Posts

Showing posts from February, 2020

ಸವ್ಯಸಾಚಿ ಕಲಾವಿದ - ಪ್ರಜ್ವಲ್ ಕುಮಾರ್ ಗುರುವಾಯನಕೆರೆ

Image
                             ಯಕ್ಷಗಾನದಲ್ಲಿ ಸಂಪ್ರದಾಯದಂತೆ ಪೂರ್ವರಂಗದಿಂದ ತೊಡಗಿ ಹಂತ ಹಂತವಾಗಿ ಬೆಳೆಯುತ್ತಾ ಕಲಾಸೇವೆಯನ್ನು ಮಾಡಿದವನು ಯಾವ ಪಾತ್ರವನ್ನು ನೀಡಿದರೂ ನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಪೂರ್ವ ರಂಗದಲ್ಲಿ ಅನೇಕ ವರ್ಷಗಳ ಕಾಲ ತೊಡಗಿಸಿಕೊಂಡವನಿಗೆ ತನ್ನಿಂದ ತಾನೇ ಆ ಕಲೆಯು ಸಿದ್ಧಿಸಲೇಬೇಕು. ಎಲ್ಲಾ ಪಾತ್ರಗಳನ್ನು ನಿರ್ವಹಿಸುವ ಸಾಮರ್ಥ್ಯವಿದ್ದರೂ ಕಲಾವಿದರು ಆ ಸಾಹಸವನ್ನು ತೋರುವಲ್ಲಿ ಮನಮಾಡಲಾರರು. ಯಾಕೆಂದರೆ ತನ್ನ ವೃತ್ತಿಯಲ್ಲಿ ಸ್ಥಾನದ ಸ್ಥಿರತೆಯನ್ನು ಕಾಪಿಟ್ಟುಕೊಳ್ಳುವಲ್ಲಿ ತೊಡಕುಂಟಾದೀತೆಂಬ ಭಯವು ಕಲಾವಿದರಿಗೆ ಕಾಡುವುದು ಸಹಜ. ಆದರೂ ಇಂತಹ ಕಲಾವಿದರು ಯಕ್ಷಗಾನಕ್ಕೆ ಅನಿವಾರ್ಯ. ಕೆಲವೊಮ್ಮೆ ಆಪದ್ಭಾಂಧವರೆನಿಸಿಕೊಳ್ಳುತ್ತಾರೆ. ವೇಷ ಹಂಚುವಿಕೆ, ಪ್ರಸಂಗವನ್ನು ಮುನ್ನಡೆಸುವಲ್ಲಿ ಭಾಗವತರಿಗಿರುವ ಒತ್ತಡವನ್ನು ಇಂತಹ ಕಲಾವಿದರು ಹಗುರಗೊಳಿಸುತ್ತಾರೆ. ತನಗೆ ಇಂತಹ ಪಾತ್ರವೇ ಆಗಬೇಕು. ಬೇರೆ ವೇಷಗಳನ್ನು ಮಾಡಲಾರೆ ಎಂಬ ಹಠಕ್ಕೆ ಬೀಳದೆ, ತನಗೆ ಕೊಟ್ಟ ಯಾವ ಪಾತ್ರವನ್ನಾದರೂ ಮಾಡುವ ಪ್ರತಿಭಾವಂತ ಆಲ್‍ರೌಂಡರ್ ಕಲಾವಿದರುಗಳನ್ನು ಕಲಾಭಿಮಾನಿಗಳು ಗುರುತಿಸಿಯೇ ಗುರುತಿಸುತ್ತಾರೆ. ಅಂತಹ ಕಲಾವಿದರಲ್ಲೊಬ್ಬರು ಪ್ರಜ್ವಲ್ ಕುಮಾರ್ ಗುರುವಾಯನಕೆರೆ. ಪ್ರಸ್ತುತ ಹನುಮಗಿರಿ ಮೇಳದ ಕಲಾವಿದ. ಪ್ರಜ್ವಲ್ ಕುಮಾರ್ ಗುರುವಾಯನಕೆರೆ                          ಪ್ರಜ್ವಲ್ ಕುಮಾರ್ ಅವರು ಬೆಳ್ತಂಗಡಿ ತಾ

