಚಾರಗಳನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತದೆ. ಕಲಾವಿದರು ಪಾತ್ರಗಳ ಸ್ವಭಾವವನ್ನರಿತು ಅಭಿನಯಿಸಿ ಈ ಸಂದೇಶಗಳನ್ನು ಕಲಾಭಿಮಾನಿಗಳಿಗೆ ನೀಡುತ್ತಾರೆ. ಹಾಗಾಗಿಯೇ ಕಲಾವಿದರು ಕಲಾಮಾತೆಯ ಸೇವಕರು. ಸುಪುತ್ರರು. ಉತ್ತಮ ಕಲಾವಿದ ಕಲಾಮಾತೆಯ ಅನುಗ್ರಹಕ್ಕೆ ಪಾತ್ರನಾಗಿಯೇ ಆಗುತ್ತಾನೆ. ವಿದ್ವಾಂಸರಿಂದ, ಕಲಾಭಿಮಾನಿಗಳಿಂದ ಗೌರವಿಸಲ್ಪಡುತ್ತಾನೆ. ಕಾಲವನ್ನು ನಿರ್ಣಯಿಸುವ ಹಕ್ಕು ನಮಗಿಲ್ಲ. ಕಾಯಬೇಕು ಅಷ್ಟೆ. ದುಡಿಯುವುದು ಕಲಾವಿದನಿಗೆ ಕರ್ತವ್ಯ. ಪ್ರತಿಫಲವನ್ನು ನೀಡುತ್ತಾನೆ ದೇವರು. ನಿಷ್ಠೆಯಿಂದ ದುಡಿದು ಕಲಾಮಾತ

ಯಕ್ಷಗಾನದಲ್ಲಿ ಬಾಲಕಲಾವಿದರು - ಮಾ| ಸ್ವಸ್ತಿಕ್ ಶರ್ಮಾ ಪಳ್ಳತ್ತಡ್ಕ

Image
                   ಯಕ್ಷಗಾನವೆಂಬ ಗಂಡುಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಅವಕಾಶ ಸಿಕ್ಕಿದ್ದರೆ ಅದು ಭಾಗ್ಯವೇ ಹೌದು. ತಾನು ಈ ಮೇರು ಕಲೆಯ ಒಂದು ಅಂಗವಾಗಿದ್ದೇನೆ ಎಂಬ ಸಂತೋಷ ಖಂಡಿತ ಕಲಾವಿದನಿಗೆ ಆಗಿಯೇ ಆಗುತ್ತದೆ. ಎಲ್ಲರಿಗೂ ಈ ಅವಕಾಶ ಸಿದ್ಧಿಸದು. ಅವಕಾಶ ಸಿದ್ಧಿಸಿದವರೆಲ್ಲರೂ ಕಾಣಿಸಿಕೊಳ್ಳಲಾರರು. ಕಲಾಮಾತೆಯ ಅನುಗ್ರಹವೂ ಬೇಕು. ಕಲಾವಿದನು ಆಲಸಿ ಆಗಿರದೆ ಸತತಾಭ್ಯಾಸಿ ಆಗಿರಬೇಕು. ಜೊತೆಗೆ ಯೋಗ ಭಾಗ್ಯಗಳು ಬೇಕು. ಈ ಎಲ್ಲ ವಿಚಾರಗಳು ಸೇರಿಕೊಂಡಾಗಲೇ ರಂಗದಲ್ಲಿ ಅವನು ಕಾಣಿಸಿಕೊಳ್ಳುತ್ತಾನೆ. ಯಕ್ಷಗಾನವನ್ನು ವೃತ್ತಿಯನ್ನಾಗಿ ಆರಿಸಿಕೊಂಡವರು ಅನೇಕರು. ಕೃಷಿ, ಸರಕಾರಿ ಉದ್ಯೋಗ, ವ್ಯಾಪಾರ ಹೀಗೆ ಹಲವು ವ್ಯವಹಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಅನೇಕರು. ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿ ಕಲಾಮಾತೆಯ ಸೇವೆಯನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ವಿದ್ಯಾ ಸಂಸ್ಥೆಗಳಲ್ಲೂ ಯಕ್ಷಗಾನ ಕಲಿಕೆಯು ಆರಂಭವಾಗಿರುವುದು ಅತ್ಯಂತ ಸಂತಸ ತರುವ ವಿಚಾರ. ಮಕ್ಕಳಲ್ಲಿ ಸಂಸ್ಕಾರಗಳನ್ನು ತುಂಬುವ ವಿಚಾರವಿದು. ಬಾಲಕಲಾವಿದರು ಸಿದ್ಧರಾಗುತ್ತಿರುವುದನ್ನು ಕಂಡಾಗ ಆನಂದವಾಗುತ್ತದೆ. ಇತ್ತೀಚೆಗೆ ಗಂಡುಕಲೆಯಲ್ಲಿ ಹೆಣ್ಮಕ್ಕಳೂ ತೊಡಗಿಸಿಕೊಳ್ಳುತ್ತಿದ್ದಾರೆ. ಹಿಮ್ಮೇಳ ಮುಮ್ಮೇಳಗಳೆಂಬ ಎರಡು ವಿಭಾಗಗಳಲ್ಲೂ ಭಾಗಿಯಾಗುತ್ತಿದ್ದಾರೆ. ಹವ್ಯಾಸಿ ಕಲಾವಿದರನ್ನು ಬಾಲಕಲಾವಿದರನ್ನು ವೃತ್ತಿಕಲಾವಿದ ರೊಂದಿಗೆ ಹೋಲಿಸುವುದು ಸರಿಯಲ್ಲ. ಹೋ

ಹಿರಿಯ ಕಲಾವಿದ- ಪಡುಪೆರಾರ ಲಕ್ಷ್ಮಣ ಕೋಟ್ಯಾನ್

Image
                         ರೂಢಿಯ ಮಾತುಗಳು ಅದೆಷ್ಟೋ ಬಲಿಷ್ಟವಾಗಿರುತ್ತದೆ! ಬಹುಷಃ ಅನುಭವಗಳೇ ಮಾತಿನ ಮೂಲಕ ಹೊರಹೊಮ್ಮಿ ಅದನ್ನು ನಿರಂತರ ಬಳಸೋದು ರೂಢಿಯಾಗಿರಬೇಕು. ಯಕ್ಷಗಾನ ಸಂಬಂಧಿ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಬಂದ ಗಣ್ಯರು, ಅತಿಥಿಗಳು ಸದ್ರಿ ಕಲೆಯ ಬಗ್ಗೆ ಅವರವರ ಅಭಿಪ್ರಾಯಗಳನ್ನು ಹೇಳುತ್ತಾರೆ. ಕಲೆಯ ಸ್ವರೂಪ, ಸೌಂದರ್ಯ, ಕಲೆಯು