Posts

Showing posts from August, 2022

ಶ್ರೇಷ್ಠ ಕಲಾಸಂಘಟಕರಲ್ಲೊಬ್ಬರು - ಪದ್ಮನಾಭ ಕಟೀಲು 

Image
 ಮುಂಬಯಿಯಂತಹಾ ದೈತ್ಯ ನಗರಗಳಲ್ಲಿ, ಸಾಗರದಾಚೆಗಿನ ದೂರದ ದೇಶಗಳಲ್ಲಿ ಕಲಾ ಸಂಘಟನೆ ಅಷ್ಟು ಸುಲಭವಲ್ಲ. ಕಲಾವಿದರನ್ನು ಕರೆಸಿಕೊಂಡು ಪ್ರದರ್ಶನಗಳನ್ನು ಏರ್ಪಡಿಸುವುದು ಎಂದರೆ ಅದೊಂದು ಸಾಹಸವೇ ಹೌದು. ಗುರಿಯು ಸುಂದರವಾದರೂ ಆ ಗುರಿಯನ್ನು ತಲುಪಲು ಕ್ರಮಿಸಬೇಕಾಗಿರುವ ದಾರಿಯು ಅತಿ ದುರ್ಗಮವಾದುದು. ದಾರಿಯ ಬಗ್ಗೆ ಗಮನಹರಿಸದೆ ಸಾಹಸದಿಂದ ಅಡೆತಡೆಗಳನ್ನು ನಿವಾರಿಸಿ, ಕಷ್ಟನಷ್ಟಗಳನ್ನು ಗಣನೆಗೆ ತಾರದೆ ಛಲದಿಂದ ಸಾಗಿದಾಗ ಮಾತ್ರ ಗುರಿಯನ್ನು ತಲುಪಬಹುದು. ಕಲ್ಲು, ಮಣ್ಣು ಕೊಳೆಗಳನ್ನೆಲ್ಲಾ ಕೊರೆದು ಭೂಮಿಯನ್ನು ತೋಡಿದಾಗ ಮಾತ್ರ ಅಲ್ಲವೇ ಸಿಹಿನೀರು ಸಿಗೋದು. ದೂರದ ನಗರಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸಬೇಕಿದ್ದರೆ ಸಂಘಟನಾ ಕೌಶಲ್ಯವನ್ನು ಅದ್ಭುತವಾಗಿ ಹೊಂದಿರಬೇಕು. ನಾಯಕತ್ವದ ಗುಣವು ಬೇಕು. ಆ ಊರಿನ ಸಂಪೂರ್ಣ ಮಾಹಿತಿಯಿರಬೇಕು. ಯೋಚನೆ, ಯೋಜನೆಗಳೆಲ್ಲಾ ಬಲಿಷ್ಠವಾಗಿರಬೇಕು. ಸಂಘಟನಾ ಚಾತುರ್ಯವನ್ನು ಹೊಂದಿ ಸ್ವಯಂ ಪ್ರತಿಭಾವಂತನಾಗಿದ್ದರೆ ಸಾಲದು. ಶ್ರೀ ದೇವರ ಅನುಗ್ರಹವೂ ಬೇಕು. ಪ್ರತಿಭೆಗೆ ದೇವರ ಅನುಗ್ರಹವೂ ಸೇರಿದಾಗ ಮುಟ್ಟಿದ್ದೆಲ್ಲಾ ಬಂಗಾರವಾಗುವುದು. ಇಲ್ಲವಾದರೆ ಸಂಘಟಕನು ಕೈ ಸುಟ್ಟುಕೊಳ್ಳಬೇಕಾದ ಪರಿಸ್ಥಿತಿಯು ಒದಗುವ ಸಾಧ್ಯತೆಗಳಿವೆ. ಏನೇ ಅಡೆ ತಡೆಗಳಿರಲಿ, ಕಷ್ಟ ನಷ್ಟಗಳಿರಲಿ, ನೋವು ನಲಿವುಗಳಿರಲಿ, ತಾವು ಎಲ್ಲಿದ್ದರೂ  ಅತೀವವಾಗಿ ಪ್ರೀತಿಸುವ ಯಕ್ಷಗಾನವನ್ನು ಬಿಟ್ಟು ಬದುಕಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಕಲಾವಿ

ಹಿರಿಯ ಅನುಭವೀ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್

Image
  ಖ್ಯಾತ ಕಲಾವಿದ, ತಾಳಮದ್ದಳೆ ಅರ್ಥಧಾರಿ ಮಲ್ಪೆ ದಿ। ವಾಸುದೇವ ಸಾಮಗರು ಆಡಿದ ಮಾತುಗಳು ನೆನಪಾಗುತ್ತದೆ- “ಯಕ್ಷಗಾನದಲ್ಲಿ ಕಲಾವಿದರು ಕೌಟುಂಬಿಕ ನ್ಯಾಯೇಣ ತಂಡವಾಗಿ ಶ್ರಮಿಸಿದಾಗ ಮಾತ್ರ ಪ್ರದರ್ಶನವು ಗೆಲ್ಲುತ್ತದೆ.’’ ಹಿಂದಿನ ಕಾಲದಿಂದ ನಡೆದು ಬಂದ ರೀತಿಯನ್ನೇ ಅವರು ಉಲ್ಲೇಖಿಸಿದ್ದರು. ಹಿರಿಯ ಕಿರಿಯ ಕಲಾವಿದರೆಲ್ಲಾ ಒಂದೇ ಮನೆಯ ಸದಸ್ಯರಂತೆ ಹೊಂದಾಣಿಕೆಯಿಂದ ಬೆರೆತು ರಂಗದಲ್ಲಿ ಅಭಿನಯಿಸಿದಾಗ ಪರಿಣಾಮವನ್ನು ಪ್ರೇಕ್ಷಕರು ಅನುಭವಿಸುತ್ತಾರೆ. ನಿಜವಾದ ಯಕ್ಷಗಾನ ವೈಭವವನ್ನು ಅವರು ನೋಡಿ ಸಂತೋಷಪಡುತ್ತಾರೆ. ಕಿರಿಯ ಅಭ್ಯಾಸಿಗಳಿಗೆ ಹಿರಿಯ ಅನುಭವೀ ಕಲಾವಿದರ ಮಾರ್ಗದರ್ಶನ ಅತ್ಯಗತ್ಯ. ಕಿರಿಯರು ಅವರನ್ನು ಗೌರವಿಸಿ ಅವರ ಅನುಭವಗಳನ್ನು ಪಡೆದುಕೊಳ್ಳಬೇಕು. ಹಿರಿಯರು ಕಿರಿಯರನ್ನು ವಂಚಿಸದೆ ತಾವು ಆರ್ಜಿಸಿದ ವಿದ್ಯೆಯನ್ನು ಅವರಿಗೆ ಧಾರೆಯೆರೆಯಬೇಕು. ಈ ಕ್ರಿಯೆಯು ನಿರಂತರವಾಗಿದ್ದಾಗ ಗೆಲ್ಲುವುದು ಯಕ್ಷಗಾನವೆಂಬ ಶ್ರೇಷ್ಠ ಕಲೆ. ಹಿಂದೆ ಹಿರಿಯ ಕಲಾವಿದರನೇಕರು ಇದೇ ತೆರನಾಗಿ ವ್ಯವಹರಿಸಿದ್ದಾರೆ. ಪ್ರಸಂಗಜ್ಞಾನ, ಪುರಾಣಜ್ಞಾನ, ರಂಗನಡೆ, ಪಾತ್ರದ ಸ್ವಭಾವ, ಸಂಭಾಷಣಾ ಕುಶಲತೆಗಳನ್ನು ತಿಳಿದು, ಸಂಪನ್ಮೂಲ ವ್ಯಕ್ತಿಗಳಾಗಿ ಕಿರಿಯರಿಗೆ ಮಾರ್ಗದರ್ಶನ ನೀಡಬಲ್ಲ ಅನುಭವಿಗಳು  ಅನೇಕರು ನಮ್ಮ ಜತೆಗಿದ್ದಾರೆ. ಹಿರಿಯ ಅನುಭವೀ ಕಲಾವಿದರಾದ ಪೂಕಳ ಶ್ರೀ ಲಕ್ಷ್ಮೀನಾರಾಯಣ ಭಟ್ಟರು ಈ ಸಾಲಿಗೆ ಸೇರುತ್ತಾರೆ. ಪ್ರಸ್ತುತ ನಾಲ್ಕೈದು ವರ್ಷಗಳಿಂದ ಮೇಳದ ತಿರುಗಾಟದ

