Posts

Showing posts from March, 2020

ಬಡಗುತಿಟ್ಟಿನ ಸವ್ಯಸಾಚಿ ಕಲಾವಿದ ಶ್ರೀ ಅಶೋಕ ಭಟ್ ಸಿದ್ಧಾಪುರ

Image
                          ಶ್ರೀ ಅಶೋಕ ಭಟ್ ಸಿದ್ಧಾಪುರ ಅವರು ಬಡಗುತಿಟ್ಟಿನ ಶ್ರೇಷ್ಠ ಕಲಾವಿದರಲ್ಲೊಬ್ಬರು. ಎಲ್ಲಾ ತೆರನಾದ ಪಾತ್ರಗಳನ್ನು ನಿರ್ವಹಿಸಬಲ್ಲ ಅನುಭವಿಗಳು. ಪಾತ್ರೋಚಿತವಾಗಿ ಅಭಿನಯಿಸುವ ಕಲೆಯನ್ನು ಸಿದ್ಧಿಸಿಗೊಂಡವರು. 1980ನೆಯ ಇಸವಿಯಿಂದ ತೊಡಗಿ ಸುಮಾರು ಮೂವತ್ತೊಂಬತ್ತು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಸವ್ಯಸಾಚಿಯಾಗಿ, ಅತ್ಯುತ್ತಮ ಪೋಷಕ ಪಾತ್ರಧಾರಿಯಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ತೆರೆದು ಕಾಣಿಸಿಕೊಳ್ಳುವ ಸ್ವಭಾವವನ್ನು ಹೊಂದಿದವರಲ್ಲ. ಪ್ರಚಾರದಿಂದ ಯಾವತ್ತೂ ಬಲುದೂರ ಉಳಿಯುತ್ತಾರೆ. ತನ್ನ ಪ್ರತಿಭಾ ವ್ಯವಹಾರದಿಂದಲೇ ರಂಗದಲ್ಲಿ ಅಭಿನಯಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಾತ್ರವನ್ನು ಧರಿಸಿ ರಂಗಪ್ರವೇಶಿಸಿದ ತಕ್ಷಣ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಕಲೆಯು ಇವರಿಗೆ ಕರಗತ. ಕಲಾಬದುಕನ್ನು ಹಳ್ಳಿಯಿಂದ ಆರಂಭಿಸಿದರೂ ಕೊಂಡದಕುಳಿಯವರ ತಂಡದ ಸದಸ್ಯನಾಗಿ ಸಿಂಗಾಪುರ್, ದುಬಾೈ, ಕುವೈಟ್, ಶಾರ್ಜಾಗಳಲ್ಲಿ ತನ್ನ ಪ್ರತಿಭೆಯನ್ನು ಮೆರೆಸಿದ ಕಲಾವಿದರಿವರು. ಅಶೋಕ ಭಟ್ ಸಿದ್ಧಾಪುರ                  ಶ್ರೀ ಅಶೋಕ್ ಭಟ್ ಅವರು 1961ನೇ ಇಸವಿ ಡಿಸೆಂಬರ್ ಹದಿನೇಳರಂದು ಈ ಲೋಕದ ಬೆಳಕನ್ನು ಕಂಡವರು. ಇವರು ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಹೊನ್ನೆಗುಂಡಿ. ಶ್ರೀ ತಿಮ್ಮಣ್ಣ ಭಟ್ಟ ಮತ್ತು ಶ್ರೀಮತಿ ಯಶೋದಾ ದಂಪತಿಗಳ ಪುತ್ರರಿವರು.

