Posts

Showing posts from November, 2018

ತೆಂಕು ಬಡಗು ಖ್ಯಾತಿಯ ಸವ್ಯಸಾಚಿ ಭಾಗವತ - ಸತ್ಯನಾರಾಯಣ ಪುಣಿಂಚಿತ್ತಾಯ ಪೆರ್ಲ

Image
                         ಶ್ರೀ ಸತ್ಯನಾರಾಯಣ ಪುಣಿಂಚಿತ್ತಾಯರು ಸವ್ಯಸಾಚಿ ಭಾಗವತರು. ಉಭಯತಿಟ್ಟುಗಳ ಭಾಗವತಿಕೆಯನ್ನೂ ಅಭ್ಯಸಿಸಿ ಹಾಡುತ್ತಿರುವ ಶ್ರೇಷ್ಠ ಕಲಾವಿದ. ಪ್ರಸ್ತುತ ಬಹು ಬೇಡಿಕೆಯುಳ್ಳ ಯುವ ಹಾಡುಗಾರರಲ್ಲೊಬ್ಬರು. ಆಟ, ಕೂಟಗಳಲ್ಲಿ ಅಲ್ಲದೆ ಯಕ್ಷಗಾನದ ಇತ್ತೀಚೆಗಿನ ಪ್ರಯೋಗಗಳಾದ ನಾಟ್ಯವೈಭವ, ಗಾನವೈಭವ ಕಾರ್ಯಕ್ರಮಗಳಲ್ಲೂ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದಾರೆ.                         ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಎಣ್ಮಕಜೆ ಗ್ರಾಮದ ಶಿರಂತಡ್ಕ ಎಂಬಲ್ಲಿ ಗಣಪತಿ ಪುಣಿಂಚಿತ್ತಾಯ ಮತ್ತು ಶ್ರೀಮತಿ ಗೀತಾ ದಂಪತಿಗಳಿಗೆ ಮಗನಾಗಿ 23-12-1971ರಂದು ಸತ್ಯನಾರಾಯಣ ಪುಣಿಂಚಿತ್ತಾಯರು ಜನಿಸಿದರು. ಇವರದು ಬಡ ಕೃಷಿ ಕುಟುಂಬ. ತಂದೆ ಗಣಪತಿ ಪುಣಿಂಚಿತ್ತಾಯರು ಉತ್ತಮ ಹವ್ಯಾಸಿ ಕಲಾವಿದ, ತಾಳಮದ್ದಳೆ ಅರ್ಥಧಾರಿ. ತಾಯಿ ಗೀತಾ ಅವರು ಪ್ರಸಂಗಕರ್ತ, ಹಿಮ್ಮೇಳ ಮುಮ್ಮೇಳ ಕಲಾವಿದ ರಾದ ಅಡೂರು ಸೂರ್ಯನಾರಾಯಣ ಕಲ್ಲೂರಾಯರ ಪುತ್ರಿ. ಹಾಗಾಗಿ ಯಕ್ಷಗಾನ ರಕ್ತಗತವಾಗಿಯೇ ಒಲಿದಿತ್ತು ಸತ್ಯನಾರಾಯಣ ಪುಣಿಂಚಿತ್ತಾಯರಿಗೆ. ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ.ವರೇಗೆ ಓದು. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಮತ್ತು ಇಲೆಕ್ಟ್ರಿಕಲ್ ವಿಚಾರಗಳು ಇವರ ಹವ್ಯಾಸವಾಗಿತ್ತು. ಬಜಕೂಡ್ಲು (ಪೆರ್ಲ ಸಮೀಪ) ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರರಾದ ಬಜಕೂಡ್ಲು ಶ್ರೀ ಕೃಷ್ಣ ಶ್ಯಾನುಬೋಗರಿಂದ (ಸುಬ್ರಾ

