Posts

Showing posts from January, 2020

ಯಕ್ಷಗಾನ ಹಿಮ್ಮೇಳದ ಭಾಗವತಶ್ರೇಷ್ಠ ಇರಾ ಗೋಪಾಲಕೃಷ್ಣ ಭಾಗವತರು - ನುಡಿನಮನಗಳು

Image
                  ಬಹಳ ಹಿಂದಿನ ಕಾಲದಲ್ಲಿ ಮಾಧ್ಯಮಗಳ ಸಂಖ್ಯೆ ಅತಿ ಕಡಿಮೆಯಾಗಿತ್ತು. ಕೇವಲ ದಿನಪತ್ರಿಕೆಗಳಿಂದಲೇ ವಿಚಾರಗಳನ್ನು ತಿಳಿದುಕೊಳ್ಳಬೇಕಾಗಿತ್ತು. ದಿನಪತ್ರಿಕೆಗಳ ಸಂಖ್ಯೆಯೂ ಕಡಿಮೆಯಿದ್ದ ಕಾಲಘಟ್ಟ ಅದು. ಈಗ ಕಾಲ ಬದಲಾಗಿದೆ. ಇದು ವೇಗದ ಯುಗ. ತಂತ್ರಜ್ಞಾನ ಬೆಳೆದಿದೆ. ಫೇಸ್‍ಬುಕ್, ವಾಟ್ಸಾಪ್ ಮೊದಲಾದ ಅಂತರ್ಜಾಲ ಮಾಧ್ಯಮಗಳು ಇವೆ. ಯಕ್ಷಗಾನಕ್ಕೂ ಮಾಧ್ಯಮಗಳಿಗೂ ಏನು ಸಂಬಂಧ? ಎಂಬ ಪ್ರಶ್ನೆ ಹುಟ್ಟಬಹುದು. ವಿಚಾರಗಳನ್ನು ಜನರಿಗೆ ತಲುಪುವಂತೆ ಮಾಡುವುದು ಮಾಧ್ಯಮಗಳು  ತಾನೆ. ಲೋಕದಲ್ಲಿ ನಡೆಯುವ ಎಲ್ಲಾ ವಿಚಾರಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಧ್ಯಮಗಳು ನಿರ್ವಹಿಸುತ್ತವೆ. ಒಳಿತನ್ನು ಪ್ರಶಂಸಿಸುವುದು, ಕೆಡುಕನ್ನು ಯಾರಿಗೂ ನೋವಾಗದಂತೆ ಸೂಚಿಸಿ ಅದನ್ನು ನಿವಾರಿಸುವುದು, ಮಾಧ್ಯಮಗಳ ಧರ್ಮವೇ ಆಗಿದೆ. ಕಲೆಯೂ ಇದಕ್ಕೂ ಹೊರತಾಗಿಲ್ಲ. ಕಲೆ ಮತ್ತು ಕಲಾವಿದರ ವಿಚಾರಗಳನ್ನೂ ಮಾಧ್ಯಮಗಳು ಪ್ರಕಟಿಸುತ್ತವೆ. ಆ ಮೂಲಕ ಕಲೆಯ ಬೆಳವಣಿಗೆಗೆ ಕಾರಣವಾಗುತ್ತವೆ. ಸರಿಯಾದ ವಿಚಾರಗಳನ್ನು ಪ್ರಕಟಿಸಿದಾಗ ಓದಿದ ಜನರು ಮಾಧ್ಯಮಗಳನ್ನು ಗೌರವಿಸಿಯೇ ಗೌರವಿಸುತ್ತಾರೆ. ಮಾಧ್ಯಮಗಳ ಸಂಖ್ಯೆ ಕಡಿಮೆಯಿದ್ದ ಕಾಲದಲ್ಲೂ ತನ್ನ ಪ್ರತಿಭಾ ವ್ಯಾಪಾರದಿಂದಲೇ ರಂಗವನ್ನಾಳಿ ಪ್ರೇಕ್ಷಕರ ಮನಗೆದ್ದ ಕಲಾವಿದರನೇಕರು. ಹಿಮ್ಮೇಳದ ಹಾಡುಗಾರಿಕೆ ವಿಭಾಗದಲ್ಲಿ ದಿ| ಬಲಿಪ ನಾರಾಯಣ ಭಾಗವತರು (ದೊಡ್ಡ ಬಲಿಪರು),  ಅಗರಿ ಶ್ರೀನಿವಾಸ ಭಾಗವತರು, ಪುತ್ತಿಗೆ ರಾಮಕೃಷ್ಣ