ಬಹುಮುಖ ಪ್ರತಿಭಾವಂತ ಕಲಾವಿದ - ಎಚ್. ಉಮಾಮಹೇಶ್ವರ ಶರ್ಮ

Image
                          ಎಳವೆಯಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರಿಗೆ ತಾನು ಕಲಾವಿದನಾಗಬೇಕೆಂಬ ಆಸೆ ಮೂಡುವುದು ಸಹಜ. ಆದರೆ ಎಲ್ಲರ ಆಸೆಗಳೂ ಕೈಗೂಡುವುದಿಲ್ಲ. ಅವಕಾಶಗಳಿದ್ದು ಈ ಕ್ಷೇತ್ರಕ್ಕೆ ಪ್ರವೇಶಿಸಿದವರ ಅಭಿರುಚಿಗೆ ತಕ್ಕಂತೆ ಆಯ್ಕೆಗೆ ಅವಕಾಶಗಳೂ ಇವೆ. ಕೆಲವರಿಗೆ ತಾನು ಭಾಗವತನಾಗಬೇಕೆಂದೂ ಮದ್ದಲೆಗಾರನಾಗಬೇಕೆಂದೂ ಆಸೆಯಿರುತ್ತದೆ. ಶ್ರೇಷ್ಠ ವೇಷಧಾರಿಯಾಗಬೇಕೆಂಬ ಕನಸನ್ನು ಕಾಣುತ್ತಾರೆ. ವೇಷಧಾರಿಯಾಗಬೇಕೆಂದು ನಿರ್ಣಯಿಸಿದರೆ ಅಲ್ಲಿಯೂ ಅವರ ಕನಸನ್ನು ನನಸಾಗಿಸಲು ಆಯ್ಕೆಗೆ ಅವಕಾಶಗಳು ಇದ್ದೇ ಇದೆ. ತಾನು ಬಣ್ಣದ ವೇಷಧಾರಿಯಾಗಬೇಕೆಂದೂ, ಹಾಸ್ಯಗಾರನಾಗಬೇಕೆಂದೂ, ಸ್ತ್ರೀಪಾತ್ರಧಾರಿಯಾಗಬೇಕೆಂದೂ, ಪುಂಡುವೇಷಗಳನ್ನು ನಿರ್ವಹಿಸಬೇಕೆಂದೂ, ಕಿರೀಟ ವೇಷಗಳನ್ನು ಮಾಡಬೇಕೆಂದೂ ಬಯಸುತ್ತಾರೆ. ಒಬ್ಬೊಬ್ಬರ ರುಚಿಯು ಒಂದೊಂದು ತೆರನಾದುದು. ಎಲ್ಲವನ್ನೂ ನಿರ್ವಹಿಸಲು ಇದು ಏಕಪಾತ್ರಾಭಿನಯವಲ್ಲ. ಯಕ್ಷಗಾನವು ಒಂದು ಸಮಷ್ಠಿ ಕಲೆ. ಶ್ರೇಷ್ಠ ಕಲಾಪ್ರಕಾರ. ಹೀಗೆ ಕಲಿಯುತ್ತಾ ಬೆಳೆದು ಒಂದೊಂದು ವಿಭಾಗದಲ್ಲಿ ಮಿಂಚಿ, ಹೆಸರುವಾಸಿಯಾದ ಕಲಾವಿದರು ಅನೇಕರು. ಆದರೂ ತನಗೆ ಕೊಟ್ಟ ಯಾವ ಪಾತ್ರಗಳನ್ನೂ ನಿರ್ವಹಿಸಬಲ್ಲ ಕಲಾವಿದರುಗಳೂ ಇದ್ದಾರೆ. ಅನಿವಾರ್ಯವಾದರೆ ತಾನು ಯಾವಾಗಲೂ ನಿರ್ವಹಿಸುವ ಪಾತ್ರಗಳ ಹೊರತಾಗಿ, ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರದರ್ಶನಕ್ಕೆ ತೊಂದರೆಯಾಗದಂತೆ ಸಹಕರಿಸುವ ಕಲಾವಿದರೂ ಇದ್ದಾರೆ. ಇದು ಒಂದು ಕಲೆ. ಸ

