Posts

Showing posts from August, 2019

ಸರ್ಪಂಗಳ ಯಕ್ಷೋತ್ಸವ

Image
                    ಯಕ್ಷಗಾನವು ನಮ್ಮ ನಾಡಿನ ಹೆಮ್ಮೆಯ ಸಂಕೇತವಾದ ಕಲೆ. ಪಂಡಿತರಿಂದ ತೊಡಗಿ ಪಾಮರರ ವರೇಗೆ ಪ್ರತಿಯೊಬ್ಬರನ್ನೂ ಆಕರ್ಷಿಸಿ, ಅವರೆಲ್ಲರ ಮನಸೂರೆಗೊಂಡು ರಂಜನೆಯನ್ನು ನೀಡಿದ ಕಲಾಪ್ರಕಾರವು ಯಕ್ಷಗಾನದಂತೆ ಬೇರೊಂದಿಲ್ಲ. ಕಾಸರಗೋಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಪ್ರತಿ ಮನೆಗಳಲ್ಲೂ ಕಲಾವಿದರೋ, ಪ್ರದರ್ಶನಗಳನ್ನು ನೋಡಿ ಆಸ್ವಾದಿಸುವ ಕಲಾಭಿಮಾನಿಗಳೋ, ಕಲಾಪೋಷಕರೋ ಇದ್ದೇ ಇರುತ್ತಾರೆ. ಜನಮಾನಸದಲ್ಲಿ ಯಕ್ಷಗಾನ ಎಂಬ ಅನುಪಮವಾದ ಕಲೆಯು ಈ ತೆರನಾಗಿ, ಭದ್ರವಾಗಿ ನೆಲೆಯೂರಿ ವಿಜೃಂಭಿಸುತ್ತಿದೆ ಎಂಬುದು ನಮಗೆಲ್ಲರಿಗೂ ಸಂತೋಷದ ವಿಚಾರ. ಹಿಂದಿನ ತಲೆಮಾರಿನ ಅನೇಕರು ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಬಹಳಷ್ಟು ಶ್ರಮಿಸಿದರು. ದೇಶ ವಿದೇಶಗಳಲ್ಲಿ ಇಂದು ಕಲಾಪ್ರದರ್ಶನಗಳು ನಡೆಯುತ್ತಿವೆ. ಇದಕ್ಕೆ ಕಾರಣ ಸ್ಥಾನದಲ್ಲಿ ಅನೇಕರಿದ್ದಾರೆ. ಹಿರಿಯ ಕಲಾವಿದರು, ಪ್ರೇಕ್ಷಕರು, ಕಲಾಪೋಷಕರ ಪರಿಶ್ರಮ, ತ್ಯಾಗಗಳಿಂದ ಕಲೆಯು ಈಗ ವಿಶ್ವವ್ಯಾಪಿಯಾಗಿದೆ. ಅದರ ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಯಶಸ್ವೀ ಯಕ್ಷಗಾನ ಪ್ರದರ್ಶನವೊಂದು ನಡೆಯಿತು ಎಂದಾದರೆ ಅದಕ್ಕೆ ಕಲಾವಿದರು ಮಾತ್ರ ಕಾರಣರಲ್ಲ. ಕಲಾವಿದರು ಅರ್ಪಣಾಭಾವದಿಂದ ಅಭಿನಯಿಸುತ್ತಾರೆ. ತಮ್ಮ ಕರ್ತವ್ಯವೆಂದು ತಿಳಿದು ಮಾಡುತ್ತಾರೆ. ಸಹೃದಯೀ ಪ್ರೇಕ್ಷಕರೂ ಬೇಕು. ಅವರು ಕಲಾವಿದರ  ಅಭಿನಯವನ್ನು  ಆಸ್ವಾದಿಸುತ್ತಾರೆ. ಜತೆಗೆ ಪ್ರದರ್ಶನಗಳನ್ನು ಏರ್ಪಡಿಸುವವರು ಬೇಕು. ಉ

ಯಕ್ಷಲೋಕ ಕಂಡ ಮೇರುಕಲಾವಿದ ಅಳಿಕೆ ಶ್ರೀ ರಾಮಯ್ಯ ರೈ

Image
                    ‘ಅಳಿಕೆ’- ಈ ಹೆಸರನ್ನು ಕೇಳಿ ತಿಳಿಯದವರು ಬಹುಶಃ ಯಾರೂ ಇರಲಾರರು. ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಗ್ರಾಮವಿದು. ಅನೇಕ ವಿದ್ಯಾರ್ಥಿಗಳನ್ನು ಭವ್ಯ ಭಾರತದ ಭಾವೀ ಪ್ರಜೆಗಳಾಗಿ ರೂಪಿಸಿದ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಯು ಇಲ್ಲಿ ಕಾರ್ಯಾಚರಿಸುತ್ತಿದೆ. ಯಕ್ಷಗಾನ ಕಲಾಭಿಮಾನಿಗಳಿಗೆ ಅಳಿಕೆ ಎಂದ ತಕ್ಷಣ ಅಳಿಕೆ ರಾಮಯ್ಯ ರೈಗಳನ್ನೂ ಅಳಿಕೆ ಲಕ್ಷ್ಮಣ ಶೆಟ್ಟರನ್ನೂ ನೆನಪಾಗದೇ ಇರದು. ಶ್ರೇಷ್ಠ ಕಲಾವಿದರಿಬ್ಬರನ್ನು ಕಲಾಮಾತೆಯ ಮಡಿಲಿಗಿಕ್ಕಿದ ಮಣ್ಣು ಅಳಿಕೆ. ಅಳಿಕೆ ರಾಮಯ್ಯ ರೈಗಳು ಯಕ್ಷಗಾನದ ಮೇರುಕಲಾವಿದನೆಂದೇ ಪ್ರಸಿದ್ಧರು. ಇಂದು ಬದುಕಿ ಉಳಿದಿಲ್ಲವಾದರೂ ಅವರು ಗಳಿಸಿದ ಕೀರ್ತಿಯು ಉಳಿದಿದೆ. ತೆಂಕುತಿಟ್ಟಿನಲ್ಲಿ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮೊದಲ ಕಲಾವಿದರಿವರು. ಅವರನ್ನು ನೆನಪಿಸಿಕೊಳ್ಳುವುದು, ಅವರ ಬಗೆಗೆ ವಿಚಾರಗಳನ್ನು ಸಂಗ್ರಹಿಸಿ ಬರೆಯುವುದು ಕಲಾಭಿಮಾನಿಗಳಿಗೆಲ್ಲರಿಗೂ ಸಂತಸದ ವಿಚಾರ. ನಮಗದು ಕರ್ತವ್ಯವೂ ಹೌದು. ಅಳಿಕೆ ಶ್ರೀ ರಾಮಯ್ಯ ರೈ ಶ್ರೀ ಅಳಿಕೆ ರಾಮಯ್ಯ ರೈಗಳು 1915ನೇ ಇಸವಿ ಮಾರ್ಚ್ 17ರಂದು ಅಳಿಕೆ ಮೋನಪ್ಪ ರೈ ಮತ್ತು ಮಂಜಕ್ಕೆ ದಂಪತಿಗಳ ಹಿರಿಯ ಮಗನಾಗಿ ಈ ಲೋಕದ ಬೆಳಕನ್ನು ಕಂಡರು. ಅಳಿಕೆ ರಾಮಯ್ಯ ರೈಗಳ ಅಜ್ಜ ಅಟ್ಟೆಪ್ಪಿಲ ರಾಮಣ್ಣ ರೈಗಳು ಆ ಕಾಲದ ಉತ್ತಮ ಭಾಗವತರಾಗಿದ್ದರು. ಮೋನಪ್ಪ ರೈಗಳೂ ಯಕ್ಷಗಾನ ಕಲಾವಿದರಾಗಿದ್ದರು. ಚಿಕ್ಕಪ್ಪ ದೂಮಣ್ಣ ರೈಗಳೂ ತಾಳಮದ

ಆಟ-ಕೂಟಗಳ ಸರದಾರ ಪೆರ್ಮುದೆ ಜಯಪ್ರಕಾಶ ಶೆಟ್ಟಿ (ಕುಡಾಲು ಭಂಡಾರಗುತ್ತು)