ಉತ್ತಮ ಕಿರೀಟ ವೇಷಧಾರಿ ಸರಪಾಡಿ ಶ್ರೀ ವಿಠಲ ಶೆಟ್ಟಿ

Image
"ಕಲಿತು ಮೇಳಕ್ಕೆ ಬರೋದರಿಂದ ಮೇಳಕ್ಕೆ ಬಂದು ಮೇಳದಲ್ಲಿದ್ದುಕೊಂಡೇ ಕಲಿತು ಕಲಾವಿದನಾದರೆ ಒಳ್ಳೆಯದು" ಇದು ಹಿಂದಿನ ಹಿರಿಯ ಕಲಾವಿದರು ಹೇಳುತ್ತಿದ್ದ ಮಾತು. ಹಿಂದೆ ಮೇಳದ ತಿರುಗಾಟದಲ್ಲಿ ಒಂದು ಕೌಟುಂಬಿಕ ವಾತಾವರಣವು ಇರುತ್ತಿತ್ತು. ಹಿರಿಯ ಕಲಾವಿದರು ಕಿರಿಯ ಕಲಾವಿದರಿಗೆ ಪ್ರೀತಿಯಿಂದ ಹೇಳಿಕೊಡುವುದು, ಕಿರಿಯರು ಹಿರಿಯರನ್ನು ಗೌರವಿಸಿ ಅವರಿಂದ ವಿದ್ಯೆ ಕಲಿಯುವುದು, ಹೀಗೆ ಸಾಗುತ್ತಿತ್ತು ಮೇಳದ ಬದುಕು. ಪ್ರದರ್ಶನಗಳು ನಡೆಯುವ ಸ್ಥಳದಿಂದ ದಿನಾ ಮನೆಗೆ ಹೋಗಿ ಬರಲು ಅವಕಾಶಗಳೂ ಇರಲಿಲ್ಲ. ವಾಹನಗಳ ಸಂಖ್ಯೆ ತೀರಾ ಕಡಿಮೆ. ಅಲ್ಲದೆ ಈಗಿನಂತೆ ರಸ್ತೆ ಸೌಕರ್ಯಗಳೂ ಇರಲಿಲ್ಲ. ಹಾಗಾಗಿ ಮೇಳದಲ್ಲಿದ್ದುಕೊಂಡೇ ಕಲಾವಿದರು ಕಲಿತು ಬೆಳೆದು ಹೆಸರು ಗಳಿಸುತ್ತಿದ್ದರು. ಇದು ವೇಗದ ಯುಗ. ಮೇಳದಲ್ಲಿ ಇದ್ದುಕೊಂಡೇ ಅಭ್ಯಾಸ ಮಾಡಲು ಎಲ್ಲಿದೆ ಅವಕಾಶ? ಬೇರೆ ಉದ್ಯೋಗದಲ್ಲಿದ್ದುಕೊಂಡು ಮೇಳದ ತಿರುಗಾಟ ನಡೆಸುವ ಕಲಾವಿದರಿದ್ದಾರೆ. ಸ್ವ ಉದ್ಯೋಗವನ್ನು ಮಾಡಿಕೊಂಡು ಮೇಳದಲ್ಲಿ ಕಲಾಸೇವೆಯನ್ನು ಮಾಡುವವರಿದ್ದಾರೆ. ವಿದ್ಯಾರ್ಥಿಗಳೂ ಮೇಳಕ್ಕೆ ಬಂದು ವೇಷ ಮಾಡುತ್ತಾರೆ. ಅಂತವರಿಗೆ ದಿನಾ ಮನೆಗೆ ಹೋಗುವುದು ಅನಿವಾರ್ಯ. ತಿರುಗಾಟದಲ್ಲಿದ್ದುಕೊಂಡೇ ಕಲಿತು ಬೆಳೆಯಲು ಅಂತವರಿಗೆ ಅವಕಾಶಗಳು ಸಿಗದು. ಆದರೂ ಹಿರಿಯ ಕಲಾವಿದರುಗಳೆಲ್ಲಾ ಮೇಳದಲ್ಲಿದ್ದುಕೊಂಡೇ ಅಭ್ಯಾಸ ಮಾಡುತ್ತಾ ಉತ್ತಮ ಕಲಾವಿದರಾಗಿ ರೂಪುಗೊಂಡವರು ಎಂಬುದರಲ್ಲಿ ಅನುಮಾನವಿಲ್ಲ. ಹಂತ ಹಂತವಾಗಿ ಬೆಳ