ತೆಂಕುತಿಟ್ಟಿನ ಹಿರಿಯ, ನಿವೃತ್ತ ಬಣ್ಣದ ವೇಷಧಾರಿ ದಾಸನಡ್ಕ ಶ್ರೀ ರಾಮ ಕುಲಾಲ್

Image
                         ಯಕ್ಷಗಾನದಲ್ಲಿ ಬಣ್ಣದ ವೇಷಗಳು ಎಂಬ ವಿಚಾರ ಬಂದಾಗ ಇತ್ತೀಚೆಗೆ ನಡೆದ ಒಂದು ಘಟನೆಯು ನೆನಪಾಗುತ್ತದೆ. ಕಡಬ ತಾಲೂಕಿನ ರಾಮಕುಂಜ ವಿದ್ಯಾಲಯದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಎಂಬ ಘನ ಸಂಸ್ಥೆಯ ಸಹಕಾರದಲ್ಲಿ ‘ಯಕ್ಷನಂದನ’ ಕೊಲ್ಯ ಎಂಬ ಸಂಸ್ಥೆಯು ‘‘ಯಕ್ಷಗಾನ ಪ್ರದರ್ಶನಗಳಲ್ಲಿ ಸ್ಥಾನಪಲ್ಲಟ’’ ಎಂಬ ವಿಚಾರಗೋಷ್ಠಿಯನ್ನು ಏರ್ಪಡಿಸಿತ್ತು. ಸಭೆಯಲ್ಲಿದ್ದ ಮುಲ್ಕಿ ವಿಜಯಾ ಕಾಲೇಜಿನ ಕು| ಆಜ್ಞಾಸೋಹಂ ಎಂಬ ಹೆಸರಿನ ವಿದ್ಯಾರ್ಥಿನಿ ಸಂಪನ್ಮೂಲ ವ್ಯಕ್ತಿಗಳಾಗಿ ವೇದಿಕೆಯಲ್ಲಿದ್ದವರಲ್ಲಿ ಪ್ರಶ್ನೆಯೊಂದನ್ನು ಕೇಳಿದ್ದರು. ‘‘ಯಕ್ಷಗಾನದಲ್ಲಿ ಎಲ್ಲಾ ವೇಷಗಳಿಗೂ ಬಣ್ಣ ಹಾಕಬೇಕು. ಬಣ್ಣಗಾರಿಕೆ ಇಲ್ಲದೆ ವೇಷಗಾರಿಕೆ ಇಲ್ಲ. ಆದರೂ ಎಲ್ಲಾ ವೇಷಗಳನ್ನೂ ಬಣ್ಣದ ವೇಷಗಳು ಎಂದು ಕರೆಯದೆ ಕೆಲವು ವೇಷಗಳನ್ನು ಮಾತ್ರ ಹಾಗೇಕೆ ಗುರುತಿಸುತ್ತಾರೆ?’’ ಎಂಬುದೇ ಆ ಪ್ರಶ್ನೆ. ಆಜ್ಞಾಸೋಹಂ ಎಂಬ ವಿದ್ಯಾರ್ಥಿನಿ ಯಕ್ಷಗಾನ ಕಲಾವಿದೆ. ಮಾತ್ರವಲ್ಲ ಉದಯೋನ್ಮುಖ ಲೇಖಕಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿನಿಯಾದ ಅವರು ಒಳ್ಳೆಯ ಪ್ರಶ್ನೆಯನ್ನು ಕೇಳಿದ್ದರು. ಯಾರು ಸದಾ ಪ್ರಶ್ನಿಸುತ್ತಾರೋ ಅವರ ಬುದ್ಧಿಯು ಸೂರ್ಯನ ಕಿರಣಗಳಿಂದ ಪ್ರಚೋದಿಸಲ್ಪಟ್ಟು ಕಮಲವು ಅರಳಿದಂತೆ ವಿಕಸನ ಹೊಂದುತ್ತದೆ. ‘ಜ್ಞಾತುಂ ಇಚ್ಚುಃ ಜಿಜ್ಞಾಸು’- ತಿಳಿಯುವ ಕುತೂಹಲದಿಂದಲೇ ಜಿಜ್ಞಾಸುವಾಗಿ ಅವರು ಪ್ರಶ್ನೆಯನ್ನು ಕೇಳಿದ್ದರು. ವೇದಿಕೆಯಲ್ಲಿ ಖ್ಯಾತ