ಅವರಲ್ಲಿ ಉಂಟುಮಾಡಿದ ಪರಿಣಾಮ, ಅವರೇಕೆ ಯಕ್ಷಗಾನದತ್ತ ಆಕರ್ಷಿತರಾದರು? ಈ ಬಗ್ಗೆ ವಿವರಿಸುತ್ತಾರೆ. ಪ್ರೇಕ್ಷಕರು ಅವರದ್ದೇ ಆದ ರೀತಿಯಲ್ಲಿ ಗಂಡುಕಲೆಯ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ. ಅವರೆಲ್ಲರ ಅನಿಸಿಕೆಗಳಲ್ಲಿ ಸರ್ವರಿಂದಲೂ ಸಮ್ಮತಿಸಲ್ಪಟ್ಟ ವಿಚಾರವೆಂದರೆ ಯಕ್ಷಗಾನವು ಪಂಡಿತರಿಂದಲೂ ಹಿಡಿದು ಪಾಮರರವರೆಗೆ ಆಸ್ವಾದಿಸುವ ಕಲೆ ಎಂಬುದು. ಈ ವಿಚಾರವನ್ನು ಎಲ್ಲರೂ ಒಪ್ಪಿದ್ದಾರೆ, ಆಡುತ್ತಾರೆ. ಈ ಮೇರುಕಲೆಯು ಸರಳವಾಗಿ ಎಲ್ಲರೂ ಅರ್ಥಮಾಡಿಕೊಳ್ಳುವಂತೆ ಇದೆ ಎಂಬುದೇ ಇದರ ಅರ್ಥ. ಯಕ್ಷಗಾನ ಕಲಾವಿದನಾಗಬೇಕಾದರೆ ಪದವೀಧರನಾಗಬೇಕಾಗಿಲ್ಲ. ಯಾವ ಪದವಿಯ ಪ್ರಮಾಣ ಪತ್ರಗಳು ಬೇಕಾಗಿಲ್ಲ. ಅವನಲ್ಲಿ ಇರಬೇಕಾದುದು ಶುದ್ಧ ಭಾಷೆಯಲ್ಲಿ ಮಿತವಾಗಿ ಆಡುವ ಮಾತುಗಳು, ಸಾಮಾನ್ಯ ಜ್ಞಾನ ಮತ್ತು ಅಧ್ಯಯನ ಎಂಬ ಗುಣಗಳು. ಇತಿಹಾಸವನ್ನು ಗಮನಿಸಿದರೆ ನಮಗೆ ತಿಳಿಯುತ್ತದೆ ಶೇಣಿ, ಸಾಮಗರು, ಕುಂಬಳೆ ಸುಂದರರಾಯರು ಪದವೀಧರರೇ? ಬಣ್ಣದ ಮಹಾಲಿಂಗ, ಚಂದ್ರಗಿರಿ ಅಂಬು ಶಾಲೆಗೆ ಹೋಗಿ ಹೆಚ್ಚು ಕಲಿತವರಲ್ಲ. ಶಾಲೆಯ

ಮೃದು ಮನಸಿನ ಮದ್ಲೆಗಾರ - ಮಿಜಾರು ಮೋಹನ ಶೆಟ್ಟಿಗಾರ

Image
                       ತೆರೆದುಕೊಳ್ಳುವ ಸ್ವಭಾವ ಇವರದಲ್ಲ. ಯಾವಾಗಲೂ ಮುಚ್ಚಿಕೊಳ್ಳುವ ಸ್ವಭಾವ. ಪ್ರಚಾರಪ್ರಿಯರಲ್ಲ. ಮಾಧ್ಯಮಗಳಿಂದ ಬಹಳ ದೂರ ಉಳಿದು ತಾನಾಯಿತು ತನ್ನ ಕೆಲಸವಾಯಿತು ಎಂದು