ಸಮಾಜ ಸೇವೆಯ ಜತೆ ಕಲಾ ಸೇವೆ - ಡಾ. ಗೋವಿಂದ ಪ್ರಸಾದ ಕಜೆ

Image
                     ಡಾ. ಗೋವಿಂದ ಪ್ರಸಾದ ಕಜೆ ಇವರು 16-10-1962ರಂದು ಪುತ್ತೂರು ತಾಲೂಕು ಕಬಕ ಗ್ರಾಮದ ಕಜೆ ಎಂಬಲ್ಲಿ ಕಜೆ ಈಶ್ವರ ಭಟ್ ಮತ್ತು ಇಂದಿರಾ ಕಜೆ ದಂಪತಿಗಳ ಮಗನಾಗಿ ಜನಿಸಿದರು. ಒಕ್ಟೋಬರ ತಿಂಗಳಿನಲ್ಲಿ ಜನಿಸಿದ ಗೋವಿಂದ ಪ್ರಸಾದ ಕಜೆ ಇವರ ಬಗ್ಗೆ ಲೇಖನವು ಸದ್ರಿ ತಿಂಗಳ ‘ಯಕ್ಷದೀಪ’ ಸಂಚಿಕೆಯಲ್ಲೇ ಪ್ರಕಟಗೊಂಡದ್ದು ನಮಗೆಲ್ಲರಿಗೂ ಸಂತೋಷದ ವಿಚಾರ. ಅವರಿಗೆ ಈ ಮೂಲಕ ಶುಭಾಶಯ ಗಳನ್ನು ಸಲ್ಲಿಸೋಣ. ಇವರು ವೃತ್ತಿಯಲ್ಲಿ ವೈದ್ಯರು. ಉಪ್ಪಿನಂಗಡಿಯಲ್ಲಿ ‘ಸಂಜೀವಿನಿ ಕ್ಲಿನಿಕ್’ ನಡೆಸು ತ್ತಿದ್ದಾರೆ. ಯಕ್ಷಗಾನವು ಇವರಿಗೆ ಹವ್ಯಾಸ. ಮಾತ್ರವಲ್ಲ ಗಂಡುಕಲೆಯ ಬಗ್ಗೆ ಅಭಿಮಾನವನ್ನೂ ಪ್ರೀತಿಯನ್ನೂ ಹೊಂದಿದವರು. ಇವರಿಗೆ 1 ವರ್ಷ ತುಂಬಿದಾಗ ಕಜೆ ಈಶ್ವರ ಭಟ್ಟರು ಬೆಳ್ತಂಗಡಿ ತಾಲೂಕು ಮಾಣಿಮಾರು ಎಂಬಲ್ಲಿ ನೆಲೆಸಿದರು. ಈ ಪ್ರದೇಶ ನೇತ್ರಾವತೀ ನದಿಯ ತೀರ. ಉಪ್ಪಿನಂಗಡಿ ನಗರದ ಸಮೀಪ ಹರಿಯುವ ನದಿಯ ಮತ್ತೊಂದು ದಡ. ಆಗ ಸೇತುವೆ ಇರಲಿಲ್ಲ. ಕೆಲಸ ನಡೆಯುತ್ತಿತ್ತು. ಹೊಳೆ ದಾಟಲು ದೋಣಿಯೇ ಆಧಾರ. ಮುಂದಿನ ವರ್ಷ ಹೊಸ ಸೇತುವೆ ನಿರ್ಮಾಣಗೊಂಡಿತು. ಸಂಪರ್ಕಕ್ಕೆ ಒಳ್ಳೆಯ ವ್ಯವಸ್ಥೆ ಸಿದ್ಧವಾಗಿತ್ತು. ಉಪ್ಪಿನಂಗಡಿ ಸರಕಾರೀ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವರೇಗೆ ಓದಿದ ಗೋವಿಂದ ಪ್ರಸಾದರು ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪೂರೈಸಿದರು. ನಂತರ ಉಡುಪಿಯ ಎಸ್.ಡಿ.ಎಂ. ಆಯುರ್ವೇದ ವಿದ್ಯಾಲಯದಲ್ಲಿ 5 ವರ್ಷಗಳ ವ

ಸಮರ್ಥ ಕಲಾಸೇವಕ - ಪೆರ್ಲ ಶ್ರೀ ಜಗನ್ನಾಥ ಶೆಟ್ಟಿ

Image
                     ಶ್ರೀ ಪೆರ್ಲ ಜಗನ್ನಾಥ ಶೆಟ್ಟರು ಪ್ರಸ್ತುತ ಶ್ರೀ ಹನುಮಗಿರಿ ಮೇಳದ ಕಲಾವಿದರು. ಸರಳ, ಸಜ್ಜನ, ನಿಗರ್ವಿ, ವಿನಯವಂತರು. ಸುಮಾರು 37 ವರುಷಗಳಿಂದ ಯಕ್ಷಗಾನ ಕಲಾವಿದನಾಗಿ ಹೆಸರು ಗಳಿಸಿದ್ದಾರೆ. ಸಾತ್ವಿಕ ಪಾತ್ರಗಳಲ್ಲಿ ರಂಜಿಸುವ ಇವರು ಅಗತ್ಯಬಿದ್ದರೆ ಹಾಸ್ಯಪಾತ್ರಗಳನ್ನೂ ಮಾಡಬಲ್ಲ ಸಾಹಸಿ. ‘‘ಪೆರ್ಲ ಜಗನ್ನಾಥ ಶೆಟ್ಟರು ಮತ್ತು ಪ್ರಜ್ವಲ್ ಕುಮಾರರು ಇದ್ದರೆ ಯಾವ ಪ್ರಸಂಗವನ್ನೂ ಪ್ರದರ್ಶಿಸಬಹುದು’’- ಖ್ಯಾತ ಕಲಾವಿದ, ಸಂಘಟಕ ಶ್ರೀ ಉಜಿರೆ ಅಶೋಕ ಭಟ್ಟರ ಈ ಮಾತುಗಳು ಜಗನ್ನಾಥ ಶೆಟ್ಟರಿಗೆ ಸಿಕ್ಕ ಶ್ರೇಷ್ಠ ಪ್ರಶಸ್ತಿಯೇ ಹೌದು.                     ಕೇರಳ ರಾಜ್ಯ, ಕಾಸರಗೋಡು ಜಿಲ್ಲೆಯ, ಎಣ್ಮಕಜೆ ಗ್ರಾಮದ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಸಮೀಪವಿರುವ ಪಟ್ಲ ಮನೆಯಲ್ಲಿ 14-10-1966ರಂದು ಜಗನ್ನಾಥ ಶೆಟ್ರು ಜನಿಸಿದರು. ತಂದೆ ಪಟ್ಲ ಮಂಜಪ್ಪ ಶೆಟ್ಟಿ. ತಾಯಿ ಕಮಲಾ ಶೆಟ್ಟಿ (ಕೊಳ್ತಿಗೆ ಗ್ರಾಮದ ಪಾಲ್ತಾಡಿ ಮೂಲದವರು). ಇವರದು ಕೃಷಿ ಕುಟುಂಬ. ಜತೆಗೆ ಜಗನ್ನಾಥ ಶೆಟ್ಟರ ತಂದೆ ಪೆರ್ಲದಲ್ಲಿ ಹೋಟೆಲನ್ನೂ ನಡೆಸುತ್ತಿದ್ದರು. ಕಾಟುಕುಕ್ಕೆ ಬಾಲಪ್ರಭಾ ಅಪ್ಪರ್ ಪ್ರೈಮರೀ ಶಾಲೆಯಲ್ಲಿ 7ನೇ ತರಗತಿ, ಪೆರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ 8ನೇ ತರಗತಿವರೇಗೆ ಓದಿ ಶಾಲೆಗೆ ಅನಿವಾರ್ಯವಾಗಿ ವಿದಾಯ ಹೇಳಬೇಕಾಯಿತು. ಎಳವೆಯಲ್ಲೆ ಯಕ್ಷಗಾನಾಸಕ್ತಿ. ಪೆರ್ಲ ಪರಿಸರದಲ್ಲಿ ಧರ್ಮಸ್ಥಳ, ಸುರತ್ಕಲ್, ಕರ್ನಾಟಕ, ಆದಿಸುಬ್ರಹ್ಮಣ್

