Posts

Showing posts from November, 2019

‘‘ವೇಷಧಾರಿಯೊಬ್ಬ ಭಾಗವತನಾದ ಅಚ್ಚರಿಯ ಬಗೆ’’ ಯುವ ಭಾಗವತ - ಶ್ರೀ ರವಿಚಂದ್ರ ಕನ್ನಡಿಕಟ್ಟೆ

Image
                  ಇತ್ತೀಚೆಗೆ ಯಕ್ಷಗಾನ ಕಲೆಗೆ ಸಂಬಂಧಿಸಿದ ಆಮಂತ್ರಣ ಪತ್ರಿಕೆಯನ್ನು ನೋಡಿದ್ದೆ. ‘ಯಕ್ಷ-ಗಾನ-ನಾಟ್ಯ ವೈಭವ’ ಎಂದು ಶೀರ್ಷಿಕೆಯಡಿ ಮುದ್ರಿತವಾಗಿತ್ತು. ನನ್ನನ್ನು ಯೋಚಿಸುವಂತೆ ಮಾಡಿತು ಈ ಆಮಂತ್ರಣ ಪತ್ರಿಕೆ. ಕೆಲವೊಂದು ಬಾರಿ ಇಂತಹ ಘಟನೆಗಳು ನಡೆದಾಗ ನಮಗೆ ಅನುಕೂಲವೇ ಆಗುತ್ತದೆ. ನಾವು ಹುಡುಕುವುದಕ್ಕೆ ಆರಂಭಿಸುತ್ತೇವೆ. ಹುಡುಕುವಿಕೆ ಎಂಬ ಕ್ರಿಯೆಯಿಂದ ಹೊಸ ವಿಚಾರಗಳನ್ನೂ ತಿಳಿಯುತ್ತೇವೆ. ನಮ್ಮ ಶ್ರೇಷ್ಠ ಕಲೆಗೆ ‘ಯಕ್ಷಗಾನ’ ಎಂದು ಹೆಸರು. ಹಾಗೆಂದು ಯಕ್ಷ ಮತ್ತು ಗಾನ ಎಂಬ ಶಬ್ದಗಳೂ ಇವೆ. ಯಕ್ಷ ಎಂದರೆ ದೇವತೆಗಳಲ್ಲಿ ಒಂದು ವರ್ಗ. ಸುರರು, ಕಿನ್ನರರು, ಕಿಂಪುರುಷರು, ಯಕ್ಷರು, ಗಂಧರ್ವರು... ಹೀಗೆ ದೇವತೆಗಳಲ್ಲಿ ಅನೇಕ ಗುಂಪುಗಳು. ವೃಂದ ಸಮೂಹ ನ್ಯಾಯೇಣ ಬದುಕುವ ಕಾರಣದಿಂದಲೇ ದೇವತೆ ಗಳು ‘ವೃಂದಾರಕರು’ ಎಂದು ಕರೆಸಿಕೊಂಡರು. ಗಾನ ಎಂದರೆ ಹಾಡು ಎಂಬುದು ತಿಳಿದಿದೆ. ಆದರೆ ಯಕ್ಷಗಾನ ಎಂದರೇನು? ಆ ಹೆಸರು ಯಾಕೆ ಬಂತು? ಯಕ್ಷಗಾನ ಕಲೆಯು ಯಾವಾಗ ಪ್ರಾರಂಭವಾಯಿತು? ಹೀಗೆ ಪ್ರಶ್ನೆಗಳು ಹುಟ್ಟಿ ಕೊಂಡವು. ಯಕ್ಷಗಾನ ಎಂಬ ಹೆಸರು ಬರಲು ಇದು ಕಾರಣವಿರಲೂಬಹುದು ಎಂದು ಹೇಳಬಹುದು. ಆದರೆ ನಿರ್ಣಯವಿಲ್ಲ. 16ನೇ ಶತಮಾನದ ಕವಿಗಳು ಬರೆದ ಪ್ರಸಂಗವನ್ನು ನಾವು ಆಡುತ್ತೇವೆ. ಹಾಗಾದರೆ ಅದಕ್ಕಿಂತಲೂ ಮೊದಲು ಯಕ್ಷಗಾನ ಇತ್ತೆನ್ನಬಹುದು. ಆದರೆ ಯಾವಾಗ? ಹೇಗಿತ್ತು? ಹೇಳಲು ಶಕ್ಯರಲ್ಲ. ಒಂದಂತೂ ಸತ್ಯ. ಈ ಕಲೆ ಸಾಗರಸದೃಶವಾದುದು. ನಮ್ಮ ಬು

