Posts

Showing posts from October, 2018

ಯಕ್ಷಗಾನ ಕಲಾರಂಗ (ರಿ.) ಉಡುಪಿ ಸಂಸ್ಥೆಗೆ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಪ್ರಶಸ್ತಿ

Image
                               ಗಂಡುಕಲೆ ಎಂದೇ ಪ್ರಸಿದ್ಧವಾದ ಯಕ್ಷಗಾನವನ್ನು ಉಳಿಸಿ ಬೆಳೆಸುವುದಕ್ಕಾಗಿ, ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಚಿಗುರೊಡೆದ ಸಂಸ್ಥೆಯೇ ಯಕ್ಷಗಾನ ಕಲಾರಂಗ (ರಿ.) ಉಡುಪಿ. ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಕಲಾವಿದರಿಗೆ ನೆರಳನ್ನು ನೀಡುತ್ತಿದೆ. ಈಗಿನಂತೆ ವಾಹನ ಸೌಕರ್ಯ, ಮಾಧ್ಯಮಗಳಿಲ್ಲದ ಕಾಲ. ಪ್ರದರ್ಶನ ಗಳ ಸಂಖ್ಯೆಯೂ ಆಗ ತೀರಾ ವಿರಳ. ಆದರೂ ಅದೆಷ್ಟೇ ಕಲಾವಿದರು ನಡೆದುಕೊಂಡೇ ಸಾಗಿ ಕಷ್ಟಪಟ್ಟು ಕಲಾಮಾತೆಯ ಸೇವೆಯನ್ನು ಮಾಡಿದರು. ಸಂಘಟಕರು, ದಾನಿಗಳು, ಕಲಾಭಿಮಾನಿಗಳು ಸಹಕರಿಸಿದರು. ಭಕ್ತಿಯು ಪರಮಾವಧಿಗೇರಿದಾಗ ಪರಮಾತ್ಮನು ಪ್ರಸನ್ನನಾಗುತ್ತಾನೆ ಎಂಬ ಮಾತು ನಿಜಕ್ಕೂ ಸತ್ಯ. ಇವರೆಲ್ಲರ ಕಷ್ಟವನ್ನು ಕಂಡು ಕಲಾಮಾತೆಯ ಮನಸ್ಸು ಕರಗಿರಬೇಕು. ಭಕ್ತಿಪೂರ್ವಕ, ಕಷ್ಟಪಟ್ಟು ಮಾಡಿದ ಸೇವೆಯಿಂದ ಮಹಾತಾಯಿಯು ಸಂತೋಷಗೊಂಡಿರಬೇಕು. ಅನುಗ್ರಹಿಸೋಣ ಎಂಬ ನಿರ್ಣಯಕ್ಕೆ ಬಂದಿರಬೇಕು. ಯಕ್ಷಗಾನ ಕಲಾರಂಗ (ರಿ.) ಉಡುಪಿ ಎಂಬ ಶ್ರೇಷ್ಠ ಸಂಸ್ಥೆಯ ಹುಟ್ಟಿಗೆ ಅವಳೇ ಪ್ರೇರಕ ಶಕ್ತಿಯಾಗಿರಬೇಕು. ಅಲ್ಲಾ ಕಲಾವಿದರ, ಕಲಾವಿದ ರಾಗಬೇಕೆಂದು ಹಂಬಲಿಸುವ ಎಳೆಯರ ಸೌಭಾಗ್ಯವೋ? 1975ನೇ ಇಸವಿ ಈ ಸಂಸ್ಥೆಯು ಲೋಕಾರ್ಪಣೆಗೊಂಡಿತ್ತು. ಇಲ್ಲಿಯ ವರೇಗೆ ಯಕ್ಷಗಾನ ಮತ್ತು ಕಲಾವಿದರಿಗಾಗಿ ಸಂಸ್ಥೆಯೊಂದು ಹುಟ್ಟಿ ಕಾರ್ಯಾಚರಿಸದೇ ಇದ್ದುದು ವಿಚಿತ್ರವಾದರೂ ಸತ್ಯ!                      ಯಕ್ಷಗಾನ ಕಲೆಯನ್ನು ಪ್ರೀತಿಸಿ ಗೌರವಿಸುವ, ಅದರ

