Posts

Showing posts from May, 2019

ಶ್ರೇಷ್ಠ ಮದ್ದಳೆಗಾರ ಮಣಿಮುಂಡ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ

Image
                ಅನುಪಮವಾದ ಶ್ರೇಷ್ಠವಾದ ಕಲೆ ನಮ್ಮ ಹೆಮ್ಮೆಯ ಯಕ್ಷಗಾನ. ಆಟ, ಕೂಟಗಳಲ್ಲಿ ‘ಹಿಮ್ಮೇಳ’ ಮತ್ತು ‘ಮುಮ್ಮೇಳ’ ಎಂಬ ಎರಡು ವಿಭಾಗಗಳು. ಹಿಮ್ಮೇಳ ಪ್ರಧಾನವೋ?  ಮುಮ್ಮೇಳ ಪ್ರಧಾನವೋ? ಎಂದು ಕೆಲವರು ಪ್ರಶ್ನಿಸುವುದುಂಟು. ಯಕ್ಷಗಾನವು ಒಂದು ಸಮಷ್ಠಿಕಲೆ. ಎಲ್ಲವೂ ಪ್ರಧಾನವೆ. ತಂಡವಾಗಿ ಶ್ರಮಿಸಿದಾಗ ಮಾತ್ರ ಪ್ರದರ್ಶನವು ರಂಜಿಸುವುದು. ಈ ಸಂದರ್ಭದಲ್ಲಿ ಹಿರಿಯ ಶ್ರೇಷ್ಠ ಮದ್ದಳೆಗಾರರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ಟರ ಮಾತುಗಳು ನೆನಪಾಗುತ್ತದೆ. ‘‘ಯಶಸ್ವಿ ಪ್ರದರ್ಶನಕ್ಕೆ ಬೇಕು... ಹಿಮ್ಮೇಳ ಮುಮ್ಮೇಳಗಳ ಸಾಂಗತ್ಯ’’ ಎಂಬ ತಲೆಬರಹದಡಿಯಲ್ಲಿ ಲೇಖನವೊಂದನ್ನು ಯಕ್ಷದೀಪ ಪತ್ರಿಕೆಗಾಗಿ ಬರೆದಿದ್ದರು. ಈ ಲೇಖನದಲ್ಲಿ ಭಾಗವತನ, ಮದ್ದಳೆಗಾರನ, ವೇಷಧಾರಿಗಳ ಸ್ಥಾನ ಮತ್ತು ಕರ್ತವ್ಯಗಳನ್ನು ಸರಳವಾಗಿ ಮನಮುಟ್ಟುವಂತೆ ಅವರು ತಿಳಿಯಪಡಿಸಿದ್ದಾರೆ. ಯಕ್ಷಗಾನಕ್ಕೆ ಭಾಗವತರೇ ನಿರ್ದೇಶಕರು. ಅವರ ನಡೆಯನ್ನು ವಾದಕರು ಅನುಸರಿಸುತ್ತಾರೆ. ಅವರನ್ನು ಅನುಸರಿಸಿ ವೇಷಧಾರಿಗಳು ಕುಣಿಯುತ್ತಾರೆ, ಹಾಡಿನ ನಂತರ ಅದರೊಳಗಿರುವ ವಿಚಾರಗಳನ್ನು ಮಾತಿನ ಮೂಲಕ ಪ್ರಕಟಿಸುತ್ತಾರೆ. ಹಾಗಾಗಿ ಮುಮ್ಮೇಳಕ್ಕಿಂತ ಹಿಮ್ಮೇಳವೇ ಪ್ರಧಾನವಾದುದು. ಭಾಗವತರ, ಮದ್ದಳೆಗಾರರ ಸ್ಥಾನವು ಶ್ರೇಷ್ಠವಾದುದು. ವೇಷಧಾರಿಗಳು ರಂಗಪ್ರವೇಶ ಮಾಡುವಾಗ ಅವರಿಗೆ ನಮಸ್ಕರಿಸಿ ಬರುವುದನ್ನು ನಾವು ಕಾಣುತ್ತೇವೆ. ರಂಗವನ್ನು ಪ್ರವೇಶಿಸಿದ ನಂತರ ಸಭಾವಂದನೆಯನ್ನು ಮಾಡುತ್ತಾರೆ. ಮುಮ್ಮೇಳ ಕಲ

