Posts

Showing posts from December, 2018

‘ಕದ್ರಿ ವಿಷ್ಣು’ ಪ್ರಶಸ್ತಿ ವಿಜೇತ ಮಾಡಾವು ಕೊರಗಪ್ಪ ರೈ

Image
                 ಶ್ರೀ ಮಾಡಾವು ಕೊರಗಪ್ಪ ರೈ ಪ್ರಸ್ತುತ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿರುವ ಯಕ್ಷಗಾನ ಕಲಾವಿದ. ಮೃದು ಮನಸ್ಸಿನ, ವಿನಯವಂತ, ಹೆಚ್ಚು ಮಾತನಾಡುವವರಲ್ಲ. ಕೆಲವು ಪ್ರಶ್ನೆಗಳಿಗೆ ನಗುವೇ ಇವರ ಉತ್ತರ. ತೆರೆದುಕೊಳ್ಳುವ ಸ್ವಭಾವ ಇವರದಲ್ಲ. ಯಾವಾಗಲೂ ಮುಚ್ಚಿಕೊಳ್ಳುವ ಸ್ವಭಾವ. ಅತಿರೇಕಗಳಿಗೆ ಎಡೆಕೊಡದ ಕಾರಣವೇ ಈ ಉತ್ತಮ ಕಲಾವಿದ ಪ್ರಸಿದ್ಧಿಯಿಂದ ದೂರ ಉಳಿದರೇನೋ? ಎಂದೆನಿಸಿದರೆ ತಪ್ಪಾಗಲಾರದು. ಸ್ವಭಾವವನ್ನರಿತು, ಹಿತಮಿತವಾದ ಮಾತು, ಕುಣಿತಗಳಿಂದ ಪಾತ್ರಕ್ಕೆ ಜೀವ ತುಂಬುವ ಮಾಡಾವು ಕೊರಗಪ್ಪಣ್ಣನವರ ಬಗ್ಗೆ ಬರೆಯುವುದು ಕಲಾಭಿಮಾನಿಗಳೆಲ್ಲರಿಗೂ ಸಂತಸ ತರುವ ವಿಚಾರ.                          ಶ್ರೀ ಮಾಡಾವು ಕೊರಗಪ್ಪ ರೈಗಳು 26-12-1955ರಂದು ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಸಣಂಗಲ ನಡುಮನೆಯಲ್ಲಿ ಮಹಾಬಲ ರೈ, ಶ್ರೀಮತಿ ಕಮಲ ಎಂ. ರೈ ದಂಪತಿಗಳಿಗೆ ಮಗನಾಗಿ ಜನಿಸಿದರು. ಪ್ರಾಥಮಿಕ ವಿದ್ಯಾರ್ಜನೆಯನ್ನು ಕೆಯ್ಯೂರು ಶಾಲೆಯಲ್ಲಿ ಪೂರೈಸಿದರು (7ನೇ ತರಗತಿ). ಎಳವೆಯಲ್ಲೇ ಯಕ್ಷಗಾನದತ್ತ ಆಕರ್ಷಿತರಾದರು. ಶಾಲಾದಿನಗಳಲ್ಲಿ ಪುತ್ತೂರು ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ತಪ್ಪದೆ ನೋಡುತ್ತಿದ್ದರಂತೆ. ಕಲಾವಿದನಾಗಬೇಕೆಂಬ ಆಸೆಯು ಸಹಜವಾಗಿ ಎಳೆಮನಸ್ಸಿನಲ್ಲಿ ಚಿಗುರೊಡೆಯಿತು. ನಾಟ್ಯಾಭ್ಯಾಸಕ್ಕೆ ಶ್ರೀ ಧರ್ಮಸ್ಥಳ ಲಲಿತಕಲಾ ಕೇಂದ್ರವನ್ನು ಸೇರಿಕೊಂಡರು (1971). ಶ್ರೀ ಪಡ್ರೆ ಚಂದು ಅವರಿಂದ ನಾಟ್ಯ