ಸಂಪಾಜೆ ಯಕ್ಷೋತ್ಸವದ ರೂವಾರಿ - ಡಾ. ಟಿ. ಶ್ಯಾಮ್ ಭಟ್

Image
                                 ಕಲಾಭಿಮಾನಿಗಳೆಲ್ಲರೂ ಮಳೆಗಾಲದಲ್ಲಿ ಕೇಳುವ ಪ್ರಶ್ನೆ- ‘ಸಂಪಾಜೆ ಯಕ್ಷೋತ್ಸವ’ ಯಾವಾಗ? ಅದಕ್ಕಾಗಿ ಅವರು ಕಾಯುತ್ತಿರುತ್ತಾರೆ. ಪ್ರದರ್ಶನವನ್ನು ಸವಿಯುವ ತುಡಿತ ಪ್ರೇಕ್ಷಕರಿಗಿರುತ್ತದೆ. ಮುಂಗಾರಿನ ಮಳೆಗಾಗಿ ಕಾತರಿಸುವ ಚಾತಕಪಕ್ಷಿಯಂತೆ ಕಾಯುತ್ತಿರುತ್ತಾರೆ.                           ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ.) ಸಂಪಾಜೆ ಈ ಮೇರು ಸಂಸ್ಥೆಯ ವತಿಯಿಂದ ನಡೆಸಲ್ಪಡುತ್ತಿರುವ ಈ ಯಕ್ಷಗಾನ ಮಹೋತ್ಸವವು ಚಲನಶೀಲತೆಯಿಂದ ಕಾರ್ಯಾಚರಿಸಲು ಡಾ. ಟಿ. ಶ್ಯಾಮ್ ಭಟ್ಟರು ಕಾರಣರು. ಜೈತ್ರಯಾತ್ರೆಯ ಹಿಂದಿನ ಪ್ರೇರಕ ಶಕ್ತಿ ಅವರು. ವ್ಯಕ್ತಿಯಾಗಿರದೆ ಶಕ್ತಿಯಾಗಿದ್ದುಕೊಂಡು ಪ್ರತಿಷ್ಠಾನದ ಏಳಿಗೆಗೆ, ಪ್ರತಿಷ್ಠಾನದ ಎಲ್ಲಾ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ಸಹಕರಿಸಿ ಯಶಸ್ವಿಯಾಗಲು ಕಾರಣರಾದವರು. ಆದುದರಿಂದಲೇ ಶ್ರೀಯುತರು ‘ಸಂಪಾಜೆ ಯಕ್ಷೋತ್ಸವದ ರೂವಾರಿ’ ಎಂದು ಪ್ರಸಿದ್ಧರಾಗಿದ್ದಾರೆ.                       ಪ್ರತಿಷ್ಠಾನದ ಉದ್ದೇಶಗಳು ಮಹತ್ತರವಾದುದು. ಅವುಗಳಿಗೆ ಕೊರತೆಯಾಗದಂತೆ ಕಾರ್ಯಗತಗೊಳಿಸುವುದು ನಮ್ಮ ಕರ್ತವ್ಯ. ಕಲಾಭಿಮಾನಿಗಳು, ಕಲಾವಿದರು, ಕಾರ್ಯಕರ್ತರು ಸಂಪಾಜೆ ಕಲ್ಲುಗುಂಡಿ ಪರಿಸರದ ಜನರು ಪ್ರೀತಿಯಿಂದ ಸಹಕರಿಸುತ್ತಿದ್ದಾರೆ. ಅವರ ಸಹಕಾರದಿಂದಲೇ ಎಲ್ಲವೂ ಸಾಂಗವಾಗಿ ನಡೆಯುತ್ತಿದೆ ಎಂದು ಹೇಳುವ ಶ್ರೀ ಶ್ಯಾಮ್ ಭಟ್ಟರು ನಿಜಕ್ಕೂ ಗುಣಾಢ್ಯರು.