ಬಹುಮುಖ ಪ್ರತಿಭೆಯ - ಶ್ರೀಧರ್ ಡಿ. ಎಸ್.

Image
           ಶ್ರೀಧರ್ ಡಿ. ಎಸ್. ಅವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ. ವಿದ್ಯಾರ್ಜನೆ ಉಡುಪಿಯಲ್ಲಿ. ವೃತ್ತಿಜೀವನ ದ. ಕ. ಜಿಲ್ಲೆಯ ಕಿನ್ನಿಗೋಳಿಯಲ್ಲಿ. ಪೊಂಪೇ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೆಚ್ಚುಗೆಯ ಉಪನ್ಯಾಸಕನಾಗಿ ಸದ್ಯ ಕಿನ್ನಿಗೋಳಿಯಲ್ಲಿ ನಿವೃತ್ತ ಜೀವನವನ್ನು ನಡೆಸುತ್ತಾ ಜತೆಗೆ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಕಲಾವಿದನಾಗಿ, ಉಪನ್ಯಾಸಕನಾಗಿ, ಕಲಾಸಂಘಟಕನಾಗಿ, ಲೇಖಕನಾಗಿ, ಪ್ರಸಂಗಕರ್ತನಾಗಿ ಗುರುತಿಸಿಕೊಂಡು ಕೀರ್ತಿಯನ್ನು ಗಳಿಸಿದರು. ಇವರು ಬರೆದ ಪ್ರಸಂಗಗಳು ‘ಯಕ್ಷಗಾನ ಪ್ರಸಂಗ ಮಾಲಿಕಾ’ ಸಂಪುಟವಾಗಿ ಪ್ರಕಟಗೊಂಡಿದ್ದು, ಈ ಕೃತಿಗೆ 2011ನೇ ಸಾಲಿನ ಯಕ್ಷಗಾನ ಬಯಲಾಟ ಅಕಾಡಮಿಯಿಂದ ಶ್ರೇಷ್ಠ ಪುಸ್ತಕ ಪ್ರಶಸ್ತಿಯೂ ಬಂದಿತ್ತು. 2016ನೇ ಇಸವಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದರು. ಯಕ್ಷಗಾನ ಮತ್ತು ಇತರ ಪತ್ರಿಕೆಗಳಿಗೆ ಇವರು ಬರೆದ ಲೇಖನಗಳು ಸುಮಾರು 475ಕ್ಕೂ ಮಿಕ್ಕಿ. ಯಕ್ಷಗಾನ ಕವಿಗಳ ಬಗ್ಗೆ ಇವರು ಬರೆದ ಲೇಖನಗಳು 25. ನಾಟಕಗಳ ಬಗ್ಗೆ ಅಲ್ಲದೆ ಉದಯವಾಣಿ, ಹೊಸದಿಗಂತ, ತುಷಾರ ಮೊದಲಾದ ಪತ್ರಿಕೆಗಳಲ್ಲಿ ಇವರು ಬರೆದ ಲೇಖನಗಳು ಪ್ರಕಟವಾಗಿದೆ. ಅಂಕಣಗಳೆಲ್ಲಾ ಬರಹಗಾರರಾಗಿ ಕಾಣಿಸಿಕೊಂಡಿರುತ್ತಾರೆ. ಮುಖಪುಸ್ತಕದಲ್ಲಿ (Facebook) ಆಟದಲ್ಲಿ ಅವಾಂತರ, ಹೀಗೂ ಆಗುತ್ತೆ, ತಾಳಮದ್ದಳೆಯಲ್ಲಿ ತಲೆಹರಟೆ ಎಂಬ ತಲೆ