Image
          ಯಕ್ಷಗಾನ ಎಂಬ ಸರ್ವಾಂಗ ಸುಂದರ, ಶ್ರೇಷ್ಠ ಕಲೆಯಲ್ಲಿ ಯಾವ ಕಲಾವಿದನೂ ಪರಿಪೂರ್ಣನಾಗಲು ಸಾಧ್ಯವಿಲ್ಲ. ಅದು ಸಾಗರಸದೃಶವಾದುದು. ಈಜಿ ದಡ ಸೇರಲೂ ಯಾರೂ ಶಕ್ಯರಲ್ಲ. ಈಜುತ್ತಾ ಇರಬೇಕು ಅಷ್ಟೆ. ಯಕ್ಷಗಾನವು ಒಂದು ಸಿಂಧು. ಕಲಾವಿದರು ಅದರೊಳಗಿರುವ ಬಿಂದುಗಳು. ಇದು ಕಲಾವಿದರ ಸಹಿತ ಎಲ್ಲರೂ ಒಪ್ಪಿಕೊಳ್ಳುವ ವಿಚಾರ. ಅಭಿರುಚಿಗೆ ತಕ್ಕಂತೆ ಆಯ್ಕೆಗಂತೂ ಅವಕಾಶಗಳಿವೆ. ಭಾಗವತನಾಗಿ, ಮದ್ದಳೆಗಾರನಾಗಿ, ಹಾಸ್ಯಗಾರನಾಗಿ, ಸ್ತ್ರೀವೇಷಧಾರಿಯಾಗಿ, ಪುಂಡುವೇಷಧಾರಿ, ಕಿರೀಟವೇಷಧಾರಿಯಾಗಿ ತಾನು ಗಂಡುಕಲೆಯ ಒಂದು ಅಂಗವಾಗಿ ಬೆಳೆಯಲು ಅವಕಾಶ ಸಿಕ್ಕಿದುದಕ್ಕಾಗಿ ಕಲಾವಿದನು ಸಂತೋಷಪಡಬೇಕು. ನಿರಂತರ ಕಲಿಕೆ, ಅರ್ಪಣಾಭಾವದಿಂದ ಕಲಾಸೇವೆಯನ್ನು ಮಾಡಿದ ಕಲಾವಿದರನ್ನು ಕಲಾಮಾತೆಯು ಖಂಡಿತಾ ಅನುಗ್ರಹಿಸುತ್ತಾಳೆ. ಯಕ್ಷಗಾನದಲ್ಲಿ ಆಟ, ಕೂಟಗಳೆಂಬ ಎರಡು ಪ್ರಕಾರಗಳು. ಪ್ರತಿಭೆ, ಸಾಮರ್ಥ್ಯ ಇದ್ದರೂ ತಾಳಮದ್ದಳೆಯತ್ತ ಆಸಕ್ತಿ ವಹಿಸದೆ ವೇಷಧಾರಿಯಾಗಿ ಅನೇಕರು ಕಲಾಸೇವೆಯನ್ನು ಮಾಡಿದರು. ಕೆಲವರಿಗೆ ತಾಳಮದ್ದಳೆ ಕ್ಷೇತ್ರದಲ್ಲಿ ಮಾತ್ರ ಒಲವು. ಆಟ-ಕೂಟಗಳೆರಡರಲ್ಲೂ ಸಮಾನವಾಗಿ ಭಾಗವಹಿಸಿದ ಕಲಾವಿದರನೇಕರು. ಶೇಣಿ ಸಾಮಗ ಪರಂಪರೆಯವರಂತೂ ಎರಡೂ ವಿಭಾಗಗಳಲ್ಲಿ ವಿಜೃಂಭಿಸಿದರು. ಶೇಣಿ ಮತ್ತು ರಾಮದಾಸ ಸಾಮಗರಂತವರು ನಾಟ್ಯದಲ್ಲಿ ಪ್ರಬುದ್ಧರಾಗಿರಲಿಲ್ಲ. ಆದರೂ ಮಾತು ಮತ್ತು ಭಾವನೆಗಳ ಮೂಲಕವೇ ಅವರು ದೃಶ್ಯ ಮತ್ತು ಪಾತ್ರಗಳನ್ನು ಅದ್ಭುತವಾಗಿ ಕಟ್ಟಿಕೊಡುತ್ತಿದ್ದರು. ಕು