ಸ್ವಾಭಿಮಾನೀ, ಶಿಸ್ತಿನ, ನಿಷ್ಠಾವಂತ ಕಲಾವಿದ - ದಿ| ಅಳಿಕೆ ಲಕ್ಷ್ಮಣ ಶೆಟ್ಟಿ

Image
                    1950ನೇ ಇಸವಿ. ಅಂದರೆ 68 ವರ್ಷಗಳಷ್ಟು ಹಿಂದೆ ಈಗಿನಂತೆ ವಾಹನ ಸೌಕರ್ಯಗಳಿಲ್ಲದ ಕಾಲ. ಕೆಲವು ದಿನಪತ್ರಿಕೆಗಳನ್ನು ಬಿಟ್ಟರೆ ಬೇರೆ ಮಾಧ್ಯಮಗಳು ಇಲ್ಲ. ಅದನ್ನು ಓದಲು ಸಂಜೆ ವರೇಗೆ ಕಾಯುತ್ತಿದ್ದ ಜನರೂ ಇದ್ದರು. ಮನೆಗೆ ತೆರಳಲು ಕಲಾವಿದರಿಗೆ ಅವಕಾಶಗಳಿಲ್ಲ. ಮನೆಯವರ ಸಂಪರ್ಕದಿಂದ ದೂರ ಉಳಿದು ಬಿಡಾರದಲ್ಲೇ ಇದ್ದುಕೊಂಡು ಸಾಧನೆಯ ಮೂಲಕವೇ ಕಲಾವಿದರಾಗಿ ಕಾಣಿಸಿಕೊಂಡರು. ಅವರುಗಳೆಲ್ಲಾ ನಡೆದುಕೊಂಡೇ ಅನೇಕ ಮೈಲುಗಳನ್ನು ದಾಟಿ ಪ್ರದರ್ಶನ ನಡೆಯುವ ಸ್ಥಳಕ್ಕೆ ಸಾಗಿದರು. ಪೆಟ್ಟಿಗೆಗಳನ್ನು ಹೊತ್ತುಕೊಂಡೇ ಹೋದರು. ಕೊಟ್ಟ ಸ್ಥಳದಲ್ಲೋ, ಮರದಡಿಯಲ್ಲೋ ಮಲಗಿ ಹಗಲುಗಳನ್ನು ಕಳೆದರು. ಕಷ್ಟವನ್ನನುಭವಿಸುತ್ತಾ ಕಲಿತ ಕಾರಣ ಶ್ರೇಷ್ಠ ಕಲಾವಿದರಾದರೊ? ಕಲೆಯನ್ನು ಶ್ರೀಮಂತಗೊಳಿಸಿದರೊ? ನಾವು ಯೋಚಿಸಲೇ ಬೇಕಾದ ವಿಚಾರವಿದು. ಈಗ ಕಾಲ ಹಾಗಿಲ್ಲ. ಬದಲಾಗಿದೆ. ಕಲಾವಿದರಿಗೆ ಎಲ್ಲಾ ಸೌಕರ್ಯ ಗಳೂ ಸಂಘಟಕರಿಂದ ಕೊಡಲ್ಪಡುತ್ತಿದೆ. ಉತ್ತಮ ಸಂಭಾವನೆಯೂ ಇದೆ. ಪ್ರಚಾರಕ್ಕೆ ಮಾಧ್ಯಮಗಳು! ಯಕ್ಷಗಾನದಿಂದಲೇ ಜೀವಿಸುವ ಕಲಾವಿದರಿದ್ದಾರೆ. ಭೂಮಿ, ಮನೆ ಖರೀದಿಸಿದವರಿದ್ದಾರೆ. ಸ್ವಂತ ವಾಹನದಲ್ಲೇ ಸಾಗಿ ಪ್ರದರ್ಶನಗಳಲ್ಲಿ ಭಾಗವಹಿಸಿ ಮನೆಗೆ ಬರುತ್ತಾರೆ! ಅಂದಿನ ಕಲಾವಿದರ ಕಷ್ಟದ ದಿನಗಳ ಅನುಭವ ಇತ್ತೀಚೆಗಿನ ಕಲಾವಿದರಿಗಂತೂ ಇರಲಾರದು. ಆದರೂ ಅವರುಗಳ ಸಾಧನೆಯನ್ನೂ ಕೊಡುಗೆಗಳನ್ನೂ ನಾವು ಸ್ಮರಿಸಲೇಬೇಕು. ನಮಗೆ ಅವರು ಅನುಸರಣೀಯರು.            