ಬಣ್ಣದ ವೇಷಧಾರಿ - ಶಿವರಾಮ ಶೆಟ್ಟಿ, ಜೋಗಿಮಕ್ಕಿ

Image
       ಯಕ್ಷಗಾನವು ಕರಾವಳೀ ಮತ್ತು ಮಲೆನಾಡ ಪ್ರದೇಶಗಳಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳುವ ನಮ್ಮ ಹೆಮ್ಮೆಯ ಕಲೆ. ಗಂಡುಕಲೆಯೆಂದೇ ಪ್ರಸಿದ್ಧವಾಗಿದೆ. ಪ್ರಸ್ತುತ ದೇಶ ವಿದೇಶಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಬೇಸಿಗೆಯಲ್ಲಿ ಅನೇಕ ಮೇಳಗಳ ಪ್ರದರ್ಶನಗಳನ್ನೂ, ಮಳೆಗಾಲದಲ್ಲಿ ಅಲ್ಲಲ್ಲಿ ನಡೆಯುವ ಪ್ರದರ್ಶನಗಳನ್ನೂ ನೋಡಿ ಕಲಾಭಿಮಾನಿಗಳು ಸಂತೋಷಪಡುತ್ತಿದ್ದಾರೆ. ಅನೇಕ ಕಲಾವಿದರು ಇಂದು ಕಲಾಸೇವೆಯನ್ನು ಮಾಡುತ್ತಿದ್ದಾರೆ. ವೃತ್ತಿಕಲಾವಿದರಾಗಿ, ಹವ್ಯಾಸಿಗಳಾಗಿ ಅನೇಕ ಕಲಾವಿದರಿಂದು ಯಕ್ಷಗಾನದಲ್ಲಿ ಗುರುತಿಸಿಕೊಂಡಿದ್ದಾರೆ. ಸಾಧನೆಯ ಮೂಲಕ ಹಲವರು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಹಲವರು ತೆರೆಮರೆಯ ಕಾಯಿಯಾಗಿ ಉಳಿದುಕೊಂಡಿದ್ದಾರೆ. ಪ್ರಸಿದ್ಧಿ, ಪ್ರತಿಫಲ ದೇವರು ನೀಡಬೇಕು. ನಾನು ಕರ್ತವ್ಯವನ್ನಷ್ಟೇ ಮಾಡುತ್ತಿದ್ದೇನೆ ಎಂದು ಭಾವಿಸಿ ವ್ಯವಹರಿಸುವ ಕಲಾವಿದರನೇಕರು. ಎಲ್ಲರೂ ಕಲಾಮಾತೆಯ ಸುಪುತ್ರರು. ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ಅಭಿನಯಿಸಿದರೆ ಕಲಾಮಾತೆ ನಿಸ್ಸಂಶಯವಾಗಿಯೂ ಅನುಗ್ರಹಿಸುತ್ತಾಳೆ ಖಂಡಿತ. ಹೀಗೆ ಭಾವಿಸಿಕೊಂಡು ಕಲಾಸೇವೆಯನ್ನು ಮಾಡುತ್ತಿರುವವರಲ್ಲಿ ಶ್ರೀ ಶಿವರಾಮ ಶೆಟ್ಟರೂ ಒಬ್ಬರು. ಇವರು ಕಟೀಲು ಮೇಳದ ಕಲಾವಿದ. ಶ್ರೀ  ಶಿವರಾಮ ಶೆಟ್ಟಿ, ಜೋಗಿಮಕ್ಕಿ                    ಶ್ರೀ ಶಿವರಾಮ ಶೆಟ್ಟರ ಕುಟುಂಬಿಕರ ಮೂಲಮನೆ ಕಟೀಲು ಸಮೀಪದ ದೊಡ್ಡಿಕಟ್ಟೆ. 500 ವರ್ಷಗಳ ಹಿಂದೆ ಇಲ್ಲಿಂದ ಘಟ್ಟಪ್ರದೇಶಕ್ಕೆ ವಲ

ಅನುಭವೀ ನೇಪಥ್ಯ ಕಲಾವಿದರು ‘ಭವನಕ್ಕೆ ಅಡಿಪಾಯವಿದ್ದಂತೆ’