ತೃಪ್ತಿಯಿಂದಲೇ ವ್ಯವಹರಿಸುತ್ತಾರೆ. ತನ್ನನ್ನು ತಾನು ಉದ್ಘೋಷಿಸಿಕೊಳ್ಳದೆ, ಶ್ರೇಷ್ಠ ಕಲೆಯಾದ ಯಕ್ಷಗಾನದಲ್ಲಿ ನಾನೊಬ್ಬ ಸಾಮಾನ್ಯ ಕಲಾವಿದ ಅಷ್ಟೆ ಎಂದು ಹೇಳುತ್ತಾರೆ. ವಿನಯವಂತ, ಸರಳ ವ್ಯಕ್ತಿತ್ವ, ಸದಾ ನಗುಮೊಗದಿಂದಲೇ ಕಾಣಿಸಿಕೊಳ್ಳುತ್ತಾರೆ. ಮೇಳಕ್ಕೆ, ಯಜಮಾನರಿಗೆ, ಸಹಕಲಾವಿದರಿಗೆ ಒಂದು ದಿನವಾದರೂ ಹೊರೆಯಾಗದೆ, ಅವರೆಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಹಗಲು ನಿದ್ದೆಯಾಗದಿದ್ದರೂ, ಸಬೂಬು ಹೇಳಿ ತನ್ನ ಕಸುಬು ಮಾಡದೇ ಇರುವವರಲ್ಲ. ಪ್ರಧಾನ ಮದ್ದಳೆಗಾರನಾಗಿ ತನ್ನ ಕರ್ತವ್ಯವೇನು? ಅದನ್ನು ಮಾಡಿಯೇ ಮಾಡುತ್ತಾರೆ. ಅಲ್ಲದೆ ತನಗಿಂತ ಕಿರಿಯ ಮದ್ದಳೆಗಾರರಿಗೆ ಹಗಲು ವಿಶ್ರಾಂತಿಯಾಗದಿದ್ದರೆ, ಅವರ ಹೊಣೆಯನ್ನು ಇವರು ವಹಿಸಿಕೊಂಡು ನಿರ್ವಹಿಸಿದ ಉದಾಹರಣೆಗಳೂ ಇವೆ!! ಒಟ್ಟಿಗೆ ತಿರುಗಾಟ ಮಾಡಿದ ಕಲಾವಿದರು ಈ ಉತ್ತಮ ಕಲಾವಿದನ ವ್ಯಕ್ತಿತ್ವವನ್ನು ವರ್ಣಿಸಿ ಕೊಂಡಾಡುವುದನ್ನು ನಾವು ಗಮನಿಸಬಹುದು. ಯಕ್ಷಗಾನದಲ್ಲಿ ಮದ್ದಳೆಗಾರರ ಸ್ಥಾನ ಶ್ರೇಷ್ಠವಾದುದು. ಹಿರಿದಾದುದು. ಭಾಗವತನ ಸ್ಥಾನದಲ್ಲಿ ಕುಳಿತವನು ಅನನುಭವಿಯಾದರೆ, ಅವನನ್ನು ಮುನ್ನಡೆಸಬೇಕಾದ ಹೊಣೆ ಮದ್ದಳೆಗಾರರಿಗೆ. ಪ್ರಸಂಗ ನಡೆ, ಪುರಾಣ ಜ್ಞಾನ, ಮುಮ್ಮೇಳದ ಕಲಾವಿದರ ಸಾಮರ್ಥ್ಯದ ಅರಿವು, ಸಮಯಪ್

ಮೇಳಗಳ ಯಾಜಮಾನ್ಯಕ್ಕೆ ನ್ಯಾಯ ಒದಗಿಸಿದ ಸಮರ್ಥ ನಾಯಕತ್ವ - ಕಲ್ಲಾಡಿ ಮನೆತನ

Image
