Posts

Showing posts from September, 2019

ಯಕ್ಷಗಾನ ಪ್ರದರ್ಶನಗಳಲ್ಲಿ ಪರಿವರ್ತನೆ - ಮಾರಕವೋ? ಪೂರಕವೋ

Image
                          ಅರ್ಹರನ್ನು ಗೌರವಿಸುವುದು ಮಾನವ ಸಹಜ ಗುಣ. ಮಾನವೀಯತೆ ಇರುವವರು ಅದೇ ತೆರನಾಗಿ ವ್ಯವಹರಿಸುತ್ತಾರೆ. ಇದು ಸಂಸ್ಕಾರ. ಸನಾತನಿಗಳು ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿ ನಮಗೆ ಕೊಡುಗೆಯಾಗಿ ನೀಡಿದ ಸಂದೇಶವದು. ಅನುಗ್ರಹವೂ ಹೌದು. ಅನಪೇಕ್ಷಿತ ವಿಚಾರಗಳು ಬಂದಾಗ ಆಕ್ಷೇಪಿಸುವುದು, ನಮಗೇಕೆ ಆ ವಿಚಾರ? ವಿರೋಧವೇಕೆ ಕಟ್ಟಿಕೊಳ್ಳಬೇಕು? ಎಂದು ಮೌನವಾಗಿ ಸಹಿಸಿಕೊಳ್ಳುವುದು. ಹೀಗೆ ಎರಡೂ ಕ್ರಿಯೆಗಳನ್ನೂ ನಾವು ಮಾಡುತ್ತೇವೆ. ಮಾನವ ಸಹಜ ಗುಣಗಳಿವು. ಆಕ್ಷೇಪಿಸಿದರೆ ಸ್ವಚ್ಛವಾಗಲೂಬಹುದು. ಟೀಕೆಗೊಳಗಾಗಲೂಬಹುದು. ಮೌನವಾಗಿದ್ದರೆ ಸರಿಮಾಡಿಕೊಳ್ಳಲು ಎಲ್ಲಿದೆ ಅವಕಾಶ? ಹೀಗೆ ಕೆಲವೊಂದು ಬಾರಿ ಉಭಯಸಂಕಟಕ್ಕೊಳಗಾಗಬೇಕಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಈ ಸಮಸ್ಯೆಗಳು ಸಹಜ. ಆದರೂ ಆಡಳಿತ ವರ್ಗವು, ಸಪಾತ್ರರೊಡನೆ, ಆ ಕ್ಷೇತ್ರಕ್ಕೆ ಸಂಬಂಧಪಟ್ಟು, ಇದಮಿತ್ಥಂ ಎಂದು ಹೇಳಬಲ್ಲ ವಿದ್ವಾಂಸರೊಡನೆ ವಿಮರ್ಶಿಸಿ ನಿರ್ಣಯವನ್ನು ಕೈಗೊಳ್ಳುವುದು ಹಿಂದಿನಿಂದಲೂ ನಡೆದು ಬಂದ ರೀತಿ. ಅದನ್ನು ಕೇಳಿ ಸನ್ಮಾರ್ಗದಲ್ಲಿ ನಡೆಯುವವರೇ ಹೌದು ನಮ್ಮವರು. ಕೇಳದೆ ನಿರ್ಲಕ್ಷಿಸಿದವರಿಗೆ ಶಿಕ್ಷೆ ಎಂಬ ನಿಯಮವೂ ನಮ್ಮ ಸಮಾಜದ ಪದ್ಧತಿಯಲ್ಲವೇ?                      ಎಲ್ಲಾ ಕಲಾಪ್ರಕಾರಗಳಲ್ಲೂ ನಮಗೆ ಗೌರವವಿದೆ. ಪ್ರತಿಯೊಂದು ಕಲೆಯೂ ತನ್ನದೇ ಆದ ಸ್ವರೂಪ ಮತ್ತು ಸೌಂದರ್ಯವನ್ನು ಹೊಂದಿವೆ. ಕಲಾಪ್ರಕಾರಗಳು ಉತ್ತಮ ಸಂದೇಶಗಳನ್ನೂ ಮನೋರಂಜನೆಯನ್ನೂ ನೀಡ