ಅನುಭವೀ ನೇಪಥ್ಯ ಕಲಾವಿದರು ‘ಭವನಕ್ಕೆ ಅಡಿಪಾಯವಿದ್ದಂತೆ’

Image
                             ಯಾವುದೇ ಒಂದು ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ, ಉದ್ದೇಶಿತ ಗುರಿಯನ್ನು ತಲುಪಬೇಕಾದರೆ ಅಲ್ಲಿ ಎಲ್ಲವೂ ಸರಿಯಾಗಿರಬೇಕು. ಎಲ್ಲರೂ ಸರಿಯಾಗಿರಬೇಕು. ಒಂದು ವಿಭಾಗದಲ್ಲಿ ಕೊರತೆ ಉಂಟಾದರೆ ಬೆಳವಣಿಗೆಗೆ ತಡೆ ಉಂಟಾಗಿ ಕಾರ್ಯಸಾಧನೆಯಾಗಲಾರದು. ಉದಾಹರಣೆಗೆ ಹಳ್ಳಿಯ ಮನೆಗಳನ್ನು ತೆಗೆದುಕೊಳ್ಳೋಣ. ಹಲವಾರು ವರ್ಷಗಳಿಂದ ದುಡಿಯುವ ಕೆಲಸಗಾರನಿಗೆ ಹೇಳಬೇಕೆಂದಿಲ್ಲ. ಆ ಮನೆಯಲ್ಲಿ ಯಾವ ಸಮಯದಲ್ಲಿ ಯಾವ ಕೆಲಸವಾಗಬೇಕೆಂದು ಅವನಿಗೆ ತಿಳಿದಿರುತ್ತದೆ. ಯಜಮಾನನು ಅಪ್ಪಣೆ ಕೊಡಿಸಬೇಕೆಂದಿಲ್ಲ. ತಾವೇ ಅರಿತು ಮಾಡುತ್ತಾರೆ. ಯಾಕೆ? ಅನುಭವದ ಪರಿಣಾಮ, ಸ್ವಾಮಿನಿಷ್ಠೆ, ಯಜಮಾನ ಉಳಿದರೆ ಮಾತ್ರ ನಾನೂ ಉಳಿಯುತ್ತೇನೆ ಎಂಬ ಅರಿವು, ಈ ಕೆಲಸವು ತನ್ನ ಹಸಿವಿಗೆ ಅನ್ನ ನೀಡುವ ಪಾತ್ರೆ ಎಂಬ ಗೌರವದಿಂದಲೇ ಮಾಡುತ್ತಾರೆ. ಇದು ಪ್ರಾಮಾಣಿಕತನ. ಹೀಗೆ ವ್ಯವಹರಿಸಿದ ಕೆಲಸಗಾರ ಯಜಮಾನನ ಪ್ರೀತಿಯನ್ನೂ ಗಳಿಸುತ್ತಾನೆ. ಒಟ್ಟಿನಲ್ಲಿ ಯಶಸ್ಸು ಗಳಿಸಬೇಕಾದರೆ ಪ್ರತಿಯೊಬ್ಬನೂ ಅರ್ಪಣಾಭಾವದಿಂದ ತೊಡಗಿಸಿಕೊಳ್ಳಲೇಬೇಕು. ತಾನು ಮಾಡುವ ಕೆಲಸವನ್ನು ದೇವರ ಪೂಜೆಯೆಂದೇ ಭಾವಿಸಬೇಕು. ಯಕ್ಷಗಾನ ಮತ್ತು ಇತರ ಕಲಾಪ್ರಕಾರಗಳಿಗೂ ಈ ವಿಚಾರಗಳಿಂದ ಹೊರತಾಗಿರಲು ಸಾಧ್ಯವಿಲ್ಲ. ರಂಗಸ್ಥಳದಲ್ಲಿ ಕಲಾವಿದರು ಅಭಿನಯಿಸುತ್ತಾರೆ. ತಂಡವಾಗಿಯೇ ಅಭಿನಯಿಸಿದಾಗ ಪ್ರದರ್ಶನವು ಗೆದ್ದೇ ಗೆಲ್ಲುತ್ತದೆ. ಆದರೆ ಈ ಯಶಸ್ಸಿನ ಹಿಂದೆ ಕಲಾವಿದರಿಗೆ ಸಹಕಾರಿಗಳಾಗಿ ಪ್ರದ