Posts

Showing posts from March, 2019

ಕಲಾಸೇವೆಯಿಂದ ಸ್ವಯಂ ನಿವೃತ್ತರಾದ ಶ್ರೇಷ್ಠ ಪುಂಡುವೇಷಧಾರಿ ಶ್ರೀ ಉದಯ ನಾವಡ ಮಧೂರು

Image
ಶ್ರೀ ಉದಯ ನಾವಡ ಮಧೂರು ಇವರು ತೆಂಕುತಿಟ್ಟಿನ ಶ್ರೇಷ್ಠ ಪುಂಡುವೇಷಧಾರಿಗಳಲ್ಲೊಬ್ಬರು. ಬಡಗಿನ ಪೆರ್ಡೂರು ಮೇಳದಲ್ಲೂ, ಸಾಲಿಗ್ರಾಮ ಮೇಳದಲ್ಲೂ ವ್ಯವಸಾಯವನ್ನು ಮಾಡಿದ್ದಾರೆ. ಸ್ತ್ರೀವೇಷಗಳನ್ನೂ ಉತ್ತಮ ರೀತಿಯಲ್ಲಿ ನಿರ್ವಹಿಸಿದ ಕಲಾವಿದ. ಇವರೊಬ್ಬ ಯಕ್ಷಗಾನದ ಸವ್ಯಸಾಚಿ ಕಲಾವಿದ. ವೃತ್ತಿಕಲಾವಿದನಾಗಿ ಮೇಳಗಳಲ್ಲಿ ರಂಜಿಸಿದವರು. ಬಹು ಬೇಡಿಕೆಯ ರಂಗನಟನಾಗಿರುವಾಗಲೇ ಕಲಾಸೇವೆಯಿಂದ ದೂರ ಉಳಿಯಲೇ ಬೇಕಾದ ಅನಿವಾರ್ಯತೆ ಇವರ ಪಾಲಿಗೆ ಬಂದಿತ್ತು. ಶ್ರೀ ಉದಯ ನಾವಡರು ತೆಂಕಿನ ಖ್ಯಾತ ಕಲಾವಿದ ‘ರಂಗದ ರಾಜ’ ಖ್ಯಾತಿಯ ಶ್ರೀ ರಾಧಾಕೃಷ್ಣ ನಾವಡ ಮಧೂರು ಇವರ ಸಹೋದರ (ತಮ್ಮ). ಅಣ್ಣ ತಮ್ಮಂದಿರಿಬ್ಬರೂ ತೆಂಕು ಮತ್ತು ಬಡಗಿನ ಮೇಳಗಳಲ್ಲಿ ಹಲವು ವರ್ಷಗಳ ತಿರುಗಾಟವನ್ನು ಜತೆಯಾಗಿಯೇ ಮಾಡಿದವರು. ಯಕ್ಷಗಾನದಲ್ಲಿ ಪುಂಡುವೇಷಧಾರಿಯು ಪ್ರೇಕ್ಷಕರ ಮನವನ್ನು ಬಲುಬೇಗನೇ ಸೂರೆಗೊಳ್ಳಬಲ್ಲ. ಆ ವಿಭಾಗದಲ್ಲಿ ಅದಕ್ಕೆ ಅವಕಾಶಗಳೂ ಇವೆ. ರಂಗಪ್ರವೇಶಿಸುವ ರೀತಿ, ವೈವಿಧ್ಯಮಯ ನೃತ್ಯ, ವನವಿಹಾರ, ಜಲಕೇಳಿಯ ನೃತ್ಯಗಳು, ಗಿರಕಿ ಹಾರುವುದು ಮೊದಲಾದ ವಿಚಾರಗಳಿಂದ ನೋಟಕರನ್ನು ಆತ ಸಂತೋಷ ಗೊಳಿಸಬಲ್ಲ. ವೀರತರುಣರ ಪಾತ್ರಗಳನ್ನು ಧರಿಸಿ ರಂಗದಲ್ಲಿ ಪುಂಡುವೇಷಧಾರಿಯು ಯಕ್ಷಗಾನೀಯವಾಗಿಯೇ ಮೆರೆದಾಗ ಸಭಿಕರಿಗೂ ಸಂತಸವಾಗುತ್ತದೆ. ಪಾತ್ರಧಾರಿಯೂ ಧನ್ಯನೆನಿಸಿಕೊಳ್ಳುತ್ತಾನೆ. ಪ್ರದರ್ಶನಗಳೂ ರಂಜಿಸಿ ಎಲ್ಲರೂ ಯಕ್ಷಗಾನದ ವೈಭವವನ್ನು ಕಾಣುವಂತಾಗುತ್ತದೆ. ಹಂತ ಹಂತವಾಗಿ ಬೆಳೆದು ಬಂದರೇ