ಅರ್ಪಣಾಭಾವದ ಅನುಭವೀ ಮದ್ದಳೆಗಾರ - ಮಿಜಾರು ಶ್ರೀ ದಯಾನಂದ ಶೆಟ್ಟಿಗಾರ್ 

Image
 ಯಕ್ಷಗಾನವು ಹಾಡು, ವಾದನ, ನೃತ್ಯ, ವೇಷ, ಅಭಿನಯ, ಮಾತುಗಾರಿಕೆಗಳ ಮಿಶ್ರಣದ ಸಮಷ್ಟಿ ಕಲೆಯಾಗಿದೆ. ಈ ಎಲ್ಲಾ ಅಂಗಗಳೂ ಶಾಸ್ತ್ರದ ಮೇರೆಯೊಳಗಿದ್ದು ಪರಂಪರೆಯುಳ್ಳದ್ದಾಗಿ ಆಕರ್ಷಣೀಯವಾಗಿದೆ. ವಾದನ ವಿಭಾಗದಲ್ಲಿ ಕಾಣಿಸುವುದೇ ಚೆಂಡೆ ಮದ್ದಳೆಯ ನುಡಿತಗಳು. ಗಾಯನ ಮತ್ತು ನರ್ತನಗಳಿಗೆ ಇದು ಪೂರಕವಾಗಿರುತ್ತದೆ. ಯಕ್ಷಗಾನ ಕಲೆಯಲ್ಲಿ ವಾದನ ಕ್ರಮವು ಹೇಗಿರಬೇಕೆಂದು ವಿದ್ವಾಂಸರೂ, ಹಿರಿಯ ಮದ್ದಳೆವಾದಕರೂ ತಿಳಿಸಿರುತ್ತಾರೆ. ಅದೇ ದಾರಿಯಲ್ಲಿ ಸಾಗಬೇಕಾದುದು ಅಭ್ಯಾಸಿಗಳಿಗೆ ಕರ್ತವ್ಯ. ಯಕ್ಷಗಾನದಲ್ಲಿ ಭಾಗವತನೇ ನಿರ್ದೇಶಕ. ಹಾಡುಗಾರಿಕೆಯೇ ಪ್ರಧಾನವು. ಭಾಗವತನ ಹಾಡುಗಾರಿಕೆಯನ್ನು ಮೆರೆಸುವ ವಾದನ ಕ್ರಮವು ಬೇಕೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಡಿಗಾಗಿ ಮತ್ತು ಕುಣಿತಕ್ಕಾಗಿ ವಾದನವು ಇರುವುದಾದರೂ ಕುಣಿದದ್ದಕ್ಕೆಲ್ಲಾ ಬಾರಿಸಲೂ ಬಾರದು ಎಂದುದನ್ನು ಹಿರಿಯ ವಾದಕರು ಹೇಳಿರುತ್ತಾರೆ. ಚೆಂಡೆ ಮದ್ದಲೆಗಳ ನುಡಿತಗಳು ಅತ್ಯಂತ ಸ್ಪಷ್ಟವಾಗಿರಬೇಕು. ವೇಗದ ಅವಸರದಲ್ಲಿ ಸ್ಪಷ್ಟತೆಗೆ ತೊಡಕಾಗಬಾರದು ಎಂಬ ವಿಚಾರವನ್ನೂ ಹೇಳಿರುತ್ತಾರೆ. ಹೀಗೆ ಸಾಗಿಬಂದ ಅನೇಕರು ಖ್ಯಾತ ಮದ್ದಳೆಗಾರರಾಗಿ ಪ್ರಸಿದ್ಧರಾದರು. ಪ್ರಸ್ತುತ ಅದೇ ದಾರಿಯಲ್ಲಿ ಸಾಗುತ್ತಾ ಕಲಾ ವ್ಯವಸಾಯವನ್ನು ಮಾಡುತ್ತಿರುವ ಮದ್ದಳೆಗಾರರಲ್ಲಿ ಶ್ರೀ ದಯಾನಂದ ಶೆಟ್ಟಿಗಾರ್ ಮಿಜಾರು ಅವರನ್ನೂ ಗುರುತಿಸಬಹುದು. ಇವರು ನಿಷ್ಠಾವಂತ ಅರ್ಪಣಾ ಭಾವದ ಅನುಭವೀ ಕಲಾವಿದರು. ಹೊಸ ಹೊಸ ಪ್ರಸಂಗಗಳು