Image
                           ಯಾವುದೇ ಒಂದು ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ, ಉದ್ದೇಶಿತ ಗುರಿಯನ್ನು ತಲುಪಬೇಕಾದರೆ ಅಲ್ಲಿ ಎಲ್ಲವೂ ಸರಿಯಾಗಿರಬೇಕು. ಎಲ್ಲರೂ ಸರಿಯಾಗಿರಬೇಕು. ಒಂದು ವಿಭಾಗದಲ್ಲಿ ಕೊರತೆ ಉಂಟಾದರೆ ಬೆಳವಣಿಗೆಗೆ ತಡೆ ಉಂಟಾಗಿ ಕಾರ್ಯಸಾಧನೆಯಾಗಲಾರದು. ಉದಾಹರಣೆಗೆ ಹಳ್ಳಿಯ ಮನೆಗಳನ್ನು ತೆಗೆದುಕೊಳ್ಳೋಣ. ಹಲವಾರು ವರ್ಷಗಳಿಂದ ದುಡಿಯುವ ಕೆಲಸಗಾರನಿಗೆ ಹೇಳಬೇಕೆಂದಿಲ್ಲ. ಆ ಮನೆಯಲ್ಲಿ ಯಾವ ಸಮಯದಲ್ಲಿ ಯಾವ ಕೆಲಸವಾಗಬೇಕೆಂದು ಅವನಿಗೆ ತಿಳಿದಿರುತ್ತದೆ. ಯಜಮಾನನು ಅಪ್ಪಣೆ ಕೊಡಿಸಬೇಕೆಂದಿಲ್ಲ. ತಾವೇ ಅರಿತು ಮಾಡುತ್ತಾರೆ. ಯಾಕೆ? ಅನುಭವದ ಪರಿಣಾಮ, ಸ್ವಾಮಿನಿಷ್ಠೆ, ಯಜಮಾನ ಉಳಿದರೆ ಮಾತ್ರ ನಾನೂ ಉಳಿಯುತ್ತೇನೆ ಎಂಬ ಅರಿವು, ಈ ಕೆಲಸವು ತನ್ನ ಹಸಿವಿಗೆ ಅನ್ನ ನೀಡುವ ಪಾತ್ರೆ ಎಂಬ ಗೌರವದಿಂದಲೇ ಮಾಡುತ್ತಾರೆ. ಇದು ಪ್ರಾಮಾಣಿಕತನ. ಹೀಗೆ ವ್ಯವಹರಿಸಿದ ಕೆಲಸಗಾರ ಯಜಮಾನನ ಪ್ರೀತಿಯನ್ನೂ ಗಳಿಸುತ್ತಾನೆ. ಒಟ್ಟಿನಲ್ಲಿ ಯಶಸ್ಸು ಗಳಿಸಬೇಕಾದರೆ ಪ್ರತಿಯೊಬ್ಬನೂ ಅರ್ಪಣಾಭಾವದಿಂದ ತೊಡಗಿಸಿಕೊಳ್ಳಲೇಬೇಕು. ತಾನು ಮಾಡುವ ಕೆಲಸವನ್ನು ದೇವರ ಪೂಜೆಯೆಂದೇ ಭಾವಿಸಬೇಕು. ಯಕ್ಷಗಾನ ಮತ್ತು ಇತರ ಕಲಾಪ್ರಕಾರಗಳಿಗೂ ಈ ವಿಚಾರಗಳಿಂದ ಹೊರತಾಗಿರಲು ಸಾಧ್ಯವಿಲ್ಲ. ರಂಗಸ್ಥಳದಲ್ಲಿ ಕಲಾವಿದರು ಅಭಿನಯಿಸುತ್ತಾರೆ. ತಂಡವಾಗಿಯೇ ಅಭಿನಯಿಸಿದಾಗ  ಪ್ರದರ್ಶನವು ಗೆದ್ದೇ ಗೆಲ್ಲುತ್ತದೆ. ಆದರೆ ಈ ಯಶಸ್ಸಿನ ಹಿಂದೆ ಕಲಾವಿದರಿಗೆ ಸಹಕಾರಿಗಳಾಗಿ ಪ್ರದರ