ಹಿರಿಯ ತಾಳಮದ್ದಳೆ ಅರ್ಥಧಾರಿ ಶ್ರೀ ಬರೆ ಕೇಶವ ಭಟ್

Image
                  ಶ್ರೀ ಬರೆ ಕೇಶವ ಭಟ್ಟರು ಯಕ್ಷಗಾನ ತಾಳಮದ್ದಳೆಯ ಹಿರಿಯ, ಶ್ರೇಷ್ಠ ಅರ್ಥಧಾರಿಗಳಲ್ಲೊಬ್ಬರು. ವಿಮರ್ಶಕ, ಲೇಖಕ, ಶ್ರೇಷ್ಠ ಅರ್ಥಧಾರಿಗಳಾದ ಡಾ. ಎಂ. ಪ್ರಭಾಕರ ಜೋಷಿ, ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳಂತೆ ಯಕ್ಷಗಾನ ಕಲೆಯ ಬಗೆಗೆ ಅನುಭವಗಳನ್ನು ಹೊಂದಿ ಇದಮಿತ್ಥಂ ಎಂದು ಹೇಳಬಲ್ಲವರು. ಜೋಷಿ, ಶಾಸ್ತ್ರಿಗಳಂತೆ ಶೇಣಿ, ಸಾಮಗರ ಸಮಕಾಲೀನರಾಗಿ ಕೂಟಗಳಲ್ಲಿ ಭಾಗವಹಿಸಿ ಪಕ್ವರಾದವರು. ಗಂಭೀರ ಸ್ವಭಾವದವರಾದರೂ ಸರಳವಾಗಿ ಜೀವಿಸಿದವರು. ಧರಿಸಿದ ಉಡುಪುಗಳಂತೆ ಅಂತರಂಗವೂ ಸ್ವಚ್ಛ. ಮಗುವಿನಂತೆ ಮುಗ್ಧ ಮನಸ್ಸನ್ನು ಹೊಂದಿದ ಶ್ರೀ ಬರೆ ಕೇಶವ ಭಟ್ಟರು ಕಿರಿಯರಿಗೆ ಗುರುವಾಗಿಯೂ, ಸಮಾನ ವಯಸ್ಕರಿಗೆ ಅತ್ಯುತ್ತಮ ಮಿತ್ರರಾಗಿಯೂ ಸಲಹೆಗಳನ್ನು ಕೊಡಬಲ್ಲ, ಕೊಟ್ಟ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿ ಬದುಕಿದವರು. ಸಹ ಕಲಾವಿದರ ನಿರ್ವಹಣೆ ಮೆಚ್ಚುಗೆಯಾದರೆ ಪ್ರೋತ್ಸಾಹಿಸುವ, ತಪ್ಪಾದರೆ ನಯವಾಗಿ ಖಂಡಿಸುವ ಗುಣಗಳನ್ನು ಹೊಂದಿದವರು. ತಾನು ಕಾಣಿಸಿಕೊಳ್ಳಬೇಕೆಂಬ ಆಸೆಯೇ ಇಲ್ಲ. ತಾಳಮದ್ದಳೆ ಒಳ್ಳೆಯದಾಗಬೇಕೆಂಬ ತುಡಿತ ಮಾತ್ರ.                            ಶ್ರೀ ಬರೆ ಕೇಶವ ಭಟ್ಟರು ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಬರೆ ಎಂಬಲ್ಲಿ 30-10-1941ರಂದು ಬರೆ ವೆಂಕಟ್ರಮಣ ಭಟ್ಟ ಮತ್ತು ಶ್ರೀಮತಿ ಗೌರಿ ದಂಪತಿಗಳ ಮಗನಾಗಿ ಜನಿಸಿದರು. ಕೈರಂಗಳ ಮತ್ತು ವಿಟ್ಲ ಶಾಲೆಗಳಲ್ಲಿ ಓದಿದ ಇವರದು ಕೃಷಿ ಕುಟುಂಬ. ನಂತರ ಮಂಗಳೂರು ಶಿಕ್ಷಕರ ತ

ಸರ್ಪಂಗಳ ಪ್ರಶಸ್ತಿ ವಿಜೇತ - ಅಭಿನವ ವಾಲ್ಮೀಕಿ, ಯಕ್ಷಗಾನದ ಸಮರ್ಥ ನಿರ್ದೇಶಕ - ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜ

Image
                 ‘‘ವಿದ್ವಾಂಸನು ಗುಹೆಯೊಳಡಗಿದರೂ ಕರೆತಂದು ಗೌರವಿಸುತ್ತಾರೆ’’ ಎಷ್ಟು ಅರ್ಥಪೂರ್ಣವಾದ ಮಾತು. ಅರ್ಹರನ್ನು ಗುರುತಿಸಿ ಗೌರವಿಸ ಬೇಕಾದುದು ನಮಗೆ ಕರ್ತವ್ಯವೂ ಹೌದು. ಪಕ್ವವಾದುದನ್ನೇ ಬಳಸುವುದು ಸಂಸ್ಕೃತಿ. ಅಪಕ್ವವಾದುದು ಆಕರ್ಷಣೀಯವಾಗಿದ್ದರೂ ಬಳಸದೆ ಎತ್ತಿ ಎಸೆಯುವುದು ಸರಿಯಾದ ರೀತಿ. ನಿಜಪ್ರತಿಭೆಗೆ ಪ್ರಶಸ್ತಿಯು ಸಂದಾಗ ಆ ಪ್ರಶಸ್ತಿಯ ಗೌರವವೂ ಹೆಚ್ಚುತ್ತದೆ. ಸರ್ಪಂಗಳ ಪ್ರಶಸ್ತಿ ವಿಜೇತರಾದ         ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ಮತ್ತು ಅವರನ್ನು ಗೌರವಿಸಿದ ಮಹನೀಯರುಗಳಿಗೆ ಓದುಗರ, ಸಮಸ್ತ ಕಲಾಭಿಮಾನಿಗಳ ಪರವಾಗಿ ಅಭಿನಂದನೆಗಳು. ಶ್ರೀ ಪೂಂಜರನ್ನು ಅರಸಿಕೊಂಡು ಇನ್ನಷ್ಟು ಪ್ರಶಸ್ತಿಗಳು ಬರಲಿ ಎಂಬ ಹಾರಯಿಕೆಗಳು. ಶ್ರೀಯುತರು ಕಟೀಲು ಮೇಳದ ಹಿರಿಯ ಭಾಗವತರು. ಅವರದು ಬಹುಮುಖ ಪ್ರತಿಭೆ. ಅದ್ಭುತ ಪ್ರತಿಭೆ. ಅದ್ಭುತವೆಂದರೆ ಪ್ರಕೃತಿಗೆ ವಿರುದ್ಧವಾದುದು ಎಂದರ್ಥ. ಮಾನವನಾಗಿ ಹುಟ್ಟಿದವನಿಗೆ ಸಾಧನೆಯನ್ನು ಮಾಡುವಲ್ಲಿ ಒಂದು ಮಿತಿ ಇದೆ. ಸತತ ಅಭ್ಯಾಸಿಯಾಗಿ, ತನ್ನ ಪ್ರತಿಭಾ ವ್ಯಾಪಾರದಿಂದ, ಉಳಿದವರಿಗೆ ಎಟುಕಲಾರದ ಸಾಧನೆಯನ್ನು ಮಾಡಿದರೆ ಅದು ಅದ್ಭುತ ಎನಿಸಲ್ಪಡುತ್ತದೆ. ಪೂಂಜರು ಅಂತಹ ಮಹಾನ್ ಸಾಧಕ. ಅವರೊಳಗೊಬ್ಬ ನಿರ್ದೇಶಕನಿದ್ದಾನೆ, ಕವಿಶ್ರೇಷ್ಠನಿದ್ದಾನೆ, ಕಲಾವಿದ ನಿದ್ದಾನೆ. ಶಿಷ್ಯರಿಗೆ ವಿದ್ಯೆಯೆಂಬ ಪೀಯೂಷವನ್ನು ಉಣಿಸುವ ಗುರುವಿದ್ದಾನೆ, ಉತ್ತಮ ಸಲಹೆಗಳನ್ನು ನೀಡಿ ಸಂತೈಸುವ ಮಿತ್ರನಿದ್ದಾನೆ!