                      ಯಕ್ಷಗಾನ ಮೇಳಗಳನ್ನು ಯಜಮಾನನಾಗಿ ಯಶಸ್ವಿಯಾಗಿ ಮುನ್ನಡೆಸುವುದು ಅಷ್ಟು ಸುಲಭವಲ್ಲ. ಅದೊಂದು ಕಠಿಣ ಕಾರ್ಯವೇ ಸರಿ. ಸಾಹಸವೇ ಹೌದು. ಧೈರ್ಯವೂ ಬೇಕು. ವ್ಯವಹಾರ ಚತುರತೆಯೂ ಬೇಕು. ಯೋಜನೆ ಯೋಚನೆಗಳೆಲ್ಲಾ ಬಲಿಷ್ಠವಾಗಿರಬೇಕು. ಅದರೊಳಗೆ ಪ್ರಾಮಾಣಿಕತೆ, ಪಾರದರ್ಶಕತೆ, ಕಲಾವಿದರ ಬಗೆಗೆ ಕಾಳಜಿ, ಸಂಘಟರಿಗೆ ಹಿಂಸೆಯಾಗದಂತೆ ಎಚ್ಚರ, ಪ್ರೇಕ್ಷಕರತ್ತ ಗಮನ, ಯಶಸ್ವೀ ಪ್ರದರ್ಶನಗಳಿಗೆ ಬೇಕಾಗಿರುವ ವಿಚಾರಗಳು ಹೀಗೆ ಎಲ್ಲವೂ ಅಡಕವಾಗಿರಬೇಕು. ಮನೆಯೊಳಗೇ ಕುಳಿತು ಮೇಳವನ್ನು ನಡೆಸುವುದಕ್ಕಾಗುವುದಿಲ್ಲ. ಹಾಗಾಗಿ ಎಲ್ಲಾ ಮೇಳಗಳ ಸಂಚಾಲಕರಲ್ಲಿ ನಮಗೆ ಗೌರವವಿದೆ. ಅವರೂ ಕಲಾಮಾತೆಯ ಸುಪುತ್ರರೇ ಹೌದು. ಯಾವ ಯಜಮಾನರೂ ಮೇಳವನ್ನು ನಡೆಸುವುದು ಕಷ್ಟವೆಂದು ಹೇಳದಿದ್ದರೂ ಸುಲಭವೆಂದು ಹೇಳಲಾರರು. ಹೇಳುವುದರ ಬದಲಾಗಿ ಕಷ್ಟವನ್ನೂ ನಷ್ಟವನ್ನೂ ಅನುಭವಿಸುತ್ತಾರೆ ಅಷ್ಟೇ. ಹೇಳಲೂ ಬಾರದು. ಅದರಿಂದ ಸತ್ಪರಿಣಾಮ ಉಂಟಾಗುವ ಬದಲು ದುಷ್ಪರಿಣಾಮವೇ ಉಂಟಾಗುತ್ತದೆ.  ನಾಯಕನಾದವನು ಧೈರ್ಯಗುಂದಿದಾಗ ಅದರ ಪರಿಣಾಮವನ್ನು ಎಲ್ಲರಿಗೂ ಊಹಿಸಬಹುದು. ಅವನನ್ನು ಅನುಸರಿಸಿ ವ್ಯವಹರಿಸುವವರ ನಡೆಯೂ ಶಿಥಿಲವಾಗುತ್ತದೆ. ರೂಢಿಯಲ್ಲಿ ಒಂದು ಮಾತಿದೆ. "ನಿನಗೆ ಯಾರಲ್ಲಾದರೂ ಹಗೆ ಸಾಧಿಸಲಿಕ್ಕಿದ್ದರೆ ಯಕ್ಷಗಾನ ಮೇಳವನ್ನು ಕಟ್ಟಲು ಹೇಳು" ಎಷ್ಟು ಅರ್ಥಪೂರ್ಣವಾದ ಮಾತು! ಮೇಳವನ್ನು ಕಟ್ಟಿ ಮುನ್ನಡೆಸಲು ಅಷ್ಟು ಕಷ್ಟವಿದೆಯೆಂದು ಈ ಮಾತಿನ ಅರ್ಥ.  