ಪರಂಪರೆಯ ಪ್ರಸಿದ್ಧ ಪೀಠಿಕೆ ವೇಷಧಾರಿ ಬೇತ ಕುಂಞ ಕುಲಾಲ್

Image
                      ಯಕ್ಷಗಾನ ಪ್ರದರ್ಶನಗಳಲ್ಲಿ ‘ಪೂರ್ವರಂಗ’ ಮತ್ತು ‘ಪ್ರಸಂಗ’ ಎಂಬ ಎರಡು ವಿಭಾಗಗಳು. ಇದು ಮೊದಲಿನಿಂದಲೂ ನಡೆದು ಬಂದ ರೀತಿ. ಪೂರ್ವರಂಗದಲ್ಲಿ ಕೋಡಂಗಿ, ಬಾಲಗೋಪಾಲರು, ಮುಖ್ಯ ಸ್ತ್ರೀವೇಷ, ಹೊಗಳಿಕೆ ಹಾಸ್ಯ, ಪೀಠಿಕಾ ಸ್ತ್ರೀವೇಷ, ಚಂದಬಾಮಾ, ಅರ್ಧನಾರೀಶ್ವರ, ಚಪ್ಪರಮಂಚ ಅಲ್ಲದೆ ಕಟ್ಟುಹಾಸ್ಯಗಳು ಹಿಂದೆ ಪ್ರದರ್ಶನಗೊಳ್ಳುತ್ತಿದ್ದವು. ಪೂರ್ವರಂಗವು ಅಭ್ಯಾಸಿಗಳಿಗೆ ತಾನು ಕಲಾವಿದನಾಗಿ ಕಾಣಿಸಿಕೊಳ್ಳಲು ಅತ್ಯಂತ ಉಪಯುಕ್ತವಾದ ವೇದಿಕೆ. ನರ್ತನದಲ್ಲಿ ಪಕ್ವನಾಗಲು, ಸಭಾಕಂಪನದಿಂದ ಹೊರಬರಲು ಇದರಿಂದ ಅನುಕೂಲವಾಗುತ್ತದೆ. ಉತ್ತಮ ಭಾಗವತ, ಮದ್ದಳೆಗಾರನಾಗಬೇಕೆಂಬ ಆಸೆಯಿರುವ ಅಭ್ಯಾಸಿಗಳಿಗೆ ಪೂರ್ವರಂಗದ ಹಿಮ್ಮೇಳದಲ್ಲಿ ಸಾಕಷ್ಟು ಅವಕಾಶಗಳಿವೆ. ಆದರೆ ಮೇಳದಲ್ಲಿ ಪೂರ್ವರಂಗದ ಪ್ರದರ್ಶನಗಳು ಮಾಯವಾಗುತ್ತಾ ಹೋಗುವುದನ್ನು ನಾವು ಗಮನಿಸಬಹುದು. ಯಕ್ಷಗಾನದಿಂದ ಪೂರ್ವರಂಗ ಎಂಬ ವಿಭಾಗವು ಸಂಪೂರ್ಣ ಮಾಯವಾಗಿ ಹೋದೀತೇ? ಎಂಬ ಭಯವು ಕಲಾಭಿಮಾನಿಗಳಿಗೆ ಕಾಡಿದರೂ ಕಾಡಬಹುದು. ಈ ವಿಭಾಗದಲ್ಲಿ ಹಂತ ಹಂತವಾಗಿ ಮೇಲೇರಿದ ಕಲಾವಿದ ಪ್ರಸಂಗಗಳಲ್ಲಿ ಚೆನ್ನಾಗಿಯೇ ಕಾಣಿಸಿಕೊಳ್ಳಬಲ್ಲ. ನರ್ತನ, ಅಭಿನಯಗಳ ನಿರ್ವಹಣೆಯಲ್ಲಿ ಆತ ಉಳಿದವರಿಗಿಂತ ಬೇರೆಯೇ ಆಗಿ ಗುರುತಿಸಲ್ಪಡುತ್ತಾನೆ. ಮುಖವರ್ಣಿಕೆ, ವೇಷಗಾರಿಕೆಯಲ್ಲೂ ಕೂಡಾ. ಭದ್ರವಾದ ಅಡಿಪಾಯದ ಮೇಲೆ ಸುಂದರವಾದ ಭವನವು ದೀರ್ಘ ಕಾಲದ ವರೇಗೆ ಅಳಿಯದೆ ಶೋಭಿಸಿದಂತೆ. ಆದರೂ ವೇಗದ ಈ ಯುಗ ಯಕ್ಷಗಾನದಲ್ಲಿ

ಗಾನ ಗಂಧರ್ವ - ಶ್ರೀ ಪದ್ಯಾಣ ಗಣಪತಿ ಭಟ್

Image
                       ಗಾನ ಗಂಧರ್ವ ಶ್ರೀ ಪದ್ಯಾಣ ಗಣಪತಿ ಭಟ್ಟರು ತೆಂಕುತಿಟ್ಟಿನ ಹಿರಿಯ, ಶ್ರೇಷ್ಠ ಭಾಗವತರಲ್ಲೊಬ್ಬರು. ಪ್ರಸ್ತುತ ಶ್ರೀ ಹನುಮಗಿರಿ ಮೇಳದ ಭಾಗವತರು. ಇವರು ಮಾಂಬಾಡಿ ನಾರಾಯಣ ಭಾಗವತರ ಶಿಷ್ಯ. ಯಾವ ಅನುಕರಣೆಯನ್ನೂ ಮಾಡದೆ ಸತತ ಸಾಧನೆಯಿಂದ ಭಾಗವತರಾಗಿ ‘ಪದ್ಯಾಣಶೈಲಿ’ಯನ್ನು ಹುಟ್ಟುಹಾಕಿದವರು. ವೃತ್ತಿಜೀವನದಲ್ಲಿ ತನ್ನ ಬೆಳವಣಿಗೆಗೆ ಕಾರಣರಾದ ಮೇಳದ ಯಜಮಾನರುಗಳನ್ನೂ ಸಹಕಲಾವಿದರನ್ನೂ ಸದಾ ನೆನಪಿಸುವ ಪದ್ಯಾಣ ಗಣಪತಿ ಭಟ್ಟರು ಶೇಣಿ ಗೋಪಾಲಕೃಷ್ಣ ಭಟ್ಟರು ನನ್ನ ಎರಡನೇಯ ಗುರುವಾದರೆ, ಅಗರಿ ಶ್ರೀ ರಘುರಾಮ ಭಾಗವತರು ಮೂರನೆಯ ಗುರುಗಳು ಎಂಬ ಮಾತನ್ನು ಹೇಳಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಶೇಣಿಯವರಿಗೆ ಬಡಗಿನ ಶ್ರೇಷ್ಠ ಭಾಗವತರಾಗಿದ್ದ ಜಿ. ಆರ್. ಕಾಳಿಂಗ ನಾವಡ ಮತ್ತು ತೆಂಕಿನ ಶ್ರೇಷ್ಠ ಭಾಗವತರಾಗಿದ್ದ ಶ್ರೀ ದಾಮೋದರ ಮಂಡೆಚ್ಚರೆಂದರೆ ಅಚ್ಚುಮೆಚ್ಚು. ಕಾಳಿಂಗ ನಾವಡರಿಂದ ಪ್ರಶಂಸಿಸಲ್ಪಟ್ಟವರು ಪದ್ಯಾಣ ಗಣಪತಿ ಭಟ್ಟರು. ದಾಮೋದರ ಮಂಡೆಚ್ಚರು ಅವ್ಯಕ್ತ ಲೋಕವನ್ನು ಸೇರಿಕೊಂಡ ಮೇಲೆ ಆಟ, ಕೂಟಗಳಿಗೆ ಶೇಣಿಯವರು ಪದ್ಯಾಣರನ್ನೇ ಆಯ್ಕೆ ಮಾಡುತ್ತಿದ್ದರಂತೆ. ಇದು ಪದ್ಯಾಣ ಗಣಪತಿ ಭಟ್ಟರ ಪ್ರತಿಭೆಗೆ ಸಂದ ಗೌರವ. ಶೇಣಿ, ತೆಕ್ಕಟ್ಟೆ, ಅಗರಿ ರಘುರಾಮ ಭಾಗವತ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟದಿಂದ ಪಕ್ವರಾಗಿ ಶ್ರೀ ಪದ್ಯಾಣ ಗಣಪತಿ ಭಟ್ಟರು ರಂಗದಲ್ಲಿ ವಿಜೃಂಭಿಸಿದರು. ಸುರತ್ಕಲ್, ಮಂಗಳಾದೇವಿ, ಹೊಸನಗರ ಮೇಳಗಳಲ್ಲಿ ತಿರುಗ