ಆಟಕೂಟಗಳಲ್ಲಿ ರಂಜಿಸುವ ಕಲಾಪ್ರತಿಭೆ ಶ್ರೀ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ

Image
  ಯಕ್ಷಗಾನವೆಂಬ ಗಂಡುಕಲೆಗೆ ಪ್ರೇಕ್ಷಕರನ್ನು ಪುರಾಣಕಾಲಕ್ಕೆ, ಪುರಾಣಲೋಕಕ್ಕೆ ಕೊಂಡೊಯ್ಯುವ ಶಕ್ತಿ ಇದೆ. ಮಾತುಗಾರಿಕೆ ಮತ್ತು ವೇಷಭೂಷಣಗಳಿಂದ ಯಕ್ಷಗಾನದ ಪಾತ್ರಧಾರಿ ಕಲಾಭಿಮಾನಿಗಳನ್ನು ಬೇರೆಯೇ ಲೋಕಕ್ಕೆ, ಬೇರೆಯೇ ಕಾಲಕ್ಕೆ ಕೊಂಡೊಯ್ಯಬಲ್ಲ. ಹೀಗಾಗಬೇಕಾದರೆ ಪಾತ್ರಧಾರಿಯು ಬಹಳಷ್ಟು ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಪ್ರಸಂಗ ನಡೆ, ಕಥೆಯ ಮಾಹಿತಿ, ಪಾತ್ರದ ಸ್ವಭಾವ, ಕವಿಯ ಆಶಯ ಇತ್ಯಾದಿಗಳನ್ನು ಆಳವಾಗಿ ಅಭ್ಯಾಸ ಮಾಡಿದರೆ ಮಾತ್ರ ಪಾತ್ರವನ್ನು ಧರಿಸಿದ ವ್ಯಕ್ತಿಯು ಸಭಿಕರನ್ನು ಪುರಾಣಲೋಕಕ್ಕೆ ಕೊಂಡೊಯ್ಯಬಲ್ಲ. ಇಲ್ಲವಾದರೆ ಪಾತ್ರವೂ ಪ್ರಸಂಗವೂ ಪೇಲವವಾಗಿ ಪ್ರೇಕ್ಷಕರು ಲೌಕಿಕ ಲೋಕದಲ್ಲೇ ಉಳಿಯುವಂತಾಗುತ್ತದೆ. ಜತೆ ಪಾತ್ರದ ಸ್ವಭಾವವೂ ಕೆಡದಂತೆ ಅಭಿನಯಿಸುವುದೂ ಒಂದು ಕಲೆ. ಕಲಾವಿದರಿಗೆ ಅದು ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಹಿರಿಯ ತಲೆಮಾರಿನ ಅನೇಕ ಖ್ಯಾತ ಕಲಾವಿದರ ಕೊಡುಗೆಗಳು, ಸಂದೇಶಗಳು ನಮಗಿದೆ. ಆ ಸಂದೇಶಗಳನ್ನು ಅನುಸರಿಸುತ್ತಾ ಕಿರಿಯ ಕಲಾವಿದರು ಬೆಳೆಯುತ್ತಾ ಸಾಗಿದರೆ ಯಕ್ಷಗಾನ ಕಲೆಯು ಬಡವಾಗದು. ಹೀಗೆ ಆಳವಾಗಿ ಅಧ್ಯಯನವನ್ನು ಮಾಡುತ್ತಾ ತಾಳಮದ್ದಳೆ ಅರ್ಥಧಾರಿಯಾಗಿ ಬೆಳೆದವರು ಅನೇಕರು. ಇನ್ನು ಹಲವಾರು ಮಂದಿಗಳು ವೇಷಧಾರಿಯಾಗಿ ಹೆಸರನ್ನು ಗಳಿಸಿದರು. ಆಟ ಕೂಟಗಳೆಂಬ ಎರಡು ವಿಭಾಗಗಳಲ್ಲೂ ಈ ಕಾಲದಲ್ಲಿ ಅನೇಕರು ಬೆಳೆಯುತ್ತಾ ಕಾಣಿಸಿಕೊಳ್ಳುತ್ತಿದ್ದಾರೆ. ಅಂತವರ ಸ್ಥಾನದಲ್ಲಿ ಶ್ರೀ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಅವರ