Posts

Showing posts from June, 2019

‘‘ಕಲಾವಿದನಿಂದ ಕಲಾವಿದರಿಗಾಗಿ’’ - ಶ್ರೀ ಪಟ್ಲ ಸತೀಶ್ ಶೆಟ್ಟಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.), ಮಂಗಳೂರು

Image
                          ಕಲಾವಿದನಿಂದ ಕಲಾವಿದರಿಗಾಗಿ ಲೋಕಾರ್ಪಣೆಗೊಂಡ ಸಂಸ್ಥೆಯೇ- ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.), ಮಂಗಳೂರು. ಖ್ಯಾತ ಭಾಗವತರಾದ ಶ್ರೀ ಪಟ್ಲ ಸತೀಶ ಶೆಟ್ಟಿಯವರು ಈ ಸಂಸ್ಥೆಯ ಸ್ಥಾಪಕಾಧ್ಯಕ್ಷರು. ಯಕ್ಷಗಾನ ಕಲಾವಿದರ ಯೋಗಕ್ಷೇಮಕ್ಕಾಗಿ ಮೊತ್ತಮೊದಲು ಸ್ಥಾಪನೆಗೊಂಡ ಸಂಸ್ಥೆ ಎಂಬ ಕೀರ್ತಿಯು ಹೇಗೆ ಯಕ್ಷಗಾನ ಕಲಾರಂಗ ಉಡುಪಿ (ರಿ.) ಈ ಸಂಸ್ಥೆಗೆ ಸಲ್ಲುತ್ತದೆಯೋ ಹಾಗೆಯೇ ಕಲಾವಿದನಿಂದ ಕಲಾವಿದರಿಗಾಗಿ ಸ್ಥಾಪನೆಗೊಂಡ ಸಂಸ್ಥೆ ಎಂಬ ಹೆಗ್ಗಳಿಕೆಯು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಈ ಸಂಸ್ಥೆಗೆ ಯಾವಾಗಲೂ ಸಲ್ಲುತ್ತದೆ. ಕಲಾವಿದನಿಂದ ಕಲಾವಿದರಿಗಾಗಿ ಚಿಗುರೊಡೆದು ಬೆಳೆಯುತ್ತಿರುವ ಏಕಮೇವಾದ್ವಿತೀಯ ಟ್ರಸ್ಟ್ ಇದು. ರಂಗದಲ್ಲಿ ಕಲಾವಿದನಾಗಿ ರಂಜಿಸುವುದರ ಜತೆಗೆ ತಾನು ಕಾಣಿಸಿಕೊಳ್ಳಲು ಕಾರಣವಾದ ಕಲೆಗೆ ಮತ್ತು ಕಲಾವಿದರಿಗಾಗಿ ಕೊಡುಗೆಗಳನ್ನು ನೀಡಬೇಕಾ ದುದು ಕರ್ತವ್ಯವೂ ಹೌದು. ಕೊಂಡುಕೊಂಡರೆ ಸಾಕೆ? ಕೊಡುವ ಮನಸ್ಸು ಬೇಕೇ ಬೇಕು. ಕಷ್ಟಪಟ್ಟು ದುಡಿದು ಸಂಪಾದಿಸಿದ ಸಂಪತ್ತಿನ ಒಂದಂಶವನ್ನು ಕಲೆಗೆ, ಕಲಾವಿದರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಂಸ್ಥೆಗಳಿಗೆ ನೀಡಿ ಮಾನವೀಯತೆಯನ್ನು ಮೆರೆಯುತ್ತಿರುವ ಅನೇಕ ಕಲಾವಿದರನ್ನು ನಮಗೆ ಕಾಣಬಹುದು. ನಾನು ಯಕ್ಷಗಾನ ಕಲಾವಿದನಾಗಿ ಸಂಪಾದಿಸಿದ್ದೇನೆ. ಕಲೆಯ ಹೆಸರಿನಿಂದಲೇ ಜೀವಿಸುತ್ತಿದ್ದೇನೆ ಎಂಬ ನೆನಪು ಅವರಿಗಿದೆ. ಕೊಂಡುಕೊಂಡು, ಕೊಡುವ ಮೂಲಕ