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು

Image
                     ‘ಯಕ್ಷಗಾನ’ ಎಂಬ ಶ್ರೇಷ್ಠ ಕಲೆಯು ಯಾವಾಗ ಪ್ರಾರಂಭವಾಯಿತು? ಆಗ ಕಲೆಯ ಸ್ವರೂಪ ಹೇಗಿತ್ತು? ಯಾವ ರೀತಿಯಲ್ಲಿ ಇಂದಿನವರೇಗೂ ಸಾಗಿ ಬಂತು? ಈ ಪ್ರಶ್ನೆಗಳಿಗೆ ಉತ್ತರಿಸಲು ನಾವು ಶಕ್ಯರಲ್ಲ. ತಿಳಿದವರಲ್ಲ. ಹಿರಿಯರು, ವಿದ್ವಾಂಸರು ಉತ್ತರಿಸಬೇಕು. ಆದರೂ ಓದಿ ಸಂಗ್ರಹಿಸಿದ ಕೆಲವೊಂದು ವಿಚಾರಗಳ ಆಧಾರದಲ್ಲಿ ಕೆಲವು ಶತಮಾನಗಳ ಹಿಂದೆಯೇ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದ್ದವು ಎಂಬುದನ್ನು ತಿಳಿಯಬಹುದು. ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಶ್ರೇಷ್ಠ ಕವಿಗಳಾದ ದೇವಿದಾಸ, ಧ್ವಜಪುರ ರಾಮಯ್ಯ, ಮಯ್ಯವತಿ ವೆಂಕಟ, ಹೆರ್ಗ ವೆಂಕರಮಣ ಪ್ರಭು, ಅಮ್ಮನಳ್ಳಿ ಆತ್ಮಾರಾಮ, ನಂದಳಿಕೆ ಲಕ್ಷ್ಮೀನಾರಾಯಣ ಮೊದಲಾದವರು 16ನೆಯ ಶತಮಾನದ ಕೊನೆಯವರೆಂದೂ, ನಗಿರೆ ಸುಬ್ಬ, ವಿಷ್ಣು ವಾರಂಬಳ್ಳಿ ಮೊದಲಾದವರು ಕ್ರಿ. ಶ. 1600ರ ಮೊದಲಿನವರೆಂದೂ ಪುಸ್ತಕಗಳಲ್ಲಿ ಓದಿದ ನೆನಪು. ಇರಲಿ. ಶ್ರೇಷ್ಠ ಸಂದೇಶಗಳನ್ನೂ, ಪುರಾಣಜ್ಞಾನವನ್ನೂ, ಮನೋರಂಜನೆಯನ್ನೂ ಜತೆಯಾಗಿ ನೀಡಬಲ್ಲ ಅತ್ಯುತ್ತಮ, ಅನುಪಮವಾದ ಕಲಾಪ್ರಕಾರವನ್ನು ನೋಡಿ ಆನಂದಿಸುವ ಅವಕಾಶವನ್ನು ಪಾರ್ತಿಸುಬ್ಬನಿಂದ ಹಿಡಿದು ಅನೇಕ ಹಿರಿಯ ಕವಿಶ್ರೇಷ್ಠರು ನಮಗೆ ನೀಡಿದರು. ಅವರುಗಳೆಲ್ಲಾ ನಿಜಕ್ಕೂ ಪ್ರಾತಃಸ್ಮರಣೀಯರು. ಯಕ್ಷಗಾನದಲ್ಲಿ ಗಾನ ಮಾತ್ರ ಇರುವುದಲ್ಲ. ಗಾಯನ, ವಾದನ, ನರ್ತನ, ವಾಚಿಕಗಳಿಂದ ಬಣ್ಣ ವೇಷಗಳಿಂದ ಪರಿಪೂರ್ಣವಾಗಿ, ಸಮೃದ್ಧವಾಗಿರುವ ಸಮಷ್ಠಿ ಕಲೆಯಿದು. ಗಾನ, ಮಾತುಗಳು ಕಿವಿಗಳಿಗೆ, ಮುಖ

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ, ಕಲಾವಿದರುಗಳಿಗೆ ಶುಭಾಶಯಗಳು