ಬಹುಮುಖ ಪ್ರತಿಭೆಯ - ಶ್ರೀಧರ್ ಡಿ. ಎಸ್

Image
                                       ಶ್ರೀಧರ್ ಡಿ. ಎಸ್. ಅವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ. ವಿದ್ಯಾರ್ಜನೆ ಉಡುಪಿಯಲ್ಲಿ. ವೃತ್ತಿಜೀವನ ದ. ಕ. ಜಿಲ್ಲೆಯ ಕಿನ್ನಿಗೋಳಿಯಲ್ಲಿ. ಪೊಂಪೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೆಚ್ಚುಗೆಯ ಉಪನ್ಯಾಸಕನಾಗಿ ಸದ್ಯ ಕಿನ್ನಿಗೋಳಿಯಲ್ಲಿ ನಿವೃತ್ತ ಜೀವನವನ್ನು ನಡೆಸುತ್ತಾ ಜತೆಗೆ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಕಲಾವಿದನಾಗಿ, ಉಪನ್ಯಾಸಕನಾಗಿ, ಕಲಾಸಂಘಟಕನಾಗಿ, ಲೇಖಕನಾಗಿ, ಪ್ರಸಂಗಕರ್ತನಾಗಿ ಗುರುತಿಸಿಕೊಂಡು ಕೀರ್ತಿಯನ್ನು ಗಳಿಸಿದರು. ಇವರು ಬರೆದ ಪ್ರಸಂಗಗಳು ‘ಯಕ್ಷಗಾನ ಪ್ರಸಂಗ ಮಾಲಿಕಾ’ ಸಂಪುಟವಾಗಿ ಪ್ರಕಟಗೊಂಡಿದ್ದು, ಈ ಕೃತಿಗೆ 2011ನೇ ಸಾಲಿನ ಯಕ್ಷಗಾನ ಬಯಲಾಟ ಅಕಾಡಮಿಯಿಂದ ಶ್ರೇಷ್ಠ ಪುಸ್ತಕ ಪ್ರಶಸ್ತಿಯೂ ಬಂದಿತ್ತು. 2016ನೇ ಇಸವಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದರು. ಯಕ್ಷಗಾನ ಮತ್ತು ಇತರ ಪತ್ರಿಕೆಗಳಿಗೆ ಇವರು ಬರೆದ ಲೇಖನಗಳು ಸುಮಾರು 475ಕ್ಕೂ ಮಿಕ್ಕಿ. ಯಕ್ಷಗಾನ ಕವಿಗಳ ಬಗ್ಗೆ ಇವರು ಬರೆದ ಲೇಖನಗಳು 25. ನಾಟಕಗಳ ಬಗ್ಗೆ ಅಲ್ಲದೆ ಉದಯವಾಣಿ, ಹೊಸದಿಗಂತ, ತುಷಾರ ಮೊದಲಾದ ಪತ್ರಿಕೆಗಳಲ್ಲಿ ಇವರು ಬರೆದ ಲೇಖನಗಳು ಪ್ರಕಟವಾಗಿದೆ. ಅಂಕಣಗಳೆಲ್ಲಾ ಬರಹಗಾರರಾಗಿ ಕಾಣಿಸಿಕೊಂಡಿರುತ್ತಾರೆ. Facebook ನಲ್ಲಿ  ಆಟದಲ್ಲಿ ಅವಾಂತರ, ಹೀಗೂ ಆಗುತ್ತೆ, ತಾಳಮದ್ದಳೆಯಲ್