ಯಕ್ಷಾಗಸದ ಪೂರ್ಣಚಂದ್ರ - ಕೊಂಡದಕುಳಿ ರಾಮಚಂದ್ರ ಹೆಗಡೆ

Image
ಯಕ್ಷಗಾನವು ನಮ್ಮ ಹೆಮ್ಮೆಯ ಸಂಕೇತ ಎನಿಸಿಕೊಂಡ ಕಲೆ. ಹಿಂದಿನ ತಲೆಮಾರಿನ, ಈಗಿನ ಹಿರಿಯ ಕಲಾವಿದರು, ಕಲಾಪೋಷಕರು, ಕಲಾಭಿಮಾನಿಗಳೆಲ್ಲಾ ತ್ಯಾಗ ಪರಿಶ್ರಮಗಳಿಂದ ಈ ಸರ್ವಾಂಗ ಸುಂದರವಾದ ಕಲಾಪ್ರಕಾರವನ್ನು ಬೆಳೆಸಿದ್ದಾರೆ, ಉಳಿಸಿದ್ದಾರೆ. ಅವರೆಲ್ಲರ ಸಾಧನೆ, ಸಹಕಾರಗಳೆಂಬ ಭದ್ರವಾದ ಅಡಿಪಾಯದಲ್ಲೇ ಈ ಗಂಡುಕಲೆ ರಂಜಿಸುತ್ತಿದೆ. ನಾವೂ ಕಲಾವಿದರಾಗಿ, ಈ ಕಲೆಯ ಒಂದು ಅಂಗವಾಗಿ ಕಾಣಿಸಿಕೊಳ್ಳುತ್ತಿದ್ದೇವೆ. ತೆಂಕು ಮತ್ತು ಬಡಗು ಎಂಬ ಉಭಯತಿಟ್ಟುಗಳಲ್ಲೂ ಬಾಲಕಲಾವಿದನಾಗಿ ರಂಗಪ್ರವೇಶ ಮಾಡಿ, ಹಂತ ಹಂತವಾಗಿ ಬೆಳೆದು ಅನೇಕರು ಪ್ರಸಿದ್ಧರಾಗಿದ್ದಾರೆ. ಈಗ ಬೇಡಿಕೆಯ ಕಲಾವಿದರಾಗಿ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಅಂತವರಲ್ಲೊಬ್ಬರು ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು. ಬಡಗುತಿಟ್ಟಿನ ಶ್ರೇಷ್ಠ ಕಲಾವಿದ. ಪ್ರದರ್ಶನಗಳನ್ನು ನೋಡುತ್ತಾ ಅಭಿನಯಿಸುತ್ತಾ ತನ್ನ ಪರಿಶ್ರಮ ಮತ್ತು ಹಿರಿಯ ಕಲಾವಿದರ ಒಡನಾಟ, ನಿರ್ದೇಶನಗಳಿಂದ ಬೆಳೆದು ಪಕ್ವರಾದವರು. ತನ್ನ ಹನ್ನೆರಡನೆಯ ವರ್ಷದಿಂದ ಆರಂಭಿಸಿ, ಸತತ 38 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಾ ಕಲಾಭಿಮಾನಿಗಳ ಮನಸೂರೆಗೊಂಡಿದ್ದಾರೆ. ಕೊಂಡದಕುಳಿಯವರು ಇದ್ದಾರಾ? ಅವರೇನು ವೇಷ ಮಾಡ್ತಾರೆ ಇಂದು? ಎಂದು ಕೇಳುವಷ್ಟು ಪ್ರೇಕ್ಷಕರ ಮನದಲ್ಲಿ ತುಂಬಿಕೊಂಡಿದ್ದಾರೆ. ಪ್ರಸಂಗ ಗೊತ್ತಾದರೆ ಸಾಕು, ಕೊಂಡದಕುಳಿಯವರು ಇಂತಹ ವೇಷವನ್ನೇ ಮಾಡುತ್ತಾರೆ ಎಂದು ಕಲಾಭಿಮಾನಿಗಳು ನಿರ್ಣಯಿಸುವಷ್ಟು ಪ