ಅಳಿದರೂ ಕಾಯ, ಉಳಿಯಿತು ಕೀರ್ತಿ ... ದಿ| ಪುಚ್ಚೆಕೆರೆ ಕೃಷ್ಣ ಭಟ್ಟರು

Image
                        ಪರರಿಗಾಗಿ ಬದುಕುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಇದು ಲೌಕಿಕ ಪ್ರಪಂಚ.  ನಾನು ಶಾಶ್ವತನಲ್ಲ. ಸಾಧನೆಯನ್ನು ಮಾಡುತ್ತಾ ಸಮಾಜಕ್ಕೆ ಕೊಡುಗೆಗಳನ್ನಿತ್ತರೆ ಜೀವನ ಸಾರ್ಥಕವಾಗುತ್ತದೆ ಎಂಬ ಅರಿವು ಮನೋಭಾವನೆ ಇರಬೇಕು. ಬದುಕಿರುತ್ತಾ ಸಾಯದೆ, ಸತ್ಕರ್ಮಗಳನ್ನು ಮಾಡುತ್ತಾ ಜೀವನಯಾತ್ರೆಯನ್ನು ಕೊನೆಗೊಳಿಸಿದರೂ, ಅವರು ಜನಮಾನಸದಲ್ಲಿ ಶಾಶ್ವತರಾಗಿ ನೆಲೆಸುತ್ತಾರೆ. ಹುಟ್ಟು ಆಕಸ್ಮಿಕ, ಮರಣ ನಿಶ್ಚಿತ. ಲೋಕನಿಯಮವನ್ನು ಮುರಿದು ಮೆರಯಲು ಯಾರಿಂದಲೂ ಅಸಾಧ್ಯ. ಯಾರಿಗೂ ಸಾಧ್ಯವಿಲ್ಲ. ಆದರೂ ಬದುಕಿ ಸಾಯದೆ ಸತ್ತು ಬದುಕುವ ರೀತಿಯಾದರೂ ಗೊತ್ತಿರಬೇಕು. ದುರ್ಲಭವಾದರೂ, ಸಿದ್ಧಿಸದ ಮಾನವಜನ್ಮವನ್ನು ಸಾರ್ಥಕ್ಯಗೊಳಿಸುವ ವಿಧಾನವೇ ಇದು. ಅಧ್ಯಾಪಕನಾಗಿ, ಕಲಾಪೋಷಕನಾಗಿ, ಕಲಾವಿದನಾಗಿ, ಸಂಘಟಕನಾಗಿ ನಿಸ್ವಾರ್ಥ ಸೇವೆಯನ್ನು ಮಾಡಿದ ಶ್ರೀ ಪುಚ್ಚೆಕೆರೆ ಕೃಷ್ಣ ಭಟ್ಟರು ಈಗ ನಮ್ಮನ್ನಗಲಿದರೂ ಅವರ ಆದರ್ಶಗಳು ಜೀವಂತವಾಗಿವೆ. ಎಲ್ಲರಿಗೂ ಅನುಸರಣೀಯವಾದುದು.  ಶ್ರೀ ಪುಚ್ಚೆಕೆರೆ ಕೃಷ್ಣ ಭಟ್ಟ                        ಶ್ರೀ ಪುಚ್ಚೆಕೆರೆ ಕೃಷ್ಣ ಭಟ್ಟರು ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಪುಚ್ಚೆಕೆರೆ, ಶ್ರೀ ಕೃಷ್ಣ ಭಟ್ಟರ ಹುಟ್ಟೂರು. ಶ್ರೀ ಶಂಕರ ಭಟ್ಟ, ಸಾವಿತ್ರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನನ. ಮಂಚಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಉಡುಪಿಯಲ್ಲಿ ಪ್ರೌಢಶಿಕ್ಷಣ. ಉಜಿರೆ ಸಿದ್ಧವನದಲ್ಲಿ ಅಧ್ಯಾಪಕ ತರಬೇತಿಯನ