ಹಾಸ್ಯಪಟು ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ

Image
                               ನೀವೇಕೆ ಇಷ್ಟು ಸಣ್ಣ ಸಣ್ಣ ವೇಷಗಳನ್ನು ಮಾಡುತ್ತೀರಿ? ದೊಡ್ಡ ದೊಡ್ಡ ವೇಷಗಳನ್ನು ಮಾಡಬೇಕು. ಹೀಗೆಂದು ಹಾಸ್ಯಗಾರರಲ್ಲಿ ಕೆಲವರು ಕೇಳುವುದನ್ನು ನೋಡಿದ್ದೇನೆ. ನನ್ನಲ್ಲೂ ಕೇಳಿದವರಿದ್ದಾರೆ. ಏನೆಂದು ಉತ್ತರಿಸಬೇಕು? ಕಿರೀಟ, ವೇಷಭೂಷಣಗಳನ್ನು ಧರಿಸಿ ಬಂದ ವೇಷವೇ ದೊಡ್ಡ ವೇಷವೆಂದು ಅವರ ಲೆಕ್ಕಾಚಾರ. ಯಕ್ಷಗಾನದಲ್ಲಿ ಹಾಸ್ಯಗಾರನ ಸ್ಥಾನವೇನೆಂದು ತಿಳಿದವರು ಈ ರೀತಿ ಪ್ರಶ್ನಿಸಲಾರರು. ವಿಧೂಷಕನ ಹೊಣೆಗಾರಿಕೆಯ ವ್ಯಾಪ್ತಿ, ಸ್ಥಾನದ ಮಹತ್ವವನ್ನು ಅವರಿಗೆ ತಿಳಿಯಪಡಿಸಿದರೆ ‘ಹೋ, ನನಗೆ ಗೊತ್ತಿರಲಿಲ್ಲ, ಈಗ ತಿಳಿಯಿತು' ಎನ್ನುತ್ತಾರೆ. ಕಲಾವಿದರಂತೆ ಪ್ರೇಕ್ಷಕರಿಗೂ ಕಲಿಯುವುದಕ್ಕೆ ತುಂಬಾ ಇದೆ. ಕಲೆಯನ್ನು ಉಳಿಸಿ ಬೆಳೆಸುವ ಹೊಣೆ ಕಲಾವಿದನಿಗೆ ಮಾತ್ರವಲ್ಲ ಪ್ರೇಕ್ಷಕರಿಗೂ ಇದೆ. ಪ್ರಬುದ್ಧ ಪ್ರೇಕ್ಷಕರೇ ಯಕ್ಷಗಾನವನ್ನು ಆಸ್ವಾದಿಸಬಲ್ಲರು, ನಿರ್ಣಯಿಸಬಲ್ಲರು ಎಂದು ಹೇಳಿ ಮೇಳದ ಪ್ರತಿಯೊಬ್ಬ ಕಲಾವಿದನ ಸ್ಥಾನ, ಕರ್ತವ್ಯಗಳನ್ನು ಕೇಳಿ ತಿಳಿದವರೂ ಇದ್ದಾರೆ. ಅವರು ಪ್ರಶ್ನಿಸಿದ್ದು ಒಳಿತೇ ಆಯಿತು. ವಿಚಾರ ಸಂಗ್ರಹಕ್ಕೆ ಅದು ಒಂದು ಮಾಧ್ಯಮ. "ಯಾವಾತನು ಸದಾ ಪ್ರಶ್ನಿಸುತ್ತಾನೋ ಅವನ ಬುದ್ಧಿಯು ಸೂರ್ಯನ ಕಿರಣಗಳಿಂದ ಪ್ರಚೋದಿಸಲ್ಪಟ್ಟು ಕಮಲವು ಅರಳುವಂತೆ ವಿಕಸನ ಹೊಂದುತ್ತದೆ. ಪ್ರಶ್ನಿಸುವ ಗುಣ ಪ್ರತಿಯೊಬ್ಬರಲ್ಲೂ ಬೇಕು. ಯಕ್ಷಗಾನದಲ್ಲಿ ಅನೇಕ ಹಾಸ್ಯಗಾರರು ತಮ್ಮ ವಿಶಿಷ್ಟ ಪ್ರತಿಭೆಯಿಂದ ರಂಗದಲ್ಲಿ ಮ