ಬಹು ಬೇಡಿಕೆಯ ಪುಂಡುವೇಷಧಾರಿ, ಸಿಡಿಲಮರಿ ಖ್ಯಾತಿಯ ಶ್ರೀ ದಿವಾಕರ ರೈ ಸಂಪಾಜೆ

Image
                  ‘ಯಕ್ಷಗಾನದಲ್ಲಿ ಪುಂಡುವೇಷಗಳು’ ಎಂಬ ಮಾತು ಬಂದಾಗ, ಅಭಿಮನ್ಯು, ಬಭ್ರುವಾಹನ, ಭಾರ್ಗವ, ಅಶ್ವತ್ಥಾಮ, ಲಕ್ಷ್ಮಣ, ಚಂಡ-ಮುಂಡರು, ಷಣ್ಮುಖ ಮೊದಲಾದ ಪಾತ್ರಗಳು ನಮ್ಮ ಕಣ್ಣಮುಂದೆ ಕಾಣಿಸಿಕೊಳ್ಳುತ್ತವೆ. ಪೂರ್ವ ರಂಗದಲ್ಲಿ ವೇಷಗಳನ್ನು ಮಾಡಿ, ನಾಟ್ಯದಲ್ಲಿ ಲಯಸಿದ್ಧಿಯನ್ನು ಪಡೆದು, ಬಳಿಕ ಪ್ರಹ್ಲಾದ, ಲೀಲೆಯ ಕೃಷ್ಣ ಮೊದಲಾದ ಬಾಲಪುಂಡುವೇಷಗಳನ್ನು ಮಾಡಿ ಮಾತುಗಾರಿಕೆಯಲ್ಲೂ ಬೆಳೆದರೆ ಮತ್ತೆ ಇಂತಹ ಪಾತ್ರಗಳನ್ನು ಮಾಡುವುದಕ್ಕೆ ಅನುಕೂಲವಾಗುತ್ತದೆ. ಕಲಾವಿದರು ಹಂತ ಹಂತವಾಗಿ ಬೆಳೆಯುತ್ತಾ ಸಾಗಿದರೆ ಅದರ ಸೊಗಸೇ ಬೇರೆ. ಪಾತ್ರಗಳನ್ನು ನಿರ್ವಹಿಸುವಾಗ ಎಲ್ಲೂ ಸೋಲದೆ ಪ್ರೌಢತೆಯು ಪ್ರಕಟವಾಗುತ್ತದೆ. ಕುಡಾಣ ಗೋಪಾಲಕೃಷ್ಣ ಭಟ್ (ಗೋಪಿ ಅಣ್ಣ) ಕ್ರಿಶ್ಚನ್ ಬಾಬು ಮೊದಲಾದವರು ಇಂದು ನಮ್ಮ ಜತೆ ಇಲ್ಲವಾದರೂ ಪುಂಡುವೇಷಧಾರಿಗಳಿಗೆ ಅವರು ಆದರ್ಶರು. ಪ್ರಸ್ತುತ ಹಿರಿಯ ಪುಂಡುವೇಷಧಾರಿ ಗಳಾದ ಪುತ್ತೂರು ಶ್ರೀಧರ ಭಂಡಾರಿ, ಗುಂಡಿಮಜಲು ಗೋಪಾಲ ಭಟ್, ವಸಂತ ಗೌಡ ಕಾಯರ್ತಡ್ಕ, ತಾರಾನಾಥ ಬಲ್ಯಾಯ ವರ್ಕಾಡಿ ಮೊದಲಾದ ಅನೇಕರು ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಕಲಿಕಾಸಕ್ತರು ಅವರ ಸಲಹೆ, ಮಾರ್ಗದರ್ಶನಗಳನ್ನು ಪಡೆಯಬಹುದಾಗಿದೆ. ಪ್ರಸ್ತುತ ಕಿರೀಟ ವೇಷಗಳನ್ನು ನಿರ್ವಹಿಸುವ ಹೆಚ್ಚಿನ ಕಲಾವಿದರುಗಳು ಪುಂಡುವೇಷಗಳನ್ನು ನಿರ್ವಹಿಸಿಯೇ ಬಂದವರು. ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ಕಲಾವಿದ ಕೆ. ಗೋವಿಂದ ಭಟ್ಟರು ತರುಣನಾಗಿದ್ದಾಗ ಕುರುಕ್ಷ