ಐದು ದಶಕಗಳ ಕಾಲ ರಂಗವಾಳಿದ ಸ್ತ್ರೀಪಾತ್ರಧಾರಿ - ಕೋಳ್ಯೂರು ಶ್ರೀ ರಾಮಚಂದ್ರ ರಾಯರಿಗೆ 2018ನೇ ಸಾಲಿನ ಪಿ. ವಿ. ಹಾಸ್ಯಗಾರ ಪ್ರಶಸ್ತಿ

Image
                                  ಕೋಳ್ಯೂರು ಶ್ರೀ ರಾಮಚಂದ್ರ ರಾಯರು ಯಕ್ಷಗಾನ ಜಗತ್ತು ಕಂಡ ಅತ್ಯುತ್ತಮ ಸ್ತ್ರೀಪಾತ್ರಧಾರಿಗಳಲ್ಲೊಬ್ಬರು. ಐದು ದಶಕಗಳಿಗೂ ಮಿಕ್ಕಿದ ತಿರುಗಾಟ. ವಿದ್ವಾಂಸರು ಶ್ರೇಷ್ಠ ಕಲಾವಿದರ ಒಡನಾಟ. ನಿರಂತರ ಕಲಿಕೆ. ರಂಗಕ್ಕೆ ದ್ರೋಹವೆಸಗದೆ, ಅರ್ಪಣಾಭಾವದಿಂದ ಪಾತ್ರನಿರ್ವಹಣೆ, ಪ್ರಸಿದ್ಧಿಗಾಗಿ ಬಾಗದೆ ಪ್ರಸಂಗಕ್ಕೆ ತಾನು ಧರಿಸುವ ಪಾತ್ರಕ್ಕೆ ಬೇಕಾದಂತೆ ಬಾಗಿ ಅಭಿನಯಿಸುವ ಗುಣ. ಈ ಎಲ್ಲಾ ವಿಚಾರಗಳನ್ನು ಮೈಗೂಡಿಸಿಕೊಂಡು ಶ್ರೀಯುತರು ಯಕ್ಷರಂಗದ ಶ್ರೇಷ್ಠ ಸ್ತ್ರೀವೇಷಧಾರಿಯಾಗಿ ರಂಗವನ್ನಾಳಿದರು. ``ಫಲವನ್ನು ಅಪೇಕ್ಷಿಸದೆ ಕರ್ಮವನ್ನು ಮಾಡು. ಫಲವನ್ನು ನೀಡುವವನು ನಾನು’’. ಇದು ಭಗವಾನ್ ಶ್ರೀಕೃಷ್ಣನ ಮಾತು. ನಾವು ಶ್ರದ್ಧೆಯಿಂದ ಕರ್ತವ್ಯವನ್ನು ಮಾಡಿದಾಗ ದೇವರು ಖಂಡಿತವಾಗಿಯೂ ಅನುಗ್ರಹಿಸುತ್ತಾನೆ. ಕೋಳ್ಯೂರು ರಾಮಚಂದ್ರ ರಾಯರು ಅಂತೆಯೇ ನಡೆದವರು. ಸತತ ಅಧ್ಯಯನಶೀಲರಾಗಿ, ತಾನು ಧರಿಸಿದ ವೇಷಕ್ಕೆ, ಯಕ್ಷಗಾನಕ್ಕೆ ಕೊರತೆಯಾಗದಂತೆ ಎಚ್ಚರದಿಂದಲೇ ಅಭಿನಯಿಸಿದರು. ಕಲಾಮಾತೆಯು ಅನುಗ್ರಹಿಸಿದಳು. ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದವು. ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ ಅಲ್ಲದೆ ಇನ್ನೂ ಅನೇಕ ಪ್ರಶಸ್ತಿಗಳಿಗೆ ಭಾಜನರಾದರು. 2018ನೇ ಸಾಲಿನ ಪಿ. ವಿ. ಹಾಸ್ಯಗಾರ ಪ್ರಶಸ್ತಿಯೂ ಇವರ ಮುಡಿಗೇರಲಿದೆ. ಪರಂಪರೆಯ ಚೌಕಟ್ಟಿನೊಳಗೇ ಪಾತ್ರಗಳನ್ನು ನಿರ್ವಹಿಸಿ ವಿದ್ವಾಂಸರ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರ

‘‘ಬದುಕಿ ಇರುತ್ತಿದ್ದರೆ ನೂರನೆಯ ವರುಷ’’ -ಬಡಗಿನ ಪ್ರಾಚಾರ್ಯ ಭಾಗವತ -ಎಂ. ನಾರ್ಣಪ್ಪ ಉಪ್ಪೂರ

Image
                             ಹೌದು. ಅವರು ಇಂದಿಗೂ ಬದುಕಿರುತ್ತಿದ್ದರೆ ನೂರನೆಯ ವರುಷಕ್ಕೆ ಕಾಲಿಡುತ್ತಿದ್ದರು. ‘ಶತಾಯುಷಿ’ ಎನಿಸುತ್ತಿದ್ದರು. ಬಡಗಿನ ಮೇರು ಭಾಗವತ, ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿ ಕಲಾಮಾತೆಯ ಮಡಿಲಿಗಿಕ್ಕಿದ ಸಾಧಕ, ತಮ್ಮ ಆಯುಷ್ಯದ ಹೆಚ್ಚಿನ ಸಮಯಗಳನ್ನೂ ರಂಗಸ್ಥಳದೊಳಗೇ ಕಳೆದು ಕಲಾಸೇವೆಯನ್ನು ಮಾಡಿದ ‘ಮಾರ್ವಿ’ ಶೈಲಿಯ ಕೀರ್ತಿಯೆಂಬ ಪತಾಕೆಯನ್ನು ಬಾನಂಗಳದಲ್ಲಿ ಹಾರಾಡುವಂತೆ ಮಾಡಿದ ಪ್ರಾಚಾರ್ಯ ಎಂ. ನಾರ್ಣಪ್ಪ ಉಪ್ಪೂರರು ಇಂದು ನಮ್ಮ ಜತೆ ಇಲ್ಲ. ಆದರೆ ಅವರ ನೆನಪು ಮಾಸಿಲ್ಲ. ಯಾವತ್ತೂ ಮಾಸಲಾರದು. ಜನಮಾನಸದಲ್ಲಿ ಶ್ರೀಯುತರು ಶಾಶ್ವತರಾಗಿ ನೆಲೆಸಿರುತ್ತಾರೆ. ಅವರು ಮಾಡಿಕೊಟ್ಟ ದಾರಿಯು ಭಾಗವತಿಕೆ ಅಭ್ಯಾಸಿಗಳಿಗೆ ಹೆದ್ದಾರಿಯಾಗಿ ಪರಿಣಮಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.                         ಶ್ರೀ ನಾರ್ಣಪ್ಪ ಉಪ್ಪೂರರು 1918ನೇ ಇಸವಿ ಫೆಬ್ರವರಿ 7ನೇ ತಾರೀಕಿನಂದು ಮಾರ್ವಿ ಶ್ರೀನಿವಾಸ ಉಪ್ಪೂರ ಮತ್ತು ಅಕ್ಕಣಿ ಅಮ್ಮ ದಂಪತಿಗಳಿಗೆ ಮಗನಾಗಿ (ಉಪ್ಪೂರ ಮನೆತನ) ಕುಂದಾಪುರ ತಾಲೂಕಿನ ಹಾಲಾಡಿ ಸಮೀಪದ ತಟ್ಟುವಟ್ಟು ಎಂಬಲ್ಲಿ ಜನಿಸಿದರು. ಮಾರ್ವಿ ಶ್ರೀನಿವಾಸ ಉಪ್ಪೂರರು ಅಂದಿನ ಕಾಲದ ಪ್ರಸಿದ್ಧ ಭಾಗವತರಾಗಿದ್ದರು. ಮಳೆಗಾಲದಲ್ಲಿ ಬೇಸಾಯ, ಬೇಸಿಗೆಯಲ್ಲಿ ಮೇಳದ ತಿರುಗಾಟ ನಡೆಸುತ್ತಿದ್ದರು. ಮಳೆಗಾಲದಲ್ಲಿ ಮನೆಯಲ್ಲಿಯೇ ಕಲಿಕಾಸಕ್ತರಿಗೆ ಹೇಳಿಕೊಡುತ್ತಿದ್ದರಂತೆ. ಮನೆಯ ಹಿಂಭಾಗದ ಮಕ್ಕಿಗದ್ದೆಯ ತೆ

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

Image
                        ಕಾಸರಗೋಡು ಶ್ರೀ ಸುಬ್ರಾಯ ಹೊಳ್ಳರು ಪ್ರಸ್ತುತ ಶ್ರೀ ಹನುಮಗಿರಿ ಮೇಳದಲ್ಲಿ ತಿರುಗಾಟ ನಡೆಸುತ್ತಿರುವ ಕಲಾವಿದರು. ಸತತ ಸಾಧನೆಯಿಂದ, ಅರ್ಹತೆಯನ್ನು ಹೊಂದಿಯೇ ಇವರು ಹಂತ ಹಂತವಾಗಿ ಬೆಳೆದು ಬಂದರು. ಇವರ ಜತೆಗಿನ ಹತ್ತು ವರುಷಗಳ ತಿರುಗಾಟ ಮರೆಯಲಾಗದ ನೆನಪುಗಳು. ಮೇಳದ ತಿರುಗಾಟದ ಸಂದರ್ಭ ನಾವು ಹೆಚ್ಚಾಗಿ ಬಿಡಾರದಲ್ಲೇ ಇರುತ್ತಿದ್ದೆವು. ನಿದ್ರಾಂಗನೆಯ ಬಳಿ ತೆರಳುವುದಕ್ಕೆ ಮೊದಲೇ ನಿನ್ನೆಯ ಪ್ರದರ್ಶನದ ಬಗ್ಗೆ, ಇಂದು ನಡೆಯಲಿರುವ ಪ್ರಸಂಗದ ವಿಚಾರವಾಗಿ ನಾವು ಮಾತನಾಡುತ್ತಿದ್ದೆವು. ಹೊಸ ಪ್ರಸಂಗಗಳು, ಹೊಸ ಪಾತ್ರಗಳು ಬಂದಾಗ ಅವರು ನಡೆಸುವ ಸಿದ್ಧತೆ, ಅಧ್ಯಯನ ಯಾರಾದರೂ ಮೆಚ್ಚಲೇ ಬೇಕು. ಅವರು ಮಾಡುವ ಹೋಂವರ್ಕ್ ಅದ್ಭುತವಾದುದು. ಸಾಕಷ್ಟು ಸಿದ್ಧರಾಗಿಯೇ ಪಾತ್ರಗಳನ್ನು ನಿರ್ವಹಿಸುತ್ತಾರೆ. ಇವರ ಸಂಗ್ರಹದಲ್ಲಿ ಇಲ್ಲದ ಪ್ರಸಂಗಗಳಿಲ್ಲ. ತನ್ನ ಸಂಗ್ರಹದಲ್ಲಿಲ್ಲದ ಪ್ರಸಂಗ ಪುಸ್ತಕವನ್ನು ಭಾಗವತರಿಂದ ಕೇಳಿ ಪಡೆದು ಬಿಡಾರದಲ್ಲಿ ಹಗಲು ಕುಳಿತು ಬರೆದೇ ಸಿದ್ಧಗೊಳಿಸುತ್ತಿದ್ದರು! ಕೈಬರಹದ ಪ್ರಸಂಗ ಪುಸ್ತಕಗಳೇ ಸುಬ್ರಾಯ ಹೊಳ್ಳರ ಬಳಿ ಹೆಚ್ಚಾಗಿ ಇರಬಹುದೆಂದು ನಾನು ಊಹಿಸಬಲ್ಲೆ. ಹೀಗೆ ಬರೆದುದರ ಪರಿಣಾಮವೇನು? ಅದರಿಂದ ಅವರಿಗೇನು ಸಿದ್ಧಿಸಿತೆಂಬುದನ್ನೂ ಊಹಿಸಬಲ್ಲೆ. ನಾನೂ ನಿರಂತರ ಬರೆದರೆ ಅದರಿಂದ ಆಗುವ ಪ್ರಯೋಜನಗಳನ್ನು ಅನುಭವಿಸಿದ್ದೇನೆ. ಅದು ಸಣ್ಣ ಸಂಪತ್ತಲ್ಲ. ಅದೊಂದು ದೊಡ್ಡ ಗಂಟು. ವೆಚ್ಚ ಮಾಡಿದರೆ ಮುಗಿಯುವಂ