ವೇಷಧಾರಿ, ಪ್ರಸಾಧನ ತಜ್ಞ - ವೆಂಕಟೇಶ ಮಯ್ಯ, ಶ್ರೀ ಗುರು ನೃಸಿಂಹ ಕಲಾಮಂಡಳಿ, ಆರ್ಯಾಪು ಪುತ್ತೂರು

Image
               ಯಕ್ಷಗಾನವು ನಮ್ಮ ಹೆಮ್ಮೆಯ ಕಲೆ. ಮೊದಲೆಲ್ಲಾ ಸೀಮಿತ ಸ್ಥಳಗಳಲ್ಲಿ ಮಾತ್ರ ನಡೆಯುತ್ತಿತ್ತು. ಪ್ರದರ್ಶನಗಳ ಸಂಖ್ಯೆ ತೀರಾ ವಿರಳ. ಈಗ ಹಾಗಿಲ್ಲ. ಈ ಶ್ರೇಷ್ಠ ಕಲೆಯು ನಾಲ್ಕು ಗೋಡೆಗಳನ್ನು ಮೀರಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಹೊರ ರಾಜ್ಯಗಳಲ್ಲೂ ವಿದೇಶಗಳಲ್ಲೂ ಯಕ್ಷಗಾನ ಪ್ರದರ್ಶನಗಳು ನಡೆಯುತ್ತವೆ. ಕೂಟಕ್ಕೆ (ತಾಳಮದ್ದಳೆ) ವೇಷಭೂಷಣಗಳು ಬೇಡ. ಆಟಕ್ಕೆ ಬೇಕೇ ಬೇಕು. ಯಕ್ಷಗಾನ ಕಲೆಯ ಬಗ್ಗೆ ಜ್ಞಾನವನ್ನು ಹೊಂದಿದವರು ವೇಷಭೂಷಣ, ಮೇಕಪ್ ನೋಡಿದಾಗಲೇ ಇದು ಇಂತಹ ವೇಷ ಎಂದು ತೀರ್ಮಾನಿಸುತ್ತಾರೆ. ಪ್ರತಿಯೊಂದು ವೇಷಕ್ಕೂ ಬಣ್ಣಗಾರಿಕೆ, ವೇಷಭೂಷಣಗಳು, ಕಿರೀಟ ಹೀಗೆಯೇ ಇರಬೇಕು ಎಂಬ ನಿಯಮವಿದೆ. ಪದ್ಯಗಳ ಲಯ, ಕುಣಿತದ ಕ್ರಮವೂ ಹೀಗೆಯೇ ಇರಬೇಕೆಂಬ ನಿಯಮವೂ ಇದೆ. ಹೀಗೆ ಮೊಗೆದಷ್ಟೂ ಯಕ್ಷಗಾನದಲ್ಲಿ ವಿಚಾರಗಳು ಸಿಗುತ್ತವೆ. ಆದರೆ ನಮ್ಮ ಬೊಗಸೆ ಸಣ್ಣದು. ತುಂಬಿಸಲಿರುವ ಪಾತ್ರೆಯೂ ಚಿಕ್ಕದು. ಯಕ್ಷಗಾನವೆಂಬುದು ಅಕ್ಷಯ ಪಾತ್ರೆಯೇ ಹೌದು. ಒಂದು ವೇಷ ರಂಗವನ್ನು ಪ್ರವೇಶಿಸಿದ ಕೂಡಲೇ ಪ್ರೇಕ್ಷಕರು ಅದನ್ನು ಸ್ವೀಕರಿಸುವಂತಿರಬೇಕು. First sight is the best sight ಎಂಬಂತೆ ಮೊದಲ ನೋಟದಲ್ಲೇ ಪ್ರೇಕ್ಷಕನ ಮನಸ್ಸು ಆ ವೇಷವನ್ನು ಒಪ್ಪಿಕೊಳ್ಳಬೇಕು. ಡ್ರೆಸ್ ಅಂದವಾಗಿದ್ದರೆ ಸಾಕೆ? ಅದನ್ನು ಧರಿಸುವ ಕಲೆಯೂ ಕಲಾವಿದನಿಗೆ ಕರಗತವಾಗಿರಬೇಕು. ಈ ಎಲ್ಲಾ ವಿಚಾರಗಳಲ್ಲಿ ಆರ್ಯಾಪು ಖಂಡಿಗೆ ಮನೆಯ ಶ್ರೀ ಕೆ. ವೆಂಕಟೇಶ ಮಯ್ಯರು ನಿಷ್ಣಾತರು