ನಗದೆ ನಗಿಸಿದ ಯಕ್ಷರಾಜ್ಯದ ಆಸ್ಥಾನ ವಿದೂಷಕ ಹಾಸ್ಯರತ್ನ ನಯನ ಕುಮಾರ್

Image
ಯಕ್ಷಗಾನದಲ್ಲಿ ಹಾಸ್ಯವು ಹೇಗಿರಬೇಕು? ಎಂದು ಕೆಲವರು ಕೇಳುವುದುಂಟು. ಹಾಸ್ಯ ಪಾತ್ರಗಳೆಂದೇನು? ಎಲ್ಲಾ ಪಾತ್ರಗಳೂ ಆ ಪಾತ್ರಕ್ಕೆ ಉಚಿತವಾಗಿಯೇ ಇರಬೇಕು. ಪಾತ್ರೋಚಿತವಾಗಿ ಕಲಾವಿದರು ಅಭಿನಯಿಸಿದಾಗ ಮಾತ್ರ ಪ್ರದರ್ಶನವು ಗೆಲ್ಲುತ್ತದೆ. ಹಾಸ್ಯವೂ ಹಾಗೆಯೇ. ‘ಹಾಸ್ಯ’ ಬೇಕೇ ಬೇಕು. ಆದರೆ ಅದರ ಪ್ರಮಾಣ ಎಷ್ಟು? ಎಷ್ಟು ತೀವ್ರವಾಗಿರಬೇಕು? ಎನ್ನುವ ನಿರ್ಣಯ ಇದೆ. ‘ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ’ ಎಂಬ ರೂಢಿಯಲ್ಲಿ ಆಡುವ ಮಾತಿನಂತೆ ಇರಬೇಕು. ಶುಚಿಯಾಗಿರಬೇಕು, ರುಚಿಯಾಗಿರಬೇಕು, ಆ ವಿಭಾಗವು ಬಲಿಷ್ಠವಾಗಿರಬೇಕು. ಪ್ರಸಂಗಕ್ಕೆ ಪೂರಕವಾಗಿ ಪ್ರದರ್ಶನವು ಗೆಲ್ಲುವಂತಿರಬೇಕೆಂಬುದೇ ಇದರ ಅರ್ಥ. ಪ್ರತಿಯೊಂದು ಪಾತ್ರವೂ ಹಾಗೆಯೇ ಇರಬೇಕು. ಪಾತ್ರಧಾರಿಯು ತಾನೊಬ್ಬನೇ ಕಾಣಿಸಿಕೊಳ್ಳಬೇಕೆಂದು ಬಯಸದೆ, ಪ್ರದರ್ಶನವು ಕೆಡದಂತೆ ಎಚ್ಚರದಿಂದ ಅಭಿನಯಿಸಲೇಬೇಕು. ಈ ಸಂದರ್ಭದಲ್ಲಿ ರಂಗನಾಯಕ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳ ಮಾತುಗಳು ನೆನಪಾಗುತ್ತದೆ. ಪ್ರದರ್ಶನ ಮುಗಿದ ನಂತರ ಕಲಾವಿದರನ್ನೋ ಪ್ರೇಕ್ಷಕರನ್ನೋ ಕರೆದು ಅವರು ಕೇಳುತ್ತಿದ್ದರು- ಆಟ ಹೇಗಾಗಿದೆ? ಎಂದು. ಒಂದು ದಿನವಾದರೂ ನನ್ನ ಪದ್ಯ ಹೇಗಾಗಿದೆ ಎಂದು ಕೇಳಿದವರಲ್ಲ. ನಿಮ್ಮ ಹಾಡು ಚೆನ್ನಾಗಿತ್ತು ಎಂದರೆ, ಅದಕ್ಕೆ ಸಹಕಲಾವಿದರು ಕಾರಣ. ನಾನು ಕಾರಣನಲ್ಲ. ಅವರು ಸಹಕರಿಸಿದ ಕಾರಣ ನಾನು ಪದ್ಯ ಹೇಳುವುದಕ್ಕೆ ಅನುಕೂಲ ಆಯಿತು. ನಾನು ನನ್ನ ಹಾಡಿನ ಬಗ್ಗೆ ಗಮನಿಸುವುದಿಲ್ಲ. ಆಟ ಒಳ್ಳೆಯದಾಗಬೇಕೆಂಬುದಷ್ಟೇ ನ