ಅನುಭವೀ ಹಿರಿಯ ನೇಪಥ್ಯ ಕಲಾವಿದ ಶ್ರೀ ಜಯಂತ ಜೋಗಿ

Image
                         ಯಕ್ಷಗಾನ ಪ್ರದರ್ಶನ ಆರಂಭವಾಗುವುದಕ್ಕೆ ಎರಡು ಗಂಟೆಗಳ ಮುಂಚಿತವಾಗಿಯೇ ಡ್ರೆಸ್ ಮತ್ತು ನೇಪಥ್ಯ ಕಲಾವಿದರು ಬರಲೇಬೇಕು. ಪ್ರದರ್ಶನ ಮುಗಿದು ಅವರು ಹೊರಡಲು ಮತ್ತೆ ಒಂದು ಗಂಟೆ ಬೇಕಾಗುತ್ತದೆ. ಮುಂಚಿತವಾಗಿ ಬಂದು ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ ಚೌಕಿಯನ್ನು ನಿರ್ಮಿಸಿ ಡ್ರೆಸ್‍ಗಳನ್ನು ಒಪ್ಪ ಓರಣವಾಗಿ ಇಟ್ಟಿರುತ್ತಾರೆ. ಬಣ್ಣಗಳನ್ನು ಕಲಸಿ ಇಟ್ಟಿರುತ್ತಾರೆ. ಬಣ್ಣದ ಕರಡಿಗೆಗಳನ್ನು ತೆರೆದು ಬೇಕಾದಲ್ಲಿ ಜೋಡಿಸಿ ಇಡುತ್ತಾರೆ. ದೇವಸ್ಥಾನದಂತೆ ಚೌಕಿಯನ್ನು ಸಿದ್ಧಗೊಳಿಸುವ ಹೊಣೆ ಅವರಿಗೆ. ಕಲಾವಿದರು ಬಣ್ಣಗಾರಿಕೆ ಮುಗಿಸಿ ಬಂದಾಗ ಅವರಿಗೆ ಡ್ರೆಸ್ ಕೊಟ್ಟು, ಕಟ್ಟಿ ವೇಷ ಸಿದ್ಧಗೊಳಿಸಲು ಸಹಾಯಿಗಳಾಗುತ್ತಾರೆ. ಎಲ್ಲಾ ಕಲಾವಿದರೊಂದಿಗೂ ಮಾತನಾಡಬೇಕು. ವ್ಯವಹರಿಸಬೇಕು. ಹವ್ಯಾಸೀ ಕಲಾವಿದರೊಂದಿಗೂ ವ್ಯವಹರಿಸಬೇಕು. ಅನನುಭವೀ ಕಲಾವಿದರಾದರೆ ಯಾವ ವೇಷ ಎಂದು ತಿಳಿದು ಮೇಕಪ್ ಮಾಡಿ ಡ್ರೆಸ್ ಕಟ್ಟಬೇಕು. ಈ ಎಲ್ಲಾ ಕೆಲಸಗಳನ್ನು ಮಾಡಬೇಕಾದರೆ ನೇಪಥ್ಯ ಕಲಾವಿದರಿಗೆ ಮುಖ್ಯವಾಗಿ ಬೇಕಾದುದು ಸಹನೆ. ಸಿಡಿಯುವ ಸ್ವಭಾವ ಇದ್ದವರಿಗೆ ಈ ಕೆಲಸ ಆಗದು. ಸಂಘಟಕರ, ಕಲಾವಿದರ ಪ್ರೀತಿಗೆ ಪಾತ್ರರಾದ ಅನೇಕ ನೇಪಥ್ಯ ಕಲಾವಿದರನ್ನು ನಮಗಿಂದು ಕಾಣಬಹುದು. ಅವರಲ್ಲೊಬ್ಬರು ಶ್ರೀ ಜಯಂತ ಜೋಗಿ.                      ಜಯಂತ ಜೋಗಿಯವರು ಕಾಸರಗೋಡು ಜಿಲ್ಲೆ, ಮಂಜೇಶ್ವರ ತಾಲೂಕು ಮೀಂಜ ಗ್ರಾಮದ ಜೋಡುಕಲ್ಲು ಎಂಬಲ್ಲಿ 1967ನೇ ಇಸವಿ ದಶಂಬರ