Posts

Showing posts from July, 2020

ಪರಂಪರೆಯ, ಹಿರಿಯ ಯಕ್ಷಗಾನ ಕಲಾವಿದರು ಗೋಡೆ ಶ್ರೀ ನಾರಾಯಣ ಹೆಗಡೆ

Image
               ಗೋಡೆ ಶ್ರೀ ನಾರಾಯಣ ಹೆಗಡೆಯವರು ಬಡಗುತಿಟ್ಟು ಯಕ್ಷಗಾನದ ಅತ್ಯಂತ ಹಿರಿಯ ಕಲಾವಿದರು. 1955ನೇ ಇಸವಿ, ತನ್ನ ಹದಿನೈದನೇ ವಯಸ್ಸಿನಲ್ಲಿ ಯಕ್ಷಗಾನ ಕಲಾವಿದನಾಗಿ ರಂಗಪ್ರವೇಶ ಮಾಡಿದ ಗೋಡೆಯವರು ಈ ಕ್ಷೇತ್ರದಲ್ಲಿ ಅರುವತ್ತಮೂರು ವರ್ಷಗಳ ಅನುಭವಿಗಳು. ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ಮೊದಲಾದವರ ಸಮಕಾಲೀನರಾಗಿ ವ್ಯವಸಾಯವನ್ನು ಮಾಡಿದವರು. ಪ್ರಚಾರಕ್ಕಾಗಿ, ಪ್ರಸಿದ್ಧಿಗಾಗಿ ಬಾಗದೆ, ಪಾತ್ರಕ್ಕೆ ಬೇಕಾದಂತೆ ಬಾಗಿ ಅಭಿನಯಿಸಿದ ಹಿರಿಯ ಶ್ರೇಷ್ಠ ಕಲಾವಿದರು. ಹೊಸತನಗಳ ಆವಿಷ್ಕಾರಗಳಿಂದ ದೂರ ಉಳಿದು, ಪರಂಪರೆಯ ಹಾದಿಯನ್ನೇ ಕ್ರಮಿಸಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾದ ಕಲಾವಿದರಿವರು. ಇವರು ಕೆರೆಮನೆ ಶಿವರಾಮ ಹೆಗಡೆಯವರ ಜತೆಯಲ್ಲೂ ಪಾತ್ರಗಳನ್ನು ನಿರ್ವಹಿಸಿದ ಹಿರಿಯ ಕಲಾವಿದರು. ಶಂಭುಹೆಗಡೆ ಮತ್ತು ಚಿಟ್ಟಾಣಿಯವರ ಜತೆ, ಸಮಾನವಾಗಿ ಅತ್ಯಧಿಕ ವೇಷಗಳನ್ನು ಮಾಡಿದ ಹಿರಿಮೆ ಇವರಿಗಿದೆ. ಹಳೆಯ ಮತ್ತು ಹೊಸ ಪೀಳಿಗೆಯ ಹೆಚ್ಚಿನ ಕಲಾವಿದರೊಂದಿಗೂ ಪಾತ್ರಗಳನ್ನು ನಿರ್ವಹಿಸಿದ ಒಬ್ಬ ಅನುಭವೀ ಕಲಾವಿದ. ದೀರ್ಘಕಾಲದ ತನ್ನ ಯಕ್ಷಗಾನದ ಬದುಕಿನಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಕೌರವ, ಋತುಪರ್ಣ, ಬ್ರಹ್ಮಕಪಾಲ ಪ್ರಸಂಗದ ಬ್ರಹ್ಮ, ಕಾರ್ತವೀರ್ಯಾರ್ಜುನ ಕಾಳಗ ಪ್ರಸಂಗದ ರಾವಣ, ಶ್ರೀರಾಮ ನಿರ್ಯಾಣ ಪ್ರಸಂಗದ ಲಕ್ಷ್ಮಣ ಮೊದಲಾದ ಪಾತ್ರಗಳು ಇವರಿಗೆ ಪ್ರಸಿದ್ಧಿಯನ್ನು ನೀಡಿತ್ತು. ಈ ಪಾತ್ರಗಳನ್ನು ತ