ಬಡಗಿನ ಬಾಲ ಪ್ರತಿಭೆ - ಮಾ| ವರುಣ್ ಟಿ. ಹೆಗಡೆ

Image
                              ಭಾರತೀಯ ಕಲೆಗಳೆಲ್ಲಾ ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ, ಪ್ರಸಾರ ಮಾಡುತ್ತವೆ. ಶ್ರೇಷ್ಠ ಸಂದೇಶಗಳನ್ನೂ ವಾಹಿಸುತ್ತವೆ. ಧರ್ಮಪ್ರಸಾರವನ್ನು ಮಾಡುವುದಕ್ಕೆ ಮಾಧ್ಯಮವಾಗಿವೆ. ಆದುದರಿಂದಲೇ ಅವುಗಳೆಲ್ಲಾ ನಮ್ಮ ಹೆಮ್ಮೆಯ ಸಂಕೇತ ಎಂದು ಅಭಿಮಾನದಿಂದ ಹೇಳುತ್ತೇವೆ. ಯಕ್ಷಗಾನವಂತೂ ಗಂಡುಕಲೆಯೆಂದೇ ಪ್ರಸಿದ್ಧವಾಗಿದೆ. ವೃತ್ತಿ ಕಲಾವಿದರು, ಹವ್ಯಾಸೀ ಕಲಾವಿದರ ಜೊತೆಯಲ್ಲಿ ಶಾಲಾ ವಿದ್ಯಾರ್ಥಿಗಳೂ ರಂಗವೇರಿ ಮಿಂಚುತ್ತಿದ್ದಾರೆ. ಈ ಮೇರುಕಲೆಯಲ್ಲಿ ತೆಂಕು, ಬಡಗು ಅಲ್ಲದೆ ಬಡಾ ಬಡಗು, ನಡುತಿಟ್ಟು ಎಂಬ ಪ್ರಭೇದಗಳನ್ನು ಗುರುತಿಸುವುದೂ ಇದೆ. ಇರಲಿ. ಅದು ರಂಗಕ್ಕೆ, ಸ್ವರೂಪಕ್ಕೆ ಸಂಬಂಧಿಸಿದ ವಿಚಾರ. ಆದರೆ ಪ್ರದರ್ಶನದ ಸೌಂದರ್ಯವನ್ನು ಸವಿಯುವಲ್ಲಿ ಕಲಾಭಿಮಾನಿಗಳಿಗೆ ಆ ವಿಚಾರ ತೊಡಕಾಗುವುದಿಲ್ಲ. ನಮಗೆ ಬೇಕಾದುದು ಸಮಗ್ರವಾದ ಯಕ್ಷಗಾನ. ಮನಕೊಪ್ಪುವ ಅದರ ನಿಜ ಸೌಂದರ್ಯ. ಇಂದು ಅನೇಕ ಶಾಲಾ ವಿದ್ಯಾರ್ಥಿಗಳು ಕಲಿತು ಹಿಮ್ಮೇಳ, ಮುಮ್ಮೇಳದ ಕಲಾವಿದರಾಗಿ ರಂಗವೇರುತ್ತಿದ್ದಾರೆ. ಇದು ಸಂತೋಷ ಪಡಬೇಕಾದ ವಿಚಾರ. ಅವರನ್ನು ಪ್ರೋತ್ಸಾಹಿಸಬೇಕಾದುದು ನಮಗೆ ಕರ್ತವ್ಯ. ಕಲಾಭಿಮಾನಿಗಳು ನೀಡುವ ಪ್ರೋತ್ಸಾಹ ಹಾರೈಕೆಗಳು ಅವರನ್ನು ಭವಿಷ್ಯದ ಕಲಾವಿದರನ್ನಾಗಿ ರೂಪಿಸಲಿ. ಆಗ ಯಕ್ಷಗಾನವು ಶ್ರೀಮಂತವಾಗುತ್ತದೆ. ನಮಗೂ ಆಗಬೇಕಾದುದು ಇದೇ  ತಾನೇ? ಇಂದು ಕಲಾಸೇವೆಯನ್ನು ಮಾಡುತ್ತಿರುವ ಅನೇಕ ಬಾಲ ಕಲಾವಿದರಲ್ಲಿ ಮಾ| ವ

ತೆಂಕುತಿಟ್ಟಿನ ಪ್ರಸಿದ್ಧ ಪುಂಡುವೇಷಧಾರಿ ಶ್ರೀ ಚಂದ್ರಶೇಖರ ಧರ್ಮಸ್ಥಳ

Image
                ತೆಂಕುತಿಟ್ಟು ಯಕ್ಷಗಾನದ ಮುಮ್ಮೇಳದಲ್ಲಿ ಹಾಸ್ಯ, ಬಣ್ಣದ ವೇಷ, ಎದುರು ವೇಷ, ಪೀಠಿಕೆ ವೇಷ, ಪುಂಡುವೇಷ, ಸ್ತ್ರೀವೇಷ- ಹೀಗೆ ಹಲವು ವಿಭಾಗಗಳು. ಪೂರ್ವರಂಗದಲ್ಲಿ ಬಾಲಗೋಪಾಲ ವೇಷದಿಂದ ತೊಡಗಿ ಎಲ್ಲಾ ವೇಷಗಳನ್ನು ಮಾಡುತ್ತಾ ಹಂತ ಹಂತವಾಗಿ ಬೆಳೆದೇ ಈ ಸ್ಥಾನಗಳನ್ನು ಪಡೆಯುವುದು ಮೊದಲಿನಿಂದ ನಡೆದು ಬಂದ ರೀತಿಯೇ ಆಗಿದೆ. ಪೂರ್ವರಂಗದಲ್ಲಿ ಕುಣಿಯುತ್ತಾ ಸಭಾಕಂಪನವೂ ದೂರವಾಗಿ, ರಂಗನಡೆ, ಲಯಜ್ಞಾನಗಳನ್ನೂ ಹೊಂದಿ, ಪ್ರದರ್ಶನಗಳನ್ನು ಗಮನವಿಟ್ಟು ನೋಡಿದ ದೆಸೆಯಿಂದ ಪ್ರಸಂಗಜ್ಞಾನವೂ ಸಿದ್ಧಿಸಿ ಆತ ಪಕ್ವನಾಗಿರುತ್ತಾನೆ. ಆದಕಾರಣ ಪ್ರಸಂಗಗಳಲ್ಲಿ ಬರುವ ವೇಷಗಳನ್ನು ದಾಟಿ ಬಂದ ಕಲಾವಿದರಿಗೆ ನಂತರ ಆಯ್ಕೆಗೆ ಅವಕಾಶಗಳಿವೆ. ಅಭಿರುಚಿಗೆ, ಮನೋಧರ್ಮಕ್ಕೆ ತಕ್ಕಂತೆ, ತಾನು ಯಾವ ವಿಭಾಗದಲ್ಲಿ ಮುಂದುವರಿದರೆ ಕಾಣಿಸಿಕೊಳ್ಳಬಹುದು ಎಂದು ಯೋಚಿಸಿಯೇ ಮುಂದುವರಿಯಬಹುದು. ತಾನೊಬ್ಬ ಪುಂಡುವೇಷಧಾರಿಯಾಗಬೇಕು ಎಂಬ ಆಸೆಯಿದ್ದರೆ ಆತ ದೇವೇಂದ್ರನ ಬಲ, ಪ್ರಹ್ಲಾದ, ಧ್ರುವ, ಬಾಲಲೀಲೆಯ ಕೃಷ್ಣ, ಷಣ್ಮುಖ ಇತ್ಯಾದಿ ಪಾತ್ರಗಳನ್ನು ಮಾಡಿ ಬೆಳೆದು ಬಭ್ರುವಾಹನ, ಅಭಿಮನ್ಯು, ಪರಶುರಾಮ, ಲಕ್ಷ್ಮಣ ಮೊದಲಾದ ಪಾತ್ರಗಳಿಗೆ ತೇರ್ಗಡೆಯಾಗುತ್ತಾನೆ. ಉತ್ತಮ ನಾಟ್ಯ, ಗಿರಕಿ ಹೊಡೆಯುವ ಕಲೆ, ಹಿತಮಿತವಾದ ಮಾತಿನ ಜತೆ, ರೂಪ ಮತ್ತು ವೇಷಕ್ಕೆ ಬೇಕಾದಂತೆ ದೇಹವೂ (ಫಿಗರ್) ಇದ್ದರೆ ಈ ಪಾತ್ರಗಳಲ್ಲಿ ಕಲಾವಿದ ರಂಜಿಸುತ್ತಾನೆ ಎಂಬುದು ನಿಸ್ಸಂಶಯ. ಈ ಸಂದರ್ಭಗಳಲ್ಲಿ ಮಾತುಗಾ

ಬಡಗುತಿಟ್ಟು ಯಕ್ಷಗಾನದ ಅನಭಿಷಿಕ್ತ ದೊರೆಯಾಗಿ ಮಿಂಚಿದ ಅಭಿನಯ ಚತುರ ಚಿಟ್ಟಾಣಿ ರಾಮಚಂದ್ರ ಹೆಗಡೆ - ನೆನಪಿನಂಗಳದಲ್ಲಿ

Image
               ಬಡಗುತಿಟ್ಟು ಯಕ್ಷಗಾನದ ಮೇರು ಕಲಾವಿದ, ಅಭಿನಯ ಚತುರರಾಗಿ ಮೆರೆದು ಅಸ್ತಂಗತರಾದ ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆಯವರ ಬಗೆಗೆ ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ. ತಿಳಿದವರು ಬರೆದರೆ ಅದು ಒಂದು ದೊಡ್ಡ ಕೃತಿಯೇ ಆಗಬಹುದು. ಅವರ ಬಗೆಗೆ ಅನಿಸಿಕೆಗಳನ್ನು ಅಕ್ಷರರೂಪಕ್ಕಿಳಿಸುವ ಅರ್ಹತೆಯನ್ನು ಹೊಂದಿರುವೆನೆಂಬ ಅಹಂಭಾವ ಖಂಡಿತಾ ಇಲ್ಲ. ಆದರೂ ಬರೆಯುವ ಭಾಗ್ಯ, ಅವಕಾಶಗಳು ಸಿಕ್ಕಿರುವುದು ಅವಕಾಶವೆಂದು ಭಾವಿಸುತ್ತೇನೆ. ನಮಗದು ಕರ್ತವ್ಯವೂ ಹೌದು. ನಾನು ಶಾಲಾ ವಿದ್ಯಾರ್ಥಿಯಾಗಿರುವಲ್ಲಿಂದ ತೊಡಗಿ, ಚಿಟ್ಟಾಣಿಯವರು ಮರಣಿಸುವ ವರೇಗೂ ಅವರ ವೇಷಗಳನ್ನು ನೋಡಿ ಸಂತೋಷಪಟ್ಟಿದ್ದೇನೆ. ಕೆಲವೊಂದು ಬಾರಿ ಅವರನ್ನು ಮಾತನಾಡಿಸಿದ್ದೂ ಇದೆ. ನಾನು ಚಲನಚಿತ್ರಗಳ ಆಸಕ್ತನಲ್ಲ. ಅಂದರೆ ಸಿನೆಮಾಗಳನ್ನು ನೋಡುವುದಿಲ್ಲ ಎಂದರ್ಥವಲ್ಲ. ಯಕ್ಷಗಾನದ ಉಭಯತಿಟ್ಟುಗಳ ಶ್ರೇಷ್ಠ ಕಲಾವಿದರು ನನ್ನ ಪಾಲಿಗೆ ಹೀರೋಗಳಾಗಿದ್ದರು. ಬಣ್ಣದ ಮನೆಗೆ ಹೋಗಿ ಅವರುಗಳನ್ನು ಮಾತನಾಡಿಸುವ ರೂಢಿಯೂ ಇತ್ತು, ಈಗಲೂ ಇದೆ. ಬೆರಳೆಣಿಕೆಯಷ್ಟು ಬಾರಿ ಚಿಟ್ಟಾಣಿಯವರ ಬಳಿ ಹೋಗಿ ಮಾತನಾಡುವ ಅವಕಾಶವೂ ಸಿಕ್ಕಿತ್ತು. ಶ್ರೀಯುತರ ಬಗ್ಗೆ ಕಲಾಭಿಮಾನಿಗಳಿಗೆಲ್ಲರಿಗೂ ತಿಳಿದಿದೆ. ಯಕ್ಷಗಾನ ಕ್ಷೇತ್ರದ ಬಡಗುತಿಟ್ಟಿನಲ್ಲಿ ಐದು ದಶಕಗಳ ಕಾಲ ‘ನಟಸಾರ್ವಭೌಮ’ ಎಂದೇ ಖ್ಯಾತರಾಗಿ ಮೆರೆದರು. ಭಸ್ಮಾಸುರ, ಕೌರವ, ಮಾಗಧ, ಕೀಚಕ, ಕಲಾಧರ (ಕವಿರತ್ನ ಕಾಳಿದಾಸ ಪ್ರಸಂಗ), ದುಷ್ಟಬುದ್ಧಿ, ರುದ್ರಕ

ಉದಯೋನ್ಮುಖ ಬಣ್ಣದ ವೇಷಧಾರಿ, ಸವ್ಯಸಾಚಿ ಹರಿನಾರಾಯಣ ಭಟ್ ಎಡನೀರು

Image
                        ಯಕ್ಷಗಾನದಲ್ಲಿ ಬಣ್ಣದ ವೇಷಗಳು ತಮ್ಮ ಅಟ್ಟಹಾಸ, ಮುಖವರ್ಣಿಕೆ, ಕುಣಿತ, ತೆರೆಕುಣಿತ, ನಡೆ ಇವುಗಳಿಂದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿವೆ. ಒಡ್ಡೋಲಗ ವೈಭವವನ್ನು ನೋಡುವುದೆಂದರೆ ಪ್ರೇಕ್ಷಕರ ಕಣ್ಣುಗಳಿಗೆ, ಕಿವಿಗಳಿಗೆ ಅದೊಂದು ಹಬ್ಬವೇ ಹೌದು. ಪ್ರಸಂಗದ ಕೊನೆಯಲ್ಲಿ ಯಾ ಬೆಳಗಿನ ಹೊತ್ತು ಬಣ್ಣದ ವೇಷಗಳು ರಂಗವೇರಿದರೆ ನೋಟಕರ ನಿದ್ದೆಯನ್ನು ಬಡಿದೆಬ್ಬಿಸಿ ಅವರನ್ನು ರೋಮಾಂಚನಗೊಳಿಸುತ್ತವೆ. ಆದರೂ, ಈಗೀಗ ಈ ವಿಭಾಗವು ಅವಜ್ಞೆಗೊಳಗಾಗುತ್ತಿದೆಯೇ? ಎಂಬ ಸಂಶಯವು ಕಲಾಭಿಮಾನಿಗಳಿಗೆ ಬಾರದಿರದು. ಅದಕ್ಕೆ ಹಲವು ಕಾರಣಗಳೂ ಇರಬಹುದು. ಹಾಗಾಗಬಾರದು. ಬಣ್ಣದ ವೇಷಗಳ ನಿಜಸೌಂದರ್ಯವನ್ನು ಸದಾ ಆಸ್ವಾದಿಸುವ ಅವಕಾಶಗಳು ಕಲಾಭಿಮಾನಿಗಳಿಗೆ ಸಿಗಲೇಬೇಕು. ಕಲಾವಿದರೂ, ಪ್ರೇಕ್ಷಕರೂ ಯಕ್ಷಗಾನಕ್ಕೆ ಬಣ್ಣದ ವೇಷಗಳ ಅನಿವಾರ್ಯತೆ ಮತ್ತು ಮಹತ್ತ್ವಗಳನ್ನು ಅರಿತು ಸ್ಪಂದಿಸಬೇಕಾದುದು ಯೋಚಿಸಬೇಕಾದ ವಿಚಾರ. ಹಿರಿಯ ಕಲಾವಿದರನೇಕರು ರಂಗವೇರಿ ಅಬ್ಬರಿಸಿ ಗಂಡುಕಲೆಯ ‘ಬಣ್ಣ’ ವಿಭಾಗಕ್ಕೆ ನ್ಯಾಯವನ್ನೂ ಶ್ರೀಮಂತಿಕೆಯನ್ನೂ ನೀಡಿದ್ದರು. ಹಳೆಯ ತಲೆಮಾರಿನ ಹಲವು ಕಲಾವಿದರನ್ನು ನಾವು ನೋಡಿಲ್ಲ. ಆದರೆ ಹೆಸರನ್ನು ಕೇಳಿದ್ದೇವೆ. ಯಾಕೆಂದರೆ ಅವರು ಕೀರ್ತಿವಂತರಾಗಿಯೇ ಇಹದ ವ್ಯವಹಾರವನ್ನು ಮುಗಿಸಿದ್ದರು. ಇನ್ನು ಕೆಲವು ಹಿರಿಯ ಕಲಾವಿದರ ವೇಷಗಳನ್ನು ನೋಡಿದ ಅನುಭವವು ಕಲಾಭಿಮಾನಿಗಳಿಗಿರಬಹುದು. ಬಣ್ಣದ ಮಹಾಲಿಂಗ, ಚಂದ್ರಗಿರಿ ಅಂಬು, ಬಣ್ಣದ ಕುಟ್

ತೆಂಕುತಿಟ್ಟಿನ ಪ್ರಸಿದ್ಧ ಬಣ್ಣದ ವೇಷಧಾರಿ- ಶ್ರೀ ಸದಾಶಿವ ಶೆಟ್ಟಿಗಾರ್, ಸಿದ್ಧಕಟ್ಟೆ

Image
                 `ಯಕ್ಷಗಾನ’ ಎಂಬ ಶ್ರೇಷ್ಠ ಕಲೆಯಲ್ಲಿ ``ಬಣ್ಣದ ವೇಷಗಳು’’ ಎಂಬ ವಿಭಾಗಕ್ಕೆ ವಿಶೇಷ ಸ್ಥಾನವಿದೆ. ತೆಂಕುತಿಟ್ಟಿನಲ್ಲಂತೂ ಮುಖವರ್ಣಿಕೆ, ಅಟ್ಟಹಾಸ, ರಂಗಪ್ರವೇಶಿಸುವ ರೀತಿ, ಒಡ್ಡೋಲಗ ವೈಭವ, ಕುಣಿತಗಳಿಂದ ಈ ಪಾತ್ರಗಳು ವಿಜೃಂಭಿಸುತ್ತವೆ. ನೇಪಥ್ಯದಲ್ಲಿ (ಚೌಕಿಯಲ್ಲಿ) ಇವರಿಗೆ ದುಡಿಮೆ ಹೆಚ್ಚು. ಹಾಗೆಂದು ರಂಗದಲ್ಲಿ ದುಡಿಮೆ ಕಡಿಮೆಯೇನಲ್ಲ. ಪಾತ್ರಕ್ಕನುಗುಣವಾಗಿ ಮೆರೆಯುವ ಅವಕಾಶಗಳು ಇದ್ದೇ ಇದೆ. ಕೆಲವೊಂದು ಪಾತ್ರಗಳಿಗೆ ರಂಗದಲ್ಲಿ ಕೆಲಸ ಕಡಿಮೆಯಾದರೂ ಪ್ರೇಕ್ಷಕರ ಮನಸೂರೆಗೊಳ್ಳುವ ಸಾಮರ್ಥ್ಯವಿದೆ. ಚೌಕಿಯಲ್ಲಿ ತುಂಬಾ ಹೊತ್ತು ಶ್ರದ್ಧೆಯಿಂದ ಮುಖವರ್ಣಿಕೆಯಲ್ಲಿ ತೊಡಗಿಸಿಕೊಂಡು, ವೇಷ ಕಟ್ಟಿ ರಂಗವೇರಿ ತನ್ನ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳು ಸಿಗದಿದ್ದಾಗ ಬಣ್ಣದ ವೇಷಗಳನ್ನು ನಿರ್ವಹಿಸುವ ಕಲಾವಿದರಿಗೆ ನೋವಾಗುವುದು ಸಹಜ. ಬಣ್ಣದ ವೇಷಗಳಿಗೆ ಅವಕಾಶಗಳು ಸರಿಯಾಗಿ ಸಿಗುತ್ತಿಲ್ಲ ಎಂಬ ಕೂಗೂ ಈಗ ಕೇಳಿಬರುತ್ತಿದೆ. ಇದು ವೇಗದ ಯುಗ. ಸಮಯದ ಪರಿಪಾಲನೆ, ಹೊಂದಾಣಿಕೆ ನಮಗೆ ಮುಖ್ಯ ಎಂಬ ಸಮರ್ಥನೆಯನ್ನೂ ನೀಡಬಹುದು. ಆದರೂ ಬಣ್ಣದ ವೇಷಗಳ ಪರಂಪರೆಯ ಒಡ್ಡೋಲಗ ಕ್ರಮಗಳು ರಂಗದಿಂದ ಮಾಯವಾಗದಿರಲಿ. ಕಲಾವಿದರಿಗೆ ಅವರ ಪ್ರತಿಭಾ ಪ್ರದರ್ಶನಕ್ಕೆ ಸರಿಯಾದ ಸಮಯ, ಅವಕಾಶಗಳು ಒದಗಿ ಯಕ್ಷಗಾನ ವೈಭವವು ನಿರಂತರ ಕಾಣುವಂತಾಗಲಿ ಎಂಬುದು ಕಲಾಭಿಮಾನಿಗಳೆಲ್ಲರ ಆಶಯವೂ ಹೌದು. ಬಣ್ಣದ ವೇಷಗಳು ರೌದ್ರ, ಭಯಾನಕ, ಬೀಭತ್ಸ ಮೊದಲಾದ ರಸಗಳನ್ನು ಸೃಷ್